ಫ್ರೆಂಡ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೨ ನೇ ಸಾಲು:
 
==ಸರಣಿ ಸಾರಾಂಶ==
 
'''ಪ್ರಥಮ ಸರಣಿ'''ಯು ಪ್ರಮುಖ ಪಾತ್ರಗಳಾದ ರೇಚಲ್, ಮೋನಿಕಾ, ಫೀಬಿ, ಜೋಯಿ, ಚ್ಯಾಂಡ್ಲರ್ ಹಾಗೂ ರಾಸ್ ರನ್ನು ಪರಿಚಯಿಸುತ್ತದೆ. ರೇಚಲ್ ತನ್ನ ಭಾವೀ ಪತಿ '''ಬ್ಯಾರಿ'''ಯನ್ನು ವಿವಾಹ ವೇದಿಕೆಯಲ್ಲಿ ಬಿಟ್ಟು ಸೆಂಟ್ರಲ್ ಪರ್ಕ್ ಕಾಫಿ ಗೃಹಕ್ಕೆ ಬರುತ್ತಾಳೆ, ನಂತರ ಮೋನಿಕಾ ಜೊತೆ ಅವಳ ಮನೆಗೆ ಸ್ಥಳಾಂತರಿಸಿಕೊಳ್ಳುತ್ತಾಳೆ. ರಾಸ್ ನಿರಂತರವಾಗಿ ರೇಚಲ್ ಗೆ ತಾನು ಅವಳನ್ನು ಪ್ರೀತಿಸುತ್ತಿರುವುದಾಗಿ ಹೇಳಲು ಪ್ರಯತ್ನಿಸುತ್ತಾನೆ. ಅದೇ ಸಮಯದಲ್ಲಿ ರಾಸ್ ನ ಸಲಿಂಗಕಾಮಿ ಮಾಜಿ ಪತ್ನಿ ಕ್ಯಾರಲ್ ಅವನ ಮಗುವಿನ ಜನನವನ್ನು ನಿರೀಕ್ಷಿಸುತ್ತಿದ್ದಾಳೆ. ಜೋಯಿ ಹೋರಾಟ ನಡೆಸುವ ಒಬ್ಬ ಉದಯೋನ್ಮುಖ ನಟನಾಗಿ ತೋರಿಸಲ್ಪಟ್ಟಿದ್ದಾನೆ. ಫೀಬಿ ಅಂಗಮರ್ದಕಿಯಾಗಿ ಕೆಲಸ ಮಾಡುತ್ತಾಳೆ. ಚ್ಯಾಂಡ್ಲರ್ ತನ್ನ ಪ್ರೇಯಸಿ '''ಜ್ಯಾನಿಸ್'''ಳಿಂದ ದೂರವಾಗುತ್ತಾನೆ. ಜ್ಯಾನಿಸ್ ಮುಂದಿನ ಸರಣಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಾಳೆ. ಸರಣಿಯ ಕೊನೆಯಲ್ಲಿ ಚ್ಯಾಂಡ್ಲರ್ ಆಕಸ್ಮಿಕವಾಗಿ ರಾಸ್ ರೇಚಲ್ ಳನ್ನು ಪ್ರೀತಿಸುತ್ತಿದ್ದಾನೆಂದು ಬಹಿರಂಗಪಡಿಸುತ್ತಾನೆ. ರೇಚಲ್ ಕೂಡಾ ತಾನು ರಾಸ್ ನನ್ನು ಪ್ರೀತಿಸುತ್ತಿರುವುದಾಗಿ ಅರಿತುಕೊಳ್ಳುತ್ತಾಳೆ.
 
ರಾಸ್ '''ಜೂಲಿ'''ಯನ್ನು ಡೇಟಿಂಗ್ ಮಾಡುತ್ತಿರುವುದನ್ನು ರೇಚಲ್ ಅರಿತುಕೊಳ್ಳುವುದರೊಂದಿಗೆ '''ಎರಡನೇ ಸರಣಿ'''ಯು ಆರಂಭವಾಗುತ್ತದೆ. ರಾಸ್ ಸ್ನಾತಕ ವಿದ್ಯಾಲಯದಿಂದಲೇ ಜೂಲಿಯ ಪರಿಚಯ ಹೊಂದಿರುತ್ತಾನೆ. ರಾಸ್ ನನ್ನು ಇಷ್ಟಪಡುತ್ತಿರುವುದಾಗಿ ಹೇಳಲು ರೇಚಲ್ ನಡೆಸುವ ಪ್ರಯತ್ನಗಳು ಪ್ರಥಮ ಸರಣಿಯಲ್ಲಿನ ರಾಸ್ ನ ಪ್ರಯತ್ನಗಳಿಗೆ ಕನ್ನಡಿ ಹಿಡಿಯುತ್ತವೆ. ಆದರೆ ಕ್ರಮೇಣ ಅವರು ಒಂದು ಸಂಬಂಧವನ್ನು ರೂಪಿಸಿಕೊಳ್ಳುತ್ತಾರೆ. ಜೋಯಿ '''ಡೇಸ್ ಆಫ್ ಆರ್ ಲೈವ್ಸ್''' ಧಾರಾವಾಹಿಯ ಕಾಲ್ಪನಿಕ ಆವೃತ್ತಿಯಲ್ಲಿ ಒಂದು ಪಾತ್ರವನ್ನು ಗಳಿಸುತ್ತಾನೆ. ಆದರೆ ಅವನು ತನ್ನ ಹಲವು ವಾಕ್ಯಗಳನ್ನು ತಾನೇ ಬರೆಯುತ್ತಾನೆಂದು ತಿಳಿಯಪಡಿಸಿದ ನಂತರ ಅವನ ಪಾತ್ರವು ಧಾರಾವಾಹಿಯಲ್ಲಿ ಕೊಲ್ಲಲ್ಪಡುತ್ತದೆ. ಇತ್ತೀಚೆಗಷ್ಟೇ ವಿಚ್ಛೇದನ ಪಡೆದಿರುವ ಹಾಗೂ ತನಗಿಂತ ೨೧ ವರ್ಷ ದೊಡ್ಡವನಾದ '''ರಿಚರ್ಡ್'''ನನ್ನು ಮೋನಿಕಾ ಡೇಟಿಂಗ್ ಮಾಡಲು ಆರಂಭಿಸುತ್ತಾಳೆ. ರಿಚರ್ಡ್ ಗೆ ಮಕ್ಕಳು ಬೇಡವೆಂದು ತಿಳಿದ ನಂತರ ಮೋನಿಕಾ ಅವನಿಂದ ದೂರವಾಗುತ್ತಾಳೆ.
 
==ನಿರ್ಮಾಣ==
===ಕಲ್ಪನೆ===
"https://kn.wikipedia.org/wiki/ಫ್ರೆಂಡ್ಸ್" ಇಂದ ಪಡೆಯಲ್ಪಟ್ಟಿದೆ