ದೋಸೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೬ ನೇ ಸಾಲು:
ಸಾಧಾರಣವಾಗಿ ದೋಸೆಯ ಹಿಟ್ಟನ್ನು ಅಕ್ಕಿ ಮತ್ತು ಉದ್ದಿನ ಬೇಳೆಗಳನ್ನು ಸ್ವಲ್ಪ ಕಾಲ ನೆನೆಸಿ, ತಿರುವಿ ಒಂದು ರಾತ್ರಿಯ ವರೆಗೆ "ಹುದುಗಲು" ಬಿಡುವುದರ ಮೂಲಕ ಸಿದ್ಧಪಡಿಸಲಾಗುತ್ತದೆ. ಯಾವ ರೀತಿಯ ದೋಸೆ ತಯಾರಿಸಲಾಗುತ್ತಿದೆ ಎಂಬುದನ್ನು ಆಧರಿಸಿ ಈ ಪ್ರಕ್ರಿಯೆಯಲ್ಲಿ ಮೆಂತ್ಯ, ಅವಲಕ್ಕಿ, ಕಡಲೇಬೇಳೆ ಇತ್ಯಾದಿಗಳನ್ನು ಸೇರಿಸಿಕೊಳ್ಳುವುದೂ ಉಂಟು. ಸಿದ್ಧವಾದ ಹಿಟ್ಟನ್ನು ಕಾದ ಕಾವಲಿಯ ಮೇಲೆ ಹುಯ್ಯುವುದರ ಮೂಲಕ ದೋಸೆಯನ್ನು ಸಿದ್ಧಪಡಿಸಲಾಗುತ್ತದೆ. ಈ ಸಮಯದಲ್ಲಿ ಸ್ವಲ್ಪ ಎಣ್ಣೆ, ತುಪ್ಪ ಅಥವಾ ಬೆಣ್ಣೆಯನ್ನು ಸೇರಿಸುವುದು ವಾಡಿಕೆ.
 
ಅಕ್ಕಿ ಮತ್ತು ಉದ್ದಿನ ಬೇಳೆಯ ಬದಲು ರವೆಯನ್ನು ಉಪಯೋಗಿಸಿ ರವೆ ದೋಸೆ, ಅಕ್ಕಿ ಹಿಟ್ಟು, ಗೋಧಿ ಹಿಟ್ಟು ಮೊದಲಾದವನ್ನು ಉಪಯೋಗಿಸಿ "ದಿಢೀರ್ ದೋಸೆ" ಮೊದಲಾದವನ್ನೂ ಮಾಡಬಹುದು.
 
== ದೋಸೆಯ ಜೊತೆ ತಿನಿಸುಗಳು ==
"https://kn.wikipedia.org/wiki/ದೋಸೆ" ಇಂದ ಪಡೆಯಲ್ಪಟ್ಟಿದೆ