ಫ್ರೆಂಡ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೭ ನೇ ಸಾಲು:
* [[ಜೆನಿಫರ್ ಆನಿಸ್ಟನ್]] '''ರೇಚಲ್ ಗ್ರೀನ್''' ನ ಪಾತ್ರವನ್ನು ವಹಿಸಿದ್ದಾರೆ. ಫ್ಯಾಷನ್ ಬಗ್ಗೆ ಆಸಕ್ತಿಯುಳ್ಳ ರೇಚಲ್ ಗ್ರೀನ್, ಶಾಲಾ ದಿನಗಳಿಂದಲೂ ಮೋನಿಕಾ ಗೆಲ್ಲರ್ ಳ ಆಪ್ತ ಸ್ನೇಹಿತೆ. ರೇಚಲ್ ಮತ್ತು ರಾಸ್ ಗೆಲ್ಲರ್ ಸರಣಿಯುದ್ದಕ್ಕೂ ಈಗ-ಇದೆ-ಇನ್ನೊಮ್ಮೆ-ಇಲ್ಲ ಎನ್ನುವಂತಹ ಸಂಬಂಧದಲ್ಲಿ ಇರುತ್ತಾರೆ. ಆರಂಭದಲ್ಲಿ ಸೆಂಟ್ರಲ್ ಪರ್ಕ್ ಕಾಫಿಗೃಹದಲ್ಲಿ ಪರಿಚಾರಕಿಯಾಗಿ ಕೆಲಸ ಮಾಡುವ ರೇಚಲ್ ನಂತರ ೩ನೇ ಸರಣಿಯಲ್ಲಿ '''ಬ್ಲೂಮಿಂಗ್ಡೇಲ್ಸ್''' ನಲ್ಲಿ ಸಹಾಯಕ ಖರೀದಿದಾರಳಾಗುತ್ತಾಳೆ. ನಂತರ ೫ನೇ ಸರಣಿಯಲ್ಲಿ '''ರಾಲ್ಫ್ ಲೌರಿನ್''' ನಲ್ಲಿ ಖರೀದಿದಾರಳಾಗಿ ನೇಮಕಗೊಳ್ಳುತ್ತಾಳೆ. ೮ನೇ ಸರಣಿಯ ಕೊನೆಯಲ್ಲಿ ರೇಚಲ್ ಹಾಗೂ ರಾಸ್ ಗೆ ಎಮ್ಮಾ ಎನ್ನುವ ಮಗಳು ಜನಿಸುತ್ತಾಳೆ.
* [[ಕೋರ್ಟ್ನಿ ಕಾಕ್ಸ್]] '''ಮೋನಿಕಾ ಗೆಲ್ಲರ್''' ನ ಪಾತ್ರವನ್ನು ನಿಭಾಯಿಸಿದ್ದಾರೆ. ವೃತ್ತಿಯಲ್ಲಿ '''ಶೆಫ್''' ಆಗಿರುವ ಮೋನಿಕಾ ತನ್ನ ಅತಿ ನಿರ್ಬಂಧ ಹಾಗೂ ಸ್ಪರ್ಧಾ ಸ್ವಭಾವಕ್ಕಾಗಿ ಪರಿಚಿತಳಾಗಿರುತ್ತಾಳೆ. ಬಾಲ್ಯದಲ್ಲಿ ಅತಿಯಾಗಿ ಸ್ಥೂಲಕಾಯಿಯಾಗಿದ್ದುದಕ್ಕಾಗಿ ಇತರರು ಇವಳನ್ನು ಆಗಾಗ ತಮಾಷೆಯಾಗಿ ರೇಗಿಸುತ್ತಿರುತ್ತಾರೆ, ಮುಖ್ಯವಾಗಿ ಅವಳ ಅಣ್ಣ ರಾಸ್. ಸರಣಿಯುದ್ದಕ್ಕೂ ಹಲವಾರು ರೆಸ್ಟೋರಂಟ್ ಗಳಲ್ಲಿ ಶೆಫ್ ಆಗಿ ಕೆಲಸ ಮಾಡುವ ಮೋನಿಕಾ, ಏಳನೇ ಸರಣಿಯ ಅಂತ್ಯದಲ್ಲಿ ಚಾಂಡ್ಲರ್ ಬಿಂಗ್ ಅನ್ನು ಮದುವೆಯಾಗುತ್ತಾಳೆ.
* [[ಲೀಸಾ ಕುಡ್ರೋ]] '''ಫೀಬಿ ಬುಫೆ''' ಪಾತ್ರವನ್ನು ವಹಿಸಿದ್ದಾರೆ. ಸ್ವೇಚ್ಛಾ ಸ್ವಭಾವದ ಫೀಬಿ ವೃತ್ತಿಯಲ್ಲಿ ಅಂಗಮರ್ದಕಿ ಹಾಗೆಯೇ ಸ್ವಯಂ ಬೋಧಿತ ಸಂಗೀತಗಾರ್ತಿ. ಹೆಚ್ಚು ತಿಳುವಳಿಕೆಯಿಲ್ಲದಂತೆ ಕಂಡರೂ ಫೀಬಿ ತುಂಬಾ ತೀಕ್ಷ್ಣ ಹಾಗೂ ಚುರುಕು. ತನ್ನ ವಿಭಿನ್ನ ವೈಖರಿ ಹಾಗೂ ಮೋಡಿಯ ಹಾಡುಗಳನ್ನು ಸ್ವತಃ ಬರೆದು ತನ್ನ ಗಿಟಾರಿನ ಜೊತೆ ಸೇರಿಸಿ (ಅಹಿತಕರವಾಗಿ) ಹಾಡುತ್ತಾಳೆ. ಅವಳಿಗೆ '''ಅರ್ಸೂಲಅರ್ಸೂಲಾ''' ಎಂಬ ಹೆಸರಿನ ಒಬ್ಬ 'ಕೆಟ್ಟ' ತದ್ರೂಪ ಅವಳಿಯಿದ್ದಾಳೆ. ಕೊನೆಯ ಸರಣಿಯಲ್ಲಿ ಫೀಬಿ '''ಮೈಕ್ ಹ್ಯಾನಿಗನ್''' ನನ್ನು ವಿವಾಹವಾಗುತ್ತಾಳೆ.
* [[ಮ್ಯಾಟ್ ಲಬ್ಲಾಂಕ್]] '''ಜೋಯಿ ಟ್ರಿಬಿಯಾನಿ'''ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಒಬ್ಬ ನಟ ಹಾಗೂ ಭೋಜನಪ್ರಿಯನಾಗಿರುವ ಜೋಯಿ, '''ಡೇಸ್ ಆಫ್ ಆವರ್ ಲೈವ್ಸ್''' ಧಾರಾವಾಹಿಯ ಡಾ| ಡ್ರೇಕ್ ರೆಮೋರೇ ಎಂಬ ಪಾತ್ರದಿಂದಾಗಿ ಪ್ರಸಿದ್ಧನಾಗುತ್ತಾನೆ. ಸರಳ ಮನಸ್ಸಿನ ಸ್ತ್ರೀವಿಲಾಸಿಯಾಗಿರುವ ಜೋಯಿ ಸರಣಿಯುದ್ದಕ್ಕೂ ಹಲವಾರು ಅಲ್ಪಾವಧಿಯ ಗೆಳತಿಯರನ್ನು ಹೊಂದಿರುತ್ತಾನೆ. ಎಂಟನೇ ಸರಣಿಯಲ್ಲಿ ರೇಚಲ್ ನೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ.
 
==ನಟವರ್ಗ==
"https://kn.wikipedia.org/wiki/ಫ್ರೆಂಡ್ಸ್" ಇಂದ ಪಡೆಯಲ್ಪಟ್ಟಿದೆ