ಕುರುಕ್ಷೇತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೩ ನೇ ಸಾಲು:
ಪುಟ್ಟ ರೈಲುನಿಲ್ದಾಣ, ಕೆಲವು ಬ್ಯಾಂಕುಗಳು, ಅಂಗಡಿಸಾಲು ಹಾಗೂ ಜನಜೀವನ ಇವೆಲ್ಲ ಉತ್ತರ ಇಂಡಿಯಾದ ಬೇರೆಲ್ಲ ಊರುಗಳಂತೆಯೇ ತೋರಿದರೂ ಹಲವಾರು ಧರ್ಮಶಾಲೆಗಳು ಹಾಗೂ ಗುಡಿಗಳು ನಮ್ಮ ಮನಸ್ಸನ್ನು ನಿಧಾನವಾಗಿ ಪುರಾಣಪ್ರಸಿದ್ಧ ಕಾಲವೊಂದಕ್ಕೆ ಕರೆದೊಯ್ಯುತ್ತವೆ. [[ಸಿಖ್ ಧರ್ಮ]]ದಲ್ಲಿಯೂ ಇದು ಪವಿತ್ರ ಸ್ಥಳ-ಎಲ್ಲ ಹತ್ತು ಸಿಖ್ ಗುರುಗಳೂ ಇಲ್ಲಿಗೆ ಭೇಟಿ ನೀಡಿದ್ದರಿ೦ದ ಈ ಸ್ಥಳಕ್ಕೆ ಸಿಕ್ಖರಲ್ಲಿ ಪವಿತ್ರ ಸ್ಥಾನ ಉ೦ಟು. ಕುರುಕ್ಷೇತ್ರ ಜಿಲ್ಲೆಯಲ್ಲಿ [[ಥಾನೇಶ್ವರ]] ಮತ್ತು [[ಪೆಹೋವ]] ತಾಲ್ಲೂಕುಗಳಿವೆ. ಥಾನೇಶ್ವರ, ಪೆಹೋವ ಮತ್ತು ಕುರುಕ್ಶೇತ್ರ ಇಲ್ಲಿಯ ಮುಖ್ಯಪಟ್ಟಣಗಳು. [[ಚಂಧೀಘಡ]] ಇಲ್ಲಿಂದ ೭೫ ಕಿ.ಮೀ.ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ೧ ಇಲ್ಲಿಂದ ಸಾಗುತ್ತದೆ.
==ಸನ್ನಿಹತ್ ಸರೋವರ==
ಸುಪ್ರಸಿದ್ಧ ತೀರ್ಥ ಸ್ಥಳವಾದ,[[ಸನ್ನಿಹಿತ್ ಸರೋವರ]] ಇಲ್ಲಿದೆ. ೧,೫೦೦ ಅಡಿ ಉದ್ದ,೫೦ ಅಡಿ ಅಗಲವಿರುವ ಈ ಸರೋವರದ ಸುತ್ತಲೂ ಸ್ನಾನದ ಕಟ್ಟೆಗಳು ಇದ್ದು ನದಿಗೆ ಹೋಗಲು ಮೆಟ್ಟಿಲುಗಳಿವೆ. ಕೆರೆಯ ಹತ್ತಿರ, [[ಧ್ರುವನಾರಾಯಣ]], [[ಮಾತಾ ದುರ್ಗೆ]], ಮತ್ತು [[ಹನುಮಾನ್ ಮಂದಿರ]]ಗಳಿವೆ. 'ಏಳು ಪವಿತ್ರ ಸರಸ್ವತಿಯರ ಸಂಗಮ ಸ್ಥಾನ'ವೆಂಬ ನಂಬಿಕೆ ಜನರಲ್ಲಿದೆ. ಅಮಾವಾಸ್ಯೆ, ಮತ್ತು ಗ್ರಹಣದ ದಿನಗಳಲ್ಲಿ ಇಲ್ಲಿ ಸ್ನನಮಾಡುವುದರಿಂದಸ್ನಾನಮಾಡುವುದರಿಂದ ಸಕಲ ಪಾಪಗಳೂ ಪರಿಹಾರವಾಗುವುದೆಂಬ ನಂಬಿಕೆ ಇದೆ.
 
==ಬ್ರಹ್ಮ ಸರೋವರ==
ಬೃಹದಾಕಾರದ [[ಬ್ರಹ್ಮಸರೋವರ]]ವು ಯಾತ್ರಾರ್ಥಿಗಳಿಗೆ ತಂಗುದಾಣ, 'ಸ್ನಾನಘಟ್ಟ', 'ದೋಣಿವಿಹಾರ', 'ನಡುಗಡ್ಡೆ' ಮುಂತಾದವುಗಳಿಂದ ಸುಸಜ್ಜಿತವಾಗಿದೆ. ಸರೋವರದ ಎದುರಿಗಿನ ವಿದ್ಯಾಪೀಠದಲ್ಲಿ ಕುರುಕ್ಷೇತ್ರ ಯುದ್ಧವನ್ನು ಜೀವಂತಿಕೆಯಿಂದ ತೋರಿಸುವ 'ಗೊಂಬೆ ಗ್ಯಾಲರಿ' ಇದೆ. ಅಲ್ಲಿಂದ ಪಂಚಪಾಂಡವರ ಮಂದಿರ ದಾಟಿಕೊಂಡು ಮುಂದೆ ಹೋದರೆ [[ಬಿರ್ಲಾ ಮಂದಿರ]]ವಿದ್ದು ಅದರ ಆವರಣದಲ್ಲಿರುವ ಅಮೃತಶಿಲೆಯ ಶ್ರೀಕೃಷ್ಣರಥವು ಕಣ್ಮನ ಸೆಳೆಯುತ್ತದೆ. ಮಹಾಭಾರತ ಯುದ್ಧದಲ್ಲಿ ಪ್ರಾಣತೆತ್ತ ಹದಿನೆಂಟು ಅಕ್ಷೋಹಿಣಿ ಸೈನಿಕರಿಗೆ ಒಮ್ಮೆಗೇ ತರ್ಪಣ ಬಿಟ್ಟ ಸ್ಥಳವೆಂದು 'ಸೂರಜ್‌ಕುಂಡ್' ಪ್ರಸಿದ್ಧವಾಗಿದೆ.
"https://kn.wikipedia.org/wiki/ಕುರುಕ್ಷೇತ್ರ" ಇಂದ ಪಡೆಯಲ್ಪಟ್ಟಿದೆ