ಗೀತಪ್ರಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
ಕನ್ನಡ ಚಲನಚಿತ್ರರಂಗದ ಪ್ರಮುಖ ಗೀತರಚನಕಾರ ಹಾಗೂ ನಿರ್ದೇಶಕರ ಸಾಲಿಗೆ ಸೇರುವ ಮತ್ತೊಂದು ಹೆಸರು.ಜನನ [[೧೯೩೧]]ರ ಜೂನ್ ೧೫ರಂದು.ನಿಜವಾದ ಹೆಸರು "ಲಕ್ಷ್ಮಣರಾವ್ ಮೋಹಿತೆ".ಬಾಲ್ಯಮಿತ್ರ [[ವಿಜಯಭಾಸ್ಕರ್]] ಸಹಾಯದಿಂದ ೧೯೫೫ರಲ್ಲಿ [[ಶ್ರೀರಾಮಪೂಜಾ]] ಚಲನಚಿತ್ರಕ್ಕೆ ಗೀತೆ ಬರೆಯುವ ಅವಕಾಶ ದೊರಕಿತು.ವಿಜಯಭಾಸ್ಕರ್ ಅವರಿಂದಲೇ "ಗೀತಪ್ರಿಯ" ಎಂಬ ನಾಮಕರಣ.[[ಮಣ್ಣಿನಮಗ]] ಚಲಚಿತ್ರದಿಂದ ನಿರ್ದೇಶಕನ ಪಟ್ಟ ,ಜೊತೆಜೊತೆಗೆ ಹೆಸರು,ಪ್ರಶಸ್ತಿ.. ಎಲ್ಲವೂದಕ್ಕಿತು.ಚಿತ್ರಗೀತೆಗಳಲ್ಲಿ ಬಂಡಾಯದ ಬಾವುಟ ಹಾರಿಸಿದ ವ್ಯಕ್ತಿ ಗೀತಪ್ರಿಯ. ಅವರ ಗೀತೆಗಳಲ್ಲಿ ಅಡಗಿರುವ ಮಾನವ ಪ್ರೀತಿ, ಶೋಷಣೆಯ ಬಗ್ಗೆ ಆಕ್ರೋಶ, ಬಡವರ ಪರ ದನಿ, ದೇವರ ಮೇಲೆ ಸಿಟ್ಟು ಇವೆಲ್ಲವೂ ಜನಸಾಮಾನ್ಯರ ದನಿಯೇ ಆಗಿದೆ.
 
ಮಿಲಿಟರಿ ಪರಂಪರೆಯ ಕುಟುಂಬದಿಂದ ಬಂದವರು ಗೀತಪ್ರಿಯ. ಅವರ ತಂದೆ, ಮೊದಲ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಸೇನಾನಿ.ಮಹಾಯುದ್ಧದಲ್ಲಿ ಪಾಲ್ಗೊಂಡು ನಂತರದ ದಿನದಲ್ಲಿ ಬೆಂಗಳೂರು ದಂಡು ಪ್ರದೇಶಕ್ಕೆ ಬಂದು ನೆಲೆಸಿದವರು ಅದಕ್ಕೂ ಹಿಂದೆ, ಗೀತಪ್ರಿಯ ಅವರ ತಾತ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಇಂಥ ಕೌಟುಂಬಿಕ ಹಿನ್ನೆಲೆಯಿಂದ ಬಂದ ಗೀತಪ್ರಿಯ, ಚಿತ್ರರಂಗದತ್ತ ವಾಲಿಕೊಂಡದ್ದು ಧರ್ಮ ಕರ್ಮ ಸಂಯೋಗ, ಅಷ್ಟೆ..ತಂದೆಯವರಿದ್ದ ಮಿಲಿಟರಿ ಕ್ಯಾಂಪ್ನಲ್ಲೇ ಅಧಿಕಾರಿಯಾಗಿದ್ದವರು-ಕವಿವರ್ಯ [http://kn.wikipedia.org/wiki/%E0%B2%AA%E0%B3%81.%E0%B2%A4%E0%B2%BF.%E0%B2%A8%E0%B2%B0%E0%B2%B8%E0%B2%BF%E0%B2%82%E0%B2%B9%E0%B2%BE%E0%B2%9A%E0%B2%BE%E0%B2%B0%E0%B3%8D ಪು.ತಿ.ನ.]ಅವರಿಂದ ಪ್ರಭಾವಿತರಾಗಿ ಅವರಿಂದ ಕನ್ನಡ ಕಲಿತು,ಪು.ತಿ.ನ.ಪ್ರೇರಣೆಯಿಂದ ಮೊದಲನೆಯದಾಗಿ 'ಲವ ಕುಶ"ಎಂಬ ನಾಟಕ ಬರೆದರು.
ಗೀತಪ್ರಿಯರಿಗೆ ಚಿತ್ರರಂಗದ ಗೀಳು ಅಂಟಿಕೊಂಡದ್ದಕ್ಕೂ ಒಂದು ಹಿನ್ನೆಲೆಯಿದೆ. ಅದು 1943ರ ಮಾತು. ಆಗಷ್ಟೇ `ಸತ್ಯಹರಿಶ್ಚಂದ್ರ’ ಸಿನಿಮಾ ಬಿಡುಗಡೆಯಾಗಿತ್ತು. ಆ ಸಿನಿಮಾ ನೋಡಿದ ಗೀತಪ್ರಿಯ, ಚಿತ್ರನಟನಾಗಲೇಬೇಕು ಎಂದು ಆ ಕ್ಷಣದಲ್ಲೇ ನಿರ್ಧರಿಸಿದರಂತೆ. ಅಷ್ಟೇ ಅಲ್ಲ, ನಟನಾಗುವ ಉದ್ದೇಶದಿಂದಲೇ ಮದ್ರಾಸ್ಗೆ ಹೋದರು. ಅಲ್ಲಿ ಕಥಕ್ ಡ್ಯಾನ್ಸ್ ಕಲಿತರು. ನಾಟಕ ಕಂಪನಿಗಳಲ್ಲಿ ಅಭಿನಯಿಸಿ `ಅನುಭವ’ ಪಡೆದುಕೊಂಡರು. ನಂತರ ಒಂದೆರಡು ತೆಲುಗು ಚಿತ್ರಗಳಲ್ಲಿ `ಡ್ಯಾನ್ಸರ್’ ಆಗಿಯೂ ಕಾಣಿಸಿಕೊಂಡದ್ದಾಯಿತು. ಹೀಗಿದ್ದಾಗಲೇ ಆರ್. ನಾಗೇಂದ್ರರಾವ್ ಅವರು ಒಂದು ಸಿನಿಮಾ ತಯಾರಿಸಲಿದ್ದಾರೆ ಎಂಬ ಸುದ್ದಿ ಕಿವಿಗೆ ಬಿತ್ತು. ತಕ್ಷಣವೇ ಅಲ್ಲಿಗೆ ಹೋದ ಗೀತಪ್ರಿಯ-`ಸಾರ್, ನನಗೆ ಒಂದು ಪಾತ್ರ ಕೊಡಿ’ ಅಂದರಂತೆ. ಅದಕ್ಕೆ ನಾಗೇಂದ್ರರಾಯರು- ಈಗಾಗಲೇ ಎಲ್ಲ ಪಾತ್ರಗಳ ಆಯ್ಕೆ ಮುಗಿದಿದೆಯಪ್ಪಾ. ಮುಂದೆ ನೋಡೋಣ. ಈಗ ನೀನು ಬೆಂಗಳೂರಿಗೆ ಹೋಗು’ ಎಂದರಂತೆ.
 
೧೧ ನೇ ಸಾಲು:
ಈ ಸಂದರ್ಭದಲ್ಲಿ ತಾಯಿ, ಇಬ್ಬರು ತಂಗಿಯರು ಹಾಗೂ ಮೂವರು ಸೋದರರನ್ನು ಸಾಕುವ ಹೊಣೆ ಗೀತಪ್ರಿಯರ ಮೇಲಿತ್ತು. ಆದರೆ ನೌಕರಿಯೇ ಇರಲಿಲ್ಲ. ಚಿಕ್ಕವಯಸ್ಸಿನ ತಂಗಿಯರು ಶ್ರೀರಾಮಪುರದ ಮನೆಯಲ್ಲಿ ಊದುಬತ್ತಿ ಹೊಸೆಯುವ ಕೆಲಸ ಮಾಡುತ್ತಿದ್ದರು. ಬದುಕಬೇಕೆಂದರೆ ಸಿಕ್ಕಿದ ಕೆಲಸ ಮಾಡಬೇಕು ಎಂದುಕೊಂಡ ಗೀತಪ್ರಿಯ-ಕಬ್ಬನ್ ಪಾರ್ಕ್ ಬಳಿ ಇದ್ದ ಬಾರ್ ಒಂದರಲ್ಲಿ ಬಿಲ್ರೈಟರ್ ಆಗಿ ಸೇರಿಕೊಂಡರು. ಬೆಳಗ್ಗೆ ೮ ರಿಂದ ರಾತ್ರಿ ೯ ರವರೆಗೂ ಬಾರ್ನಲ್ಲಿ ಕೆಲಸ.೩೫ ರೂಪಾಯಿ ಸಂಬಳ. ಈ ಕಡುಕಷ್ಟದ ಮಧ್ಯೆಯೂ ಸಿನಿಮಾ ಸೇರಬೇಕೆಂಬ ಗೀಳು ಇದ್ದೇ ಇತ್ತು. ಆ ಕಾರಣದಿಂದಲೇ ರಾತ್ರಿ ಬಂದು ಸಿನಿಮಾಕ್ಕೆ ಹಾಡು, ಚಿತ್ರಕತೆ ಬರೆಯುತ್ತಿದ್ದರು. ಮಗ ಇಷ್ಟೆಲ್ಲ ಕಷ್ಟಪಡುವುದನ್ನು ಕಂಡು ಗೀತಪ್ರಿಯರ ತಾಯಿ ಕಣ್ಣೀರು ಹಾಕುತ್ತಿದ್ದರಂತೆ.ಒಂದು ದಿನ ಬಿಲ್ ಕ್ಲರ್ಕ್ ನಲ್ಲಿ ಕರಗುತ್ತಿದ್ದ ಪ್ರತಿಭೆಯನ್ನು ಕಂಡ ವಿಜಯಭಾಸ್ಕರ್ `ನಿನಗೆ ಇಲ್ಲಿ ಎಷ್ಟು ಸಂಬಳ ಸಿಗುತ್ತೆ, 40 ರೂಪಾಯಿ ಕೊಡ್ತೇನೆ, ನನ್ನ ಜೊತೆ ಮದ್ರಾಸಿಗೆ ಬಂದುಬಿಡು' ಎಂದರು. ಕೇವಲ ಐದು ರೂಪಾಯಿ ಹೆಚ್ಚಿನ ಸಂಬಳದ ಆಸೆಗೆ ಮದ್ರಾಸಿಗೆ ಹೋದೆ, ಅಲ್ಲಿ ತೆಲುಗು, ತಮಿಳು ಚಿತ್ರಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತ, ಸಂಭಾಷಣೆ, ಗೀತರಚನೆಯಲ್ಲಿ ತೊಡಗಿಸಿಕೊಂಡರು.
 
ಏನೇ ಕಷ್ಟ ಬಂದರೂ ಸರಿ, ಅಮ್ಮನನ್ನು ಚನ್ನಾಗಿ ನೋಡ್ಕೋಬೇಕು ಎಂದು ನಾನು ಆಸೆಪಟ್ಟಿದ್ದರು. ಈ ಎಲ್ಲ ನೋವನ್ನೂ ಮರೆತುಬಿಡೋಣ ಅಂದುಕೊಂಡು ಹೊರಗೆ ಬಂದರೆ, ಸುತ್ತಮುತ್ತಲಿನ ಜನರ ಚುಚ್ಚುಮಾತು ಕೇಳಬೇಕಿತ್ತು. ನಾನು ಚಿತ್ರರಂಗಕ್ಕೆ ಹೋಗುವ ಪ್ರಯತ್ನ ಮುಂದುವರಿಸುತ್ತಿದ್ದೆನಲ್ಲ? ಅದು ಗೊತ್ತಿದ್ದವರೆಲ್ಲ- `ಚಿಕ್ಕ ವಯಸ್ಸಿಗೇ ಬಣ್ಣದ ಗೀಳು ಅಂಟಿಸಿಕೊಂಡಿದಾನೆ. ಇವನು ಖಂಡಿತ ಉದ್ಧಾರ ಆಗೋದಿಲ್ಲ. ಹಾಳಾಗಿ ಹೋಗ್ತಾನೆ. ಇವನ ಮನೆ ಮಂದಿಯೆಲ್ಲ ಬೀದಿಗೆ ಬೀಳ್ತಾರೆ’ ಎಂದು ಹಂಗಿಸುತ್ತಿದ್ದರಂತೆ.ಮುಂದೆ, ೧೯೬೭ ರಲ್ಲಿ ವನಮಾಲ ಎಂಬಾಕೆ ಅಶ್ವತ್ಥ್, ರಾಜಾಶಂಕರ್, ಪಂಡರಿಭಾಯಿ, ಜಯಂತಿ ತಾರಾಗಣದ ಒಂದು ಸಿನಿಮಾ ನಿರ್ಮಾಣಕ್ಕೆ ಣಕ್ಕೆ ಮುಂದಾದರು. ಎಂ.ಎಸ್. ನಾಯಕ್ ಅವರಿಗೆ ನಿರ್ದೇಶನದ ಹೊಣೆ ಬಿತ್ತು. ಚಿತ್ರಕಥೆ -ಹಾಡು ಬರೆವ ಜವಾಬ್ಧಾರಿ ಇವರ ಹೆಗಲಿಗೇರಿತು.ಇವರು ಬರೆದ ಒಂದೇ ಬಳ್ಳಿಯ ಹೂಗಳು ಚಿತ್ರದ "ನೀನೆಲ್ಲಿ ನಡೆವೆ ದೂರ…"ಹಾಡು ಮಹಮ್ಮದ್ ರಫಿಯವರು ಹಾಡಿರುವ ಏಕೈಕ ಕನ್ನಡ ಗೀತೆ ಇದು.ತಂದೆಯವರಿದ್ದ ಮಿಲಿಟರಿ ಕ್ಯಾಂಪ್ನಲ್ಲೇ ಅಧಿಕಾರಿಯಾಗಿದ್ದವರು-ಕವಿವರ್ಯ [http://kn.wikipedia.org/wiki/%E0%B2%AA%E0%B3%81.%E0%B2%A4%E0%B2%BF.%E0%B2%A8%E0%B2%B0%E0%B2%B8%E0%B2%BF%E0%B2%82%E0%B2%B9%E0%B2%BE%E0%B2%9A%E0%B2%BE%E0%B2%B0%E0%B3%8D ಪು.ತಿ.ನ.]ಅವರಿಂದ ಪ್ರಭಾವಿತರಾಗಿ ಅವರಿಂದ ಕನ್ನಡ ಕಲಿತರು. "ನಮನ"
== ಗೀತರಚನೆ ಮಾಡಿದ ಕೆಲವು ಚಿತ್ರಗಳು ==
ಉತ್ತಮ ಗೀತ ರಚನೆಕಾರರರೂ ಆಗಿರುವ ಗೀತಪ್ರಿಯ ೨೮೦ ಚಿತ್ರಗೀತೆಗಳನ್ನು ರಚಿಸಿದ್ದಾರೆ.
"https://kn.wikipedia.org/wiki/ಗೀತಪ್ರಿಯ" ಇಂದ ಪಡೆಯಲ್ಪಟ್ಟಿದೆ