ರೇಡಿಯೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೮ ನೇ ಸಾಲು:
=== ಆಕಾಶವಾಣಿ ರಾಮರಾಯರು. ===
ರೇಡಿಯೊ ಎಂಬ ಒಂದು ಅದ್ಭುತವು ಜನತೆಯ ಮುಂದೆ ಬಂದಾಗ ಅದಕ್ಕೆ ‘ಆಕಾಶದಿಂದ ಬರುವ ವಾಣಿ’, ‘ಆಕಾಶವಾಣಿ ’ಎಂಬ ಹೆಸರಿನಿಂದ ಕರೆದು ಪೂರ್ತಿ ವಿವರಗಳನ್ನೊಳಗೊಂಡ ಪುಸ್ತಕವೊಂದು ೧೯೩೨ ಅಚ್ಚಾದಾಗ ವಿಸ್ಮಯ ಹಾಗೂ ಬೆರಗಿನಿಂದ ಜನತೆ ಅದನ್ನು ಸ್ವೀಕರಿಸಿದರು. ಇದನ್ನು ಬರೆದವರು "ಆಕಾಶವಾಣಿ ರಾಮರಾಯರು" ಎಂದೇ ಜನರಿಂದ ಕರೆಯಲ್ಪಡುತ್ತಿದ್ದ ಮಂಗಳೂರಿನ "ವಿದ್ವಾನ್ ಹೊಸಬೆಟ್ಟು ರಾಮರಾವ್‌"ರವರು.
 
ಆದರೆ ಪುಸ್ತಕದಲ್ಲಿ ಲೇಖನದಲ್ಲಿ ತಮ್ಮ ಹೆಸರನ್ನು ಬಯಲು ಮಾಡಲಿಲ್ಲ. ಕಾರಣ, ಸರಕಾರಿ ನೌಕರರಾಗಿದ್ದುಕೊಂಡು ಬ್ರಿಟಿಷ್ ಸರಕಾರದ ಮೇಲಿನ ಅಂಜಿಕೆ ಕಾರಣವಾಗಿತ್ತು. 1932ರಲ್ಲಿ ರಾಮರಾಯರು ಬರೆದ ಆಕಾಶವಾಣಿ ಪುಸ್ತಕ ೧೫ -೨೦ ಪುಟಗಳನ್ನೊಳಗೊಂಡಿದೆ. ಮುಖಪುಟದಲ್ಲಿ ಅರ್ಧಚಂದ್ರಾಕೃತಿಯಲ್ಲಿ ಆಕಾಶವಾಣಿ ಎಂದು ಮೇಲಿನ ಭಾಗದಲ್ಲಿ ಬರೆಯಲಾಗಿದೆ. ಸುತ್ತಲೂ ಕಪ್ಪು ಗೆರೆಗಳ ಬಾರ್ಡರ್ ನಾಲ್ಕೂ ಬದಿಗಳಲ್ಲದೇ "ಆಲ್ ಕೋಪಿರೈಟ್ ರಿಸರ್ವ್" ಎಂದು ಬರೆದಿದೆ.
"https://kn.wikipedia.org/wiki/ರೇಡಿಯೋ" ಇಂದ ಪಡೆಯಲ್ಪಟ್ಟಿದೆ