ತುಘಲಕ್ (ನಾಟಕ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ನಾಟಕ
Content deleted Content added
ಹೊಸ ಪುಟ: =ತುಘಲಕ್= ಆಧುನಿಕ ಕನ್ನಡ ನಾಟಕ ಇತಿಹಾಸದಲ್ಲಿ ಗಿರೀಶ್ ಕಾರ್ನಾಡರ " ತುಘಲಕ್" ಒ...
( ಯಾವುದೇ ವ್ಯತ್ಯಾಸವಿಲ್ಲ )

೧೩:೨೬, ೨೨ ಜನವರಿ ೨೦೧೨ ನಂತೆ ಪರಿಷ್ಕರಣೆ

ತುಘಲಕ್

ಆಧುನಿಕ ಕನ್ನಡ ನಾಟಕ ಇತಿಹಾಸದಲ್ಲಿ ಗಿರೀಶ್ ಕಾರ್ನಾಡರ " ತುಘಲಕ್" ಒಂದು ಮಹತ್ವಪೂರ್ಣವಾದ ಐತಿಹಾಸಿಕ ನಾಟಕವಾಗಿದೆ. ಮೂಲ ಇತಿಹಾಸವನ್ನು ಕಟ್ಟುನಿಟ್ಟಾಗಿ ಅನುಸರಿಸಿದರೂ, ಅತ್ಯುತ್ತಮ ಕಲಾಕೃತಿಯನ್ನಾಗಿ ಮಾಡುವಲ್ಲಿ ನಾಟಕಕಾರರು ಯಶಸ್ವಿಯಾಗಿದ್ದಾರೆ.

ತುಘಲಕ್ ನಾಟಕ ಯಾವ ಪ್ರತ್ಯೇಕ ಅಂಕವೂ ಇಲ್ಲದೆ ೧೩ ದೃಶ್ಯಗಳನ್ನು ಒಳಗೊಂಡಿದೆ. ನಾಟಕವು ಕ್ರಿ.ಶ ೧೩೨೭ ರ ತುಘಲಕ್ ನ ಸಾಮ್ರಾಜ್ಯದ ಚಿತ್ರಣದೊಂದಿಗೆ ಆರಂಭವಾಗುತ್ತದೆ. ಮುಂದಿನ ಐದು ವರ್ಷಗಳವರೆಗಿನ ಅವನ ಆಳ್ವಿಕೆಯನ್ನೂ, ಆ ಅವಧಿಯ ಅವನ ಸಾಮ್ರಾಜ್ಯದ ಸ್ಥೂಲ ಚಿತ್ರಣವನ್ನು ನಾಟಕ ನೀಡುತ್ತದೆ. ನಾಟಕವು ಅವನ ಸಾಮ್ರಾಜ್ಯದ ಜನತೆಯನ್ನು ಕುರಿತು ನೀಡುವ ಚಿತ್ರಣಕ್ಕಿಂತ ಬಹು ಪ್ರದಾನವಾಗಿ ತುಘಲಕ್ ನ ವ್ಯಕ್ತಿತ್ವದೆಡೆ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿದೆ.