ತುಘಲಕ್ (ನಾಟಕ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೫ ನೇ ಸಾಲು:
 
ತುಘಲಕ್ ನಾಟಕ ಯಾವ ಪ್ರತ್ಯೇಕ ಅಂಕವೂ ಇಲ್ಲದೆ ೧೩ ದೃಶ್ಯಗಳನ್ನು ಒಳಗೊಂಡಿದೆ. ನಾಟಕವು ಕ್ರಿ.ಶ ೧೩೨೭ ರ ತುಘಲಕ್ ನ ಸಾಮ್ರಾಜ್ಯದ ಚಿತ್ರಣದೊಂದಿಗೆ ಆರಂಭವಾಗುತ್ತದೆ. ಮುಂದಿನ ಐದು ವರ್ಷಗಳವರೆಗಿನ ಅವನ ಆಳ್ವಿಕೆಯನ್ನೂ, ಆ ಅವಧಿಯ ಅವನ ಸಾಮ್ರಾಜ್ಯದ ಸ್ಥೂಲ ಚಿತ್ರಣವನ್ನು ನಾಟಕ ನೀಡುತ್ತದೆ. ನಾಟಕವು ಅವನ ಸಾಮ್ರಾಜ್ಯದ ಜನತೆಯನ್ನು ಕುರಿತು ನೀಡುವ ಚಿತ್ರಣಕ್ಕಿಂತ ಬಹು ಪ್ರದಾನವಾಗಿ ತುಘಲಕ್ ನ ವ್ಯಕ್ತಿತ್ವದೆಡೆ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿದೆ.
 
 
" ತುಘಲಕ್" ನಾಟಕವು ಮೊಹಮ್ಮದ್ ಬಿನ್ ತುಘಲಕ್ ನ ನಿರಂಕುಶ ಪ್ರಭುತ್ವವನ್ನು ಚಿತ್ರಿಸುತ್ತದೆಯಾದರೂ ಅದರ ಕಾಣ್ಕೆ ಸಮಕಾಲೀನವಾದುದಾಗಿದೆ. ಕೆಲವು ವಸ್ತುಗಳು ಸಾರ್ವಕಾಲಿಕವಾದುದಾಗಿರುತ್ತದೆ. ಮನುಷ್ಯ-ಮನುಷ್ಯನ ನಡುವಿನ ಸಂಘರ್ಷ, ಮನುಷ್ಯ ಮತ್ತು ದೈವದ ನಡುವಿನ ಸಂಘರ್ಷ, ಮನುಷ್ಯನ ವ್ಯಕ್ತಿತ್ವದ ಚಿರಕಾಲದ ಸತ್ಯಗಳು, ವ್ಯಕ್ತಿ ಮತ್ತು ರಾಜಕೀಯದ ನಡುವಿನ ಸಂಘರ್ಷ ಇಂತಹ ವಸ್ತು ವಿಷಯಗಳು ಮನುಷ್ಯನನ್ನು ಚಿರಕಾಲ ಕಾಡುವ ಸಮಸ್ಯೆಗಳಾಗಿರುತ್ತವೆ. ಇಂತಹ ಸತ್ಯಗಳ ನಿಜವಾದ ಅರ್ಥವನ್ನು ಕೃತಿಕಾರ ತನ್ನ ನಾಟಕದ ಒಡಲಿನಲ್ಲಿ ಶೋಧಿಸುವ ಪ್ರಯತ್ನವನ್ನು , ಆ ಮೂಲಕ ಆ ಸಮಸ್ಯೆಗಳಿಗೆ ಒಂದು ಅರ್ಥವನ್ನು ನೀಡುವ ಪ್ರಯತ್ನವನ್ನು ಮಾಡಿದ್ದಾನೆ.
"https://kn.wikipedia.org/wiki/ತುಘಲಕ್_(ನಾಟಕ)" ಇಂದ ಪಡೆಯಲ್ಪಟ್ಟಿದೆ