ಫ್ರೆಂಡ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೦ ನೇ ಸಾಲು:
 
'''ಮೂರನೇ ಸರಣಿ'''ಯು ಅಧಿಕ ಗಮನಾರ್ಹವಾದ ಒಂದು ಧಾರಾವಾಹಿಕ ಶೈಲಿಯನ್ನು ಅಳವಡಿಸಿಕೊಳ್ಳುತ್ತದೆ. ರೇಚಲ್ '''ಬ್ಲೂಮಿಂಗ್ಡೇಲ್ಸ್'''ನಲ್ಲಿ ಕೆಲಸ ಮಾಡಲು ಆರಂಭಿಸುತ್ತಾಳೆ. ರಾಸ್ ಗೆ ರೇಚಲ್ ಹಾಗೂ ಅವಳ ಸಹೋದ್ಯೋಗಿ ಮಾರ್ಕ್ ರ ನಿಕಟತೆ ಅಹಿತಕರವೆನಿಸುತ್ತದೆ. ರೇಚಲ್ ತಮ್ಮ ಸಂಬಂಧಕ್ಕೆ ಒಂದು ಸಣ್ಣ ವಿರಾಮ ಕೊಡಲು ನಿರ್ಧರಿಸುತ್ತಾಳೆ. ಇದರಿಂದ ಮನನೊಂದ, ಪಾನಮತ್ತ ರಾಸ್ ಇನ್ನೊಬ್ಬಳೊಂದಿಗೆ ಮಲಗುತ್ತಾನೆ. ಇದನ್ನು ತಿಳಿದ ರೇಚಲ್ ರಾಸ್ ನೊಂದಿಗಿನ ತನ್ನ ಸಂಬಂಧವನ್ನು ಮುರಿದು ಹಾಕಿಕೊಳ್ಳುತ್ತಾಳೆ. ತನ್ನ ಅವಳಿ ಅಕ್ಕ ಅರ್ಸೂಲಾ ಳನ್ನು ಬಿಟ್ಟು ತನಗೆ ಬೇರೆ ಕುಟುಂಬವಿಲ್ಲವೆಂದೇ ನಂಬಿದ್ದ ಫೀಬಿ, ತನ್ನ ತಂದೆಯ ಎರಡನೇ ಹೆಂಡತಿಯ ಮಗನನ್ನು (ತನ್ನ ಅರೆ ಸಹೋದರ) ಹಾಗೂ ತನಗೆ ಜನ್ಮಕೊಟ್ಟ ತಾಯಿಯನ್ನೂ ಭೇಟಿಯಾಗುತ್ತಾಳೆ ಮತ್ತು ಅವರೊಂದಿಗೆ ಪರಿಚಿತಳಾಗುತ್ತಾಳೆ. ಜೋಯಿ ತನ್ನ ಸಹನಟಿ '''ಕೇಟ್''' ಜೊತೆ ಸಂಬಂಧವನ್ನು ಬೆಳೆಸುತ್ತಾನೆ ಹಾಗೂ ಮೋನಿಕಾ ಮಿಲಿಯಾಧಿಪತಿ '''ಪೀಟ್ ಬೆಕ್ಕರ್''' ಜೊತೆ ಸಂಬಂಧವನ್ನು ಆರಂಭಿಸುತ್ತಾಳೆ.
 
'''ನಾಲ್ಕನೇ ಸರಣಿ'''ಯ ಪ್ರಥಮ ಸಂಚಿಕೆಯಲ್ಲಿ ರಾಸ್ ಮತ್ತು ರೇಚಲ್ ಸ್ವಲ್ಪ ಸಮಯಕ್ಕೆ ಜೊತೆಗೂಡುತ್ತಾರೆ. ಆದರೆ ಸ್ವಲ್ಪ ಸಮಯದ ನಂತರ ಪುನಃ ದೂರವಾಗುತ್ತಾರೆ. ರಾಸ್ ಯಾವಾಗಲೂ ಅವರಿಬ್ಬರೂ ಸಂಬಂಧ ವಿರಾಮದಲ್ಲಿದ್ದರೆಂದು ಒತ್ತಿ ಹೇಳುತ್ತಿರುತ್ತಾನೆ. ಜೋಯಿ ರಂಗನಟಿ '''ಕ್ಯಾಥಿ''' ಯನ್ನು ಡೇಟ್ ಮಾಡುತ್ತಾನೆ, ಆದರೆ ಚ್ಯಾಂಡ್ಲರ್ ಅವಳೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ಅವಳು ಇನ್ನೊಬ್ಬ ನಟನೊಂದಿಗೆ ಸಂಬಂಧವಿರಿಸಿಕೊಂಡು ಮೋಸ ಮಾಡುತ್ತಿರುವಿದು ತಿಳಿದಾಗ ಅವಳಿಂದ ದೂರವಾಗುತ್ತಾನೆ. ಫೀಬಿಯು ತನ್ನ ತಮ್ಮ ಹಾಗೂ ಅವನ ಪತ್ನಿ '''ಆಲಿಸ್'''ರ ಮಕ್ಕಳಿಗೆ ಬದಲಿ/ಬಾಡಿಗೆ ತಾಯಿಯಾಗುತ್ತಾಳೆ. ಪಣವೊಂದರಲ್ಲಿ ಸೋತ ನಂತರ ಮೋನಿಕಾ ಹಾಗೂ ರೇಚಲ್, ಜೋಯಿ ಮತ್ತು ಚ್ಯಾಂಡ್ಲರ್ ರೊಂದಿಗೆ ಮನೆಯನ್ನು ಬದಲಾಯಿಸಿಕೊಳ್ಳುತ್ತಾರೆ. ನಂತರ '''ನಿಕ್ಸ್''' ಸರಣಿ ಟಿಕೆಟ್ ಗಳಿಂದ ಹಾಗೂ ಮೋನಿಕಾ ರೇಚಲ್ ರ ಒಂದು ನಿಮಿಷದ ಚುಂಬನದಿಂದ (ತೆರೆಮರೆಯಲ್ಲಿ) ತಮ್ಮ ಮನೆಯನ್ನು ಪುನಃ ಹಿಂಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ರಾಸ್, '''ಎಮಿಲಿ''' ಎನ್ನುವ ಇಂಗ್ಲಿಷ್ ಮಹಿಳೆಯನ್ನು ಡೇಟ್ ಮಾಡಲು ಆರಂಭಿಸುತ್ತಾನೆ. ಸರಣಿಯ ಕೊನೆಯ ಸಂಚಿಕೆಯು ಲಂಡನ್ ನಲ್ಲಿಯ ಇವರ ಮದುವೆ ಸಮಾರಂಭವನ್ನು ಪ್ರಧಾನವಾಗಿ ಚಿತ್ರಿಸುತ್ತದೆ. ಚ್ಯಾಂಡ್ಲರ್ ಮತ್ತು ಮೋನಿಕಾ ಒಟ್ಟಿಗೆ ಮಲಗುತ್ತಾರೆ ಹಾಗೂ ರೇಚಲ್, ರಾಸ್ ಮತ್ತು ಎಮಿಲಿಯರ ಮದುವೆಗೆ ಹೋಗಲು ನಿರ್ಧರಿಸುತ್ತಾಳೆ. ವಿವಾಹ ವೆದಿಕೆಯಲ್ಲಿ ಶಪಥಗಳನ್ನು ಉಚ್ಛರಿಸುವಾಗ ರಾಸ್ ತಪ್ಪು ಹೆಸರನ್ನು(ರೇಚಲ್ ಳ) ಹೇಳುತ್ತಾನೆ. ಇದರಿಂದ ಅವನ ವಧು ಹಾಗೂ ಅತಿಥಿಗಳು ಆಘಾತಗೊಳ್ಳುತ್ತಾರೆ.
 
==ನಿರ್ಮಾಣ==
"https://kn.wikipedia.org/wiki/ಫ್ರೆಂಡ್ಸ್" ಇಂದ ಪಡೆಯಲ್ಪಟ್ಟಿದೆ