ಲೀಲಾವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
cleanup, wikify etc
No edit summary
೧ ನೇ ಸಾಲು:
'''ಲೀಲಾವತಿ''' [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ನಾಯಕಿಯರಲ್ಲಿ ಒಬ್ಬರು.ಡಾ.ಎಂ.ಲೀಲಾವತಿಯವರು ಮೂಲತಹ ದಕ್ಷಿಣ ಕನ್ನಡವರು. ಅತ್ಯಂತ ಸಹಜವಾದ ಅಭಿನಯದಿಂದ ಚಿತ್ರಪ್ರೇಮಿಗಳ ಮನಸೆಳೆದಿದ್ದ ಲೀಲಾವತಿ ಅವರ ನಿಜ ನಾಮಧೇಯ '''ಲೀಲಾ ಕಿರಣ್'''.
 
ಅವರು ೧೯೪೯ರಲ್ಲಿ [[ನಾಗಕನ್ನಿಕ]] ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸುಬ್ಬಯ್ಯ ನಾಯ್ಡು ಅವರು ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿ ಅವರು ಕಯಾದುವಿನ ಸಖಿಯಾಗಿ ಅಭಿನಯಿಸಿದ್ದರು. ನಾಯಕಿಯಾಗಿ ಅವರು ಅಭಿನಯಿಸಿದ ಪ್ರಥಮ ಚಿತ್ರ [[ಮಾಂಗಲ್ಯ ಯೋಗ]]. [[ರಾಜ್ ಕುಮಾರ್|ಡಾ. ರಾಜ್ ಕುಮಾರ್]] ಅವರೊಂದಿಗೆ ನಟಿಸಿದ ಮೊದಲ ಚಿತ್ರ [[ರಣಧೀರ ಕಂಠೀರವ (ಚಲನಚಿತ್ರ)|ರಣಧೀರ ಕಂಠೀರವ]].
೭ ನೇ ಸಾಲು:
ನೆಲಮಂಗಲ ಸುತ್ತಮುತ್ತ ವಾಸಿಸುವ ಜನರ ಆರೋಗ್ಯ ರಕ್ಷಣೆಗಾಗಿ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆಯೊಂದನ್ನು ಕಟ್ಟಿಸಿದ್ದಾರೆ.
==ಪ್ರಶಸ್ತಿಗಳು==
[[ಗೆಜ್ಜೆ ಪೂಜೆ]], [[ಸಿಪಾಯಿರಾಮು]], ಮತ್ತು [[ಡಾಕ್ಟರ್ ಕೃಷ್ಣ]] ಚಿತ್ರಗಳಲ್ಲಿನ ಮನೋಜ್ಞ ಅಭಿನಯಕ್ಕಾಗಿ ಲೀಲಾವತಿಯವರು ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸುಮಾರು ೫೦೦ ಚಿತ್ರಗಳಿಗಿಂತಲೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಲೀಲಾವತಿಯವರು ನಿರ್ಮಾಪಕಿಯಾಗಿಯೂ ಚಿತ್ರರಂಗಕ್ಕೆ ಅನನ್ಯ ಕಾಣಿಕೆ ನೀಡಿದ್ದಾರೆ. ಎರಡು ಬಾರಿ ರಾಷ್ಟ್ರ ಪ್ರಶಸ್ತಿ ಗಳಿಸಿದ್ದಾರೆ. ಲೀಲಾವತಿಯವರಿಗೆ 'ಡಾ. ರಾಜ್ ಕುಮಾರ್' ಪ್ರಶಸ್ತಿ ನೀಡುವ ಮೂಲಕ ರಾಜ್ಯ ಸರಕಾರ ಗೌರವಿಸಿದೆ. ಕನ್ನಡ ಚಿತ್ರರಂಗಕ್ಕೆ ಇವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ತುಮಕೂರು ವಿಶ್ವವಿದ್ಯಾಲಯ ೨೦೦೮ ಜನವರಿ 9ರಂದು ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದೆ. ೨೦೧೦ ರಲ್ಲಿ ೭ನೇ ವರ್ಷದ ಆಳ್ವಾಸ್ ನುಡಿಸಿರಿ ಪ್ರಶಸ್ತಿಗೆ ಪಡೆದಿದ್ದಾರೆ."ನಮನ"
 
==ಲೀಲಾವತಿ ಅಭಿನಯದ ಕೆಲವು ಚಿತ್ರಗಳು==
"https://kn.wikipedia.org/wiki/ಲೀಲಾವತಿ" ಇಂದ ಪಡೆಯಲ್ಪಟ್ಟಿದೆ