ಕಲ್ಯಾಣ್ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨ ನೇ ಸಾಲು:
'[[ಚೊಕ್ಕಣ್ಣ ಅಯ್ಯಂಗಾರ್]]' ಯೆಂದು ಮನೆಯಲ್ಲಿ ಕರೆಯಲ್ಪಡುತ್ತಿದ್ದ, '[[ಸಂಪತ್ ಐಯ್ಯಂಗಾರ್]]' ಎಂಬ ಹೆಸರಿನ ಯುವಕನ ಹೆಸರನ್ನು ಕನ್ನಡ ಚಲನ ಚಿತ್ರರಂಗದಲ್ಲಿ '[[ಕಲ್ಯಾಣ್ ಕುಮಾರ್]]' ಎಂದು ಬದಲಾಯಿಸಲಾಯಿತು. ಐವತ್ತರ ದಶಕದಲ್ಲಿ ಅತ್ಯಂತ ಯಶಸ್ಸುಗಳಿಸಿದ ಹಾಗೂ [[ಕನ್ನಡ]] ಚಿತ್ರರಂಗವನ್ನಾಳಿದ '[[ಕುಮಾರ ತ್ರಯ]]'ರಲ್ಲಿ ಮೊದಲನೆಯವರೆಂದರೆ ಈ ಕಲ್ಯಾಣಕುಮಾರ್ ರವರೇ. ಇನ್ನಿಬ್ಬರು [[ರಾಜಕುಮಾರ್]] ಮತ್ತು [[ಉದಯಕುಮಾರ್]] ರವರುಗಳು. ಕಾಲಾನುಕ್ರಮದಲ್ಲಿ, ಮುಂದೆ '[[ಅಶ್ವಥ್]]' ಮುಂತಾದ ಕಲಾವಿದರ ಆಗಮನವಾಯಿತು.
==ಜನನ ಹಾಗೂ ಬಾಲ್ಯ==
'[[೧೯೩೬]] ರಲ್ಲಿ ಜನಿಸಿದರು. ತಂದೆ ತಾಯಿಗಳಿಗೆ ಇವರು ಡಾಕ್ಟರ್ ಆಗಲೆಂಬ ಆಸೆ. ಆದರೆ ಇವರಿಗೆ ಅಭಿನಯದ ಹುಚ್ಚು. ಇವರು ಅಭಿನಯಿಸಿದ ಮೊದಲ ಚಿತ್ರ [[೧೯೫೪ ]]ರಲ್ಲಿ ತೆರೆಕ೦ಡತೆರೆಕಂಡ ಚಿತ್ರ [[ನಟಶೇಖರ]]. ಅದೇ ಮು೦ದೆಮುಂದೆ ಇವರಿಗೆ ಬಿರುದಾಯಿತು. ಸುಮಾರು ೨೦೦ ಚಿತ್ರಗಳಲ್ಲಿ ನಟಿಸಿದ ಕಲ್ಯಾಣ್ ಕುಮಾರ್ ಭಾವಪೂರ್ಣ ಅಭಿನಯಕ್ಕೆ ಹೆಸರುವಾಸಿ. ವಾಸ್ತವದಲ್ಲಿ, ಇವರೇ ಕನ್ನಡದ ಮೊದಲ ಸೂಪರ್ ಸ್ಟಾರ್. ಆ ಕಾಲದಲ್ಲಿ ಇವರು ರಾಜ್ ಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು. ಕಲ್ಯಾಣ್‌ ಕುಮಾರ್ ಎಂದೊಡನೆ ಮೊದಲು ನೆನಪಾಗುವದು ಕನ್ನಡದ ಮೊದಲ ವರ್ಣಚಿತ್ರ [[ಅಮರಶಿಲ್ಪಿ ಜಕಣಾಚಾರಿ]]. ಅದರಲ್ಲಿ ಜಕ್ಕಣಾಚಾರಿಯ ಪಾತ್ರಕ್ಕೆ ಜೀವ ತುಂಬಿದವರೇ ಈ ಕಲ್ಯಾಣ್‌ಕುಮಾರ್.
 
== ಕಲ್ಯಾಣ್ ಕುಮಾರ್, ನಟಿಸಿದ ಕೆಲವು ಚಿತ್ರಗಳು ==
ಹಾಗೆಯೇ ಅಂದಿನ ಕೆಲವು ಅತ್ತ್ಯುತ್ತಮ ಚಿತ್ರಗಳಾದ ಮತ್ತು ಒಳ್ಳೆಯ ಅಭಿನಯದ ಚಿತ್ರಗಳು [[ಸುಬ್ಬಾಶಾಸ್ತ್ರಿ]], [[ಬೆಳ್ಳಿಮೋಡ ]], [[ಸದಾರಮೆ]], [[ರಾಯರ ಸೊಸೆ]], [[ಬದುಕುವ ದಾರಿ]], [[ಮಾವನ ಮಗಳು]], [[ಪ್ರೇಮಕ್ಕೂ ಪರ್ಮಿಟ್ಟೇ]] , [[ಅರಿಶಿನ ಕುಂಕುಮ]] , [[ಬೇಡಿ ಬಂದವಳು]] , [[ಆನಂದ ಕಂದ]] , [[ಬೆಟ್ಟದ ಕಳ್ಳ]] ಮತ್ತು ಕುಮಾರ ತ್ರಯರು ಕೂಡಿ ನಟಿಸಿದ ಒಂದೇ ಒಂದು ಚಿತ್ರ [[ಭೂದಾನ]]. ಇವರು ಅಂದಿನ ದಿನಗಳಲ್ಲಿ ನಿರ್ದೇಶಕ [[ ಪುಟ್ಟಣ್ಣ ಕಣಗಾಲ್]] ಅವರ ನೆಚ್ಚಿನ ನಟ. ಈ ಜೋಡಿಯ [[ಬೆಳ್ಳಿ ಮೋಡ]], [[ಕಥಾಸಂಗಮ]], ಮತ್ತು [[ಕಾಲೇಜು ರಂಗ]] ಎಲ್ಲವೂ ಅದ್ಭುತ ಚಿತ್ರಗಳೇ.
"https://kn.wikipedia.org/wiki/ಕಲ್ಯಾಣ್_ಕುಮಾರ್" ಇಂದ ಪಡೆಯಲ್ಪಟ್ಟಿದೆ