ರೇಡಿಯೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೯ ನೇ ಸಾಲು:
 
[[ಚಿತ್ರ:Radio go.jpg|thumb|ಡಾ.ಎಂ.ವಿ.ಗೋಪಾಲಸ್ವಾಮಿ]]
ಮನೆಯಲ್ಲಿ ೩೦ ವ್ಯಾಟ್ ನಷ್ಟು ಕಿರು ಸಾಮರ್ಥ್ಯದ ಪ್ರೇಷಕ (ಟ್ರಾನ್ಸ್ಫಾರ್ಮರ್)ವೊಂದನ್ನು ಸ್ಥಾಪಿಸಿ ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಪ್ರತಿ ದಿನ ಸಂಜೆ ೬ ರಿಂದ ೮.೩೦ರವರೆಗೆ ಶಾಸ್ತ್ರೀಯ ಸಂಗೀತ ಹಾಗೂ ಬಾನುಲಿ ಭಾಷಣಗಳನ್ನು ಪ್ರಸಾರ ಮಾಡುತ್ತಿದ್ದರು. ನಂತರ ೨೫೦ ವ್ಯಾಟ್ ಸಾಮರ್ಥ್ಯದ ಪ್ರೇಷಕ ಸ್ಥಾಪಿಸಿ ಮೈಸೂರಿನ ಸುತ್ತಮುತ್ತ ೨೫ ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ಕೇಳಲು ಅನುವು ಮಾಡಲಾಗಿತ್ತು. ಈ ಬಾನುಲಿ ಕೇಂದ್ರ ಪ್ರಸಾರ ಪ್ರಕ್ರಿಯೆಯನ್ನು ಜನಪ್ರಿಯಗೊಳಿಸವು ‘ಆಕಾಶವಾಣಿ’ ಪದವನ್ನು ಮೊಟ್ಟಮೊದಲಿಗೆ ಪ್ರಯೋಗಿಸಿತು.ಕರ್ನಾಟಕದ ಹೆಮ್ಮೆಯೆನಿಸಿರುವ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಯ ಸ್ಥಾಪಕ ನಿರ್ದೇಶಕರೂ ಗೋಪಾಲಸ್ವಾಮಿಯವರು ಎಂಬುದು ಬಹುಮಂದಿಗೆ ಗೊತ್ತೇ ಇರದ ಸತ್ಯ.
 
ಮಂಗಳೂರಿನ "ವಿದ್ವಾನ್ ಹೊಸಬೆಟ್ಟು ರಾಮರಾವ್‌"ರವರು ೧೯೩೨ ರಲ್ಲಿ ಬರೆದ ‘ಆಕಾಶವಾಣಿ ’ಎಂಬ ಹೆಸರಿನಿಂದ ಬರೆದ ಪುಸ್ತಕದಿಂದ ಪ್ರೆರಿತವಾದ ಹೆಸರು.ಮುಂದೆ ಇದೇ ಪದವನ್ನು ಮೈಸೂರಿನ ಆಕಾಶವಾಣಿ ಸಹಾಯಕ ನಿರ್ದೇಶಕ,ಸಾಹಿತಿ ನಾ.ಕಸ್ತೂರಿಯವರು ಸೂಚಿಸಿದರು. ಮೈಸೂರು ನಗರಪಾಲಿಕೆಯಿಂದ ಸಣ್ಣ ಪ್ರಮಾಣದಲ್ಲಿ ಅನುದಾನ ಡಪೆದು ಕಾರ್ಯ ನಿರ್ವಹಿಸುತ್ತಿದ್ದ ಮೈಸೂರು ಆಕಾಶವಾಣಿ ಕೇಂದ್ರವನ್ನು ೧೯೪೨ ಜನವರಿ ಒಂದರಂದು ಅಂದಿನ ಮೈಸೂರು ಮಹಾರಾಜರು ತಮ್ಮ ವಶಕ್ಕೆ ತೆಗೆದುಕೊಂಡರು.ನಂತರ "ವಿಠಲವಿಹಾರ"ದಿಂದ ನಿಲಯವನ್ನು ಹಳೆಯ ವಸ್ತು ಪ್ರದರ್ಶನದ ಪ್ರಾದಿಕಾರದ ಕಟ್ಟಡದ ಮೊದಲನೆಯ ಮಹಡಿಗೆ ಸ್ಥಳಾಂತರ ಮಾಡುತ್ತಾರೆ.ನಂತರ ವಾಣಿ ವಿಲಾಸಮೊಹಲ್ಲಾ ದ ಹೊಸ ಸುಸಜ್ಜಿತ ಕಟ್ಟಡದಲ್ಲಿ ಆಕಾಶವಾಣಿ ಕಾರ್ಯ ನಿರ್ವಹಿಸಿತು. ೧೯೫೦ರಲ್ಲಿ ಸಂವಿಧಾನ ಅಳವಡಿಕೆಯೊಂದಿಗೆ ಪ್ರಸಾರ ಸೇವೆಗಳನ್ನು ಕೇಂದ್ರೀಯ ಹತೋಟಿಗೆ ಒಳಪಡಿಸಲಾಯಿತು. ಆಲ್ ಇಂಡಿಯಾ ರೇಡಿಯೊ ದೇಶದ ಏಕೈಕ ಪ್ರಸಾರ ವ್ಯವಸ್ಥೆಯಾಗಿ ಹೊರಹೊಮ್ಮಿತು. ಆಕಾಶವಾಣಿ ಮೈಸೂರು ಹಾಗೂ ಇನ್ನಿತರ ಖಾಸಗಿ ಕೇಂದ್ರಗಳನ್ನು ಆಲ್ ಇಂಡಿಯಾ ರೇಡಿಯೊನೊಂದಿಗೆ ವಿಲೀನಗೊಳಿಸಲಾಯಿತು.೧೯೫೦ರ ದಶಕದ ಪ್ರಾರಂಭದಲ್ಲಿ ಕರ್ನಾಟಕದಲ್ಲಿದ್ದ ಏಕೈಕ ಬಾನುಲಿ ಪ್ರಸಾರ ಕೇಂದ್ರವೆಂದರೆ ಆಕಾಶವಾಣಿ ಮೈಸೂರು ಕಡಿಮೆ ಸಾಮರ್ಥ್ಯ ಪ್ರೇಷಕದೊಂದಿಗೆ ಪ್ರಸಾರ ಮಾಡುತ್ತಿದ್ದದು ಹೆಗ್ಗಳಿಕೆ.
"https://kn.wikipedia.org/wiki/ರೇಡಿಯೋ" ಇಂದ ಪಡೆಯಲ್ಪಟ್ಟಿದೆ