ಕಲ್ಪನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬ ನೇ ಸಾಲು:
ಸ್ತ್ರೀ ನಾಟಕ ಮಂಡಳಿ ಮುಖಾಂತರ ಚಿತ್ರರಂಗಕ್ಕೆ ಕಾಲಿಟ್ಟ ಕಲ್ಪನಾ, ಮಿನುಗುತಾರೆ. ಕಲ್ಪನಾಗೆ, ಹೈಸ್ಕೂಲಿನಲ್ಲಿದ್ದಾಗಲೇ ನಾಟಕಗಳತ್ತ ಆಸಕ್ತಿ. ಮುಖಕ್ಕೆ ಬಣ್ಣ ಬಳಿಸಿಕೊಳ್ಳುವ ಹಂಬಲ. ಅವರ ಅಭಿನಯಕ್ಕೆ ವೇದಿಕೆ ಕಲ್ಪಿಸಿದ್ದು ರಂಗಭೂಮಿಯ "ಗುಡಿಗೇರಿ ಬಸವರಾಜು".
 
ಕನ್ನಡದ ೬೫ ಚಿತ್ರಗಳೂ ಸೇರಿದಂತೆ ಒಟ್ಟು ೭೪ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಕಲ್ಪನಾ.ಕಲ್ಯಾಣಕುಮಾರ್ ನಿರ್ಮಾಣದ "ಪೋಲೀಸನ ಮಗಳು" ಚಿತ್ರವು ಅರ್ಧದಲ್ಲಿಯೇ ಉಳಿಯಿತು,"ಬೆಳ್ಳಿಮೋಡ", "ಹಣ್ಣೆಲೆ ಚಿಗುರಿದಾಗ", "ಶರಪಂಜರ" ಚಲನ ಈ ಚಿತ್ರಗಳಲ್ಲಿನ ಅಭಿನಯಕ್ಕೆ ೩ ಸಲ ರಾಜ್ಯ ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದಿದ್ದ ಕಲ್ಪನಾಗೆ ಪುಸ್ತಕ ಓದುವ ಹವ್ಯಾಸವೂ ಇತ್ತು.
 
ಈಕೆಯ ವಿರುದ್ಧ ಅಹಂಕಾರ, ಉದ್ಧಟತನದವಳು ಎಂಬ ಮಾತುಗಳೂ ಇದ್ದವು, ವಾಸ್ತವವಾಗಿ ಕಲ್ಪನಾಳಿಗೆ ಹತ್ತಿರವಿರುವವರು ಹೇಳುವ ಮಾಹಿತಿಯಂತೆ ಕಲ್ಪನಾರಿಗೆ ಚರ್ಮದ ಸಮಸ್ಯೆ ಇತ್ತು. ಚರ್ಮ ಪೊರೆ (ಮೇಲ್ಪದರ) ಬಿಟ್ಟಂತಾಗುತ್ತಿತ್ತು (ಹುರುಪು-ಗ್ರಾಮೀಣಭಾಷೆಯಲ್ಲಿ ಅದು ಉರುಪೆ). ಚಿತ್ರಗಳಲ್ಲಿ ಅರ್ಧ ತೋಳು ತೊಟ್ಟು ಅಭಿನಯಿಸಬೇಕಾದ ಸನ್ನಿವೇಶಗಳೆಲ್ಲಾ ಬಹಳ ಹಿಂಸೆ. ಗ್ಲ್ಯಾಮರ್ ನಟಿಗೆ, ಇದರ ಬಗ್ಗೆ ದುಃಖವೂ ಇತ್ತು. ಎಷ್ಟೋ ಬಾರಿ ಅತ್ತಿದ್ದೂ ಉಂಟು. ಅದಕ್ಕೇ, ಹೆಚ್ಚು ಚಿತ್ರಗಳಲ್ಲಿ ತುಂಬು ತೋಳಿನ ಅಂಗಿಯನ್ನೇ ಧರಿಸಿದ್ದಾರೆ. ಎಷ್ಟು ಮೇಕಪ್ ಮಾಡಿಕೊಂಡರೂ ಆ ತೊಂದರೆ ಹೋಗುತ್ತಿರಲಿಲ್ಲ. ಆದರೆ ಕಲ್ಪನಾರಿಗೆ, ಆ ಸತ್ಯವನ್ನು ಹೇಳಲಾಗದೇ ನುಂಗಿಕೊಳ್ಳುವ ಅನಿವಾರ್ಯತೆ ಬದುಕಿಗಿತ್ತು. ಒಮ್ಮೆ ಈ ಸಂಗತಿ ಬಯಲಾದರೆ ತನ್ನ ತಾರಾಮೌಲ್ಯಕ್ಕೆ ಧಕ್ಕೆಯಾದೀತೆಂಬ ಭಯ. ಎಲ್ಲವೂ ಒಟ್ಟಾಗಿ ಅವರ ವಿರುದ್ಧ ಅಹಂಕಾರ, ಉದ್ಧಟತನದವಳು ಎಂಬ ವದಂತಿಗೆ ಕಾರಣವಾಗಿತ್ತು.
"https://kn.wikipedia.org/wiki/ಕಲ್ಪನಾ" ಇಂದ ಪಡೆಯಲ್ಪಟ್ಟಿದೆ