ನೀಲ್ ಆರ್ಮ್‌ಸ್ಟ್ರಾಂಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮೊದಲ ಆವೃತ್ತಿ
 
No edit summary
೧ ನೇ ಸಾಲು:
[[Image:Armstrong.jpg|thumb|150px| ನೀಲ್ ಆರ್ಮ್‌ಸ್ಟ್ರಾಂಗ್]]
ನೀಲ್ ಆರ್ಮ್‌ಸ್ಟ್ರಾಂಗ್ (ಜನನ: ೫ ಆಗಸ್ಟ್[[ ೧೯೩೦]]) [[ಅಮೇರಿಕಾ ಸಂಯುಕ್ತ ಸಂಸ್ಥಾನ|ಅಮೇರಿಕಾ ಸಂಯುಕ್ತ ಸಂಸ್ಥಾನದ]] ಅಂತರಿಕ್ಷಯಾನಿ ಮತ್ತು ವೈಮಾನಿಕ. ನೀಲ್ ಆರ್ಮ್‌ಸ್ಟ್ರಾಂಗ್ ಭೂಮಿಯ ಉಪಗ್ರಹವಾದ ಚಂದ್ರನ ಮೇಲೆ ಕಾಲಿರಿಸಿದ ಮೊದಲ ಮಾನವ . ೧೯೬೬ರಲ್ಲಿ ಅಂತರಿಕ್ಷ ನೌಕೆಯಾದ [[ಜೆಮಿನಿ ೮]]ರ ಚಾಲಕರಾಗಿ ಹಾಗು ೧೯೬೯ರಲ್ಲಿ ಚಂದ್ರಯಾನ ಮಾಡಿದ ನೌಕೆ [[ಅಪೊಲೊ ೧೧]]ರ ಮುಖ್ಯಸ್ಥರಾಗಿ ಒಟ್ಟು ಎರಡು ಬಾರಿ ಅಂತರಿಕ್ಷಯಾನ ಮಾಡಿದರು.
 
==ಜೀವನ==
[[ಅಮೇರಿಕಾ ಸಂಯುಕ್ತ ಸಂಸ್ಥಾನ |ಅಮೇರಿಕಾ ಸಂಯುಕ್ತ ಸಂಸ್ಥಾನದ]] [[ಒಹಾಯೊ]] ರಾಜ್ಯದ ವಾಪಕೊನೆಟಾ ಎಂಬ ಉರಿನಲ್ಲಿ ೫ ಆಗಸ್ಟ್, ೧೯೩೦ರೊಂದು ವಯೋಲಾ ಮತ್ತು ಸ್ಟೀಫನ್ ಆರ್ಮ್‌ಸ್ಟ್ರಾಂಗ್ ದಂಪತಿಗಳ ಮೊದಲನೆ ಸಂತತಿಯಾಗಿ ನೀಲ್ ಆರ್ಮ್‌ಸ್ಟ್ರಾಂಗ್ ಜನಿಸಿದರು. ತಂದ ಸ್ಟೀಫನ್ [[ಒಹಾಯೊ]] ರಾಜ್ಯಸರ್ಕಾರದ ಉದ್ಯೊಗಿಯಾದ ಕಾರಣ ಇವರ ಬಾಲ್ಯ ಆ ರಾಜ್ಯದ ಹಲವಾರು ನಗರಗಳಲ್ಲಿ ಕಳೆಯಿತು. ತಮ್ಮ ಆರನೆ ವಯಸ್ಸಿನಲ್ಲಿ ಮೊದಲ ಬಾರಿ ವಿಮಾನಯಾನ ಮಾಡಿದ ನೀಲ್ ಆರ್ಮ್‌ಸ್ಟ್ರಾಂಗ್, ತಮ್ಮ ೮ನೆ ವಯಸ್ಸಿನಿಂದಲೆ ವಿಮಾನಗಳ ನಮೂನೆ ರಚಿಸಿತೊಡಗಿದರು. ತಮ್ಮ ೧೫ನೆ ವಯಸ್ಸಿನಿಂದಲೆ ವಿಮಾನ ಚಾಲನೆಯ ಶಿಕ್ಷಣಕ್ಕಾಗಿ ಹಣ ಉಳಿಸತೊಡಗಿದ ಇವರು, ತಮ್ಮ ೧೬ನೆ ವಯಸ್ಸಿನಲ್ಲಿ ಪ್ರಥಮ ಬಾರಿಗೆ ವಿಮಾನ ಉಡಾವಣೆ ಮಾಡಿದರು. ದಕ್ಷಿಣ [[ಕ್ಯಾಲಿಫೋರ್ನಿಯಾ]] ವಿಶ್ವವಿದ್ಯಾಲಯದಿಂದ ಏರೋಸ್ಪೇಸ್ ಇಂಜಿನಿಯರಿಂಗ್ ವ್ಯಾಸಾಂಗ ಮಾಡಿದ ನೀಲ್ ಆರ್ಮ್‌ಸ್ಟ್ರಾಂಗ್ ವ್ಯಾಸಂಗದ ನಡುವೆ ಮೂರು ವರ್ಷ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದರು. ಇವರು ನೌಕಾಪಡೆಯಲ್ಲಿರುವಾಗ ನೌಕಾಪಡೆಯ ವೈಮಾನಿಕ ಯೋಧನಾಗಿ ಕೊರಿಯಾ ಯುದ್ಧದ್ದಲ್ಲಿ ಪಾಲ್ಗೊಂಡು ಹಲವಾರು ಪದಕಗಳ ಮತ್ತು ಪ್ರಶಸ್ತಿಗಳನ್ನು ಪಡೆದರು. ಕೆಲ ವರುಷಗಳು ಕಾಲ ಪರೀಕ್ಷಣಾ ವಿಮಾನ ಚಾಲಕರಾಗಿ ಸೇವೆ ಸಲ್ಲಿಸಿದ ಇವರು, ೧೯೬೨ರಲ್ಲಿ ಅಂತರಿಕ್ಷಯಾನಿಯಾಗಿ ಆಯ್ಕೆಯಾದರು.

೧೬ ಮಾರ್ಚ್, ೧೯೬೬ರಲ್ಲಿ [[ಜೆಮಿನಿ ೮ ]]ಅಂತರಿಕ್ಷ ನೌಕೆಯ ಮುಖ್ಯ ನಿರ್ವಾಹಕರಾಗಿ ನೀಲ್ ಆರ್ಮ್‌ಸ್ಟ್ರಾಂಗ್ ತಮ್ಮ ಮೊದಲ ಅಂತರಿಕ್ಷಯಾನ ಕೈಗೊಂಡರು. ೧೯೬೯ರಲ್ಲಿ [[ಅಪೊಲೊ ೧೧]]ರ ಉಡಾವಣೆಯ ಮುಖ್ಯಸ್ಥರಾಗಿ ನೇಮಿಸಲ್ಪಟ್ಟ ನೀಲ್ ಆರ್ಮ್‌ಸ್ಟ್ರಾಂಗ್, [[ಬಜ್ ಆಲ್ಡ್ರಿನ್| ಯುಜೀನ್(ಎಡ್ವಿನ್) "ಬಜ್" ಆಲ್ಡ್ರಿನ್]] ಜೊತೆ ೨೦ ಜುಲೈ[[ ೧೯೬೯ರೊಂದು೧೯೬೯]]ರೊಂದು ಚಂದ್ರನ ಮೇಲೆ ತಮ್ಮ ನೌಕೆಯನ್ನಿಳಿಸಿದರು. ೨೧ ಜುಲೈ ೧೯೬೯ರೊಂದು[[೧೯೬೯]] ರಂದು ನೌಕೆಯಿಂದ ಇಳಿದು ಚಂದ್ರನ ಮೇಲೆ ಪದಾರ್ಪಣೆ ಮಾಡಿದ ಮೊದಲ ಮಾನವ ಎಂಬ ದಾಖಲೆ ಸೃಷ್ಟಿಸಿದರು. ''"ದಟ್ಸ್ ಒನ್ ಸ್ಮಾಲ್ ಸ್ಟೆಪ್ ಫಾರ್ ಎ ಮ್ಯಾನ್, ಒನ್ ಜಯಂಟ್ ಲೀಪ್ ಫಾರ್ ಮ್ಯಾನ್‌ಕೈಂಡ್"'' (That's one small step for [a] man, one giant leap for mankind) ಅರ್ಥಾತ್ "''ಅದು ಮುನುಷ್ಯನಿಗೆ ಒಂದು ಸಣ್ಣ ಹೆಜ್ಜೆ,[ಆದರೆ] ಮನುಕುಲಕ್ಕೆ ಅಗಾಧವಾದ ಲಂಘನ''" ಎಂದು ಅವರು ಚಂದ್ರನ ಮೇಲೆ ಪದಾರ್ಪಣೆ ಮಾಡಿದ ನಂತರದ ಉದ್ಗರಿಸಿದ ಮಾತು ವಿಶ್ವವಿಖ್ಯಾತವಾಯಿತು. ೧೯೭೧ರಲ್ಲಿ[[೧೯೭೧]]ರಲ್ಲಿ [[ನಾಸಾ|ನಾಸಾದಿಂದ]] ನಿವೃತ್ತಿ ಪಡೆದು [[ಸಿನ್‌ಸಿನಾಟಿ]] ವಿಶ್ವಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಶ್ರೀಯುತರು ಕೆಲಸ ಶುರುಮಾಡಿದರು. ೧೯೭೮ರಲ್ಲಿ[[೧೯೭೮]]ರಲ್ಲಿ ಪ್ರಾಧ್ಯಾಪಕ ಉದ್ಯೋಗ ತ್ಯಜಿಸಿ, ಹಲವು ಸಂಸ್ಥೆಗಳಿಗೆ ಸಲಹೆಗಾರರಾಗಿ ಹಾಗು ವಾಗ್ಮಿಯಾಗಿ ಕೂಡ ಕಾರ್ಯ ನಿರ್ವಹಿಸಿದರು.
 
==ಬಾಹ್ಯ ಸಂಪರ್ಕ ಕೊಂಡಿಗಳು==
 
* [http://www.maniacworld.com/Apollo_11_2.htm ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ ನಂತರ ನೀಲ್ ಆರ್ಮ್‌ಸ್ಟ್ರಾಂಗ್ ಉದ್ಗರಿಸಿದ ಮಾತು] ಧ್ವನಿಸುರುಳಿ