ಫ್ರೆಂಡ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೫ ನೇ ಸಾಲು:
}}
 
ಫ಼್ರೆಂಡ್ಸ್ ಎಂಬುದು [[ಡೇವಿಡ್ ಕ್ರೇನ್]] ಹಾಗೂ [[ಮಾರ್ಟಾ ಕಾಫ಼್ಮಾನ್]] ರಿಂದ ತಯಾರಿತ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕಾ]]ದ ಒಂದು [[ಧಾರಾವಾಹಿ]]. ಸಾಂದರ್ಭಿಕ ಹಾಸ್ಯ ಧಾರಾವಾಹಿಯಾಗಿರುವ ಇದು [[ಎನ್.ಬಿ.ಸಿ]] ವಾಹಿನಿಯಲ್ಲಿ ಸೆಪ್ಟಂಬರ್ ೨೨, ೧೯೯೪ ರಿಂದ ಮೇ ೬, ೨೦೦೪ ರ ವರೆಗೆ ಪ್ರಸಾರಗೊಂಡಿತು. [[ಮ್ಯಾನ್ಹ್ಯಾಟನ್‌|ಮೆನ್ಹಾಟನ್]]ನ ಒಂದು ಸ್ನೇಹಿತರ ಬಳಗದ ಕಥೆಯ ಸುತ್ತ ತಿರುಗುವ ಈ ಸರಣಿಯು [[ವಾರ್ನರ್ಸ್ ಬ್ರದರ್ಸ್ ಟೆಲಿವಿಶನ್]] ನ ಸಹಯೋಗದೊಂದಿಗೆ '''ಬ್ರೈಟ್/ಕಾಫ಼್ಮಾನ್/ಕ್ರೇನ್ ಪ್ರೊಡಕ್ಶನ್ಸ್''' ನಿಂದ ನಿರ್ಮಿಸಲ್ಪಟ್ಟಿತು. ಕ್ರೇನ್, ಕಾಫ಼್ಮಾನ್ ಹಾಗೂ ಬ್ರೈಟ್ ಇದರ ಪ್ರಾರಂಭಿಕ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದರೂ ನಂತರದ ಸರಣಿಗಳಲ್ಲಿ ಹಲವಾರು ಇತರರನ್ನು ಈ ಹುದ್ದೆಗೆ ಏರಿಸಲಾಯಿತು.
 
ಕಾಫ಼್ಮಾನ್ ಹಾಗೂ ಕ್ರೇನ್, ೧೯೯೩ ನವೆಂಬರ್/ಡಿಸಂಬರ್ ನಲ್ಲಿ '''ಇನ್ಸೋಮ್ನಿಯ ಕಫ಼ೆ''' ಎಂಬ ಶೀಷಿಕೆಯಡಿಯಲ್ಲಿ ಈ ಧಾರಾವಾಹಿಯನ್ನು ಬರೆಯಲು ಆರಂಭಿಸಿದರು. ತಮ್ಮ ಈ ವಿಚಾರವನ್ನು ಅವರು ಬ್ರೈಟ್ ಅವರಿಗೆ ಪ್ರಸ್ತುತ ಪಡಿಸಿದ ನಂತರ ಮೂವರೂ ಸೇರಿ ಈ ಕಥೆಯ ೭ ಪುಟಗಳ ಕರಡನ್ನು '''ಎನ್.ಬಿ.ಸಿ ವಾಹಿನಿಗೆವಾಹಿನಿ'''ಗೆ ಒಪ್ಪಿಸಿದರು. ಕಥೆಯ ಹಲವಾರು ಮರುಬರಹ ಹಾಗೂ ಬದಲಾವಣೆಗಳ ನಂತರ ಶೀರ್ಷಿಕೆಯನ್ನು '''ಫ಼್ರೆಂಡ್ಸ್ ಲೈಕ್ ಅಸ್''' ಎಂದೂ ನಂತರ ಕೊನೆಯದಾಗಿ '''ಫ಼್ರೆಂಡ್ಸ್''' ಎಂದೂ ಮರುನಾಮಕರಣ ಮಾಡಿದ ನಂತರ ಇದು ಎನ್.ಬಿ.ಸಿ ಯ ಪ್ರತಿಷ್ಠಿತ ಗುರುವಾರ ಸಂಜೆ ೮:೩೦ರ ಸಮಯದಲ್ಲಿ ಪ್ರಸಾರಗೊಂಡಿತು. ಸರಣಿಯ ಚಿತ್ರೀಕರಣವು [[ಬರ್ಬಂಕ್]] [[ಕ್ಯಾಲಿಫೊರ್ನಿಯ|ಕ್ಯಾಲಿಫ಼ೋರ್ನಿಯಾ]]ದ '''ವಾರ್ನರ್ ಬ್ರದರ್ಸ್ ಸ್ಟುಡಿಯೋದಲ್ಲಿಸ್ಟುಡಿಯೋ'''ದಲ್ಲಿ ನೇರ ಶ್ರೋತೃಗಳ ಮುಂದೆ ನಡೆಯಿತು. ವಾಹಿನಿಯಲ್ಲಿ ಹತ್ತು ಸರಣಿಗಳ ನಂತರ ಎನ್.ಬಿ.ಸಿ ವಾಹಿನಿಯು ಸಂಚಿಕೆಯ ಅಂತ್ಯ ಭಾಗದ ಪ್ರಚಾರವನ್ನು ಬಹಳ ಅಬ್ಬರದಿಂದಲೇ ಮಾಡಿತು. [[ಅಮೆರಿಕಾ]]ದೆಲ್ಲೆಡೆ ವೀಕ್ಷಣಾ ಸಮಾರಂಭಗಳನ್ನು ಏರ್ಪಡಿಸಲಾಯಿತು. ಮೇ ೬, ೨೦೦೪ರಲ್ಲಿ ಪ್ರಸಾರವಾದ ಸಂಚಿಕೆಯ ಕೊನೆಯ ಭಾಗವು (೨೩೬ನೇ) ಅಮೇರಿಕಾದ ೫.೧೧ ಕೋಟಿ ವೀಕ್ಷಕರಿಂದ ವೀಕ್ಷಿಸಲ್ಪಟ್ಟಿತು. ಧಾರಾವಾಹಿಗಳ ಇತಿಹಾಸದಲ್ಲೇ ನಾಲ್ಕನೇ 'ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ಸಂಚಿಕಾ ಅಂತ್ಯ ಭಾಗ' ಹಾಗೂ 'ದಶಕದ ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ಭಾಗ' ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಯಿತು.
 
ತನ್ನ ಪ್ರಸಾರಣಾ ಸಮಯದುದ್ದಕೂ ಧನಾತ್ಮಕ ವಿಮರ್ಶೆಗಳನ್ನು ಗಳಿಸಿದ 'ಫ಼್ರೆಂಡ್ಸ್' ಸರಣಿಯು ಅತ್ಯಂತ ಜನಪ್ರಿಯ ಸರ್ವಕಾಲಿಕ ಸರಣಿಗಳಲ್ಲಿ ಒಂದೆನಿಸಿತು. ಹಲವಾರು ಪ್ರಶಶ್ತಿಗಳನ್ನು ಗೆದ್ದುಕೊಂಡ ಈ ಸರಣಿಯು ೬೩ '''ಪ್ರೈಮ್ ಟೈಮ್ ಎಮ್ಮಿ ಅವಾರ್ಡ್ಸ್''' ಗಳಿಗೆ ನಾಮಾಂಕಿತಗೊಂಡಿತು. ತನ್ನ ರಂಗಪ್ರವೇಶದ ಸಮಯದಿಂದಲೇ ಯಶಸ್ವಿಯಾದ ಈ ಸರಣಿಯು ಜನಪ್ರಿಯತೆಯಲ್ಲೂ ಮುಂಚೂಣಿಯಲ್ಲಿತ್ತು ಹಾಗೂ ವರ್ಷಾಂತ್ಯದ '''ಪ್ರೈಮ್ ಟೈಮ್ ರೇಟೀಂಗ್''' ನಲ್ಲಿ ಯಾವಾಗಲೂ ಅಗ್ರ ಹತ್ತನೇ ಶ್ರೇಣಿಯಲ್ಲಿತ್ತು. '''ಟಿ.ವಿ ಗೈಡ್''' ನ ಜೊತೆಗೆ ಹಲವಾರು ವಿಮರ್ಶಕರು ಈಗ ಈ ಸರಣಿಯನ್ನು ದೂರದರ್ಶನ ಇತಿಹಾಸದ ಅತ್ಯಂತ ಶ್ರೇಷ್ಠ ಸರಣಿಗಳಲ್ಲೊಂದು ಎಂದು ಪರಿಗಣಿಸುತ್ತಾರೆ. 'ಟಿ.ವಿ ಗೈಡ್' ಇದನ್ನು 'ಸರ್ವಕಾಲಿಕ ೫೦ ಶ್ರೇಷ್ಠ ದೂರದರ್ಶನ ಸರಣಿ'ಗಳ ಪಟ್ಟಿಯಲ್ಲಿ ೨೧ನೆ ಸ್ಥಾನದಲ್ಲಿ ಇರಿಸಿತು. ೧೯೯೭ರಲ್ಲಿ '''ದ ವನ್ ವಿದ್ ದ ಪ್ರಾಮ್ ವಿಡಿಯೋ''' ಭಾಗವು 'ಟಿ.ವಿ ಗೈಡ್' ನ 'ಸರ್ವಕಾಲಿಕ ೧೦೦ ಅತ್ಯಂತ ಶ್ರೇಷ್ಠ ಸಂಚಿಕೆಗಳಸಂಚಿಕೆ'ಗಳ ಪಟ್ಟಿಯಲ್ಲಿ ೧೦೦ನೇ ಸ್ಥಾನದಲ್ಲಿರಿಸಲ್ಪಟ್ಟಿತು. ಈ ಸರಣಿಯು ಇಂದಿಗೂ ಮುಂದುವರೆಯುತ್ತಿರುವ ಮಹತ್ತರವಾದ ಸಾಂಸ್ಕೃತಿಕ ಪ್ರಭಾವವನ್ನು ಬೀರಿತು. ಸರಣಿಯಲ್ಲಿ ಪ್ರಧಾನವಾಗಿ ಚಿತ್ರಿಸಲ್ಪಟ್ಟ '''ಸೆಂಟ್ರಲ್ ಪರ್ಕ್''' ಕಾಫ಼ಿ ಗೃಹವು ಜಗತ್ತಿನುದ್ದಕ್ಕೂ ಹಲವಾರು ಅನುಕರಣೆಗಳಿಗೆ ಸ್ಪೂರ್ತಿಯಿತ್ತಿದೆ. ಜಗತ್ತಿನಾದ್ಯಂತ ಭಾರತವನ್ನೂ[[ಭಾರತ]]ವನ್ನೂ ಸೇರಿಸಿ ಹಲವಾರು ದೇಶಗಳಲ್ಲಿ ಇದು ಈಗಲೂ ಮರಪ್ರಸಾರಗೊಳ್ಳುತ್ತಿದೆ. ಇದರ ಎಲ್ಲಾ ೧೦ ಸಂಚಿಕೆಗಳೂ ಡಿ.ವಿ.ಡಿ ಯಲ್ಲಿ ಲಭ್ಯವಿವೆ. ಈ ಸರಣಿಯ ಒಂದು ಪಾತ್ರವನ್ನು ಆಧರಿತ '''ಜೋಯಿ''' ಎನ್ನುವ ಸರಣಿಯನ್ನು ಇದನ್ನು ಮುಂದುವರೆಸಲು ತಯಾರಿಸಲಾಯಿತು.
 
 
"https://kn.wikipedia.org/wiki/ಫ್ರೆಂಡ್ಸ್" ಇಂದ ಪಡೆಯಲ್ಪಟ್ಟಿದೆ