ಗೀತಪ್ರಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮ ನೇ ಸಾಲು:
ಈ ಸಂದರ್ಭದಲ್ಲಿ ತಾಯಿ, ಇಬ್ಬರು ತಂಗಿಯರು ಹಾಗೂ ಮೂವರು ಸೋದರರನ್ನು ಸಾಕುವ ಹೊಣೆ ಗೀತಪ್ರಿಯರ ಮೇಲಿತ್ತು. ಆದರೆ ನೌಕರಿಯೇ ಇರಲಿಲ್ಲ. ಬದುಕಬೇಕೆಂದರೆ ಸಿಕ್ಕಿದ ಕೆಲಸ ಮಾಡಬೇಕು ಎಂದುಕೊಂಡ ಗೀತಪ್ರಿಯ-ಕಬ್ಬನ್ಪಾಕರ್್ ಬಳಿ ಇದ್ದ ಬಾರ್ ಒಂದರಲ್ಲಿ ಬಿಲ್ರೈಟರ್ ಆಗಿ ಸೇರಿಕೊಂಡರು. ಬೆಳಗ್ಗೆ ೮ ರಿಂದ ರಾತ್ರಿ ೯ ರವರೆಗೂ ಬಾರ್ನಲ್ಲಿ ಕೆಲಸ. ಈ ಕಡುಕಷ್ಟದ ಮಧ್ಯೆಯೂ ಸಿನಿಮಾ ಸೇರಬೇಕೆಂಬ ಗೀಳು ಇದ್ದೇ ಇತ್ತು. ಆ ಕಾರಣದಿಂದಲೇ ರಾತ್ರಿ ಬಂದು ಸಿನಿಮಾಕ್ಕೆ ಹಾಡು, ಚಿತ್ರಕತೆ ಬರೆಯುತ್ತಿದ್ದರು. ಮಗ ಇಷ್ಟೆಲ್ಲ ಕಷ್ಟಪಡುವುದನ್ನು ಕಂಡು ಗೀತಪ್ರಿಯರ ತಾಯಿ ಕಣ್ಣೀರು ಹಾಕುತ್ತಿದ್ದರಂತೆ.
 
ಏನೇ ಕಷ್ಟ ಬಂದರೂ ಸರಿ, ಅಮ್ಮನನ್ನು ಚನ್ನಾಗಿ ನೋಡ್ಕೋಬೇಕು ಎಂದು ನಾನು ಆಸೆಪಟ್ಟಿದ್ದೆ. ಆ ಕಾರಣದಿಂದಲೇ ಸಿಕ್ಕಿದ ಕೆಲಸವನ್ನೆಲ್ಲ ಮಾಡಿದೆ. ನನ್ನ ಕಷ್ಟ ನೋಡಿ ಅಮ್ಮ ಬಿಕ್ಕಳಿಸಿ ಅಳ್ತಾಇದ್ಲು. ಅದನ್ನ ಕಂಡಾಗಲೆಲ್ಲ ಕರುಳು ಕಿವಿಚಿದ ಹಾಗಾಗ್ತಿತ್ತು. ಈ ಎಲ್ಲ ನೋವನ್ನೂ ಮರೆತುಬಿಡೋಣ ಅಂದುಕೊಂಡು ಹೊರಗೆ ಬಂದರೆ, ಸುತ್ತಮುತ್ತಲಿನ ಜನರ ಚುಚ್ಚುಮಾತು ಕೇಳಬೇಕಿತ್ತು. ನಾನು ಚಿತ್ರರಂಗಕ್ಕೆ ಹೋಗುವ ಪ್ರಯತ್ನ ಮುಂದುವರಿಸುತ್ತಿದ್ದೆನಲ್ಲ? ಅದು ಗೊತ್ತಿದ್ದವರೆಲ್ಲ- `ಚಿಕ್ಕ ವಯಸ್ಸಿಗೇ ಬಣ್ಣದ ಗೀಳು ಅಂಟಿಸಿಕೊಂಡಿದಾನೆ. ಇವನು ಖಂಡಿತ ಉದ್ಧಾರ ಆಗೋದಿಲ್ಲ. ಹಾಳಾಗಿ ಹೋಗ್ತಾನೆ. ಇವನ ಮನೆ ಮಂದಿಯೆಲ್ಲ ಬೀದಿಗೆ ಬೀಳ್ತಾರೆ’ ಎಂದು ಹಂಗಿಸುತ್ತಿದ್ದರಂತೆ.ಮುಂದೆ, ೧೯೬೭ ರಲ್ಲಿ ವನಮಾಲ ಎಂಬಾಕೆ ಅಶ್ವತ್ಥ್, ರಾಜಾಶಂಕರ್, ಪಂಡರಿಭಾಯಿ, ಜಯಂತಿ ತಾರಾಗಣದ ಒಂದು ಸಿನಿಮಾ ನಿರ್ಮಾಣಕ್ಕೆ ಣಕ್ಕೆ ಮುಂದಾದರು. ಎಂ.ಎಸ್. ನಾಯಕ್ ಅವರಿಗೆ ನಿರ್ದೇಶನದ ಹೊಣೆ ಬಿತ್ತು. ಚಿತ್ರಕಥೆ -ಹಾಡು ಬರೆವ ಜವಾಬ್ಧಾರಿ ಇವರ ಹೆಗಲಿಗೇರಿತು.ಇವರು ಬರೆದ ಒಂದೇ ಬಳ್ಳಿಯ ಹೂಗಳು ಚಿತ್ರದ "ನೀನೆಲ್ಲಿ ನಡೆವೆ ದೂರ…"ಹಾಡು ಮಹಮ್ಮದ್ ರಫಿಯವರು ಹಾಡಿರುವ ಏಕೈಕ ಕನ್ನಡ ಗೀತೆ ಇದು. "ನಮನ"
== ಗೀತರಚನೆ ಮಾಡಿದ ಕೆಲವು ಚಿತ್ರಗಳು ==
ಉತ್ತಮ ಗೀತ ರಚನೆಕಾರರರೂ ಆಗಿರುವ ಗೀತಪ್ರಿಯ ೨೮೦ ಚಿತ್ರಗೀತೆಗಳನ್ನು ರಚಿಸಿದ್ದಾರೆ.
"https://kn.wikipedia.org/wiki/ಗೀತಪ್ರಿಯ" ಇಂದ ಪಡೆಯಲ್ಪಟ್ಟಿದೆ