ಫ್ರೆಂಡ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೨೫ ನೇ ಸಾಲು:
}}
 
ಫ಼್ರೆಂಡ್ಸ್ ಎಂಬುದು [[ಡೇವಿಡ್ ಕ್ರೇನ್]] ಹಾಗೂ [[ಮಾರ್ಟಾ ಕಾಫ಼್ಮಾನ್]] ರಿಂದ ತಯಾರಿತ '''ಫ಼್ರೆಂಡ್ಸ್''' [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕಾ]]ದ ಒಂದು [[ಧಾರಾವಾಹಿ]]. ಸಾಂದರ್ಭಿಕ ಹಾಸ್ಯ ಧಾರಾವಾಹಿಯಾಗಿರುವ ಇದು [[ಎನ್.ಬಿ.ಸಿ]] ವಾಹಿನಿಯಲ್ಲಿ ಸೆಪ್ಟಂಬರ್ ೨೨, ೧೯೯೪ ರಿಂದ ಮೇ ೬, ೨೦೦೪ ರ ವರೆಗೆ ಪ್ರಸಾರಗೊಂಡಿತು. [[ಮ್ಯಾನ್ಹ್ಯಾಟನ್‌|ಮೆನ್ಹಾಟನ್]] ನ ಒಂದು ಸ್ನೇಹಿತರ ಬಳಗದ ಕಥೆಯ ಸುತ್ತ ತಿರುಗುವ ಈ ಸರಣಿಯು [[ವಾರ್ನರ್ಸ್ ಬ್ರದರ್ಸ್ ಟೆಲಿವಿಶನ್]] ನ ಸಹಯೋಗದೊಂದಿಗೆ '''ಬ್ರೈಟ್/ಕಾಫ಼್ಮಾನ್/ಕ್ರೇನ್ ಪ್ರೊಡಕ್ಶನ್ಸ್''' ನಿಂದ ನಿರ್ಮಿಸಲ್ಪಟ್ಟಿತುನಿರ್ಮಿಸಲ್ಪಟ್ಟಿದೆ. ಕ್ರೇನ್, ಕಾಫ಼್ಮಾನ್ ಹಾಗೂ ಬ್ರೈಟ್ ಇದರ ಪ್ರಾರಂಭಿಕ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದರೂನಿರ್ಮಾಪಕರಾಗಿದ್ದರು. ನಂತರದ ಸರಣಿಗಳಲ್ಲಿ ಹಲವಾರು ಇತರರನ್ನು ಈ ಹುದ್ದೆಗೆ ಏರಿಸಲಾಯಿತು.
 
ಕಾಫ಼್ಮಾನ್ ಹಾಗೂ ಕ್ರೇನ್, ೧೯೯೩ ನವೆಂಬರ್/ಡಿಸಂಬರ್ ನಲ್ಲಿ '''ಇನ್ಸೋಮ್ನಿಯ ಕಫ಼ೆ''' ಎಂಬ ಶೀಷಿಕೆಯಡಿಯಲ್ಲಿ ಈ ಧಾರಾವಾಹಿಯನ್ನು ಬರೆಯಲು ಆರಂಭಿಸಿದರು. ತಮ್ಮ ಈ ವಿಚಾರವನ್ನು ಅವರು ಬ್ರೈಟ್ ಅವರಿಗೆ ಪ್ರಸ್ತುತ ಪಡಿಸಿದ ನಂತರ ಮೂವರೂ ಸೇರಿ ಈ ಕಥೆಯ ೭ ಪುಟಗಳ ಕರಡನ್ನು '''ಎನ್.ಬಿ.ಸಿ ವಾಹಿನಿ'''ಗೆ ಒಪ್ಪಿಸಿದರು. ಕಥೆಯ ಹಲವಾರು ಮರುಬರಹ ಹಾಗೂ ಬದಲಾವಣೆಗಳ ನಂತರ ಶೀರ್ಷಿಕೆಯನ್ನು '''ಫ಼್ರೆಂಡ್ಸ್ ಲೈಕ್ ಅಸ್''' ಎಂದೂ ನಂತರ ಕೊನೆಯದಾಗಿ '''ಫ಼್ರೆಂಡ್ಸ್''' ಎಂದೂ ಮರುನಾಮಕರಣ ಮಾಡಿದ ನಂತರ ಇದು ಎನ್.ಬಿ.ಸಿ ಯ ಪ್ರತಿಷ್ಠಿತ ಗುರುವಾರ ಸಂಜೆ ೮:೩೦ರ ಸಮಯದಲ್ಲಿ ಪ್ರಸಾರಗೊಂಡಿತು. ಸರಣಿಯ ಚಿತ್ರೀಕರಣವು [[ಬರ್ಬಂಕ್]] [[ಕ್ಯಾಲಿಫೊರ್ನಿಯ|ಕ್ಯಾಲಿಫ಼ೋರ್ನಿಯಾ]]ದ '''ವಾರ್ನರ್ ಬ್ರದರ್ಸ್ ಸ್ಟುಡಿಯೋ'''ದಲ್ಲಿ ನೇರ ಶ್ರೋತೃಗಳ ಮುಂದೆ ನಡೆಯಿತು. ವಾಹಿನಿಯಲ್ಲಿ ಹತ್ತು ಸರಣಿಗಳ ನಂತರ ಎನ್.ಬಿ.ಸಿ ವಾಹಿನಿಯು ಸಂಚಿಕೆಯ ಅಂತ್ಯ ಭಾಗದ ಪ್ರಚಾರವನ್ನು ಬಹಳ ಅಬ್ಬರದಿಂದಲೇ ಮಾಡಿತು. [[ಅಮೆರಿಕಾ]]ದೆಲ್ಲೆಡೆ ವೀಕ್ಷಣಾ ಸಮಾರಂಭಗಳನ್ನು ಏರ್ಪಡಿಸಲಾಯಿತು. ಮೇ ೬, ೨೦೦೪ರಲ್ಲಿ ಪ್ರಸಾರವಾದ ಸಂಚಿಕೆಯ ಕೊನೆಯ ಭಾಗವು (೨೩೬ನೇ) ಅಮೇರಿಕಾದ ೫.೧೧ ಕೋಟಿ ವೀಕ್ಷಕರಿಂದ<ref name="finalefox">{{cite news |url=http://www.foxnews.com/story/0,2933,119305,00.html |title=Estimated 51.1M Tune in for ''Friends'' Finale |accessdate=December 28, 2008 |date=May 7, 2004 |publisher=Fox News Channel}}</ref> ವೀಕ್ಷಿಸಲ್ಪಟ್ಟಿತು. ಧಾರಾವಾಹಿಗಳ ಇತಿಹಾಸದಲ್ಲೇ ನಾಲ್ಕನೇ 'ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ಸಂಚಿಕಾ ಅಂತ್ಯ ಭಾಗ'<ref name="top10">{{cite web |url=http://indyposted.com/21133/top-10-most-watched-series-finales/ |title=Top 10 Most Watched Series Finales |accessdate=August 18, 2010 |date=May 6, 2010 |publisher=Indyposted.com |author=Allison Boyer}}</ref><ref name="finalewatch">{{cite web |url=http://www.pastemagazine.com/articles/2010/05/thirteen-million-get-lost-in-series-finale.html |title=Lost Series Finale Somehow Only the 55th Most-Watched Ever |accessdate=August 18, 2010 |date=May 20, 201010 |publisher=Paste Magazine |author=Jennifer Ross}}</ref> ಹಾಗೂ 'ದಶಕದ ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ಭಾಗ'<ref name="MostWatched">{{cite news |url=http://articles.chicagotribune.com/2009-12-04/entertainment/0912030239_1_joe-millionaire-series-finale-grey-s-anatomy |title='Friends' finale is decade's most-watched TV show |publisher=Chicago Tribune |accessdate=August 18, 2010 |date=December 4, 2009}}</ref> ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಯಿತು.
"https://kn.wikipedia.org/wiki/ಫ್ರೆಂಡ್ಸ್" ಇಂದ ಪಡೆಯಲ್ಪಟ್ಟಿದೆ