"ಚೀನಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

((~~~~))
 
ಸಾವಿರಾರು ವರ್ಷಗಳ ಕಾಲ [[ಸಾಂಪ್ರದಾಯಿಕ ಚೀನೀ ಭಾಷೆ|ಸಾಂಪ್ರದಾಯಿಕ ಚೀನೀ ಭಾಷೆಯು]] ಲಿಖಿತ ಪ್ರಮಾಣವಾಗಿದ್ದಿತು, ಅಲ್ಲದೇ ಅನೇಕ ಲಿಪಿಯಿಲ್ಲದ,ಅಗ್ರಾಹ್ಯ ಭಾಷೆಗಳು ಮತ್ತು ಪ್ರಾಂತ್ಯ ಭಾಷೆಗಳ ನಡುವೆ ಲಿಖಿತ ಸಂವಹನ ನಡೆಸಲು ಸಾಧ್ಯವಾಗಿಸಿತ್ತು. [[ಸ್ಥಳೀಯ ಚೀನೀ ಭಾಷೆ|ಚೀನೀಯರ ದೇಶಭಾಷೆ]] ಅಥವಾ ''ಬೈಹುವಾ'' ವು ಮಿಂಗ್‌ ಆಳ್ವಿಕೆ ಕಾಲದ [[ಕಾದಂಬರಿಗಳು|ಕಾದಂಬರಿ]]ಗಳಲ್ಲಿ ಮೊದಲು ಬಳಸಿ, ಜನಪ್ರಿಯವಾಗಿಸಿದ ಮ್ಯಾಂಡರಿನ್‌ ಪ್ರಾಂತ್ಯ ಭಾಷೆ ಆಧಾರಿತ ಲಿಖಿತ ಪ್ರಮಾಣವಾಗಿದ್ದಿತು. ಅಲ್ಲದೇ ೨೦ನೇ ಶತಮಾನದ ಮೊದಲ ಭಾಗದಲ್ಲಿ (ಗಮನಾರ್ಹ ಬದಲಾವಣೆಗಳೊಂದಿಗೆ) ರಾಷ್ಟ್ರಭಾಷೆಯಾಗಿ ಅಳವಡಿಸಿಕೊಳ್ಳಲಾಯಿತು. ಸಾಂಪ್ರದಾಯಿಕ ಚೀನೀ ಭಾಷೆಯು ಈಗಲೂ ಪ್ರೌಢ ಶಾಲೆಯ ಪಠ್ಯಕ್ರಮದಲ್ಲಿರುವುದರಿಂದ, ಕೆಲ ಮಟ್ಟಿಗಾದರೂ ಹಲವು ಚೀನೀಯರಿಗೆ ಅದು ಗ್ರಾಹ್ಯವಾಗುತ್ತಿದೆ.
=== ಧಾರ್ಮಿಕತೆ ===
[[ಚಿತ್ರ:天-bronze.svg|thumb|right|ಷಾಂಗ್‌ ಸಾಮ್ರಾಜ್ಯ ಕಾಲದ ಕಂಚಿನ ಲಿಪಿಯಲ್ಲಿ ಟಿಯಾನ್‌ (天), "ದೇವರು" ಎಂಬುದಕ್ಕೆ ಸಮಾನ ಅಕ್ಷರ. ]]
ಬಹಳಷ್ಟು ಸಾಮ್ರಾಜ್ಯಗಳು ಕನಿಷ್ಟ [[ಷಾಂಗ್‌ ಸಾಮ್ರಾಜ್ಯ]] (೧೭೬೬ BC)ದ ಕಾಲದಿಂದ ಕೊನೆಯ ಸಾಮ್ರಾಜ್ಯ(೧೯೧೧ AD)ದ ಅಳಿವಿನವರೆಗಿನ ಪಾಲಿಸಿದ "ಅಧಿಕೃತ" ಸಂಪ್ರದಾಯ ಧರ್ಮಶ್ರದ್ಧೆಯ ವ್ಯವಸ್ಥೆಯಲ್ಲಿ ಸರ್ವಸಮರ್ಥ ಶಕ್ತಿ<ref>ಹೋಮರ್‌ ಎಚ್‌.ಡಬ್ಸ್‌, "ಥೀಯಿಸಂ ಅಂಡ್‌ ನ್ಯಾಚುರಲಿಸಂ ಇನ್‌ ಆನ್‌ಷಿಯೆಂಟ್‌ ಚೀನಾ ಫಿಲಾಸಫಿ" ''ಫಿಲಾಸಫಿ ಆಫ್ ಈಸ್ಟ್‌ ಅಂಡ್‌ ವೆಸ್ಟ್‌ '' , ಸಂಪುಟ. ೯, ಸಂಖ್ಯೆ. ೩/೪, ೧೯೫೯</ref>ಯಾಗಿ ''[[ಷಾಂಗ್‌ದಿ]]'' ("ಸರ್ವೋತ್ತಮ ದೈವ") ಅಥವಾ "[[ಟಿಯಾನ್‌|ದೇವರು]]" ಕೇಂದ್ರಿತ ಆರಾಧನೆ ಮಾಡುತ್ತಿದ್ದರು. [[ಕನ್‌ಫ್ಯೂಷನಿಸಂ|ಕನ್‌ಫ್ಯೂಷಿಯನ್‌ ಧರ್ಮ]] ಮತ್ತು [[ಟಾವೋಯಿಸಂ|ಟಾವೋ ತತ್ವ]] ಬೆಳವಣಿಗೆ ಹಾಗೂ [[ಬೌದ್ಧ ಧರ್ಮ]] ಮತ್ತು [[ಕ್ರೈಸ್ತ ಧರ್ಮ|ಕ್ರೈಸ್ತ ಧರ್ಮಗಳ]] ಪರಿಚಯವಾಗುವುದಕ್ಕೆ ಮುಂಚಿತವಾಗಿ ಈ ಧರ್ಮಶ್ರದ್ಧೆಯ ವ್ಯವಸ್ಥೆಯಿತ್ತು.. ಇದರಲ್ಲಿ ದೇವರನ್ನು ಸರ್ವಶಕ್ತನೆಂಬ ಅಮೂರ್ತವಾದ ವ್ಯಕ್ತಿತ್ವದ ಶಕ್ತಿಯೆಂದು ಗಣಿಸುವ ಕಾರಣ ಇದರಲ್ಲಿ [[ಏಕೀಶ್ವರವಾದ|ಏಕೀಶ್ವರವಾದದ]] ವೈಶಿಷ್ಟ್ಯತೆಗಳು ಕಾಣಿಸುತ್ತದೆ. ಕನ್‌ಫ್ಯೂಷಿಯಸ್‌ನ ಬರವಣಿಗೆಗಳಿಂದ ತಿಳಿಯುವ ಪ್ರಕಾರ, ಆತ ಸ್ವತಃ ದೇವರನ್ನು ವಂಚಿಸುವುದಕ್ಕಾಗುವುದಿಲ್ಲ ಎಂದು ನಂಬಿಕೆ ಹೊಂದಿದ್ದ, ಅಲ್ಲದೇ ದೇವರು ಜನರ ಜೀವನದ ಮೇಲೆ ನಿಯಂತ್ರಣವನ್ನು ಹೊಂದಿದ್ದು, ಪ್ರತಿಯೊಬ್ಬರನ್ನು ಪ್ರತ್ಯೇಕವಾಗಿ ಪರಿಗಣಿಸುತ್ತಾನೆ, ಧರ್ಮಿಷ್ಠತೆ(''ಯಿ'' , 義)<ref>ಹೋಮರ್‌ ಎಚ್‌.ಡಬ್ಸ್‌, "ಥೀಯಿಸಂ ಅಂಡ್‌ ನ್ಯಾಚುರಲಿಸಂ ಇನ್‌ ಆನ್‌ಷಿಯೆಂಟ್‌ ಚೀನಾ ಫಿಲಾಸಫಿ" ''ಫಿಲಾಸಫಿ ಆಫ್ ಈಸ್ಟ್‌ ಅಂಡ್‌ ವೆಸ್ಟ್‌ '' , ಸಂಪುಟ. ೯, ಸಂಖ್ಯೆ. ೩/೪, ೧೯೫೯</ref>ಯಿಂದಿರಲು ಕೆಲ ಕಟ್ಟಳೆಗಳನ್ನು ವಿಧಿಸುತ್ತಾನೆ ಎಂಬ ನಂಬಿಕೆಗಳನ್ನು ಹೊಂದಿದ್ದ. ಆದಾಗ್ಯೂ ಈ ಧರ್ಮಶ್ರದ್ಧೆಯ ವ್ಯವಸ್ಥೆಯು ಸಂಪೂರ್ಣವಾಗಿ ಏಕೀಶ್ವರವೆಂದು ಹೇಳಲಾಗುವುದಿಲ್ಲ, ಏಕೆಂದರೆ ಆಯಾ ಪ್ರದೇಶಕ್ಕೆ ಸೀಮಿತವಾಗಿ ಇನ್ನೂ ಅನೇಕ ದೈವಗಳು ಹಾಗೂ ಇನ್ನಿತರ ಶಕ್ತಿಗಳು ''ಷಾಂಗ್‌ದಿ'' ಯೊಂದಿಗೆ ಪೂಜೆಗೊಳ್ಳುತ್ತಿದ್ದವು. ಆದರೂ [[ಮೋಹಿಸಂ|ಮೋಹಿಸಂನಂತಹಾ]] ಇನ್ನಿತರ ಭಿನ್ನ ಧರ್ಮಗಳು, ದೈವಗಳು ಹಾಗೂ ಇನ್ನಿತರ ಪಿತೃ ಶಕ್ತಿಗಳು [[ಅದೃಷ್ಟ ಬಲ ನಂಬಿಕೆ|ಅದೃಷ್ಟಬಲ ನಂಬಿಕೆ]]ಯನ್ನು ದೂರವಿಟ್ಟು, "ವಿಶ್ವ ಪ್ರೀತಿ"(''ಜಿಯಾನೈ '' , 兼爱)ಯನ್ನು ಬೆಳೆಸಿಕೊಳ್ಳುವುದೂ ಸೇರಿದಂತೆ ಕೇವಲ ''ಷಾಂಗ್‌ದಿ'' ಯ ಇಚ್ಛೆಯಂತೆ ನಡೆಯಲು ಸೂಚಿಸುವುದಕ್ಕೆ ಇರುವುದು ಎಂದು ತಿಳಿಸಿ ಏಕೀಶ್ವರವಾದವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದವು. ಪ್ರಾಚೀನ ಚೀನಾದಲ್ಲಿ ''ಷಾಂಗ್‌ದಿ'' ಮತ್ತು ದೇವರುಗಳ ಆರಾಧನೆಯ ಅಂಗವಾಗಿ ಗುಡಿಗಳ ನಿರ್ಮಾಣ ಮತ್ತು ಪೂಜೆಗಳು ಸೇರಿದ್ದವು. ನಿರ್ಮಾಣವಾದ ಗುಡಿಗಳಲ್ಲಿ ಅತಿ ಮಹತ್ವವಾದದ್ದು ಬೀಜಿಂಗ್‌ನಲ್ಲಿರುವ [[ದೇವರ ಗುಡಿ]]. ಚೀನೀ ಸಾಮ್ರಾಜ್ಯದ ಪ್ರತಿಯೊಬ್ಬ ರಾಜನೂ ವಾರ್ಷಿಕವಾಗಿ ದೇವರಿಗೆ [[ಬಲಿ|ಪಶುಬಲಿ ಕಾರ್ಯ]]ಗಳನ್ನು ನಡೆಸಿ ಸಾಮಾನ್ಯವಾಗಿ ಒಂದು ಗೂಳಿಯನ್ನು ಬಲಿಕೊಟ್ಟು ನೆರವೇರಿಸುತ್ತಿದ್ದನು. ಟಾವೋ ತತ್ವ ಮತ್ತು ಬೌದ್ಧ ಧರ್ಮಗಳ ಉದಯದೊಂದಿಗೆ ಜನಪ್ರಿಯತೆ ನಿಧಾನವಾಗಿ ಕಡಿಮೆಯಾದರೂ, ಆಧುನಿಕಯುಗದ ಮುನ್ನಿನ ಅವಧಿಯುದ್ದಕ್ಕೂ ಉಳಿದ ಧರ್ಮಗಳಲ್ಲಿ ಇದರ ಬಗೆಗಿನ ಕಲ್ಪನೆಗಳು ಮುಂದುವರೆದವು, ಅಲ್ಲದೇ ಚೀನೀಯ ಕ್ರೈಸ್ತಧರ್ಮದ ಪದಬಳಕೆಯೂ ಸೇರಿದಂತೆ ನಂತರದ ಧರ್ಮಗಳಲ್ಲಿ ಸಹಾ ಅಳವಡಿಸಿಕೊಳ್ಳಲಾಗಿದೆ.
[[ಚೀನಾದಲ್ಲಿ ಇಸ್ಲಾಂ|ಚೀನಾದಲ್ಲಿ ಇಸ್ಲಾಂ ಧರ್ಮವು]] [[ಮುಹಮ್ಮದ್‌|ಮುಹಮ್ಮದ್‌ರ]] ಸಾವಿನ ಹದಿನೆಂಟು ವರ್ಷಗಳ ನಂತರ ೬೫೧ರಲ್ಲಿ ಬಂದ ಧರ್ಮ ಪ್ರಚಾರ ನಿಯೋಗದಿಂದ ಹರಡಿತು. [[ಸಾಂಗ್‌ ಸಾಮ್ರಾಜ್ಯ|ಸಾಂಗ್‌ ಅಧಿಪತ್ಯ]]<ref name="bbc">BBC ಇಸ್ಲಾಂ ಇನ್‌ ಚೀನಾ (೬೫೦-ಪ್ರಕೃತ) [http://www.bbc.co.uk/religion/religions/islam/history/china_1.shtml http://www.bbc.co.uk/religion/religions/islam/history/china_1.shtml]</ref><ref name="islamicculture">{{cite web|url=http://www.religion-online.org/showchapter.asp?title=1656&C=1645|title=Islamic culture in China}}</ref>ದ ಅವಧಿಯಲ್ಲಿ ಚೀನಾ ಪ್ರವೇಶಿಸಿದ ಮುಸ್ಲಿಮರು ವ್ಯಾಪಾರಕ್ಕೆಂದು ಬಂದರೂ, ಆಯಾತ/ನಿರ್ಯಾತಗಳಲ್ಲಿ ಹತೋಟಿ ಪಡೆಯುವಷ್ಟು ಪ್ರಬಲರಾದರು. [[ಝೆಂಗ್‌ ಹೆ|ಝೆಂಗ್‌ ಹೇ]],[[ಲಾನ್‌ ಯು]] ಮತ್ತು ಯುವಾನ್‌ ಸಾಮ್ರಾಜ್ಯದ ರಾಜಧಾನಿ [[ಖಾನ್‌ಬಾಲಿಕ್‌]] ಕಟ್ಟಲು ಸಹಾಯಕರಾಗಿದ್ದವರಲ್ಲಿ ಒಬ್ಬನಾಗಿದ್ದ [[ಯೆಹೆಡೀರ್‌ಡಿಂಗ್‌|ಯೆಹೇಡೀರ್‌ಡಿಂಗ್‌]]ನೂ ಸೇರಿದಂತೆ ಆಡಳಿತ ವಲಯದಲ್ಲಿ ಪ್ರಭಾವವನ್ನು ಬೆಳೆಸಿಕೊಂಡರು. ಇಸ್ಲಾಂ ವ್ಯಾಸಂಗ<ref>{{cite web|url=http://www.hsais.org/2essay0405_4.htm|title=Looking East: The challenges and opportunities of Chinese Islam}}</ref>ಕ್ಕೆ [[ನಂಜಿಂಗ್‌]] ಪ್ರಮುಖ ಕೇಂದ್ರವಾಗಿ ಪರಿಣಮಿಸಿತು. [[ದಂಗನ್‌ ದೊಂಬಿ]] ಮತ್ತು [[ಪಾಂಥಯ್‌ ದಂಗೆ]]<ref>ಲೆವೀನ್‌, ಮಾರ್ಕ್‌. ಜಿನೋಸೈಡ್‌ ಇನ್‌ ದ ಏಜ್‌ ಆಫ್‌ ನೇಷನ್‌-ಸ್ಟೇಟ್‌ . I.B.ಟಾರಿಸ್‌, ೨೦೦೫. ISBN ೧-೮೪೫೧೧-೦೫೭-೯, ಪುಟ ೨೮೮</ref><ref>ಗಿಯೆರ್ಷ್‌, ಚಾರ್ಲ್ಸ್ ಪ್ಯಾಟರ್‌ಸನ್‌. ಏಷ್ಯನ್‌ ಬಾರ್ಡರ್‌ ಲ್ಯಾಂಡ್ಸ್‌ : ದ ಟ್ರಾನ್ಸ್‌ಫರ್ಮೇಷನ್‌ ಆಫ್‌ ಕ್ವಿಂಗ್‌ ಚೀನಾಸ್‌ ಯುನ್ನಾನ್‌ ಫ್ರಾಂಟಿಯರ್‌. ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್‌, ೨೦೦೬. ISBN ೧-೮೪೫೧೧-೦೫೭-೯, ಪುಟ ೨೧೯</ref><ref>ಡಿಲ್ಲನ್‌, ಮೈಕೆಲ್‌. [http://www.hsais.org/2essay0405_4.htm ಚೀನಾಸ್‌ ಮುಸ್ಲಿಮ್‌ ಹುಯಿ ಕಮ್ಯುನಿಟಿ]. ಕರ್ಜನ್‌, ೧೯೯೯. ISBN ೦-೭೦೦೭-೧೦೨೬-೪, ಪುಟ xix</ref>ಗಳಲ್ಲಿ [[ಕ್ವಿಂಗ್‌ ಸಾಮ್ರಾಜ್ಯ|ಕ್ವಿಂಗ್‌ ಅಧಿಪತ್ಯವು]] ಮುಸ್ಲಿಮರ ವಿರುದ್ಧ ಯುದ್ಧ ಘೋಷಿಸಿ, [[ಇತಿಹಾಸದಲ್ಲಿನ ನರಮೇಧಗಳು|ನರಮೇಧ]] ನಡೆಸಿತು.
 
[[ಚೀನಾದಲ್ಲಿ ಜುಡಾಯಿಸಂ]] ೭ನೇ ಅಥವಾ ೮ನೇ ಶತಮಾನ [[ಸಾಮಾನ್ಯ ಯುಗ |CEy]]ಷ್ಟು ಹಳೆಯದು. ೨೦ನೇ ಶತಮಾನದ ಮೊದಲಾರ್ಧದಲ್ಲಿ, ಅನೇಕ [[ಜ್ಯೂಗಳು]] [[ಶಾಂಘಾಯ್‌]] ಮತ್ತು [[ಹಾಂಗ್ ಕಾಂಗ್|ಹಾಂಗ್‌ ಕಾಂಗ್‌]]ಗಳಿಗೆ ಆಯಾ ನಗರಗಳ ಆರ್ಥಿಕ ವಿಸ್ತರಣಾ ಅವಧಿಯಲ್ಲಿ, [[ಹತ್ಯಾಕಾಂಡ|ಮಾರಣಹೋಮ]]ದಿಂದ ರಕ್ಷಣೆ ಬಯಸಿ ವಲಸೆ ಬಂದರು. ಶಾಂಘಾಯ್‌ ನಗರವು, ವೀಸಾ ಇಲ್ಲದೇ ಇದ್ದರೂ ಪ್ರವೇಶ ನೀಡುವ ವಿಶ್ವದ ಏಕೈಕ ಬಂದರಾಗಿದ್ದ ಕಾರಣ, ಜ್ಯೂ ನಿರಾಶ್ರಿತರ ಸಂಖ್ಯೆಯ ಪ್ರಮಾಣದಿಂದ ಗಮನ ಸೆಳೆಯುತ್ತದೆ.
 
==ಚೀನಾದ ಹೊಸವರ್ಷ==
ಪ್ರತಿವರ್ಷ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ, ಜನವರಿ ೨೩ ರಂದು 'ಚಾಂದ್ರಮಾನ ರೀತ್ಯ' ಚೀನ ಹೊಸವರ್ಷವನ್ನು ೧ ವಾರ ಕಾಲ ವಿಜೃಂಭಣೆಯಿಂದ ಆಚರಿಸುತ್ತದೆ. ಆ ಸಮಯದಲ್ಲಿ ಚೀನಾದ ನಗರವಾಸಿಗಳೆಲ್ಲಾ ತಮ್ಮ ತಮ್ಮ ಗ್ರಾಮಗಳಿಗೆ ಹೋಗಿ ಕುಟುಂಬದ ಸದಸ್ಯರೊಡನೆ ಬೆರೆತು ಉಲ್ಲಾಸದಿಂದ ಅಲ್ಲಿ ಜರುಗುವ [[ಬೇಸಿಗೆಯ ಬೃಹದ್ ಉತ್ಸವ]]ಗಳಲ್ಲಿ ಭಾಗವಹಿಸಿ,ಸಂತೋಷ ಮತ್ತು ಹುರುಪಿನಿಂದ ತಮ್ಮ ಕಾರ್ಯಕ್ಷೇತ್ರಗಳಿಗೆ ವಾಪಸ್ಸಾಗುತ್ತಾರೆ. ಒಟ್ಟು ೪೦ ದಿನಗಳ ಈ ವಲಸೆಯ ಪ್ರಕ್ರಿಯೆಯಲ್ಲಿ ಲಕ್ಷಾಂತರ ಕಾರ್ಮಿಕರು,ವಿದ್ಯಾರ್ಥಿಗಳು ಸೇರಿದಂತೆ ಸುಮಾರು ೩೧.೬ ಕೋಟಿ ಜನರು ಭಾಗವಹಿಸುತ್ತಾರೆ. ಇದು '[[ವಿಶ್ವದ ಅತಿದೊಡ್ಡ ಮಾನವ ವಲಸೆ]]'ಯೆಂದು ಪ್ರರಿಗಣಿಸಲ್ಪಟ್ಟಿದೆ. ಅತಿ ಸುಲಭ ಸಾರಿಗೆ ವ್ಯವಸ್ಥೆಗೆ ಅಡಚಣೆ ಬಂದರೂ ಜನ ಬೇಸರಿಸದೆ ತಮ್ಮ ಸಾಂಪ್ರದಾಯಿಕ ಹಬ್ಬಗಳಿಗೆ ಮಾನ್ಯತೆ ಕೊಟ್ಟು ಈ ಹಬ್ಬದ ಆಚರಣೆಯನ್ನು ಇಂದಿಗೂ ಕಾಯ್ದುಕೊಂಡು ಬಂದಿದ್ದಾರೆ.
೨೪,೬೮೬

edits

"https://kn.wikipedia.org/wiki/ವಿಶೇಷ:MobileDiff/245166" ಇಂದ ಪಡೆಯಲ್ಪಟ್ಟಿದೆ