ಶನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆnumberEdit ಉಪಯೋಗಿಸಿ ಇಂಗ್ಲ...
೯೭ ನೇ ಸಾಲು:
 
== ಜ್ಯೋತಿಷ್ಯ ಶಾಸ್ತ್ರದಲ್ಲಿ ==
[[ವೇದಗಳ ಜ್ಯೋತಿಷ್ಯ ಶಾಸ್ತ್ರ]] ಪ್ರಕಾರ ,೯ [[ನವಗ್ರಹ]] ಗಳಲ್ಲಿ ಶನಿಭಗವಾನ್ ಒಬ್ಬನು. ಶನಿಯು ತುಂಬಾ ಶಕ್ತಿಯುತವಾದ ನಿಷ್ಟುರ ಮಾತಿನ ಉಪಾಧ್ಯಾಯನಾಗಿದ್ದು,ಸಹನೆ,ಶ್ರಮ,ಪ್ರಯತ್ನ,ಅನುಭವಗಳ ಪ್ರತೀಕವಾಗಿದ್ದಾನೆ.ಅಡೆತಡೆಗಳನ್ನು,ದುರಾದೃಷ್ಟಗಳನ್ನು,ತರುವವನೂ ಆಗಿದ್ದಾನೆ. ಆದರೂ ,ಜಾತಕದಲ್ಲಿ ಇವನ ಸ್ಥಾನವು ಅನುಗ್ರಹ ಸ್ಥಾನದಲ್ಲಿ ಇದ್ದರೆ,ಆ ವ್ಯಕ್ತಿಯ ಜೀವನ ಒಳ್ಳೆಯ ಭವಿಷ್ಯವನ್ನು ಹೊಂದುತ್ತದೆ,ಆರೋಗ್ಯಕರ ಜೀವನವಾಗಿರುತ್ತದೆ,ಎಲ್ಲವೂ ಧನಾತ್ಮಕವಾಗಿರುತ್ತದೆ. ವಾಸ್ತವವಾಗಿ , [[ಹಿಂದೂ|ಹಿಂದೂಜ್ಯೋತಿಷಿಗಳು]] ನಂಬುವಂತೆ ,ಯಾರ ಜಾತಕದಲ್ಲಿ ಶನಿಯು ಒಳ್ಳೆಯ ಸ್ಥಾನದಲ್ಲಿ ಇರುತ್ತಾನೋ,ಅವರಿಗೆ ಬೇರೆ ಯಾವುದೇ 'ಗ್ರಹ' ಗಳು ಶನಿಯು ನೀಡುವಂತೆ ಒಳ್ಳೆಯದನ್ನು ನೀಡಲಾರರು. ಅದೇ ಶನಿಯು "ಕೆಟ್ಟ ಸ್ಥಾನ"ದಲ್ಲಿ ಕುಳಿತಿದ್ದರೆ ,ಎಲ್ಲ ರೀತಿಯ ತೊಂದರೆ ಅನುಭವಿಸಬೇಕಾಗುತ್ತದೆ. ಜ್ಯೋತಿಷ್ಯವನ್ನು[[ಜ್ಯೋತಿಷ್ಯ]]ವನ್ನು ನಂಬುವ ಹಿಂದೂಗಳು ಶನಿಯ ಬಗ್ಗೆ ಬಹಳ ಭಯ ಹಾಗು ಹೆದರಿಕೆಯಿದ್ದು,ಆತನು ಕೆಟ್ಟ ಸ್ಥಾನದಲ್ಲಿ ಕುಳಿತಾಗ ಆಗುವ ಅನಾಹುತಗಳಿಗೆ ಹೆದರುತ್ತಾರೆ. ಆದರೂ ಒಂದು ವಿಷಯ ಜ್ಞಾಪಕದಲ್ಲಿಟ್ಟುಕೊಳ್ಳಬಹುದೆಂದರೆ, ಯಾವುದೇ ಸುಖ ಅಥವಾ ದುಃಖಕ್ಕೆ ಶನಿಯ ಪ್ರಭಾವದಿಂದ ಮನುಷ್ಯನಿಗೆ ನೆರವಾದ ಕಾರಣವಾಗಿರದೆ,ಮನುಷ್ಯ ತಾನು ಮಾಡಿದ ಸ್ವಂತ [[ಕರ್ಮ]] ದ ನೇರ ಫಲವಾಗಿರುತ್ತದೆ ಹಾಗು ಅದು ಶನಿಯ "ಮುಖಾಂತರ" ಘಟಿಸುತ್ತದೆ ಅಷ್ಟೇ. ಮನುಷ್ಯ ತಾನು ಮಾಡಿದ ಕೆಟ್ಟ [[ಕರ್ಮ]] ದ ಫಲದನುಸಾರ,ಶನಿಯ "ಸ್ಥಾನ-ಕೆಟ್ಟದಾಗಿ " ಕಷ್ಟಗಳು ಬರುತ್ತವೆ.ಹಾಗೆಯೇ ಒಳ್ಳೆಯದೂ ಸಹ . ಶನಿಯ ಪ್ರಭಾವದಿಂದ ಬರುವ ಖಾಯಿಲೆಗಳೆಂದರೆ-ಕೊಳೆಯುವಿಕೆ,ರಕ್ತ ಸರಬರಾಜಿನಲ್ಲಿನ ಏರು-ಪೇರು, ಕ್ಷಯ ರೋಗ ,ಮುಂತಾದವು.
ಮಾನಸಿಕವಾಗಿ,ಸಂಕುಚಿತ ಮನೋಭಾವ, ಕೆಳಮಟ್ಟದ ಚಿಂತನೆ. ಈ ಖಾಯಿಲೆಗಳನ್ನು ಶನಿಯ ನಿಯಮ ಮತ್ತು ಷರತ್ತುಗಳನ್ವಯವೇ ಸುಧಾರಿಸಲು ಸಾಧ್ಯ.
 
ಶನಿ ಗ್ರಹವು ಸೂರ್ಯನನ್ನು ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಕಾಲಾವಧಿಯು ೩೦ ವರ್ಷಗಳು.ಅಂದರೆ,ಎಲ್ಲಾ ೧೨ ''ರಾಶಿ '' ಗಳನ್ನೂ ಅಥವಾ ಚಂದ್ರ ಚಿನ್ಹೆಯನ್ನು ದಾಟಲು ೩೦ ವರ್ಷದ ಅವಧಿ ಬೇಕಾಗುತ್ತದೆ. ಅಂದರೆ ಪ್ರತಿಯೊಂದು [[ರಾಶಿ]] ಯಲ್ಲಿ ಶನಿಭಗವಾನ್ ಎರಡೂವರೆ ವರ್ಷ ಕಾಲವನ್ನು ಕಳೆಯುತ್ತಾನೆ. ಅಥವಾ ಚಂದ್ರ ಚಿನ್ಹೆ. [[ಹಿಂದೂ|ಹಿಂದೂಜ್ಯೋತಿಷ್ಯಹಿಂದೂ]][[ಜ್ಯೋತಿಷ್ಯ]] ಶಾಸ್ತ್ರದ ಪ್ರಕಾರ, ಚಂದ್ರಚಿನ್ಹೆಯ ಮುಖಾಂತರದ ಈ ಚಲನೆಯ ಶನಿಯ ಅವಧಿಯು ಮುಖ್ಯವಾದುದಾಗಿದೆ.ಹಾಗು ಜಾತಕದ ತಿಳುವಳಿಕೆಗೆ ಇದರ ಅಗತ್ಯವಿರುತ್ತದೆ. ಒಬ್ಬ ವ್ಯಕ್ತಿಯ ಹುಟ್ಟಿದ [[ರಾಶಿ]] /ಚಂದ್ರಚಿನ್ಹೆ ಯ ಹಿಂದಿನ ಮನೆಯ [[ರಾಶಿ|ರಾಶಿಯ]] ಪ್ರವೇಶವಾದಾಗ,ಶನಿಯ ಪ್ರಭಾವವು ಪ್ರಾರಂಭವಾಗಿ , ಹುಟ್ಟಿದ [[ರಾಶಿ]] /ಚಂದ್ರಚಿನ್ಹೆ ಯ ಮುಂದಿನ ಮನೆ ಪ್ರವೇಶದೊಂದಿಗೆ ಶನಿಯ ಪ್ರಭಾವವು ನಿಲ್ಲುತ್ತದೆ. ಒಟ್ಟು ಅವಧಿಯ ೭.೫ ವರ್ಷ (೨.೫ ವರ್ಷ × ೩) ವನ್ನು ''ಸಾಡೇ ಸಾತಿ '' ಅಥವಾ "ಏಳರಾಟ ಶನಿ" ಎಂದು,ಈ ಅವಧಿಯು ಅತ್ಯಂತ ತ್ರಾಸದಾಯಕವಾದುದಾಗಿದೆ. ಶನಿ ಮಹಾದೆಶೆಯು ಮನುಷ್ಯನಲ್ಲಿ ನಡೆಯುವಾಗ ಆತನ ಪ್ರಭಾವವು ಉನ್ನತ ಮಟ್ಟದಲ್ಲಿ ನಿಶ್ಚಿತವಾಗುತ್ತದೆ. ಹೇಳಿಕೆಯಂತೆ ,ಶನಿಯ ಪ್ರಭಾವದಿಂದ ರಾಜನೂ ಸಹ 'ಪಾಪರ್' ಆಗಿ ಬೀದಿಗೆ ಬೀಳುವ ಸಂದರ್ಭ ಆ ಸಮಯದಲ್ಲಿ ಬರಬಹುದು.
 
ಶನಿಯು ಮಕರ (ಕಾಪ್ರಿಕಾರ್ನ್ ) ಮತ್ತು ಕುಂಭ (ಅಕ್ವೆರೀಸ್ )ರಾಶಿಯ ಅಧಿಪತಿ,ತುಲಾ (ಲಿಬ್ರ )ರಾಶಿಯಲ್ಲಿ ಸಬಲನಾದರೆ, ಮೇಷ (ಏರೀಸ್ )ರಾಶಿಯಲ್ಲಿ ದುರ್ಬಲನಾಗಿರುತ್ತಾನೆ. ಬುಧ , ಶುಕ್ರ , ರಾಹು , ಕೇತು ಗ್ರಹಗಳು ಶನಿಯೊಂದಿಗೆ ಸ್ನೇಹದಿಂದ್ದಿದ್ದರೆ, ಸೂರ್ಯ , ಚಂದ್ರ ಮತ್ತು ಗುರು ಗ್ರಹಗಳು ಶತ್ರುಗ್ರಹಗಳಾಗಿವೆ. ಗುರು ಅಥವಾ ಗುರುಗ್ರಹ ಶನಿಯೊಂದಿಗೆ ಯಾವುದೇ ಪ್ರಭಾವವನ್ನು ಹೊಂದಿರುವುದಿಲ್ಲ. [[ಪುಷ್ಯ]] , [[ಅನುರಾಧ|ಅನುರಾಧಮತ್ತು]] [[ಉತ್ತರ - ಭಾದ್ರಪದ]] [[ನಕ್ಷತ್ರ|ನಕ್ಷತ್ರಗಳಿಗೆ]] ಒಡೆಯ ಶನಿ ಮಹಾರಾಜ.
"https://kn.wikipedia.org/wiki/ಶನಿ" ಇಂದ ಪಡೆಯಲ್ಪಟ್ಟಿದೆ