ಶ್ರೀ ಸಿದ್ಧಿ ವಿನಾಯಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೫ ನೇ ಸಾಲು:
=== ಪ್ರಕೃತಿ ಮತ್ತು ಪುರುಷ ತತ್ವ ===
---------------
* ವಿಶ್ವ ರಹಸ್ಯವನ್ನು ಪ್ರಕೃತಿ ಮತ್ತು ಪುರುಷ ಎಂಬ ಎರಡು ತತ್ವಗಳಲ್ಲಿ ಹೇಳಲಾಗುತ್ತದೆ.
* ಪುರುಷನು ಚೇತನವಾಗಿದ್ದು, ಪ್ರಕೃತಿಯು ಸೃಷ್ಟಿ ಕ್ರಿಯೆಯ ಮೂಲ ಬೀಜರೂಪ. ಇದು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಕಥೆಗಾಗಿ ಗಂಡು -ಹೆಣ್ಣೆಂಬ ಭಾವ. ಸತ್ವಗುಣ, ರಜೋಗುಣ, ತಮೋಗುಣಗಳು ಮತ್ತು ಪಂಚ ಭೂತಗಳಿಂದಾದ ಈ ಜಗತ್ತೇ ಪ್ರಕೃತಿ ಮಾತೆಯ ದೇಹ. ಗುಣತ್ರಯಗಳೇ ಅವಳ ದೇಹದ ಕೊಳೆ.
ಪ್ರಕೃತಿ-ಪರುಷ ಅಥವಾ ಪಾರ್ವತಿ ಶಿವರಿಗೆ ಈವಿಶ್ವ ಸೃಷ್ಟಿ ಒಂದು ಲೀಲೆ. ಈಲೀಲೆ ನೆಡೆಯಲು ಒಂದು ಸ್ಥಿತಿ ಕಾರಕ ಶಕ್ತಿ ಬೇಕು. ಪ್ರಕೃತಿ ಗರ್ಭದಲ್ಲಿ ಅಡಗಿದ ಸ್ಥಿತಿ ಕಾರಕ ಶಕ್ತಿಯೇ ಸಿದ್ಧಿವಿನಾಯಕ. ಶ್ರೀ ಗಣೇಶಾಥರ್ವ ಶೀರ್ಶ ಮಂತ್ರದಲ್ಲಿ, ಗಣೇಶನು ಎಲ್ಲಾ ತತ್ವಗಳ ಅಧಿದೇವತೆ ಎಂದು ವರ್ಣಿಸಿದೆ. ಅಲ್ಲದೆ ಅವನು ಕೆಂಪು ವರ್ಣದವ, ಕೆಂಪುಗಂಧ ಲೇಪನದವ, ಕೆಂಪು ವಸ್ತ್ರಧಾರಿಯೆಂದು ಹೇಳಿದೆ. ಈ ವರ್ಣನೆಯಿಂದ ಅವನು ರಜೋಗುಣ ರೂಪನೆಂದು ತಿಳಿಯುವುದು. ಬ್ರಹ್ಮ , ವಿಷ್ಣು, ಮಹೇಶ್ವರರಲ್ಲಿ ವಿಷ್ಣು ರಜೋಗುಣ ತತ್ವದ ಅಧಿದೇವತೆಯಾಗಿದ್ದು, ಸ್ಥಿತಿ ಕಾರಕನಾಗಿದ್ದಾನೆ. ಹಾಗೆಯೇ ವಿನಾಯಕನೂ ಸ್ಥಿತಿಕಾರಕ ನಾಗಿದ್ದು , ವಿಷ್ಣು ಸ್ವರೂಪನೆಂಬ ನಂಬುಗೆ ಇದ್ದು ಪರುಷ ಸೂಕ್ತದಿಂದ ಪೂಜಿಸಲ್ಪಡುತ್ತಾನೆ.
 
=== ಪ್ರಾಪಂಚಿಕ - ಸ್ಥಿತಿ ಕಾರಕ ===
---------------------
ಮಾನವರು ಈ ಜಗತ್ತಿನಲ್ಲಿ ಸುಖ ದುಃಖಗಳನ್ನು ಅನುಭವಿಸುವುದು ಪ್ರಕೃತಿ ಸಹಜವಾಗಿದೆ. ಅವರಿಗೆ ಬೇಕಾದ ಸುಖ ಭೋಗಗಳನ್ನುಕೊಟ್ಟು ಜಗತ್ತಿನ ಲೀಲೆಯಲ್ಲಿ ತೊಡಗಿಸುವವನೇ ವರ ಸಿದ್ಧಿ ವಿನಾಯಕ. ಸಹಜ ಜೀವನವನ್ನು ಧಿಕ್ಕರಿಸಿ ತಾಯಿಯ ನಿಜ ರೂಪವನ್ನು ಪ್ರಕೃತಿ ರಹಸ್ಯವನ್ನು ಅರಿಯಲು ಪ್ರಯತ್ನಿಸುವ ವಿರಾಗಿಗಳಿಗೆ ಮತ್ತು ಯೋಗಿಗಳಿಗೆ ಇವನು ವಿಘ್ನೇಶ್ವರ. ಅವನ ತಾಯಿಯು ಸ್ನಾನಕ್ಕಿಳಿದಾಗ ನಿಜ ರೂಪವನ್ನು ಎಂದರೆ ಅವಳ ಪರಬ್ರಹ್ಮ ಸ್ವರೂಪವನ್ನು ಅಥವಾ ಮೂಲ ಚಿತ್ ಸ್ವರೂಪವನ್ನು ನೋಡಲು ವಿಘ್ನೇಶ್ವರ ಬಿಡಲಾರ. ಹಾಗೆ ಬಿಟ್ಟರೆ ಪ್ರಕೃತಿಯ ಮಾಯೆ ಹರಿದು ಹೋಗುತ್ತದೆ. ವಿಘ್ನೇಶ್ವರನು ಯೋಗಿಗಳಿಗೆ, ತಪಸ್ವಿಗಳಿಗೆ, ಜಗತ್ತಿನ ಸುಖ ಭೊಗಗಳನ್ನು ಕೊಟ್ಟು ಜಗತ್ತಿನ ಲೀಲೆಯಲ್ಲಿ ಅವರನ್ನು ತೊಡಗಿಸುವನು. ಅವರನ್ನು ಜಗತ್ತಿನ ಸುಖದ ಸೆಳೆತಕ್ಕೆ ಎಳೆಯುವನು. ಅದಕ್ಕಾಗಿ ಅವನಿಗೆ ಬಲಿಷ್ಠವಾದ ಆನೆಯ ತಲೆ ಮತ್ತು ಬುದ್ಧಿ. ಅವನ ಸೆಳೆತವನ್ನು ಮೀರಿದ ನಿಜವಾದ ವಿರಾಗಿಗಳು ಶಿವನ ಕರುಣೆಯಿಂದ ವಿಘ್ನೇಶ್ವರನನ್ನು ಗೆದ್ದು , ತಾಯಿಯ ನಿಜ ರೂಪವನ್ನು ನೋಡಲು ಹೋಗಬಹುದು. ಗಣೇಶನನ್ನೇ ಶಿವನೆಂದು, ವಿಷ್ಣುವೆಂದು, ಸ್ತುತಿಸಿ ವಲಿಸಿಕೊಳ್ಳುವುದು ಮತ್ತೊಂದು ಬಗೆ.
 
=== ಮೂಲಾಧಾರ ಸ್ಥಿತ ===
----------------
ಗಣೇಶನನ್ನು ಮೂಲಾಧಾರ ಸ್ಥಿತನೆಂದು ಹೇಳಿದೆ. ಪಿಂಡಾಂಡದಲ್ಲಿ ಎಂದರೆ ಮನುಷ್ಯರಲ್ಲಿ ಮೂಲಾಧಾರ ಚಕ್ರವು ಬೆನ್ನು ಹುರಿಯ ತಳ ಭಾಗದಲ್ಲಿದ್ದು , ಅಲ್ಲಿ ಬ್ರಹ್ಮಾಂಡವನ್ನು ವ್ಯಾಪಿಸಿರುವ ಕುಂಡಲಿನಿ ಶಕ್ತಿಯು ಸರ್ಪ ರೂಪದಲ್ಲಿ ಸುಪ್ತವಾಗಿರುವುದಾಗಿ ರಾಜಯೋಗ, ಹಠಯೋಗಗಳಲ್ಲಿ ಹೇಳಿದೆ. ಯೋಗಿಗಳು ಆಶಕ್ತಿಯನ್ನು ಎಬ್ಬಿಸಿ ಹುಬ್ಬುಗಳ ನಡುವೆ ಇರುವ ಆಜ್ಞಾ ಚಕ್ರದಲ್ಲಿ ತಂದು ನಿಲ್ಲಿಸಿದಾಗ ಪ್ರಕೃತಿ ಪುರುಷರ ಎಂದರೆ ಪಾರ್ವತೀ ಪರಮೇಶ್ವರರ ನಿಜ ದರ್ಶನವಾಗುವುದು. ಮೂಲಾಧಾರದಲ್ಲಿ ವಿಘ್ನೇಶ್ವರನ ಕಾವಲು ಇದೆ. ಜಗತ್ತಿನ ಆಸೆಆಕಾಂಕ್ಷಗಳಿಗೆ ಒಳಪಟ್ಟಿರುವವರಿಗೆ ಆ ಸಾಧನೆ ಸಾಧ್ಯವಿಲ್ಲ. ಸಾಧಕರಿಗೆ ಸುಖ - ಸಿದ್ಧಿಗಳನ್ನು ನೀಡಿ, ಅವನು ಸಿದ್ಧಿವಿನಾಯಕನಾಗಿ ಜಗತ್ತಿನ ಕಡೆಗೆ ಸೆಳೆಯುವನು. ಸಾಧಕರನ್ನು ಸುಲಭವಾಗಿ ಬಿಟ್ಟರೆ ತಾಯಿಯ ನಿಜ ದರ್ಶನದಿಂದ ಪ್ರಕೃತಿ ಲಯವಾಗಿ ಹೋಗುವುದು. - ಎಂದರೆ ಜಗದ ಮೋಹದಿಂದ ಬಿಡುಗಡೆ - ಮೋಕ್ಷ ಪ್ರಾಪ್ತಿ.
ಮೂಲಾಧಾರ ಚಕ್ರ ಸೂಕ್ಕ್ಷ್ಮ ಶರೀರದ (ಭೌತಿಕ ಶರೀರವಲ್ಲ) ನಾಡೀ ಕೇಂದ್ರಗಳಲ್ಲಿ ಒಂದು. ಅದಕ್ಕೆ ನಾಲ್ಕು ದಳದ ಕಮಲ ಅಥವಾ ಚೌಕ ಗುರುತು ; ಅದರ ಮುಂದಿನ ಅಥವಾ ಮೇಲಿನ ನಾಢೀ ಚಕ್ರ ಸ್ವಾಧಿಷ್ಠಾನ ; ಅದಕ್ಕೆ ಆರುದಳ ಅಥವಾ ಷಟ್ಕೋನ ವುಳ್ಲದ್ದು ; ಅದೇ ಗಣಪತಿಯ ಮಂಡಲ ; ಅದಕ್ಕೂ ಅವನೇ ಅಧಿಪತಿ ; ಆರು ಮತ್ತು ನಾಲ್ಕು ಗಣಪತಿಯ ಚಿಹ್ನೆ ಅಥವಾ ಗುರುತು