ವಿಜಯಭಾಸ್ಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:Vijay bhaskar.jpg|frame|ವಿಜಯಭಾಸ್ಕರ್]]
 
ಕನ್ನಡ ಚಿತ್ರ ಸಂಗೀತದ ಸಾಧ್ಯತೆಯನ್ನು ಗಮನಾರ್ಹವಾಗಿ ವಿಸ್ತರಿಸಿದ ಹೆಗ್ಗಳಿಕೆಯ ಸಂಗೀತ ನಿದೇಶಕ ವಿಜಯಭಾಸ್ಕರ್ಜನಿಸಿದ್ದುವಿಜಯಭಾಸ್ಕರ್.(೧೯೩೧-೨೦೦೨)

ವಿಜಯಭಾಸ್ಕರ್ ಜನಿಸಿದ್ದು ಬೆಂಗಳೂರಿನಲ್ಲಿ ೧೯೩೧ರ ಸೆಪ್ಟೆಂಬರ್ ೭ ರಂದು.ತಂದೆ ಕೃಷ್ಣ ಮೂರ್ತಿ ,ತಾಯಿ ಜೀಜಾಬಾಯಿ,ಮನೆಯಲ್ಲಿ ಸದಾ ಸಂಗೀತದ ವಾತಾವರಣ.ಮನೆಯ ಹತ್ತಿರದಲ್ಲಿ ಸದಾ ಹರಿಕತೆ,ಭಜನೆ,ಭಕ್ತಿಗೀತೆಗಳ ಅನುರಣನ.ಸಂಗೀತದತ್ತ ಆಸಕ್ತಿ ಸಹಜವಾಗಿಯೇ ಬೆಳೆಯಿತು..ಸೌತ್ ಪೆರೇಡ್ ಮೈದಾನದಲ್ಲಿ ನಡೆಯುತಿದ್ದ ಪಾಶ್ಚಿಮಾತ್ಯ ಮಾದರಿಯ ಬ್ರಾಸ್ ಬ್ಯಾಂಡ್ ಇದಕ್ಕೆ ಇಂಬು ನೀಡಿತು.ತಂದೆಯ ಆಸೆಯಂತೆ ಇಂಜಿನಿಯರಿಂಗ್ ಓದಿದರು,ನಡುವೆಯೇ ಸಂಗೀತ ಕಲಿತರು.ನಾರಾಯಣ ಸ್ವಾಮಿಗಳ ಬಳಿ ಕರ್ನಾಟಕ ಸಂಗೀತ ,ಜಿ,ವಿ,ಭಾವೆಯವರ ಬಳಿ ಹಿಂದೂಸ್ತಾನಿ,ಲೀನೀ ಹಂಟ್ ಬಳಿ ಪಾಶ್ಚಾತ್ಯ ಸಂಗೀತ ಕಲಿತ ಅವರು,ಮ್ಯಕಾನಿಕಲ್ ಇಂಜಿನಿಯರಿಂಗ್ ಮುಗಿಸುವ ವೇಳೆಗೆ ಸಂಗೀತದಲ್ಲಿಯೂ ಪ್ರೌಡಿಮೆ ಪಡೆದಿದ್ದರು.ಈಗ ಆಯ್ಕೆಯ ಪ್ರಶ್ನೆ ಬಂದಾಗ ವಿಜಯಭಾಸ್ಕರ್ ಸಂಗೀತವನ್ನೇ ಆರಿಸಿಕೊಂಡರು.ಭವಿಷ್ಯವನ್ನು ಅರಸಿ ಮುಂಬೈಗೆ ತೆರಳಿದರು.ಅಲ್ಲಿ ನೌಷಾದ್ ಸಹಾಯಕರಾಗಿ ಪ್ರೌಡಿಮೆಯನ್ನು ಪಡೆದರು.[[ಪಿಯಾನೊ]] ನುಡಿಸುವುದರಲ್ಲಿ ಪರಿಣತಿ ಹೊಂದಿದ್ದ ಇವರು, ಪ್ರಖ್ಯಾತ ಸಾಹಿತಿಗಳಾದ [[ದ.ರಾ.ಬೇಂದ್ರೆ]], [[ಕುವೆಂಪು]], [[ಜಿ.ಎಸ್.ಎಸ್]], ಅವರ ಕೃತಿಗಳನ್ನು ಚಲನಚಿತ್ರಕ್ಕೆ ಅಳವಡಿಸಿದವರಲ್ಲಿ ಪ್ರಮುಖರು.
 
೧೯೫೪ರಲ್ಲಿ ತೆರೆಕಂಡ "ಶ್ರೀ ರಾಮ ಪೂಜಾ "ಇವರಿಗೆ ಸ್ವತಂತ್ರ್ಯ ಸಂಗೀತ ನಿರ್ದೇಶನಕ್ಕೆ ಅವಕಾಶ ಕಲ್ಪಿಸಿದ ಮೊದಲ ಚಿತ್ರ.ಈ ಚಿತ್ರಕ್ಕೆ ಅಚ್ಹ ಕನ್ನಡಿಗರದ್ದೇ ಆದ "ಜಯ ಮಾರುತಿ ವಾದ್ಯ ವ್ರಂದ"ವನ್ನು ಬಳಸಿದರು.ಕನ್ನಡ ವಾದ್ಯಗಾರನ್ನೇ ಸಂಪೂರ್ಣ ಬಳಸಿಕೊಂಡು ಸಂಗೀತ ನಿರ್ದೇಶನ ಮಾಡಿದ ಮೊದಲಿಗರು ವಿಜಯಭಾಸ್ಕರ್.ನಂತರ "ಭಾಗ್ಯ ಚಕ್ರ"ಚಿತ್ರಕ್ಕೆ ಅವರು ಸಂಗೀತ ಮಾತ್ರವಲ್ಲ ಚಿತ್ರ ಕಥೆ -ಸಂಭಾಷಣೆ ಕೂಡಾ ಬರೆದರು.ಹಿಂದಿ ಚಿತ್ರ ರಂಗದ ನಿಕಟ ಪರಿಚಯವಿದ್ದ ಅವರು ಶಾಟ್ ಡಿವಿಜನ್ ಅನ್ನು ಈ ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಪರಿಚಯಿಸಿದ್ದರು."ರಾಣಿ ಹೊನ್ನಮ್ಮ " ಅವರಿಗೆ ಹೆಸರು ತಂದು ಕೊಟ್ಟಿತು.ಅವರ ಸಾಮರ್ಥ್ಯವನ್ನೆಲ್ಲಾ ಸಾಕಾರಗೊಳಿಸಿದಂತಹ ಚಿತ್ರ "ಸಂತ ತುಕಾರಾಂ".ಚಿತ್ರದ ಗೀತೆಗಳೆಲ್ಲವೂ ಜನಪ್ರೀಯವಾಗುವುದರ ಜೊತೆಗೆ ವಿಜಯಭಾಸ್ಕರ್ ಕನ್ನಡದ ಪ್ರಮುಖ ಸಂಗೀತ ನಿರ್ದೇಶಕರಾದರು.ಪ್ರಯೋಗಶೀಲರಾಗಿದ್ದ ಅವರು"ಮನ ಮೆಚ್ಹಿದ ಮಡದಿ "ಚಿತ್ರದ ಟೈಟಲ್ ನಲ್ಲಿ ರಾಷ್ಟ್ರ ಕವಿ ಕುವೆಂಪು ಅವರ "ಜೈ ಭಾರತ ಜನನಿಯ ತನುಜಾತೆ "ಯನ್ನು ಹಿನ್ನೆಲೆ ಗೀತೆಯಾಗಿ ಬಳಸಿದ್ದರು.ಮುಂದೆ ಈ ಗೀತೆ ನಾಡ ಗೀತೆಯಾಗಲು ಈ ಪ್ರಯೋಗವೇ ಕಾರಣವಾಯಿತು.
"https://kn.wikipedia.org/wiki/ವಿಜಯಭಾಸ್ಕರ್" ಇಂದ ಪಡೆಯಲ್ಪಟ್ಟಿದೆ