"ಗೀತಾ ಬಾಲಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
==ವಿದ್ಯಾಭ್ಯಾಸ ಹಾಗೂ ವೃತ್ತಿಜೀವನ==
[[ಡಾ.ಗೀತಾ ಬಾಲಿ]], 'ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ಬಿಜಾಪುರದ', ಉಪಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚಿನ ವಿಜ್ಞಾನಿಗಳ ಸದಸ್ಯತ್ವ ಹೊಂದಿರುವ ಭಾರತೀಯ ವಿಜ್ಞಾನ ಸಮಾವೇಶ ಸಂಸ್ಥೆಯ ೯೯ ನೆಯ ಮಹಾ ಅಧಿವೇಶನದ ಆಯ್ಕೆಯ ಸಮಿತಿ, ಹಿರಿಯ ವಿಜ್ಞಾನಿ ಮತ್ತು ಶಿಕ್ಷಣ ತಜ್ಞೆ, [[ಡಾ.ಗೀತಾ ಬಾಲಿ]]ಯವರನ್ನು ಅಧ್ಯಕ್ಷೆಯನ್ನಾಗಿ ಆಯ್ಕೆಮಾಡಿದೆ. ಗೀತಾರವರು, ವಿಜ್ಞಾನ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಗಳಿಸಿದ ನಂತರ, 'ನರಶರೀರ ದಲ್ಲಿ ಡಾಕ್ಟರೇಟ್ ಪದವೀಧರೆ'ಯಾದರು. ಕರ್ನಾಟಕ ಮಹಿಳಾ ವಿಶ್ವ ವಿದ್ಯಾಲಯದ ಕುಲಪತಿಯಾಗುವ ಮೊದಲು, ಅವರು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಕರಾಗೆ ಸೇವೆ ಸಲ್ಲಿಸುತ್ತಿದ್ದರು. ಅವರು, ಅಮೆರಿಕದ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲಿ ವಿವಿಧ ಸಂಶೋಧನಾ ಕಾರ್ಯಗಳನ್ನು ಕೈಗೊಂಡಿದ್ದಾರೆ. ಹೆಸರಾಂತ ವಿಜ್ಞಾನ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟಗೊಂಡಿವೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಅಮೆರಿಕ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಲವಾರು ತರಪೇತಿ, ಮತ್ತು ಸಂಶೋಧನಾ ಕಾರ್ಯಗಳಿಗೆ ವಿದ್ಯಾರ್ಥಿಗಳ ವಿನಿಮಯ, ಅಧ್ಯಯನ ಯೋಜನೆಗಳಿಗೆ ಕಾರ್ಯರೂಪ ಕೊಟ್ಟಿದ್ದಾರೆ. ಯುವವಿದ್ಯಾರ್ಥಿಗಳಿಗೆ [[ಯು.ಜಿ.ಸಿ]] ಯಿಂದ ಪುರಸ್ಕಾರಗಳೂ ಲಭಿಸಿವೆ. ಗೀತಾರವರು, ಆಸ್ಟ್ರಿಯಾ, ಜರ್ಮನಿ ಮುಂತಾದ ದೇಶಗಳ ವಿದ್ಯಾ ಸಂಸ್ಥೆಗಳ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದಾರೆ.
 
==ಪ್ರಶಸ್ತಿ ಪುರಸ್ಕಾರಗಳು==
* 'ಸ್ಟಾರ್ ನ್ಯೂಸ್ ಬಿ ಸ್ಕೂಲ್ ಪ್ರಶಸ್ತಿ'
* ಅರ್ಚನಾ ಶರ್ಮ
* ಡಾ.ಮಂಜು ಶರ್ಮ
 
== ವರ್ಷ ೨೦೧೨ ರ, ೯೯ ನೆಯ ಅಧಿವೇಶನ==
[[ಚಿತ್ರ:2011-12-04~bhec05edu1 ns.jpg|thumb|right|150px|'ಭಾರತೀಯ ವಿಜ್ಞಾನ ಸಮಾವೇಶ ಸಂಸ್ಥೆಯ ೯೯ ನೆಯ ಅಧಿವೇಶನ, ಭುವನೇಶ್ವರದಲ್ಲಿ']]
ವೈಜ್ಞಾನಿಕ ಸಂಶೋಧನೆಗಳ ವಿಚಾರ ವಿನಿಮಯ, ಹೊಸ-ಹೊಸ ಆವಿಷ್ಕಾರಗಳು, ಅವುಗಳ ಉಪಯುಕ್ತತೆ, ಹೀಗೆ ಹಲವಾರು ವಿಷಯಗಳನ್ನು ಸಮಾಲೋಚಿಸಲು,ವಿಜ್ಞಾನ ಸಮಾಲೋಚನೆ, ಜನವರಿ ೩-೭ ರವರೆಗೆ ಒರಿಸ್ಸಾ ರಾಜ್ಯದ ರಾಜಧಾನಿ, [[ಭುವನೇಶ್ವರ]] ದಲ್ಲಿ ನಡೆಯಿತು. [[ಡಾ.ಮನಮೋಹನ ಸಿಂಗ್]] ಉದ್ಘಾಟಿಸಿದರು. ಅಮೆರಿಕದ ಭಾರತದ ರಾಯಭಾರಿಯಾಗಿರುವ [[ನಿರುಪಮಾ ರಾವ್]] ಮತ್ತು ಮಕ್ಕಳ ವಿಜ್ಞಾನ ಸಮಾವೇಶವನ್ನು ಮಾಜಿ ರಾಷ್ಟ್ರಪತಿ, [[ಡಾ. ಎ ಪಿಜೆ ಅಬ್ದುಲ್ ಕಲಾಮ್]] ಉದ್ಘಾಟಿಸಿದರು.
==ಬಾಹ್ಯ ಸಂಪರ್ಕಗಳು==
* [[http://www.sciencecongress.nic.in/html/index.html]],'ಭಾರತೀಯ ವಿಜ್ಞಾನ ಕಾಂಗ್ರೆಸ್ ಸಂಸ್ಥೆ'
 
* [[http://www.isc2012.com/]]
* [[http://www.isc2012.com/pdf/Presidential.pdf]], 'ಡಾ. ಗೀತಾ ಬಾಲಿಯವರ ಅಧ್ಯಕ್ಷೀಯ ಭಾಷಣ'
* [[http://www.zoominfo.com/#!search/profile/person?personId=205908578&targetid]], 'ಡಾ. ಗೀತಾ ಬಾಲಿ,' ಯವರ ವ್ಯಕ್ತಿ ಚಿತ್ರ.
೨೫,೫೬೦

edits

"https://kn.wikipedia.org/wiki/ವಿಶೇಷ:MobileDiff/246880" ಇಂದ ಪಡೆಯಲ್ಪಟ್ಟಿದೆ