ಫ್ರೆಂಡ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೮ ನೇ ಸಾಲು:
 
ಪ್ರಥಮ ಸರಣಿಯ ಮೂಲ ಒಪ್ಪಂದದ ಪ್ರಕಾರ, ನಟನಾವರ್ಗದ ಪ್ರತಿ ಸದಸ್ಯನಿಗೂ ಪ್ರತಿ ಸಂಚಿಕೆಗೆ $೨೨,೫೦೦ ವೇತನ ನೀಡಲಾಯಿತು. ಏರಡನೇ ಸರಣಿಯಲ್ಲಿ ನಟನಾವರ್ಗವು ಪ್ರತಿ ಸಂಚಿಕೆಗೆ $೨೦,೦೦೦ ದಿಂದ $೪೦,೦೦೦ ದವರೆಗೆ ಬೇರೆ ಬೇರೆ ವೇತನಗಳನ್ನು ಪಡೆಯಿತು. ತಮ್ಮ ಮೂರನೇ ಸರಣಿಯ ವೇತನ ನಿರ್ಧಾರಕ್ಕಿಂತ ಮೊದಲು, '''ವಾರ್ನರ್ ಬ್ರದರ್ಸ್'''ನ ಪ್ರತ್ಯೇಕ ವೈಯಕ್ತಿಕ ಒಪ್ಪಂದದ ಆದ್ಯತೆಯ ಬದಲಾಗಿಯೂ, ನಟನಾವರ್ಗ ಸಾಮೂಹಿಕ ವೇತನಾ ನಿರ್ಧಾರಕ್ಕೆ ಪ್ರವೇಶಿಸಲು ನಿರ್ಧರಿಸಿತು. ನಟನಾವರ್ಗಕ್ಕೆ ಅತ್ಯಂತ ಕಡಿಮೆ ಗಳಿಸುವ ಸದಸ್ಯನ ವೇತನವನ್ನು ನೀಡಲಾಯಿತು. ಅಂದರೆ ಆನಿಸ್ಟನ್ ಹಾಗೂ ಶ್ವಿಮ್ಮೆರ್ ರವರ ವೇತನಗಳು ಕಡಿಮೆಗೊಂಡವು. ನಟನಾವರ್ಗಕ್ಕೆ ಮೂರನೇ ಸರಣಿಯಲ್ಲಿ $೭೫,೦೦೦ ಪ್ರತಿ ಸಂಚಿಕೆಯಂತೆ, ನಾಲ್ಕನೇ ಸರಣಿಯಲ್ಲಿ $೮೫,೦೦೦ ಪ್ರತಿ ಸಂಚಿಕೆಯಂತೆ, ಐದನೆ ಸಂಚಿಕೆಯಲ್ಲಿ $೧,೦೦,೦೦೦ ಪ್ರತಿ ಸಂಚಿಕೆಯಂತೆ, ಆರನೇ ಸಂಚಿಕೆಯಲ್ಲಿ $೧,೨೫,೦೦೦ ಪ್ರತಿ ಸಂಚಿಕೆಯಂತೆ, ಏಳು ಹಾಗೂ ಎಂಟನೆ ಸರಣಿಗಳಲ್ಲಿ $೭,೫೦,೦೦೦ ಪ್ರತಿ ಸಂಚಿಕೆಯಂತೆ, ಒಂಭತ್ತು ಹಾಗೂ ಹತ್ತನೇ ಸರಣಿಗಳಲ್ಲಿ $೧೦,೦೦,೦೦೦ ಪ್ರತಿ ಸಂಚಿಕೆಯಂತೆ ವೇತನವನ್ನು ನೀಡಲಾಯಿತು. ಐದನೇ ಸರಣಿಯಿಂದ ನಟನಾವರ್ಗವು ಮರುಪ್ರಸಾರಣೆಯ ಗೌರವಧನವನ್ನೂ ಪಡೆಯಲಾರಂಭಿಸಿತು.
 
ಸರಣಿ ರಚನಾಕಾರ ಡೇವಿಡ್ ಕ್ರೇನ್ ಎಲ್ಲಾ ಆರು ಪಾತ್ರಗಳೂ ಸಮಾನ ರೂಪದಲ್ಲಿ ಮಹತ್ವಪೂರ್ಣವಾಗಿರಬೇಕೆಂದು ಬಯಸಿದ್ದರು ಹಾಗೂ ಸರಣಿಯು 'ಪ್ರಥಮ ನೈಜ ಸಮಗ್ರ ಪ್ರದರ್ಶನ' ಎಂಬ ಪ್ರಶಂಸೆಗೂ ಪಾತ್ರವಾಯಿತು. ನಟನಾವರ್ಗದ ಪ್ರತಿಯೊಬ್ಬ ಸದಸ್ಯನೂ ಇತರರಿಗಿಂತ ಹೆಚ್ಚು ಪ್ರಭಾವಿಯಾಗಿರದಂತೆ ಇದ್ದು, ಸರಣಿಯ ಸಮಗ್ರ ಅಭಿನಯ ಪ್ರಾರೂಪವನ್ನು ಕಾಯ್ದಿರಿಸಲು ಪ್ರಯತ್ನವನ್ನು ಮಾಡಿದರು. ಪುರಸ್ಕಾರಗಳಿಗಾಗಿ ಅವರು ಒಂದೇ ಅಭಿನಯ ವರ್ಗದಲ್ಲಿ ಪಾಲ್ಗೊಂಡರು, ಸಾಮೂಹಿಕ ವೇತನಾ ನಿರ್ಧಾರವನ್ನು ಆರಿಸಿಕೊಂಡರು, ಹಾಗೂ ಪ್ರಥಮ ಸರಣಿಯಲ್ಲಿ ನಿಯತಕಾಲಿಕೆಯ ಮುಖಪುಟದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲು ಕೇಳಿಕೊಂಡರು.ತೆರೆ ಹಿಂದೆಯೂ ಫ್ರೆಂಡ್ಸ್ ಕಲಾಕಾರರು ಉತ್ತಮ ಸ್ನೇಹಿತರಾದರು ಆದರೆ ಅತಿಥಿ ತಾರೆ '''ಟಾಮ್ ಸೆಲೆಕ್''' ಕೆಲವೊಮ್ಮೆ ಮಿತ್ರ ವರ್ಗದಿಂದ ಹೊರಗುಳಿದುದಾಗಿ ಹೇಳಿಕೊಳ್ಳುತ್ತಾರೆ. ಸರಣಿಯ ಪ್ರಸಾರದ ನಂತರವೂ ನಟನಾವರ್ಗದ ಸದಸ್ಯರು ಉತ್ತಮ ಸ್ನೇಹಿತರಾಗಿ ಉಳಿದರು, ವಿಶೇಷವಾಗಿ ಕಾಕ್ಸ್ ಮತ್ತು ಆನಿಸ್ಟನ್. ಆನಿಸ್ಟನ್, ಕಾಕ್ಸ್ ಮತ್ತು ಡೇವಿಡ್ ಅರ್ಕೆಟ್ ರ ಮಗಳು ಕೋಕೋ ಳ ಧರ್ಮಮಾತೆಯಾದರು. ಅಧಿಕೃತ ವಿದಾಯ ಸಂಸ್ಮರಣಾ ಪುಸ್ತಕ '''ಫ್ರೆಂಡ್ಸ್ ಟಿಲ್ ದ ಎಂಡ್''' ನಲ್ಲಿ ಪ್ರತಿಯೊಬ್ಬ ಕಲಾಕಾರನೂ ಫ್ರೆಂಡ್ಸ್ ನಟನಾವರ್ಗವು ತಮ್ಮ ಪರಿವಾರದಂತೆಯೇ ಆಗಿದ್ದಾರೆಂದು ಸ್ಮರಿಸಿದ್ದಾರೆ.
 
==ಸರಣಿ ಸಾರಾಂಶ==
"https://kn.wikipedia.org/wiki/ಫ್ರೆಂಡ್ಸ್" ಇಂದ ಪಡೆಯಲ್ಪಟ್ಟಿದೆ