ಚೀನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (Robot: Modifying got:𐌺𐌹𐌽𐌰
(~~~~)
೯೪ ನೇ ಸಾಲು:
 
ತನ್ನ ರಾಜಧಾನಿಯನ್ನು ತೈವಾನ್‌ಗೆ ಸ್ಥಳಾಂತರಿಸಿದ ನಂತರವೂ ರಿಪಬ್ಲಿಕ್‌ ಆಫ್ ಚೀನಾವು ಇಡೀ ಚೀನಾದ ಮೇಲಿನ ತನ್ನ ಅಧಿಕಾರವನ್ನು ಅಧಿಕೃತವಾಗಿ ಹಿಂತೆಗೆದುಕೊಂಡಿಲ್ಲದೇ ಇರುವುದಲ್ಲದೇ, [[ಚೀನಾ ಪ್ರಧಾನ ಭೂಮಿ|ಪ್ರಧಾನ ಭೂಮಿ]] ಮತ್ತು [[ಮಂಗೋಲಿಯಾ|ಮಂಗೋಲಿಯಾಗಳನ್ನೊಳಗೊಂಡ]] ತನ್ನ ಅಧಿಕೃತ ಭೂಪಟದಲ್ಲಿಯೂ ಬದಲಾವಣೆ ಮಾಡಿಲ್ಲ. ಪೂರ್ಣ ಪ್ರಜಾಪ್ರಭುತ್ವವನ್ನು ಅಳವಡಿಸಿದ ನಂತರ, [[ಡೆಮೊಕ್ರಾಟಿಕ್‌ ಪ್ರೋಗ್ರೆಸಿವ್‌ ಪಾರ್ಟಿ|DPP]]ಯ [[ಚೆನ್‌ ಸೂಯಿ-ಬಿಯಾನ್‌|ಚೆನ್‌ ಶೂಯಿ-ಬಿಯಾನ್‌]]ರು ಅಧ್ಯಕ್ಷೀಯ ಚುನಾವಣೆಯಲ್ಲಿ ಪಡೆದ ಗೆಲುವಿನಿಂದ, ROCಯು ತನ್ನ ಪ್ರಭುತ್ವವನ್ನು "ಚೀನಾ" ಎಂಬ ಹೆಸರಿನ ಬದಲು "ತೈವಾನ್‌" ಎಂಬ ಹೆಸರಿನಿಂದ ಗುರುತಿಸಿಕೊಳ್ಳುವ ನಿಲುವು ತಾಳಿದೆ. ಆದರೂ ROCಯು ಹೆಸರು, ಧ್ವಜ ಅಥವಾ ರಾಷ್ಟ್ರಗೀತೆಯಲ್ಲಿ ತೈವಾನ್‌ನ್ನು ಪ್ರತಿನಿಧಿಸುವ ಯಾವುದೇ ಅಧಿಕೃತ ನಡೆಗಳನ್ನು ಕೈಗೊಂಡಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ ತೈವಾನ್‌ನೊಳಗಿನ ಆಂತರಿಕ ಭಿನ್ನಾಭಿಪ್ರಾಯ, ಯುನೈಟೆಡ್‌ ಸ್ಟೇಟ್ಸ್‌ನ ಒತ್ತಡ ಹಾಗೂ ಪೀಪಲ್ಸ್‌‌ ರಿಪಬ್ಲಿಕ್‌ ಆಫ್‌ ಚೀನಾದಿಂದ ದ್ವೀಪದ ಮೇಲಿನ ಆಕ್ರಮಣ ಅಥವಾ ಸೈನಿಕ ಕಾರ್ಯಾಚರಣೆಯ ಭಯ. ರಿಪಬ್ಲಿಕ್‌ ಆಫ್‌ ಚೀನಾವು DPPಯ ಆಡಳಿತ ಕಾಲದಲ್ಲಿ ಚೀನಾದ ಪ್ರಧಾನ ಭೂಭಾಗ ಅಥವಾ ಮಂಗೋಲಿಯಾದ ಮೇಲಿನ ತನ್ನ ಪ್ರಭುತ್ವದ ಬಗ್ಗೆ ಆಸಕ್ತಿ ತೋರದೇ ಇದ್ದರೂ, KMTಯ [[ಮಾ ಯಿಂಗ್‌-ಜಿಯೋ|ಮಾ ಯಿಂಗ್‌-ಝಿಯೌ]]ರು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ, ಪ್ರಧಾನ ಭೂಭಾಗದ ಮೇಲಿನ ಹಕ್ಕಿನ ಮರುಸ್ಥಾಪನೆ<ref>{{cite news |title=Ma refers to China as ROC territory in magazine interview|publisher=Taipei Times|date=2008-10-08|url=http://www.taipeitimes.com/News/taiwan/archives/2008/10/08/2003425320}}</ref>ಗೆ ಮುಂದಾಗಿದೆ. ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾವು ರಿಪಬ್ಲಿಕ್‌ ಆಫ್‌ ಚೀನಾದ ಉತ್ತರಾಧಿಕಾರಿಯಾಗಿ ಪೂರ್ಣ ಚೀನಾದ ಏಕೈಕ ಶಾಸನಬದ್ಧ ಆಡಳಿತದ ಸೂತ್ರಧಾರನೆಂದು ಕರೆದುಕೊಳ್ಳುತ್ತಿದೆ. ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾದ ಅಧಿಕೃತ ಅಭಿಮತದ ಪ್ರಕಾರ ಪೂರ್ಣ ಚೀನಾವು [[ತೈವಾನ್‌]] ದ್ವೀಪವನ್ನೊಳಗೊಂಡಿದೆ. ಕಳೆದ ೫೦ ವರ್ಷಗಳಲ್ಲಿ ರಿಪಬ್ಲಿಕ್‌ ಆಫ್‌ ಚೀನಾ ಹಾಗೂ ಪೀಪಲ್ಸ್‌‌ ರಿಪಬ್ಲಿಕ್‌ ಆಫ್‌ ಚೀನಾಗಳೆರಡೂ ರಾಜತಾಂತ್ರಿಕ ಹಾಗೂ ಆರ್ಥಿಕ ಸಾಮರ್ಥ್ಯಗಳಿಂದ ಅಂತರರಾಷ್ಟ್ರೀಯ ರಂಗದಲ್ಲಿ ಮಾನ್ಯತೆಗಾಗಿ ಪೈಪೋಟಿ ನಡೆಸಿವೆ. ಅಧಿಕ ಸಂಖ್ಯೆಯ ಅಂತರರಾಷ್ಟ್ರೀಯ, ಅಂತರ-ಸರಕಾರ ಸಂಸ್ಥೆಗಳು, ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾದ [[ಏಕೈಕ-ಚೀನಾ ನೀತಿ|ಏಕೈಕ ಚೀನಾ ನೀತಿ]]ಯನ್ನು ಬೆಂಬಲಿಸುತ್ತಿರುವುದರಿಂದ, PRCಯು [[ವಿಶ್ವ ಆರೋಗ್ಯ ಸಂಸ್ಥೆ]] ಮತ್ತು [[ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ|ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯಂತಹಾ]] ಸಂಘಸಂಸ್ಥೆಗಳ ಮೇಲೆ ರಿಪಬ್ಲಿಕ್‌ ಆಫ್‌ ಚೀನಾಗೆ ಅಧಿಕೃತವಾಗಿ ಮಾನ್ಯತೆಯನ್ನು ನೀಡದಿರಲು ಒತ್ತಡ ಹೇರಲು ಯಶಸ್ವಿಯಾಗಿದೆ. ಏಕೈಕ ಚೀನಾ ನೀತಿಯಿಂದಾಗಿ, ವಿಶ್ವದಾದ್ಯಂತದ ಪ್ರಭುತ್ವಗಳ ಮೇಲೆ ರಿಪಬ್ಲಿಕ್‌ ಆಫ್‌ ಚೀನಾದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ತಿರಸ್ಕರಿಸಲು ಅಥವಾ ಕಡಿದುಕೊಳ್ಳಲು ಒತ್ತಡ ಹೇರಲಾಗುತ್ತಿದೆ. ಅದರ ಪರಿಣಾಮವಾಗಿ ಕೇವಲ [[ರಿಪಬ್ಲಿಕ್‌ ಆಫ್‌ ಚೀನಾದ ವಿದೇಶಾಂಗ ಸಂಬಂಧಗಳು#ROCಯೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರುವ ರಾಷ್ಟ್ರಗಳ ಪಟ್ಟಿ|23 ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು]] ರಿಪಬ್ಲಿಕ್‌ ಆಫ್‌ ಚೀನಾದೊಂದಿಗೆ ಅಧಿಕೃತ ರಾಜತಾಂತ್ರಿಕ ಸಂಬಂಧಗಳನ್ನು ಪ್ರಸಕ್ತವಾಗಿ ಹೊಂದಿದ್ದರೂ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಬಹುಪಾಲು ರಾಷ್ಟ್ರಗಳು ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾದೊಂದಿಗೆ ಅಧಿಕೃತ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿವೆ.
 
 
 
== ಭೂಪ್ರದೇಶ ಹಾಗೂ ಪರಿಸರ ==
 
=== ಚಾರಿತ್ರಿಕ ರಾಜಕೀಯ ವಿಭಾಗಗಳು ===
{{Main|History of the political divisions of China}}
Line ೧೦೭ ⟶ ೧೦೩:
 
 
ಬಹಳಷ್ಟು ಚೀನೀ ಪ್ರಭುತ್ವಗಳು [[ಪ್ರಧಾನ ಚೀನಾ|ಪ್ರಾಥಮಿಕ ಚೀನಾ]] ಎಂದು ಹೆಸರಾಗಿರುವ ಚಾರಿತ್ರಿಕ ಚೀನೀ ಹೃದಯಭಾಗಗಳಲ್ಲಿ ಅಸ್ತಿತ್ವದಲ್ಲಿದ್ದವು. ಅನೇಕ ಪ್ರಭುತ್ವಗಳು ಅಂಚಿನ ಪ್ರಾಂತ್ಯಗಳಾದ [[ಆಂತರಿಕ ಮಂಗೋಲಿಯಾ|ಮಂಗೋಲಿಯಾ ಒಳಭಾಗಗಳು]], [[ಮಂಚೂರಿಯಾ]], [[ಕ್ಸಿನ್‌ಜಿಯಾಂಗ್‌]], ಮತ್ತು [[ಟಿಬೆಟ್‌|ಟಿಬೆಟ್‌ಗಳವರೆಗೂ]] [[ವಿಸ್ತರಣಾ ನೀತಿ|ವಿಸ್ತರಿಸಿದ್ದವು]]. [[ಮಂಚು]]-ಸ್ಥಾಪಿತ [[ಕ್ವಿಂಗ್‌ ಸಾಮ್ರಾಜ್ಯ|ಕ್ವಿಂಗ್‌ ರಾಜವಂಶ]] ಹಾಗೂ ಅದರ ಉತ್ತರಾಧಿಕಾರಿಗಳು, ROC ಮತ್ತು PRC ಈ ಎಲ್ಲಾ ಪ್ರಾಂತ್ಯಗಳನ್ನು ಚೀನೀ ಪ್ರಭುತ್ವಕ್ಕೆ ಒಂದುಗೂಡಿಸಿದರು.
 
 
 
=== ಭೂಗೋಳ ಮತ್ತು ಹವಾಗುಣ ===
[[ಚಿತ್ರ:China 100.78713E 35.63718N.jpg|thumb|left|ಸಂಯುಕ್ತ ಉಪಗ್ರಹ ಛಾಯಾಚಿತ್ರ]]
ಚೀನಾವು ಪಶ್ಚಿಮದಲ್ಲಿ [[ಪ್ರಸ್ಥಭೂಮಿಗಳು|ಪ್ರಸ್ಥಭೂಮಿ]] ಮತ್ತು [[ಪರ್ವತಗಳು|ಪರ್ವತ]]ಗಳಿಂದ ಹಾಗೂ ಪೂರ್ವದಲ್ಲಿ ಇಳಿಜಾರು ಪ್ರದೇಶಗಳಿಂದ ಕೂಡಿದೆ. [[ಯಾಂಗ್‌ಟ್ಜಿ ನದಿ|ಯಾಂಗ್‌ಟ್ಜಿ]] (ಮಧ್ಯದ), [[ಹುವಾಂಗ್‌ ಹೇ|ಹುವಾಂಗ್‌ ಹೆ]] (ಹಳದಿ ನದಿ, ಉತ್ತರ-ಮಧ್ಯದ), ಮತ್ತು [[ಅಮುರ್‌ ನದಿ|ಅಮುರ್‌]] (ಈಶಾನ್ಯ)ಗಳೂ ಸೇರಿದಂತೆ ಪ್ರಮುಖ [[ನದಿ|ನದಿಗಳು]] ಪಶ್ಚಿಮದಿಂದ ಪೂರ್ವಕ್ಕೆ, ಇನ್ನು ಕೆಲವು ದಕ್ಷಿಣದ ಕಡೆಗೆ ([[ಪರ್ಲ್ ನದಿ (ಚೀನಾ)|ಪರ್ಲ್‌ ನದಿ]], [[ಮೆಕಾಂಗ್‌ ನದಿ]], ಮತ್ತು [[ಬ್ರಹ್ಮಪುತ್ರ]] ಸೇರಿದಂತೆ) ಹರಿಯುತ್ತವೆ. ಬಹಳಷ್ಟು ಚೀನೀ ನದಿಗಳು [[ಪೆಸಿಫಿಕ್‌ ಮಹಾಸಾಗರ|ಪೆಸಿಫಿಕ್‌ ಸಾಗರ]]ಕ್ಕೆ ಸೇರುತ್ತವೆ.
 
 
ಪೂರ್ವದಲ್ಲಿ [[ಹಳದಿ ಸಮುದ್ರ]] ಮತ್ತು [[ಪೂರ್ವ ಚೀನಾ ಸಮುದ್ರ|ಪೂರ್ವ ಚೀನಾ ಸಮುದ್ರಗಳ]] ತೀರಗಳುದ್ದಕ್ಕೂ ವಿಸ್ತಾರವಾದ ಹಾಗೂ ಜನನಿಬಿಡವಾಗಿರುವ [[ಮೆಕ್ಕಲು ಮಣ್ಣಿನ]] ಮೈದಾನಗಳಿವೆ. ಉತ್ತರದಲ್ಲಿ ಆಂತರಿಕ ಮಂಗೋಲಿಯನ್ ಪ್ರಸ್ಥಭೂಮಿಯ ಅಂಚುಗಳಲ್ಲಿ ಹುಲ್ಲುಗಾವಲುಗಳನ್ನು ಕಾಣಬಹುದು. ದಕ್ಷಿಣ ಚೀನಾವು ಗುಡ್ಡಗಾಡು ಹಾಗೂ ತಗ್ಗಿನಲ್ಲಿರುವ [[ಪರ್ವತ ಶ್ರೇಣಿ|ಪರ್ವತ ಶ್ರೇಣಿಗಳಿಂದ]] ಆವೃತವಾಗಿದೆ. ಮಧ್ಯಪೂರ್ವದಲ್ಲಿ ಚೀನಾದ ಎರಡು ಪ್ರಮುಖ ನದಿಗಳಾದ, [[ಹುವಾಂಗ್‌ ಹೇ]] ಮತ್ತು [[ಯಾಂಗ್‌ಟ್ಜಿ ನದಿ|ಯಾಂಗ್‌ಟ್ಜಿ ನದಿಗಳ]] [[ನದಿ ಮುಖಜ|ನದಿ-ಮುಖಜ ಭೂಮಿ]]ಗಳಿವೆ . ಚೀನಾದ ಬಹಳಷ್ಟು ವ್ಯವಸಾಯ ಯೋಗ್ಯ ಭೂಮಿಗಳು ಈ ನದಿಗಳ ಉದ್ದಕ್ಕೂ ಇವೆ. ಈ ನದಿಗಳೇ ಚೀನಾದ ಪ್ರಮುಖ ಪ್ರಾಚೀನ ನಾಗರೀಕತೆಯ ಕೇಂದ್ರಗಳಾಗಿದ್ದವು. ಇನ್ನಿತರ ಪ್ರಮುಖ ನದಿಗಳೆಂದರೆ [[ಪರ್ಲ್ ನದಿ (ಚೀನಾ)|ಪರ್ಲ್ ನದಿ]], [[ಮೆಕಾಂಗ್‌]], [[ಬ್ರಹ್ಮಪುತ್ರ]] ಹಾಗೂ [[ಅಮುರ್‌ ನದಿ|ಅಮುರ್‌]]ಗಳಾಗಿವೆ. ಯುನ್ನಾನ್‌ ಪ್ರಾಂತ್ಯವನ್ನು ಮ್ಯಾನ್ಮಾರ್, ಲಾವೋಸ್, ಥೈಲ್ಯಾಂಡ್‌, ಕಾಂಬೋಡಿಯಾ, ಮತ್ತು ವಿಯೆಟ್ನಾಂ<ref>[http://www.adb.org/Documents/Books/GMS_Atlas/default.asp ಗ್ರೇಟರ್‌ ಮೆಕಾಂಗ್‌ ಸಬ್‌ರೀಜನ್‌ ಅಟ್ಲಾಸ್‌ ಆಫ್‌ ದ ಎನ್‌ವಿರಾನ್‌ಮೆಂಟ್‌ ][http://www.adb.org/default.asp ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌]ನಿಂದ ಪ್ರಕಾಶಿತ</ref>ಗಳೂ ಸೇರಿದಂತೆ ಪ್ರಧಾನ ಮೆಕಾಂಗ್‌ ಉಪಪ್ರದೇಶದ ಭಾಗವಾಗಿ ಪರಿಗಣಿಸಲಾಗಿದೆ.
Line ೧೨೯ ⟶ ೧೨೨:
 
ದೀರ್ಘಕಾಲದ [[ಬರ|ಕ್ಷಾಮ]]ದ ಹಾವಳಿ ಮತ್ತು ಸಾಧಾರಣ ವ್ಯವಸಾಯ ಪದ್ಧತಿಗಳಿಂದಾಗಿ, ಚೀನಾ<ref>[http://news.bbc.co.uk/1/hi/world/asia-pacific/4915690.stm "ಬೀಜಿಂಗ್‌ ಹಿಟ್‌ ಬೈ ಎಯ್ತ್‌ ಸ್ಯಾಂಡ್‌ಸ್ಟಾರ್ಮ್"]. BBC ನ್ಯೂಸ್‌. ಭೇಟಿ ನೀಡಿದ ದಿನಾಂಕ ೧೭ ಏಪ್ರಿಲ್‌ ೨೦೦೬.</ref>ದಲ್ಲಿ ವಸಂತ ಕಾಲದಲ್ಲಿ [[ಮರಳು ಬಿರುಗಾಳಿ|ಮರಳು ಬಿರುಗಾಳಿಗಳು]] ಸರ್ವೇಸಾಧಾರಣವಾಗಿವೆ . ಧೂಳಿನಿಂದ ಕೂಡಿದ ಗಾಳಿಯು ದಕ್ಷಿಣ ಚೀನಾ ಮತ್ತು ತೈವಾನ್‌ಗಳ ಮೇಲೆ ಬೀಸಿದ್ದು, ಯುನೈಟೆಡ್‌ ಸ್ಟೇಟ್ಸ್‌ನ ಪಶ್ಚಿಮ ಕರಾವಳಿಯನ್ನು ತಲುಪುತ್ತಿರುತ್ತದೆ. ನೀರು, [[ಸವಕಳಿ|ಮಣ್ಣಿನ ಸವಕಳಿ]], ಮತ್ತು [[ಮಾಲಿನ್ಯ ನಿಯಂತ್ರಣ|ಮಾಲಿನ್ಯ ನಿಯಂತ್ರಣಗಳು]] ಚೀನಾದೊಂದಿಗೆ ಇತರ ದೇಶಗಳೊಂದಿಗೆ ಸಂಬಂಧ ನಡೆಸುವಾಗ ಚರ್ಚೆಯ ವಿಷಯವಾಗಿವೆ.
 
 
 
== ಆರ್ಥಿಕತೆ ==
{{Main|Economic history of China}}
{{See also|Economy of the People's Republic of China|Economy of the Republic of China|Economy of the Han Dynasty|Economy of the Song Dynasty|Economy of the Ming Dynasty|}}
 
 
 
== ಸಮಾಜ ==
Line ೧೪೭ ⟶ ೧೩೬:
 
೧೯ನೇ ಶತಮಾನದ ಮಧ್ಯಭಾಗದಲ್ಲಿ ಪಾಶ್ಚಿಮಾತ್ಯರ [[ಆರ್ಥಿಕತೆ|ಆರ್ಥಿಕ]] ಮತ್ತು [[ಸೇನೆಯ|ಸೈನಿಕ]] ಬಲಗಳ ಏರಿಕೆಯಿಂದಾಗಿ, ಚೀನಾದಲ್ಲಿ ಚೀನೀಯವಲ್ಲದ ಸಾಮಾಜಿಕ ಮತ್ತು ರಾಜಕೀಯ ಸಂಘಸಂಸ್ಥೆಗಳ ವ್ಯವಸ್ಥೆಗಳ ಬೆಂಬಲಿಗರ ಸಂಖ್ಯೆ ಹೆಚ್ಚಿತು. ಈ ಭಾವೀ ಸುಧಾರಕರಲ್ಲಿ ಕೆಲವರು ಚೀನಾದ ಸಾಂಸ್ಕೃತಿಕ ಪರಂಪರೆಯನ್ನೇ ಪೂರ್ಣವಾಗಿ ಅಲ್ಲಗಳೆದರೆ, ಇನ್ನು ಕೆಲವರು ಚೀನೀ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಗಳ ಸತ್ವಗಳನ್ನು ಸಂಯೋಜನೆಯನ್ನು ಆಯ್ಕೆ ಮಾಡಿಕೊಂಡರು. ಇವೆಲ್ಲದರಿಂದ ಅರ್ಥವಾಗುವುದೇನೆಂದರೆ ೨೦ನೇ ಶತಮಾನದ ಚೀನಾದ ಇತಿಹಾಸವು ಸಾಮ್ರಾಜ್ಯಶಾಹಿಯ ಕುಸಿತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಏಕೀಕರಣಕ್ಕೆ ಸಹಾಯಕವಾಗಿ ಸಾಮಾಜಿಕ, [[ರಾಜಕೀಯದ|ರಾಜಕೀಯ]], ಮತ್ತು ಆರ್ಥಿಕ ಸಂಘಟನಾ ವ್ಯವಸ್ಥೆಗಳ ಪ್ರಯೋಗಗಳನ್ನು ಒಳಗೊಂಡಿತ್ತು.
 
 
 
==== ಕಲೆ, ಪಾಂಡಿತ್ಯ, ಮತ್ತು ಸಾಹಿತ್ಯ ====
[[ಚಿತ್ರ:mifu01.jpg|thumb|ಮಿ ಫು ರ ಚೀನೀ ಅಲಂಕೃತ ಲಿಪಿರಚನೆ, ಸಾಂಗ್‌ ಸಾಮ್ರಾಜ್ಯ, ca. 1100 CE]][[ಚಿತ್ರ:Bamboo book - binding - UCR.jpg|thumb|ಸುನ್‌ ಟ್ಜುನ ಯುದ್ಧ ಕಲೆ, ಒಂದು ಕ್ವಿಯಾನ್‌ಲಾಂಗ್‌ ಸಾಮ್ರಾಜ್ಯದ ವಂಶಾವಳಿ ಪುಸ್ತಕದ 20ನೇ ಶತಮಾನದ ಮರುಮುದ್ರಿತ ಪ್ರತಿ. ]]ಚೀನೀ ಇತಿಹಾಸದಾದ್ಯಂತ ಚೀನೀ ಲಿಪಿಗಳು ಅನೇಕ ವೈವಿಧ್ಯತೆ ಮತ್ತು ಶೈಲಿಗಳನ್ನು ಹೊಂದಿದ್ದವು. [[ದೈವವಾಣಿ ಎಲುಬುಗಳು|ದೈವವಾಣಿಗಳಿರುವ ಎಲುಬು]]ಗಳಿಂದ ಹಿಡಿದು ಕ್ವಿಂಗ್‌ ಶಾಸನಗಳವರೆಗೆ ಸಾವಿರಾರು ಪ್ರಾಚೀನ ಲಿಖಿತ ದಾಖಲೆಗಳು ಈಗಲೂ ಲಭ್ಯವಿದೆ. ಲಿಖಿತ ಪ್ರಾಮುಖ್ಯತೆಯು ಚೀನಾದಲ್ಲಿ ಸಾಂಸ್ಕೃತಿಕ ಪರಿಷ್ಕರಣೆಯ ಸಾಮಾನ್ಯ ಗ್ರಹಿಕೆಯನ್ನೇ ಪ್ರಭಾವಿಸಿತು. ಉದಾಹರಣೆಗೆ [[ಚೀನಾದ ಅಲಂಕೃತ ಲಿಪಿರಚನೆ|ಅಲಂಕೃತ ಲಿಪಿರಚನೆ]]ಯು ಚಿತ್ರಕಲೆ ಅಥವಾ ನಾಟಕ ಕಲೆಗಿಂತ ಉನ್ನತವಾದುದು ಎಂಬ ಅಭಿಮತವಿದ್ದದ್ದು. ಮಹಾಕೃತಿಗಳು ಮತ್ತು ಧಾರ್ಮಿಕ ಗ್ರಂಥಗಳ (ಪ್ರಮುಖವಾಗಿ [[ಕನ್‌ಫ್ಯೂಷಿಯನ್‌|ಕನ್‌ಫ್ಯೂಷಿಯಸ್‌ ಮತ,]] [[ಟಾವೋಯಿಸ್ಟ್‌|ಟಾವೋ ತತ್ವ,]] ಮತ್ತು [[ಬೌದ್ಧ ಧರ್ಮೀಯ|ಬೌದ್ಧ ಧರ್ಮ]]ದವು) ಹಸ್ತಪ್ರತಿಗಳು [[ಕುಂಚ ಶಾಯಿ|ಕುಂಚ ಶಾಯಿಯಲ್ಲಿ]] ಹಸ್ತಲಿಖಿತವಾದವು. ಅಲಂಕೃತ ಲಿಪಿರಚನೆಯು ಮುಂದೆ ವ್ಯಾಪಾರೀಕೃತಗೊಂಡು, ಶ್ರೇಷ್ಠ ಕಲಾವಿದರ ಕೃತಿಗಳು ಉತ್ಕೃಷ್ಠ ಮೌಲ್ಯ ಹೊಂದಿದವು. [[ಚೀನಾದ ಸಾಹಿತ್ಯ|ಚೀನೀ ಸಾಹಿತ್ಯ]]ವು ದೀರ್ಘ ಇತಿಹಾಸ ಹೊಂದಿದೆ; ಚೀನೀ ಭಾಷೆಯಲ್ಲಿನ ಪ್ರಾಚೀನ ಮಹಾಕೃತಿ, ''[[I ಚಿಂಗ್‌|ಐ ಚಿಂಗ್‌]]'' ಅಥವಾ "ಪರಿವರ್ತನೆಗಳ ಗ್ರಂಥ"ವು ೧೦೦೦ BCEಯಷ್ಟು ಹಳೆಯದು. [[ರಾಜ್ಯಗಳ ಸಂಘರ್ಷದ ಅವಧಿ|ರಾಜ್ಯಗಳ ಸಂಘರ್ಷದ ಅವಧಿಯಲ್ಲಿ]] ಉಚ್ಛ್ರಾಯ ಸ್ಥಿತಿ ತಲುಪಿದ ತತ್ವಶಾಸ್ತ್ರವು ಕನ್‌ಫ್ಯೂಷಿಯಸ್‌ನ ''[[ಅನಾಲೆಕ್ಟ್ಸ್‌]]'' ಮತ್ತು [[ಲಾವೋಜಿ|ಲಾವೋಜಿನ]] ''[[ಟಾವೋ ಟೆ ಚಿಂಗ್‌]]'' ನಂತಹ ಗಮನಾರ್ಹ ಕೃತಿಗಳನ್ನು ನೀಡಿತು. (ವಿವರಗಳಿಗಾಗಿ ನೋಡಿ: [[ಚೀನೀ ಸಾಂಪ್ರದಾಯಿಕ ಗ್ರಂಥಗಳು|ಚೀನೀ ಮಹಾಕೃತಿಗಳು]].) [[ಸಿಮಾ ಕ್ವಿಯಾನ್‌|ಸಿಮಾ ಕ್ವಿಯಾನ್‌ನ]] ಮೂಲಾವಸ್ಥೆಯ ೧೦೯ BCEಯಿಂದ ೯೧ BCEವರೆಗೆ ರಚಿತವಾದ ''[[ಐತಿಹಾಸಿಕ ದಾಖಲೆಗಳು|ಇತಿಹಾಸಕಾರನ ದಾಖಲೆಗಳು]]'' ಇಂದ ಮೊದಲುಗೊಂಡು, ರಾಜವಂಶೀಯ ಇತಿಹಾಸಗಳು ಆಗ್ಗಾಗ್ಗೆ ರಚಿತವಾದವು. ಟಾಂಗ್‌ ಸಾಮ್ರಾಜ್ಯದ ಅವಧಿಯಲ್ಲಿ [[ಚೀನಾದ ಕವಿತ್ವ|ಕವಿತ್ವ]] ವಿಕಾಸಗೊಂಡಿದ್ದರೆ, ಚೀನೀ ಸಾಹಿತ್ಯದ [[ನಾಲ್ಕು ಶ್ರೇಷ್ಟ ಸಾಂಪ್ರದಾಯಿಕ ಗ್ರಂಥಗಳು|ನಾಲ್ಕು ಶ್ರೇಷ್ಠ ಸಾಂಪ್ರದಾಯಿಕ ಕಾದಂಬರಿ]]ಗಳು ಮಿಂಗ್‌ ಹಾಗೂ ಕ್ವಿಂಗ್‌ ಸಾಮ್ರಾಜ್ಯಗಳ ಅವಧಿಯಲ್ಲಿ ರಚಿತವಾದವು. [[ಸಾಂಗ್‌ ಸಾಮ್ರಾಜ್ಯ|ಸಾಂಗ್‌ ಅಧಿಪತ್ಯ]]ದ ಅವಧಿಯಲ್ಲಿ [[ಚಲಿಸಬಲ್ಲ ಅಚ್ಚು|ಚಲಿಸಬಲ್ಲ ಅಚ್ಚುಗಳ]] ಮಾದರಿಯ [[ಮುದ್ರಣ|ಮುದ್ರಣ ಅಚ್ಚು]]ಗಳನ್ನು ಅಭಿವೃದ್ಧಿಪಡಿಸಲಾಯಿತು. ಪ್ರಭುತ್ವದಿಂದ ಪ್ರಾಯೋಜಿತವಾಗಿ ಪಂಡಿತರುಗಳನ್ನು ಒಳಗೊಂಡ ಪರಿಷತ್ತುಗಳನ್ನು ಸ್ಥಾಪಿಸಿ, ಮುದ್ರಿತ ಹಾಗೂ ಹಸ್ತಪ್ರತಿಗಳ ರೂಪದಲ್ಲಿರುವ ಮೇರುಕೃತಿಗಳ ಬಗ್ಗೆ ವ್ಯಾಖ್ಯಾನಗಳನ್ನು ಬರೆಸಲಾಗುತ್ತಿತ್ತು. ಇಂತಹಾ ಚರ್ಚೆಗಳಲ್ಲಿ ಪ್ರಭುತ್ವವೂ ಆಗಿಂದ್ದಾಗ್ಗೆ ಭಾಗವಹಿಸುತ್ತಿತ್ತು. ಸಾಂಗ್‌ ಸಾಮ್ರಾಜ್ಯದ ಅವಧಿಯು ಅಧಿಕಾಂಶ ವೈಜ್ಞಾನಿಕ ಸಾಹಿತ್ಯ ರಚನೆಯಾದ ಅವಧಿಯೂ ಆಗಿತ್ತು. [[ಸು ಸಾಂಗ್‌]] ರಚಿತ ''ಕ್ಸಿನ್‌ ಇಕ್ಸಿಯಾಂಗ್‌ ಫಾಯೋ'' ಮತ್ತು [[ಷೆನ್‌ ಕುವೋ|ಷೆನ್‌ ಕುಓ]] ರಚಿತ ''[[ಕನಸಿನ ಹೊಳೆಯ ಪ್ರಬಂಧಗಳು]]'' ಮುಂತಾದ ಕೃತಿಗಳ ರಚನೆಯಾಯಿತು. ಇತಿಹಾಸ ಶಾಸ್ತ್ರಕ್ಕೆ ಹಾಗೂ ಬೃಹತ್‌ ವಿಶ್ವಕೋಶಗಳಿಗೆ ಸಂಬಂಧಿಸಿದಂತೆ ವಿಪುಲ ಕೃತಿಗಳು, ಹೆಸರಿಸಬೇಕೆಂದರೆ, ೧೦೮೪ CEನಲ್ಲಿ ರಚಿತವಾದ [[ಸಿಮಾ ಗುವಾಂಗ್‌|ಸಿಮಾ ಗುವಾಂಗ್‌ನ]] ''[[ಝಿಝಿ ಟಾಂಗ್‌ಜಿಯನ್‌|ಝಿಝಿ ಟಾಂಗ್‌ಜಿಯಾನ್‌]]'' ಅಥವಾ ''[[ಸಾಂಗ್‌ ಕಾಲದ ನಾಲ್ಕು ಶ್ರೇಷ್ಟ ಗ್ರಂಥಗಳು|ಸಾಂಗ್‌ನ ನಾಲ್ಕು ಉತ್ಕೃಷ್ಠ ಗ್ರಂಥಗಳು]]'' ೧೧ನೇ ಶತಮಾನದ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಕಲನ ಮತ್ತು ಸಂಪಾದನೆಯಾದವು. ಶತಮಾನಗಳ ಕಾಲ ಚೀನಾದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಬೆಳವಣಿಗೆಗಳನ್ನು ಸಾಮ್ರಾಜ್ಯಶಾಹಿ ಪರೀಕ್ಷೆಗಳಲ್ಲಿ ಹೆಚ್ಚಿನ ಸಾಮರ್ಥ್ಯ ಪ್ರದರ್ಶನದ ಮೂಲಕ ಮಾತ್ರವೇ ತರಲು ಸಾಧ್ಯವಿತ್ತು. ಇದು ಅರ್ಹತಾಶಾಹಿಯ ನಿರ್ಮಾಣಕ್ಕೆ ನಾಂದಿಯಾಯಿತು. ಆದರೆ ಇಲ್ಲಿ ಯಶಸ್ಸು ಪರೀಕ್ಷೆಗೆ ತಯಾರಿ ನಡೆಸಲು ಸಮರ್ಥರಾಗಿದ್ದ ಪುರುಷರಿಗೆ ಮಾತ್ರ ಸಾಧ್ಯವಿತ್ತು. ಸಾಮ್ರಾಜ್ಯಶಾಹಿ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಪ್ರಬಂಧಗಳನ್ನು ಬರೆದು ಕನ್‌ಫ್ಯೂಷಿಯಸ್‌ ಮೇರುಕೃತಿಗಳ ಬಗ್ಗೆ ತಮಗಿರುವ ಪ್ರೌಢಿಮೆಯನ್ನು ತೋರಿಸಬೇಕಿತ್ತು. ಉನ್ನತ ಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ''ಜಿನ್ಷಿ '' ಗಳೆಂದು ಹೆಸರಾದ ಗಣ್ಯ ಪಂಡಿತ-ಅಧಿಕಾರಿಗಳ ಪದವಿ ಹೊಂದಿರುತ್ತಿದ್ದರು. ಇದು ಉನ್ನತವಾದ ಸಾಮಾಜಿಕ ಮತ್ತು ಆರ್ಥಿಕ ಸ್ಥಾನವಾಗಿತ್ತು. ಚೀನೀ ತತ್ವಶಾಸ್ತ್ರಜ್ಞರು, ಲೇಖಕರು ಮತ್ತು ಕವಿಗಳು ವಿಶೇಷ ಗೌರವವನ್ನು ಹೊಂದಿರುತ್ತಿದ್ದುದಲ್ಲದೇ, ಸಾಮ್ರಾಜ್ಯದ ಸಂಸ್ಕೃತಿಯನ್ನು ರಕ್ಷಿಸುವ ಮತ್ತು ಬೆಳೆಸುವ ಜವಾಬ್ದಾರಿಯುತ ಸ್ಥಾನಗಳನ್ನು ಹೊಂದಿರುತ್ತಿದ್ದರು. ಕೆಲ ಮೇರುಕೃತಿಗಳನ್ನು ರಚಿಸಿದ ಪಂಡಿತೋತ್ತಮರು, ತಮ್ಮ ಕೃತಿಗಳಲ್ಲಿ ಧೈರ್ಯವಾಗಿ ಸಾಮಾನ್ಯ ಜನಜೀವನದ ಬಗ್ಗೆ ನೈಜ ಚಿತ್ರಣ ನೀಡಿ, ಆಗ್ಗಾಗ್ಗೆ ಅಧಿಕಾರಸ್ಥರ ಅಸಮಾಧಾನಕ್ಕೆ ಗುರಿಯಾಗುತ್ತಿದ್ದರು. ಚೀನೀಯರು [[ಗುಝೆಂಗ್‌|ಝೆಂಗ್‌]] (ಚಲಿಸಬಲ್ಲ ಮರದ ಪಟ್ಟಿಯುಳ್ಳ ಜಿದರ್‌), [[ಗುಕ್ವಿನ್‌|ಕ್ವಿನ್‌]] (ಮರದ ಪಟ್ಟಿಯಿಲ್ಲದ ಜಿದರ್‌), [[ಷೆಂಗ್‌ (ವಾದ್ಯ)|ಷೆಂಗ್‌]] (ನಿರ್ಬಂಧವಿಲ್ಲದ ಮೌತ್‌ ಆರ್ಗನ್‌), ಮತ್ತು [[ಕ್ಸಿಯಾವೋ (ಕೊಳಲು)|ಕ್ಸಿಯಾವೋ]] (ಲಂಬ ಕೊಳಲು)ಗಳಂತಹಾ ಅನೇಕ [[ಸಂಗೀತ ವಾದ್ಯ|ಸಂಗೀತ ಸಾಧನ]]ಗಳನ್ನು ಆವಿಷ್ಕಾರಗಳನ್ನು ಮಾಡಿದ್ದರು, ಮತ್ತು ಇನ್ನಿತರ ಸಾಧನಗಳನ್ನು ಅನುಸರಿಸಿ ತಮ್ಮದೇ ಆದ ಸಾಧನಗಳನ್ನು, ಅಂದರೆ [[ಎರ್‌ಹೂ]] (ತಾರಸ್ಥಾಯಿಯ ಪಿಟೀಲು ಅಥವಾ ಬಗ್ಗಿದ ಲೂಟ್‌ ವಾದ್ಯ ) ಮತ್ತು [[ಪಿಪಾ]] (ಪೇರ್‌ಹಣ್ಣಿನ-ಆಕೃತಿಯ ಅರೆ ತೆರೆದ ಲೂಟ್‌ ವಾದ್ಯ) ಮದರಿಯ ಸಂಗೀತ ವಾದ್ಯಗಳನ್ನು ಅಭಿವೃದ್ಧಿಗೊಳಿಸಿದರು. ಈ ವಾದ್ಯಗಳು ಮುಂದೆ [[ಪೂರ್ವ ಏಷ್ಯಾ]] ಮತ್ತು [[ಆಗ್ನೇಯ ಏಷ್ಯಾ|ಆಗ್ನೇಯ ಏಷ್ಯಾದಾದ್ಯಂತ]], ಅದರಲ್ಲೂ ವಿಶೇಷವಾಗಿ ಜಪಾನ್‌, ಕೊರಿಯಾ, ಮತ್ತು ವಿಯೆಟ್ನಾಂಗಳೆಡೆಗೆ ಪಸರಿಸಿದವು.
 
 
 
== ಜನಸಾಂದ್ರತೆ ==
[[ಚಿತ್ರ:Ethnolinguistic_map_of_China_1983.jpg|thumb|300px|right|ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾ ಮತ್ತು ರಿಪಬ್ಲಿಕ್‌ ಆಫ್‌ ಚೀನಾಗಳ ಜನಾಂಗೀಯ ಭಾಷಾವಾರು ಭೂಪಟ.]]
ಚೀನೀ ಇತಿಹಾಸದುದ್ದಕ್ಕೂ ನೂರಾರು [[ಜನಾಂಗೀಯತೆ|ಜನಾಂಗೀಯ ಸಮುದಾಯ]]ಗಳು ಅಸ್ತಿತ್ವದಲ್ಲಿದ್ದವು. [[ಹ್ಯಾನ್‌ ಚೀನೀಯರು|ಹ್ಯಾನ್‌]] ಚೀನಾದ ಇದುವರೆಗಿನ ಒಂದು ಬೃಹತ್‌ ಜನಾಂಗೀಯ ಸಮುದಾಯವಾಗಿದೆ. ಆದಾಗ್ಯೂ ಈ ಸಮುದಾಯವು ಅಂತರ್ಯದಲ್ಲಿ ಮತ್ತು ಒಂದೇ ಮಾದರಿಯ ಗುಣ-ಲಕ್ಷಣಗಳನ್ನು ಹೊಂದಿರುವ ಇನ್ನಷ್ಟು ಸಣ್ಣ ಜನಾಂಗೀಯ ಸಮುದಾಯಗಳಾಗಿ ವಿಂಗಡಿಸಬಹುದು.
 
 
ಕಳೆದ ಮೂರು ಸಹಸ್ರಮಾನಗಳಲ್ಲಿ, ಈ ಮುಂಚೆ ಭಿನ್ನವಾಗಿದ್ದ ಅನೇಕ ಚೀನಾದ ಜನಾಂಗೀಯ ಸಮುದಾಯಗಳನ್ನು [[ಸಿನೋ ಭಾಷೆಗೆ ಪರಿವರ್ತನೆ|ಸಿನೊ‌ ಜನಾಂಗಕ್ಕೆ ಪರಿವರ್ತಿಸಿ]] ಹ್ಯಾನ್‌ ಸ್ವರೂಪಕ್ಕೆ ತರಲಾಗಿದೆ. ಈ ಕಾರಣದಿಂದ ಕಾಲಾಂತರದಲ್ಲಿ ಹ್ಯಾನ್‌ ಜನಸಂಖ್ಯೆಯನ್ನು ಹಠಾತ್ತಾಗಿ ಹೆಚ್ಚಿಸಿದೆ. ಆದಾಗ್ಯೂ, ಈ ಪರಿವರ್ತನೆಗಳು ಸಾಧಾರಣವಾಗಿ ಅಪೂರ್ಣವಾಗಿರುವುದಲ್ಲದೇ ಆಗಾಗ್ಗೆ ಸ್ಥಳೀಯ ಭಾಷೆಗಳ ಮತ್ತು ಸಂಸ್ಕೃತಿಯ ಕುರುಹುಗಳು ಚೀನಾದ ವಿವಿಧ ಭಾಗಗಳಲ್ಲಿ ಉಳಿದುಕೊಂಡಿವೆ. ಇದೇ ಕಾರಣವಾಗಿ, ಹ್ಯಾನ್‌ಗಳಾಗಿ ಗುರುತಿಸಿಕೊಳ್ಳುವ ಕೆಲವರು, ಈಗಲೂ ಹ್ಯಾನ್‌ಗಳಾಗಿ ಗುರುತಿಸಿಕೊಳ್ಳುವುದಲ್ಲದೇ ತಮ್ಮದೇ ಆದ ಪ್ರತ್ಯೇಕ ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಕಾಯ್ದುಕೊಂಡು ಬಂದಿದ್ದಾರೆ. ಅನೇಕ ಜನಾಂಗಗಳು ಹ್ಯಾನ್‌ ಸಂಸ್ಕೃತಿಯನ್ನೇ ಹಠಾತ್ತಾಗಿ ಬದಲಿಸಿವೆ, ಉದಾಹರಣೆಗೆ ಮಂಚೂರಿಯಾದ ವಸ್ತ್ರ ಶೈಲಿಯಾದ [[ಕ್ವಿಪಾವೋ|ಕ್ವಿಪಾವೋವು]], ೧೭ನೇ ಶತಮಾನದ ನಂತರ ಹಿಂದಿನ ಹ್ಯಾನ್‌ ವಸ್ತ್ರಶೈಲಿಗಳಾದ [[ಹ್ಯಾನ್‌ಫು]] ಮುಂತಾದುವನ್ನು ಹಿಂದಿಕ್ಕಿ "ಚೀನಾ"ದ್ದೇ ಆದ ನವೀನ ಫ್ಯಾಷನ್‌ ಆಗಿ ಪರಿಣಮಿಸಿತು. ಆಧುನಿಕ ಪದವಾದ [[ಚೀನೀ ರಾಷ್ಟ್ರ]] (''ಝೋಂಘುವಾ ಮಿನ್‌ಜು'' )ವನ್ನು ಚೀನೀ ರಾಷ್ಟ್ರೀಯತೆಗೆ ಜನಾಂಗೀಯ ಸಮುದಾಯಗಳನ್ನು ಮೀರಿದ ಹೊಸ ಕಲ್ಪನೆಯನ್ನು ನೀಡಿದೆ.
Line ೧೬೭ ⟶ ೧೫೧:
 
ಸಾವಿರಾರು ವರ್ಷಗಳ ಕಾಲ [[ಸಾಂಪ್ರದಾಯಿಕ ಚೀನೀ ಭಾಷೆ|ಸಾಂಪ್ರದಾಯಿಕ ಚೀನೀ ಭಾಷೆಯು]] ಲಿಖಿತ ಪ್ರಮಾಣವಾಗಿದ್ದಿತು, ಅಲ್ಲದೇ ಅನೇಕ ಲಿಪಿಯಿಲ್ಲದ,ಅಗ್ರಾಹ್ಯ ಭಾಷೆಗಳು ಮತ್ತು ಪ್ರಾಂತ್ಯ ಭಾಷೆಗಳ ನಡುವೆ ಲಿಖಿತ ಸಂವಹನ ನಡೆಸಲು ಸಾಧ್ಯವಾಗಿಸಿತ್ತು. [[ಸ್ಥಳೀಯ ಚೀನೀ ಭಾಷೆ|ಚೀನೀಯರ ದೇಶಭಾಷೆ]] ಅಥವಾ ''ಬೈಹುವಾ'' ವು ಮಿಂಗ್‌ ಆಳ್ವಿಕೆ ಕಾಲದ [[ಕಾದಂಬರಿಗಳು|ಕಾದಂಬರಿ]]ಗಳಲ್ಲಿ ಮೊದಲು ಬಳಸಿ, ಜನಪ್ರಿಯವಾಗಿಸಿದ ಮ್ಯಾಂಡರಿನ್‌ ಪ್ರಾಂತ್ಯ ಭಾಷೆ ಆಧಾರಿತ ಲಿಖಿತ ಪ್ರಮಾಣವಾಗಿದ್ದಿತು. ಅಲ್ಲದೇ ೨೦ನೇ ಶತಮಾನದ ಮೊದಲ ಭಾಗದಲ್ಲಿ (ಗಮನಾರ್ಹ ಬದಲಾವಣೆಗಳೊಂದಿಗೆ) ರಾಷ್ಟ್ರಭಾಷೆಯಾಗಿ ಅಳವಡಿಸಿಕೊಳ್ಳಲಾಯಿತು. ಸಾಂಪ್ರದಾಯಿಕ ಚೀನೀ ಭಾಷೆಯು ಈಗಲೂ ಪ್ರೌಢ ಶಾಲೆಯ ಪಠ್ಯಕ್ರಮದಲ್ಲಿರುವುದರಿಂದ, ಕೆಲ ಮಟ್ಟಿಗಾದರೂ ಹಲವು ಚೀನೀಯರಿಗೆ ಅದು ಗ್ರಾಹ್ಯವಾಗುತ್ತಿದೆ.
=== ಧಾರ್ಮಿಕತೆ ===
 
 
 
=== ಧಾರ್ಮಿಕತೆ ===
[[ಚಿತ್ರ:天-bronze.svg|thumb|right|ಷಾಂಗ್‌ ಸಾಮ್ರಾಜ್ಯ ಕಾಲದ ಕಂಚಿನ ಲಿಪಿಯಲ್ಲಿ ಟಿಯಾನ್‌ (天), "ದೇವರು" ಎಂಬುದಕ್ಕೆ ಸಮಾನ ಅಕ್ಷರ. ]]
ಬಹಳಷ್ಟು ಸಾಮ್ರಾಜ್ಯಗಳು ಕನಿಷ್ಟ [[ಷಾಂಗ್‌ ಸಾಮ್ರಾಜ್ಯ]] (೧೭೬೬ BC)ದ ಕಾಲದಿಂದ ಕೊನೆಯ ಸಾಮ್ರಾಜ್ಯ(೧೯೧೧ AD)ದ ಅಳಿವಿನವರೆಗಿನ ಪಾಲಿಸಿದ "ಅಧಿಕೃತ" ಸಂಪ್ರದಾಯ ಧರ್ಮಶ್ರದ್ಧೆಯ ವ್ಯವಸ್ಥೆಯಲ್ಲಿ ಸರ್ವಸಮರ್ಥ ಶಕ್ತಿ<ref>ಹೋಮರ್‌ ಎಚ್‌.ಡಬ್ಸ್‌, "ಥೀಯಿಸಂ ಅಂಡ್‌ ನ್ಯಾಚುರಲಿಸಂ ಇನ್‌ ಆನ್‌ಷಿಯೆಂಟ್‌ ಚೀನಾ ಫಿಲಾಸಫಿ" ''ಫಿಲಾಸಫಿ ಆಫ್ ಈಸ್ಟ್‌ ಅಂಡ್‌ ವೆಸ್ಟ್‌ '' , ಸಂಪುಟ. ೯, ಸಂಖ್ಯೆ. ೩/೪, ೧೯೫೯</ref>ಯಾಗಿ ''[[ಷಾಂಗ್‌ದಿ]]'' ("ಸರ್ವೋತ್ತಮ ದೈವ") ಅಥವಾ "[[ಟಿಯಾನ್‌|ದೇವರು]]" ಕೇಂದ್ರಿತ ಆರಾಧನೆ ಮಾಡುತ್ತಿದ್ದರು. [[ಕನ್‌ಫ್ಯೂಷನಿಸಂ|ಕನ್‌ಫ್ಯೂಷಿಯನ್‌ ಧರ್ಮ]] ಮತ್ತು [[ಟಾವೋಯಿಸಂ|ಟಾವೋ ತತ್ವ]] ಬೆಳವಣಿಗೆ ಹಾಗೂ [[ಬೌದ್ಧ ಧರ್ಮ]] ಮತ್ತು [[ಕ್ರೈಸ್ತ ಧರ್ಮ|ಕ್ರೈಸ್ತ ಧರ್ಮಗಳ]] ಪರಿಚಯವಾಗುವುದಕ್ಕೆ ಮುಂಚಿತವಾಗಿ ಈ ಧರ್ಮಶ್ರದ್ಧೆಯ ವ್ಯವಸ್ಥೆಯಿತ್ತು.. ಇದರಲ್ಲಿ ದೇವರನ್ನು ಸರ್ವಶಕ್ತನೆಂಬ ಅಮೂರ್ತವಾದ ವ್ಯಕ್ತಿತ್ವದ ಶಕ್ತಿಯೆಂದು ಗಣಿಸುವ ಕಾರಣ ಇದರಲ್ಲಿ [[ಏಕೀಶ್ವರವಾದ|ಏಕೀಶ್ವರವಾದದ]] ವೈಶಿಷ್ಟ್ಯತೆಗಳು ಕಾಣಿಸುತ್ತದೆ. ಕನ್‌ಫ್ಯೂಷಿಯಸ್‌ನ ಬರವಣಿಗೆಗಳಿಂದ ತಿಳಿಯುವ ಪ್ರಕಾರ, ಆತ ಸ್ವತಃ ದೇವರನ್ನು ವಂಚಿಸುವುದಕ್ಕಾಗುವುದಿಲ್ಲ ಎಂದು ನಂಬಿಕೆ ಹೊಂದಿದ್ದ, ಅಲ್ಲದೇ ದೇವರು ಜನರ ಜೀವನದ ಮೇಲೆ ನಿಯಂತ್ರಣವನ್ನು ಹೊಂದಿದ್ದು, ಪ್ರತಿಯೊಬ್ಬರನ್ನು ಪ್ರತ್ಯೇಕವಾಗಿ ಪರಿಗಣಿಸುತ್ತಾನೆ, ಧರ್ಮಿಷ್ಠತೆ(''ಯಿ'' , 義)<ref>ಹೋಮರ್‌ ಎಚ್‌.ಡಬ್ಸ್‌, "ಥೀಯಿಸಂ ಅಂಡ್‌ ನ್ಯಾಚುರಲಿಸಂ ಇನ್‌ ಆನ್‌ಷಿಯೆಂಟ್‌ ಚೀನಾ ಫಿಲಾಸಫಿ" ''ಫಿಲಾಸಫಿ ಆಫ್ ಈಸ್ಟ್‌ ಅಂಡ್‌ ವೆಸ್ಟ್‌ '' , ಸಂಪುಟ. ೯, ಸಂಖ್ಯೆ. ೩/೪, ೧೯೫೯</ref>ಯಿಂದಿರಲು ಕೆಲ ಕಟ್ಟಳೆಗಳನ್ನು ವಿಧಿಸುತ್ತಾನೆ ಎಂಬ ನಂಬಿಕೆಗಳನ್ನು ಹೊಂದಿದ್ದ. ಆದಾಗ್ಯೂ ಈ ಧರ್ಮಶ್ರದ್ಧೆಯ ವ್ಯವಸ್ಥೆಯು ಸಂಪೂರ್ಣವಾಗಿ ಏಕೀಶ್ವರವೆಂದು ಹೇಳಲಾಗುವುದಿಲ್ಲ, ಏಕೆಂದರೆ ಆಯಾ ಪ್ರದೇಶಕ್ಕೆ ಸೀಮಿತವಾಗಿ ಇನ್ನೂ ಅನೇಕ ದೈವಗಳು ಹಾಗೂ ಇನ್ನಿತರ ಶಕ್ತಿಗಳು ''ಷಾಂಗ್‌ದಿ'' ಯೊಂದಿಗೆ ಪೂಜೆಗೊಳ್ಳುತ್ತಿದ್ದವು. ಆದರೂ [[ಮೋಹಿಸಂ|ಮೋಹಿಸಂನಂತಹಾ]] ಇನ್ನಿತರ ಭಿನ್ನ ಧರ್ಮಗಳು, ದೈವಗಳು ಹಾಗೂ ಇನ್ನಿತರ ಪಿತೃ ಶಕ್ತಿಗಳು [[ಅದೃಷ್ಟ ಬಲ ನಂಬಿಕೆ|ಅದೃಷ್ಟಬಲ ನಂಬಿಕೆ]]ಯನ್ನು ದೂರವಿಟ್ಟು, "ವಿಶ್ವ ಪ್ರೀತಿ"(''ಜಿಯಾನೈ '' , 兼爱)ಯನ್ನು ಬೆಳೆಸಿಕೊಳ್ಳುವುದೂ ಸೇರಿದಂತೆ ಕೇವಲ ''ಷಾಂಗ್‌ದಿ'' ಯ ಇಚ್ಛೆಯಂತೆ ನಡೆಯಲು ಸೂಚಿಸುವುದಕ್ಕೆ ಇರುವುದು ಎಂದು ತಿಳಿಸಿ ಏಕೀಶ್ವರವಾದವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದವು. ಪ್ರಾಚೀನ ಚೀನಾದಲ್ಲಿ ''ಷಾಂಗ್‌ದಿ'' ಮತ್ತು ದೇವರುಗಳ ಆರಾಧನೆಯ ಅಂಗವಾಗಿ ಗುಡಿಗಳ ನಿರ್ಮಾಣ ಮತ್ತು ಪೂಜೆಗಳು ಸೇರಿದ್ದವು. ನಿರ್ಮಾಣವಾದ ಗುಡಿಗಳಲ್ಲಿ ಅತಿ ಮಹತ್ವವಾದದ್ದು ಬೀಜಿಂಗ್‌ನಲ್ಲಿರುವ [[ದೇವರ ಗುಡಿ]]. ಚೀನೀ ಸಾಮ್ರಾಜ್ಯದ ಪ್ರತಿಯೊಬ್ಬ ರಾಜನೂ ವಾರ್ಷಿಕವಾಗಿ ದೇವರಿಗೆ [[ಬಲಿ|ಪಶುಬಲಿ ಕಾರ್ಯ]]ಗಳನ್ನು ನಡೆಸಿ ಸಾಮಾನ್ಯವಾಗಿ ಒಂದು ಗೂಳಿಯನ್ನು ಬಲಿಕೊಟ್ಟು ನೆರವೇರಿಸುತ್ತಿದ್ದನು. ಟಾವೋ ತತ್ವ ಮತ್ತು ಬೌದ್ಧ ಧರ್ಮಗಳ ಉದಯದೊಂದಿಗೆ ಜನಪ್ರಿಯತೆ ನಿಧಾನವಾಗಿ ಕಡಿಮೆಯಾದರೂ, ಆಧುನಿಕಯುಗದ ಮುನ್ನಿನ ಅವಧಿಯುದ್ದಕ್ಕೂ ಉಳಿದ ಧರ್ಮಗಳಲ್ಲಿ ಇದರ ಬಗೆಗಿನ ಕಲ್ಪನೆಗಳು ಮುಂದುವರೆದವು, ಅಲ್ಲದೇ ಚೀನೀಯ ಕ್ರೈಸ್ತಧರ್ಮದ ಪದಬಳಕೆಯೂ ಸೇರಿದಂತೆ ನಂತರದ ಧರ್ಮಗಳಲ್ಲಿ ಸಹಾ ಅಳವಡಿಸಿಕೊಳ್ಳಲಾಗಿದೆ.
Line ೧೮೮ ⟶ ೧೬೯:
[[ಚಿತ್ರ:Huaisheng Mosque Dec 2007.jpg|thumb|left|ವಿಶ್ವದ ಪ್ರಾಚೀನ ಮಸೀದಿಗಳಲ್ಲಿ ಒಂದಾದ ಹುಆಯ್‌ಷೆಂಗ್ ಮಸೀದಿ, ಮುಹಮ್ಮದ್‌ನ ಸೋದರಮಾವ ಸೈಯೆದ್‌ ಇಬ್ನ್‌ ಅಬಿ ವಕ್ಕಾಸ್‌ನಿಂದ ನಿರ್ಮಿತವಾಗಿತ್ತು ]]
[[ಚೀನಾದಲ್ಲಿ ಇಸ್ಲಾಂ|ಚೀನಾದಲ್ಲಿ ಇಸ್ಲಾಂ ಧರ್ಮವು]] [[ಮುಹಮ್ಮದ್‌|ಮುಹಮ್ಮದ್‌ರ]] ಸಾವಿನ ಹದಿನೆಂಟು ವರ್ಷಗಳ ನಂತರ ೬೫೧ರಲ್ಲಿ ಬಂದ ಧರ್ಮ ಪ್ರಚಾರ ನಿಯೋಗದಿಂದ ಹರಡಿತು. [[ಸಾಂಗ್‌ ಸಾಮ್ರಾಜ್ಯ|ಸಾಂಗ್‌ ಅಧಿಪತ್ಯ]]<ref name="bbc">BBC ಇಸ್ಲಾಂ ಇನ್‌ ಚೀನಾ (೬೫೦-ಪ್ರಕೃತ) [http://www.bbc.co.uk/religion/religions/islam/history/china_1.shtml http://www.bbc.co.uk/religion/religions/islam/history/china_1.shtml]</ref><ref name="islamicculture">{{cite web|url=http://www.religion-online.org/showchapter.asp?title=1656&C=1645|title=Islamic culture in China}}</ref>ದ ಅವಧಿಯಲ್ಲಿ ಚೀನಾ ಪ್ರವೇಶಿಸಿದ ಮುಸ್ಲಿಮರು ವ್ಯಾಪಾರಕ್ಕೆಂದು ಬಂದರೂ, ಆಯಾತ/ನಿರ್ಯಾತಗಳಲ್ಲಿ ಹತೋಟಿ ಪಡೆಯುವಷ್ಟು ಪ್ರಬಲರಾದರು. [[ಝೆಂಗ್‌ ಹೆ|ಝೆಂಗ್‌ ಹೇ]],[[ಲಾನ್‌ ಯು]] ಮತ್ತು ಯುವಾನ್‌ ಸಾಮ್ರಾಜ್ಯದ ರಾಜಧಾನಿ [[ಖಾನ್‌ಬಾಲಿಕ್‌]] ಕಟ್ಟಲು ಸಹಾಯಕರಾಗಿದ್ದವರಲ್ಲಿ ಒಬ್ಬನಾಗಿದ್ದ [[ಯೆಹೆಡೀರ್‌ಡಿಂಗ್‌|ಯೆಹೇಡೀರ್‌ಡಿಂಗ್‌]]ನೂ ಸೇರಿದಂತೆ ಆಡಳಿತ ವಲಯದಲ್ಲಿ ಪ್ರಭಾವವನ್ನು ಬೆಳೆಸಿಕೊಂಡರು. ಇಸ್ಲಾಂ ವ್ಯಾಸಂಗ<ref>{{cite web|url=http://www.hsais.org/2essay0405_4.htm|title=Looking East: The challenges and opportunities of Chinese Islam}}</ref>ಕ್ಕೆ [[ನಂಜಿಂಗ್‌]] ಪ್ರಮುಖ ಕೇಂದ್ರವಾಗಿ ಪರಿಣಮಿಸಿತು. [[ದಂಗನ್‌ ದೊಂಬಿ]] ಮತ್ತು [[ಪಾಂಥಯ್‌ ದಂಗೆ]]<ref>ಲೆವೀನ್‌, ಮಾರ್ಕ್‌. ಜಿನೋಸೈಡ್‌ ಇನ್‌ ದ ಏಜ್‌ ಆಫ್‌ ನೇಷನ್‌-ಸ್ಟೇಟ್‌ . I.B.ಟಾರಿಸ್‌, ೨೦೦೫. ISBN ೧-೮೪೫೧೧-೦೫೭-೯, ಪುಟ ೨೮೮</ref><ref>ಗಿಯೆರ್ಷ್‌, ಚಾರ್ಲ್ಸ್ ಪ್ಯಾಟರ್‌ಸನ್‌. ಏಷ್ಯನ್‌ ಬಾರ್ಡರ್‌ ಲ್ಯಾಂಡ್ಸ್‌ : ದ ಟ್ರಾನ್ಸ್‌ಫರ್ಮೇಷನ್‌ ಆಫ್‌ ಕ್ವಿಂಗ್‌ ಚೀನಾಸ್‌ ಯುನ್ನಾನ್‌ ಫ್ರಾಂಟಿಯರ್‌. ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್‌, ೨೦೦೬. ISBN ೧-೮೪೫೧೧-೦೫೭-೯, ಪುಟ ೨೧೯</ref><ref>ಡಿಲ್ಲನ್‌, ಮೈಕೆಲ್‌. [http://www.hsais.org/2essay0405_4.htm ಚೀನಾಸ್‌ ಮುಸ್ಲಿಮ್‌ ಹುಯಿ ಕಮ್ಯುನಿಟಿ]. ಕರ್ಜನ್‌, ೧೯೯೯. ISBN ೦-೭೦೦೭-೧೦೨೬-೪, ಪುಟ xix</ref>ಗಳಲ್ಲಿ [[ಕ್ವಿಂಗ್‌ ಸಾಮ್ರಾಜ್ಯ|ಕ್ವಿಂಗ್‌ ಅಧಿಪತ್ಯವು]] ಮುಸ್ಲಿಮರ ವಿರುದ್ಧ ಯುದ್ಧ ಘೋಷಿಸಿ, [[ಇತಿಹಾಸದಲ್ಲಿನ ನರಮೇಧಗಳು|ನರಮೇಧ]] ನಡೆಸಿತು.
 
 
[[ಚೀನಾದಲ್ಲಿ ಜುಡಾಯಿಸಂ]] ೭ನೇ ಅಥವಾ ೮ನೇ ಶತಮಾನ [[ಸಾಮಾನ್ಯ ಯುಗ |CEy]]ಷ್ಟು ಹಳೆಯದು. ೨೦ನೇ ಶತಮಾನದ ಮೊದಲಾರ್ಧದಲ್ಲಿ, ಅನೇಕ [[ಜ್ಯೂಗಳು]] [[ಶಾಂಘಾಯ್‌]] ಮತ್ತು [[ಹಾಂಗ್ ಕಾಂಗ್|ಹಾಂಗ್‌ ಕಾಂಗ್‌]]ಗಳಿಗೆ ಆಯಾ ನಗರಗಳ ಆರ್ಥಿಕ ವಿಸ್ತರಣಾ ಅವಧಿಯಲ್ಲಿ, [[ಹತ್ಯಾಕಾಂಡ|ಮಾರಣಹೋಮ]]ದಿಂದ ರಕ್ಷಣೆ ಬಯಸಿ ವಲಸೆ ಬಂದರು. ಶಾಂಘಾಯ್‌ ನಗರವು, ವೀಸಾ ಇಲ್ಲದೇ ಇದ್ದರೂ ಪ್ರವೇಶ ನೀಡುವ ವಿಶ್ವದ ಏಕೈಕ ಬಂದರಾಗಿದ್ದ ಕಾರಣ, ಜ್ಯೂ ನಿರಾಶ್ರಿತರ ಸಂಖ್ಯೆಯ ಪ್ರಮಾಣದಿಂದ ಗಮನ ಸೆಳೆಯುತ್ತದೆ.
==ಚೀನಾದ ಹೊಸವರ್ಷ==
 
ಪ್ರತಿವರ್ಷ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ, ಜನವರಿ ೨೩ ರಂದು 'ಚಾಂದ್ರಮಾನ ರೀತ್ಯ' ಚೀನ ಹೊಸವರ್ಷವನ್ನು ೧ ವಾರ ಕಾಲ ವಿಜೃಂಭಣೆಯಿಂದ ಆಚರಿಸುತ್ತದೆ. ಆ ಸಮಯದಲ್ಲಿ ಚೀನಾದ ನಗರವಾಸಿಗಳೆಲ್ಲಾ ತಮ್ಮ ತಮ್ಮ ಗ್ರಾಮಗಳಿಗೆ ಹೋಗಿ ಕುಟುಂಬದ ಸದಸ್ಯರೊಡನೆ ಬೆರೆತು ಉಲ್ಲಾಸದಿಂದ ಅಲ್ಲಿ ಜರುಗುವ [[ಬೇಸಿಗೆಯ ಬೃಹದ್ ಉತ್ಸವ]]ಗಳಲ್ಲಿ ಭಾಗವಹಿಸಿ,ಸಂತೋಷ ಮತ್ತು ಹುರುಪಿನಿಂದ ತಮ್ಮ ಕಾರ್ಯಕ್ಷೇತ್ರಗಳಿಗೆ ವಾಪಸ್ಸಾಗುತ್ತಾರೆ. ಒಟ್ಟು ೪೦ ದಿನಗಳ ಈ ವಲಸೆಯ ಪ್ರಕ್ರಿಯೆಯಲ್ಲಿ ಲಕ್ಷಾಂತರ ಕಾರ್ಮಿಕರು,ವಿದ್ಯಾರ್ಥಿಗಳು ಸೇರಿದಂತೆ ಸುಮಾರು ೩೧.೬ ಕೋಟಿ ಜನರು ಭಾಗವಹಿಸುತ್ತಾರೆ. ಇದು '[[ವಿಶ್ವದ ಅತಿದೊಡ್ಡ ಮಾನವ ವಲಸೆ]]'ಯೆಂದು ಪ್ರರಿಗಣಿಸಲ್ಪಟ್ಟಿದೆ. ಅತಿ ಸುಲಭ ಸಾರಿಗೆ ವ್ಯವಸ್ಥೆಗೆ ಅಡಚಣೆ ಬಂದರೂ ಜನ ಬೇಸರಿಸದೆ ತಮ್ಮ ಸಾಂಪ್ರದಾಯಿಕ ಹಬ್ಬಗಳಿಗೆ ಮಾನ್ಯತೆ ಕೊಟ್ಟು ಈ ಹಬ್ಬದ ಆಚರಣೆಯನ್ನು ಇಂದಿಗೂ ಕಾಯ್ದುಕೊಂಡು ಬಂದಿದ್ದಾರೆ.
 
 
== ಕ್ರೀಡೆಗಳು ಮತ್ತು ವಿಹಾರ ==
"https://kn.wikipedia.org/wiki/ಚೀನಾ" ಇಂದ ಪಡೆಯಲ್ಪಟ್ಟಿದೆ