ಕಲ್ಪನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
ವೃತ್ತಿ ರಂಗಭೂಮಿಯಲ್ಲಿ ಸ್ತ್ರೀ ನಾಟಕ ಮಂಡಳಿಯ ಮೂಲಕ ರಂಗಭೂಮಿ ಪ್ರವೇಶಿಸಿ ಚಿತ್ರರಂಗದ ಮಿನುಗುತಾರೆ ಎನಿಸಿದ್ದ ಕಲ್ಪನಾ ಅಭಿನಯದ ಮೊದಲ ಕನ್ನಡ [[ಚಲನಚಿತ್ರ]] [[:Category:ವರ್ಷ-೧೯೬೩ ಕನ್ನಡಚಿತ್ರಗಳು|೧೯೬೩ರಲ್ಲಿ]] [[ಬಿ.ಆರ್. ಪಂತುಲು]] ನಿರ್ದೇಶನದಲ್ಲಿ ಬಂದ [[ಸಾಕು ಮಗಳು]] ಚಿತ್ರ.೧೯೬೭ರಲ್ಲಿ ಬಿಡುಗಡೆಯಾದ ಚಿತ್ರ ಬೆಳ್ಳಿಮೋಡ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. [[ಬೆಳ್ಳಿ ಮೋಡ]], [[ಗೆಜ್ಜೆ ಪೂಜೆ]], [[ಶರಪಂಜರ]], [[ಎರಡು ಕನಸು]], [[ಗಂಧದ ಗುಡಿ]] ಮೊದಲಾದ ಚಲನಚಿತ್ರಗಳಲ್ಲಿ ಕಲ್ಪನಾ ಅತ್ಯಂತ ಉತ್ತಮವಾಗಿ ಅಭಿನಯಿಸಿದ್ದಾರೆ.
 
ಸ್ತ್ರೀ ನಾಟಕ ಮಂಡಳಿ ಮುಖಾಂತರ ಚಿತ್ರರಂಗಕ್ಕೆ ಕಾಲಿಟ್ಟ ಕಲ್ಪನಾ, ಮಿನುಗುತಾರೆ. ಕಲ್ಪನಾಗೆ, ಹೈಸ್ಕೂಲಿನಲ್ಲಿದ್ದಾಗಲೇ ನಾಟಕಗಳತ್ತ ಆಸಕ್ತಿ. ಮುಖಕ್ಕೆ ಬಣ್ಣ ಬಳಿಸಿಕೊಳ್ಳುವ ಹಂಬಲ. ಅವರ ಅಭಿನಯಕ್ಕೆ ವೇದಿಕೆ ಕಲ್ಪಿಸಿದ್ದು ರಂಗಭೂಮಿಯ "ಗುಡಿಗೇರಿ ಬಸವರಾಜು". ಬೆಳ್ಳಿಮೋಡ ಚಿತ್ರದ "ಬೆಳ್ಳಿಮೋಡದ ಅಂಚಿನಿಂದಾ ಓಡಿಬಂದಾ ಮಿನುಗುತಾರೆ" ಎಂಬ ಹಾಡೇ ನಟಿ ಕಲ್ಪನಾರವರಿಗೆ 'ಮಿನುಗುತಾರೆ' ಎಂಬ ಬಿರುದನ್ನು ನೀಡಿದ್ದು.
 
ಕನ್ನಡದ ೬೫ ಚಿತ್ರಗಳೂ ಸೇರಿದಂತೆ ಒಟ್ಟು ೭೪ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಕಲ್ಪನಾ.ಕಲ್ಯಾಣಕುಮಾರ್ ನಿರ್ಮಾಣದ "ಪೋಲೀಸನ ಮಗಳು" ಚಿತ್ರವು ಅರ್ಧದಲ್ಲಿಯೇ ಉಳಿಯಿತು,"ಬೆಳ್ಳಿಮೋಡ", "ಹಣ್ಣೆಲೆ ಚಿಗುರಿದಾಗ", "ಶರಪಂಜರ" ಚಲನ ಈ ಚಿತ್ರಗಳಲ್ಲಿನ ಅಭಿನಯಕ್ಕೆ ೩ ಸಲ ರಾಜ್ಯ ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದಿದ್ದ ಕಲ್ಪನಾಗೆ ಪುಸ್ತಕ ಓದುವ ಹವ್ಯಾಸವೂ ಇತ್ತು.
"https://kn.wikipedia.org/wiki/ಕಲ್ಪನಾ" ಇಂದ ಪಡೆಯಲ್ಪಟ್ಟಿದೆ