ಗೀತಪ್ರಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಗೀತಪ್ರಿಯ''' - ಕನ್ನಡ ಚಲನಚಿತ್ರರಂಗದ ಪ್ರಮುಖ ಗೀತರಚನಕಾರ ಹಾಗೂ ನಿರ್ದೇಶಕರ ಸಾಲಿಗೆ ಸೇರುವ ಮತ್ತೊಂದು ಹೆಸರು.ಜನನ [[೧೯೩೧]]ರ ಜೂನ್ ೧೫ರಂದು.ನಿಜವಾದ ಹೆಸರು "ಲಕ್ಷ್ಮಣರಾವ್ ಮೋಹಿತೆ".ಬಾಲ್ಯಮಿತ್ರ [[ವಿಜಯಭಾಸ್ಕರ್]] ಸಹಾಯದಿಂದ ೧೯೫೫ರಲ್ಲಿ [[ಶ್ರೀರಾಮಪೂಜಾ]] ಚಲನಚಿತ್ರಕ್ಕೆ ಗೀತೆ ಬರೆಯುವ ಅವಕಾಶ ದೊರಕಿತು.ವಿಜಯಭಾಸ್ಕರ್ ಅವರಿಂದಲೇ "ಗೀತಪ್ರಿಯ" ಎಂಬ ನಾಮಕರಣ.[[ಮಣ್ಣಿನಮಗ]] ಚಲಚಿತ್ರದಿಂದ ನಿರ್ದೇಶಕನ ಪಟ್ಟ ,ಜೊತೆಜೊತೆಗೆ ಹೆಸರು,ಪ್ರಶಸ್ತಿ.. ಎಲ್ಲವೂದಕ್ಕಿತು.
 
ಮಿಲಿಟರಿ ಪರಂಪರೆಯ ಕುಟುಂಬದಿಂದ ಬಂದವರು ಗೀತಪ್ರಿಯ. ಅವರ ತಂದೆ, ಮೊದಲ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಸೇನಾನಿ.ಮಹಾಯುದ್ಧದಲ್ಲಿ ಪಾಲ್ಗೊಂಡು ನಂತರದ ದಿನದಲ್ಲಿ ಬೆಂಗಳೂರು ದಂಡು ಪ್ರದೇಶಕ್ಕೆ ಬಂದು ನೆಲೆಸಿದವರು ಅದಕ್ಕೂ ಹಿಂದೆ, ಗೀತಪ್ರಿಯ ಅವರ ತಾತ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಇಂಥ ಕೌಟುಂಬಿಕ ಹಿನ್ನೆಲೆಯಿಂದ ಬಂದ ಗೀತಪ್ರಿಯ, ಚಿತ್ರರಂಗದತ್ತ ವಾಲಿಕೊಂಡದ್ದು ಧರ್ಮ ಕರ್ಮ ಸಂಯೋಗ, ಅಷ್ಟೆ.
ಗೀತಪ್ರಿಯರಿಗೆ ಚಿತ್ರರಂಗದ ಗೀಳು ಅಂಟಿಕೊಂಡದ್ದಕ್ಕೂ ಒಂದು ಹಿನ್ನೆಲೆಯಿದೆ. ಅದು 1943ರ ಮಾತು. ಆಗಷ್ಟೇ `ಸತ್ಯಹರಿಶ್ಚಂದ್ರ’ ಸಿನಿಮಾ ಬಿಡುಗಡೆಯಾಗಿತ್ತು. ಆ ಸಿನಿಮಾ ನೋಡಿದ ಗೀತಪ್ರಿಯ, ಚಿತ್ರನಟನಾಗಲೇಬೇಕು ಎಂದು ಆ ಕ್ಷಣದಲ್ಲೇ ನಿರ್ಧರಿಸಿದರಂತೆ. ಅಷ್ಟೇ ಅಲ್ಲ, ನಟನಾಗುವ ಉದ್ದೇಶದಿಂದಲೇ ಮದ್ರಾಸ್ಗೆ ಹೋದರು. ಅಲ್ಲಿ ಕಥಕ್ ಡ್ಯಾನ್ಸ್ ಕಲಿತರು. ನಾಟಕ ಕಂಪನಿಗಳಲ್ಲಿ ಅಭಿನಯಿಸಿ `ಅನುಭವ’ ಪಡೆದುಕೊಂಡರು. ನಂತರ ಒಂದೆರಡು ತೆಲುಗು ಚಿತ್ರಗಳಲ್ಲಿ `ಡ್ಯಾನ್ಸರ್’ ಆಗಿಯೂ ಕಾಣಿಸಿಕೊಂಡದ್ದಾಯಿತು. ಹೀಗಿದ್ದಾಗಲೇ ಆರ್. ನಾಗೇಂದ್ರರಾವ್ ಅವರು ಒಂದು ಸಿನಿಮಾ ತಯಾರಿಸಲಿದ್ದಾರೆ ಎಂಬ ಸುದ್ದಿ ಕಿವಿಗೆ ಬಿತ್ತು. ತಕ್ಷಣವೇ ಅಲ್ಲಿಗೆ ಹೋದ ಗೀತಪ್ರಿಯ-`ಸಾರ್, ನನಗೆ ಒಂದು ಪಾತ್ರ ಕೊಡಿ’ ಅಂದರಂತೆ. ಅದಕ್ಕೆ ನಾಗೇಂದ್ರರಾಯರು- ಈಗಾಗಲೇ ಎಲ್ಲ ಪಾತ್ರಗಳ ಆಯ್ಕೆ ಮುಗಿದಿದೆಯಪ್ಪಾ. ಮುಂದೆ ನೋಡೋಣ. ಈಗ ನೀನು ಬೆಂಗಳೂರಿಗೆ ಹೋಗು’ ಎಂದರಂತೆ.
 
"https://kn.wikipedia.org/wiki/ಗೀತಪ್ರಿಯ" ಇಂದ ಪಡೆಯಲ್ಪಟ್ಟಿದೆ