ತಾಳ್ಯದ ಆಂಜನೇಯಸ್ವಾಮಿ ದೇವಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩ ನೇ ಸಾಲು:
[[ಚಿತ್ರ:Image (56) (1).jpg|thumb|right|150px|'ಹನುಮ ಬಂಧು,ವಜ್ರ ಮಹೋತ್ಸವ ಸ್ಮರಣ ಸಂಚಿಕೆ']]
==ದೇವಸ್ಥಾನದ ವೈಶಿಷ್ಟ್ಯಗಳು==
ಸುಮಾರು ೪೦೦ ವರ್ಷಗಳ ಹಿಂದೆ, ಚಿತ್ರದುರ್ಗದ ಪಾಳೇಗಾರರು ಆಂಜನೇಯ ಸ್ವಾಮಿಗೆ ನಡೆದು ಕೊಳ್ಳುತ್ತಿದ್ದರು ಎನ್ನುವುದನ್ನು ಬಿಟ್ಟರೆ, ಈ ದೇವಾಲಯ ಸ್ಥಾಪಕರಾರು ಎನ್ನುವುದಕ್ಕೆ ಯಾವ ಆಧಾರಗಳು ದೊರೆತಿಲ್ಲ. ಅಜಾನುಬಾಹುವಾಗಿ ನಿಂತಿರುವ ಸ್ವಾಮಿಯ ವಿಗ್ರಹ, ಸುಮಾರು ೧೧ ಅಡಿ ಎತ್ತರವಿದೆ. ಪಕ್ಕದಲ್ಲಿ ದಶಾವತಾರದ ಭಂಗಿಗಳಿವೆ. ಅಷ್ಟದಿಕ್ಪಾಲಕರು, ಆದಿಶಕ್ತಿ, ಮತ್ತು ಶ್ರೀರಾಮ ಪಟ್ಟಾಭಿಷೇಕ, 'ರಾಮಾಯಣದ ಅರಣ್ಯಕಾಂಡದ ಚಿತ್ರಣ'ಗಳು ಸುಂದರವಾಗಿಮೂಡಿಬಂದಿವೆ. ಸಭಾಂಗಣದ ಕಂಭಗಳಲ್ಲಿ ಶಿವ,ಪಾರ್ವತಿ,ನಂದಿ ಗರುಡ, ಲಿಂಗ, ಮತ್ತು ಮಾರುತಿಯ ಕೆತ್ತನೆಗಳಿವೆ. ಹತ್ತಿರದಲ್ಲೇ ಇರುವ 'ಹಾಲುರಾಮೇಶ್ವರ ಮಟ್ಟಿ'ಯಿಂದ 'ಮಲಸಿಂಗನಹಳ್ಳಿ'ಯ 'ಕಿಟ್ಟದಹಳ್ಳಿ'ಯ ಮೂರ್ತಿಗಳು ಒಂದೇ ಬೃಹತ್ ಬಂಡೆಯಿಂದ ನಿರ್ಮಿಸಲ್ಪಟ್ಟಿವೆ. 'ತಾಳ್ಯದ ಮೂರ್ತಿ'ಯು 'ವೀರ ಭಾವ'ವನ್ನು ಹೊಂದಿದ್ದು, 'ಕಿಟ್ಟದ ಹಳ್ಳಿಯ ಮೂರ್ತಿ', 'ಶಿಶು'ವಿನಂತೆ ಮತ್ತು ಮಲಸಿಂಗನಹಳ್ಳಿಮೂರ್ತಿ, 'ನರ'ನಂತೆ ಕಾಣಬರುತ್ತದೆ. ಗರ್ಭಗುಡಿಯ ಬಾಗಿಲಿಗೆ ಹಿತ್ತಾಳೆಯಲ್ಲಿ ಮಾಡಿಸಿದ ರಾಮಾಯಣದ ಚಿತ್ತಾರಗಳನ್ನು ಹೊರಸೂಸುವ ತಗಡನ್ನು ೧೯೧೬ ರಲ್ಲಿ ಅಳವಡಿಸಿದ್ದಾರೆ. ಮಹಾದ್ವಾರದ ಬಳಿ 'ಬಾಣಪ್ಪ ದೇವರ ಚಿಕ್ಕಗುಡಿ'ಯಿದೆ. ಈ ದೇವತೆ ಭೂತ ಪ್ರೇತ ಪಿಶಾಚಿಗಳ, ಮತ್ತು ರೋಗಗಳನ್ನು ವಾಸಿಮಾಡಲು, ಕಷ್ಟಗಳನ್ನು ಪರಿಹರಿಸಲು 'ನಂದನ ಹೊಸೂರಿನ ರಾಜ'ನು ದಾಸಯ್ಯನಿಗೆ ನೀಡಿದ ಚಿತ್ರಹಿಂಸೆಗಳನ್ನೇ ಜಾತ್ರೆಯ ಸಮಯದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಆಚರಿಸುತ್ತಾರೆ. ಜಾತಿ ಭೇದವಿಲ್ಲದೆ ಎಲ್ಲರೂ ಭಾಗವಹಿಸಿ ಕಾಣಿಕೆಗಳನ್ನು ಸಮರ್ಪಿಸುತ್ತಾರೆ. '[['ಶ್ರೀ ಮಾರುತಿ ಬ್ರಾಹ್ಮಣ ಸೇವಾ ಸಂಘ', ತಾಳ್ಯ]]' ಜಾತ್ರೆಯ ಸಮಯದಲ್ಲಿ ಮತ್ತು ವರ್ಷದ ಇತರ ಸಮಯದಲ್ಲೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಕ್ತಾದಿಗಳಿಗೆ ಸಹಾಯಮಾಡುತ್ತಿದೆ.
 
==ಹನುಮಪ್ಪನ ತೇರಿನ ವಿವರಗಳು ==
ಪ್ರತಿವರ್ಷವೂ ಚೈತ್ರ ಶುದ್ಧ ಚಿತ್ರ ಪೂರ್ಣಿಮೆಯದಿನ ಶ್ರೀ ಆಂಜನೇಯನಿಗೆ ಬ್ರಹ್ಮ ರಥೋತ್ಸವ (ಆನೆ ಉತ್ಸವ) ಜರುಗುವುದು. ಅಂಕುರಾರ್ಪಣದ ಬಳಿಕ ಕುದುರೆ ವಾಹನ, ಸಿಂಹವಾಹನ, ಇಂದ್ರಜಿತು ವಾಹನ, ನಂತರ ಆನೆ ವಾಹನೋತ್ಸವ ಅಥವ ಬ್ರಹ್ಮರಥೋತ್ಸವ ಜರುಗುತ್ತದೆ. ಆಂಜನೇಯ ಸ್ವಾಮಿಯ ಜಾತ್ರೆಯಂದು ಗುಡ್ಡದ ತಿಮ್ಮಪ್ಪನ ಉತ್ಸವ ಮೂರ್ತಿಯನ್ನು ಗ್ರಾಮಕ್ಕೆ ಬರಮಾಡಿಕೊಂಡು ಪೂಜೆ ಸಲ್ಲಿಸಿದ ನಂತರವೇ ಮೊದಲ ದಿನ ವಿಪ್ರಬಂಧುಗಳಿಂದವಿಶೇಷ ಪೂಜೆ-ಪ್ರಾರ್ಥನೆಗಳನಂತರ ಹಾಗೂ ಶ್ರೀಗುಡ್ಡದ ತಿಮ್ಮಪ್ಪನ ಉತ್ಸವಮೂರ್ತಿಗಳನ್ನು ಬ್ರಹ್ಮರಥದಲ್ಲಿ ಅಲಂಕೃತಗೊಳಿಸಿ ಗ್ರಾಮದ ಸುತ್ತಲೂ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಗುತ್ತದೆ. ಆದಿನ ರಾತ್ರಿ ರಥಕ್ಕೆ ಎಣ್ಣೆ ಎರೆಯಲಾಗುತ್ತದೆ.