ಫ್ರೆಂಡ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೭ ನೇ ಸಾಲು:
ಫ಼್ರೆಂಡ್ಸ್ ಎಂಬುದು [[ಡೇವಿಡ್ ಕ್ರೇನ್]] ಹಾಗೂ [[ಮಾರ್ಟಾ ಕಾಫ಼್ಮಾನ್]] ರಿಂದ ತಯಾರಿತ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕಾ]]ದ ಒಂದು [[ಧಾರಾವಾಹಿ]]. ಸಾಂದರ್ಭಿಕ ಹಾಸ್ಯ ಧಾರಾವಾಹಿಯಾಗಿರುವ ಇದು [[ಎನ್.ಬಿ.ಸಿ]] ವಾಹಿನಿಯಲ್ಲಿ ಸೆಪ್ಟಂಬರ್ ೨೨, ೧೯೯೪ ರಿಂದ ಮೇ ೬, ೨೦೦೪ ರ ವರೆಗೆ ಪ್ರಸಾರಗೊಂಡಿತು. [[ಮ್ಯಾನ್ಹ್ಯಾಟನ್‌|ಮೆನ್ಹಾಟನ್]]ನ ಒಂದು ಸ್ನೇಹಿತರ ಬಳಗದ ಕಥೆಯ ಸುತ್ತ ತಿರುಗುವ ಈ ಸರಣಿಯು [[ವಾರ್ನರ್ಸ್ ಬ್ರದರ್ಸ್ ಟೆಲಿವಿಶನ್]] ನ ಸಹಯೋಗದೊಂದಿಗೆ '''ಬ್ರೈಟ್/ಕಾಫ಼್ಮಾನ್/ಕ್ರೇನ್ ಪ್ರೊಡಕ್ಶನ್ಸ್''' ನಿಂದ ನಿರ್ಮಿಸಲ್ಪಟ್ಟಿತು. ಕ್ರೇನ್, ಕಾಫ಼್ಮಾನ್ ಹಾಗೂ ಬ್ರೈಟ್ ಇದರ ಪ್ರಾರಂಭಿಕ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದರೂ ನಂತರದ ಸರಣಿಗಳಲ್ಲಿ ಹಲವಾರು ಇತರರನ್ನು ಈ ಹುದ್ದೆಗೆ ಏರಿಸಲಾಯಿತು.
 
ಕಾಫ಼್ಮಾನ್ ಹಾಗೂ ಕ್ರೇನ್, ೧೯೯೩ ನವೆಂಬರ್/ಡಿಸಂಬರ್ ನಲ್ಲಿ '''ಇನ್ಸೋಮ್ನಿಯ ಕಫ಼ೆ''' ಎಂಬ ಶೀಷಿಕೆಯಡಿಯಲ್ಲಿ ಈ ಧಾರಾವಾಹಿಯನ್ನು ಬರೆಯಲು ಆರಂಭಿಸಿದರು. ತಮ್ಮ ಈ ವಿಚಾರವನ್ನು ಅವರು ಬ್ರೈಟ್ ಅವರಿಗೆ ಪ್ರಸ್ತುತ ಪಡಿಸಿದ ನಂತರ ಮೂವರೂ ಸೇರಿ ಈ ಕಥೆಯ ೭ ಪುಟಗಳ ಕರಡನ್ನು '''ಎನ್.ಬಿ.ಸಿ ವಾಹಿನಿ'''ಗೆ ಒಪ್ಪಿಸಿದರು. ಕಥೆಯ ಹಲವಾರು ಮರುಬರಹ ಹಾಗೂ ಬದಲಾವಣೆಗಳ ನಂತರ ಶೀರ್ಷಿಕೆಯನ್ನು '''ಫ಼್ರೆಂಡ್ಸ್ ಲೈಕ್ ಅಸ್''' ಎಂದೂ ನಂತರ ಕೊನೆಯದಾಗಿ '''ಫ಼್ರೆಂಡ್ಸ್''' ಎಂದೂ ಮರುನಾಮಕರಣ ಮಾಡಿದ ನಂತರ ಇದು ಎನ್.ಬಿ.ಸಿ ಯ ಪ್ರತಿಷ್ಠಿತ ಗುರುವಾರ ಸಂಜೆ ೮:೩೦ರ ಸಮಯದಲ್ಲಿ ಪ್ರಸಾರಗೊಂಡಿತು. ಸರಣಿಯ ಚಿತ್ರೀಕರಣವು [[ಬರ್ಬಂಕ್]] [[ಕ್ಯಾಲಿಫೊರ್ನಿಯ|ಕ್ಯಾಲಿಫ಼ೋರ್ನಿಯಾ]]ದ '''ವಾರ್ನರ್ ಬ್ರದರ್ಸ್ ಸ್ಟುಡಿಯೋ'''ದಲ್ಲಿ ನೇರ ಶ್ರೋತೃಗಳ ಮುಂದೆ ನಡೆಯಿತು. ವಾಹಿನಿಯಲ್ಲಿ ಹತ್ತು ಸರಣಿಗಳ ನಂತರ ಎನ್.ಬಿ.ಸಿ ವಾಹಿನಿಯು ಸಂಚಿಕೆಯ ಅಂತ್ಯ ಭಾಗದ ಪ್ರಚಾರವನ್ನು ಬಹಳ ಅಬ್ಬರದಿಂದಲೇ ಮಾಡಿತು. [[ಅಮೆರಿಕಾ]]ದೆಲ್ಲೆಡೆ ವೀಕ್ಷಣಾ ಸಮಾರಂಭಗಳನ್ನು ಏರ್ಪಡಿಸಲಾಯಿತು. ಮೇ ೬, ೨೦೦೪ರಲ್ಲಿ ಪ್ರಸಾರವಾದ ಸಂಚಿಕೆಯ ಕೊನೆಯ ಭಾಗವು (೨೩೬ನೇ) ಅಮೇರಿಕಾದ ೫.೧೧ ಕೋಟಿ ವೀಕ್ಷಕರಿಂದ<ref name="finalefox">{{cite news |url=http://www.foxnews.com/story/0,2933,119305,00.html |title=Estimated 51.1M Tune in for ''Friends'' Finale |accessdate=December 28, 2008 |date=May 7, 2004 |publisher=Fox News Channel}}</ref> ವೀಕ್ಷಿಸಲ್ಪಟ್ಟಿತು. ಧಾರಾವಾಹಿಗಳ ಇತಿಹಾಸದಲ್ಲೇ ನಾಲ್ಕನೇ 'ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ಸಂಚಿಕಾ ಅಂತ್ಯ ಭಾಗ'<ref name="top10">{{cite web |url=http://indyposted.com/21133/top-10-most-watched-series-finales/ |title=Top 10 Most Watched Series Finales |accessdate=August 18, 2010 |date=May 6, 2010 |publisher=Indyposted.com |author=Allison Boyer}}</ref><ref name="finalewatch">{{cite web |url=http://www.pastemagazine.com/articles/2010/05/thirteen-million-get-lost-in-series-finale.html |title=Lost Series Finale Somehow Only the 55th Most-Watched Ever |accessdate=August 18, 2010 |date=May 20, 201010 |publisher=Paste Magazine |author=Jennifer Ross}}</ref> ಹಾಗೂ 'ದಶಕದ ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ಭಾಗ'<ref name="MostWatched">{{cite news |url=http://articles.chicagotribune.com/2009-12-04/entertainment/0912030239_1_joe-millionaire-series-finale-grey-s-anatomy |title='Friends' finale is decade's most-watched TV show |publisher=Chicago Tribune |accessdate=August 18, 2010 |date=December 4, 2009}}</ref> ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಯಿತು.
 
ತನ್ನ ಪ್ರಸಾರಣಾ ಸಮಯದುದ್ದಕೂ ಧನಾತ್ಮಕ ವಿಮರ್ಶೆಗಳನ್ನು ಗಳಿಸಿದ ಫ಼್ರೆಂಡ್ಸ್ ಸರಣಿಯು ಅತ್ಯಂತ ಜನಪ್ರಿಯ ಸರ್ವಕಾಲಿಕ ಸರಣಿಗಳಲ್ಲಿ ಒಂದೆನಿಸಿತು. ಹಲವಾರು ಪ್ರಶಶ್ತಿಗಳನ್ನು ಗೆದ್ದುಕೊಂಡ ಈ ಸರಣಿಯು ೬೩ '''ಪ್ರೈಮ್ ಟೈಮ್ ಎಮ್ಮಿ ಅವಾರ್ಡ್ಸ್''' ಗಳಿಗೆ ನಾಮಾಂಕಿತಗೊಂಡಿತು. ತನ್ನ ರಂಗಪ್ರವೇಶದ ಸಮಯದಿಂದಲೇ ಯಶಸ್ವಿಯಾದ ಈ ಸರಣಿಯು ಜನಪ್ರಿಯತೆಯಲ್ಲೂ ಮುಂಚೂಣಿಯಲ್ಲಿತ್ತು ಹಾಗೂ ವರ್ಷಾಂತ್ಯದ '''ಪ್ರೈಮ್ ಟೈಮ್ ರೇಟೀಂಗ್''' ನಲ್ಲಿ ಯಾವಾಗಲೂ ಅಗ್ರ ಹತ್ತನೇ ಶ್ರೇಣಿಯಲ್ಲಿತ್ತು. '''ಟಿ.ವಿ ಗೈಡ್''' ನ ಜೊತೆಗೆ ಹಲವಾರು ವಿಮರ್ಶಕರು ಈಗ ಈ ಸರಣಿಯನ್ನು ದೂರದರ್ಶನ ಇತಿಹಾಸದ ಅತ್ಯಂತ ಶ್ರೇಷ್ಠ ಸರಣಿಗಳಲ್ಲೊಂದು ಎಂದು ಪರಿಗಣಿಸುತ್ತಾರೆ. 'ಟಿ.ವಿ ಗೈಡ್' ಇದನ್ನು 'ಸರ್ವಕಾಲಿಕ ೫೦ ಶ್ರೇಷ್ಠ ದೂರದರ್ಶನ ಸರಣಿ'ಗಳ ಪಟ್ಟಿಯಲ್ಲಿ ೨೧ನೆ ಸ್ಥಾನದಲ್ಲಿ ಇರಿಸಿತು<ref name="cbsnews.com">{{cite news| url=http://www.cbsnews.com/stories/2002/04/26/entertainment/main507388.shtml | work=CBS News | title=TV Guide Names Top 50 Shows | date=April 26, 2002}}</ref><ref name="time.com">{{cite news| url=http://www.time.com/time/specials/2007/completelist/0,,1651341,00.html | work=Time | title=The 100 Best Tv Shows Of All-Time | date=September 6, 2007}}</ref><ref name="listal.com">{{cite web|url=http://www.listal.com/list/empire-magazines-50-greatest-tv |title=Empire Magazine's 50 Greatest TV Shows of All Time list |publisher=Listal.com |date=December 23, 2008 |accessdate=April 2, 2011}}</ref>. ೧೯೯೭ರಲ್ಲಿ '''ದ ವನ್ ವಿದ್ ದ ಪ್ರಾಮ್ ವಿಡಿಯೋ''' ಭಾಗವು 'ಟಿ.ವಿ ಗೈಡ್' ನ 'ಸರ್ವಕಾಲಿಕ ೧೦೦ ಅತ್ಯಂತ ಶ್ರೇಷ್ಠ ಸಂಚಿಕೆ'ಗಳ ಪಟ್ಟಿಯಲ್ಲಿ ೧೦೦ನೇ ಸ್ಥಾನದಲ್ಲಿರಿಸಲ್ಪಟ್ಟಿತು<ref>{{cite journal |last1= |first1= |last2= |first2= |year=1997 |title=Special Collector's Issue: 100 Greatest Episodes of All Time |journal=[[TV Guide]] |volume= |issue=June 28-July 4 |pages= |publisher= |doi= |url= |accessdate=October 4, 2011}}</ref> . ಈ ಸರಣಿಯು ಇಂದಿಗೂ ಮುಂದುವರೆಯುತ್ತಿರುವ ಮಹತ್ತರವಾದ ಸಾಂಸ್ಕೃತಿಕ ಪ್ರಭಾವವನ್ನು ಬೀರಿತು. ಸರಣಿಯಲ್ಲಿ ಪ್ರಧಾನವಾಗಿ ಚಿತ್ರಿಸಲ್ಪಟ್ಟ '''ಸೆಂಟ್ರಲ್ ಪರ್ಕ್''' ಕಾಫ಼ಿ ಗೃಹವು ಜಗತ್ತಿನುದ್ದಕ್ಕೂ ಹಲವಾರು ಅನುಕರಣೆಗಳಿಗೆ ಸ್ಪೂರ್ತಿಯಿತ್ತಿದೆ. ಜಗತ್ತಿನಾದ್ಯಂತ [[ಭಾರತ]]ವನ್ನೂ ಸೇರಿಸಿ ಹಲವಾರು ದೇಶಗಳಲ್ಲಿ ಇದು ಈಗಲೂ ಮರಪ್ರಸಾರಗೊಳ್ಳುತ್ತಿದೆ. ಇದರ ಎಲ್ಲಾ ೧೦ ಸಂಚಿಕೆಗಳೂ ಡಿ.ವಿ.ಡಿ ಯಲ್ಲಿ ಲಭ್ಯವಿವೆ. ಈ ಸರಣಿಯ ಒಂದು ಪಾತ್ರವನ್ನು ಆಧರಿತ '''ಜೋಯಿ''' ಎನ್ನುವ ಸರಣಿಯನ್ನು ಇದನ್ನು ಮುಂದುವರೆಸಲು ತಯಾರಿಸಲಾಯಿತು.
 
 
೫೪ ನೇ ಸಾಲು:
===ಚಲನಚಿತ್ರ===
==ಉಲ್ಲೇಖಗಳು==
<references/>
==ಬಾಹ್ಯ ಕೊಂಡಿಗಳು==
 
"https://kn.wikipedia.org/wiki/ಫ್ರೆಂಡ್ಸ್" ಇಂದ ಪಡೆಯಲ್ಪಟ್ಟಿದೆ