ಸತ್ಯಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮ ನೇ ಸಾಲು:
 
 
ಸತ್ಯಂ ಮೂಲತ: ತೆಲುಗಿನವರು.ಸತ್ಯಂ ಅವರ ಪೂರ್ಣ ಹೆಸರು"ಚೌಳ್ಳ ಪಿಳ್ಳೆ ಸತ್ಯ ನಾರಾಯಣ ಶಾಸ್ತ್ರಿ " ಜನಿಸಿದ್ದು ೧೯೩೫ ಮೇ ೧೭ ರಂದು ಅಂದ್ರಆಂದ್ರ ಪ್ರದೇಶದ ವಿಜಯ ನಗರ ಜಿಲ್ಲೆಯ ಗಾದೆವಲಪ ಗ್ರಾಮದಲ್ಲಿ.ತಾಯಿ ಕಾಂತಮ್ಮ ಉತ್ತಮ ಹಾಡುಗಾರ್ತಿ,ತಂದೆ ಹನುಮಂತ ಶಾಸ್ತ್ರಿಗಳು ಕೂಡಾ ಭಾಗವತ ಮೇಳಗಳಿಗೆ ಪ್ರಸಿದ್ಧರಾದವರು.ಅವರ ಹಾಡೆಂದರೆ ಜನ ಕಿಕ್ಕಿರಿದು ಸೇರುತ್ತಿದ್ದರು.ತಂದೆ ಹತೂರುಗಳ ಜಹಗೀರುದಾರರು.ವೈಭವದ ಬಾಲ್ಯವನ್ನು ಕಂಡ ಸತ್ಯಂ ಅವರಿಗೆ ಸಂಗೀತದ ಹುಚ್ಚ್ಚು ಎಳವೆಯಿಂದಲೇ ಹಿಡಿಯಿತು.ತಂದೆಗಾದರೂ ಮಗ ಉನ್ನತ ಸರ್ಕಾರಿ ಅಧಿಕಾರಿಯಾಗಬೇಕೆಂಬ ಕನಸು.ಅದ್ದರೆ ಸತ್ಯಂ ತಲೆಗೆ ವಿದ್ಯೆ ಹತ್ತಲಿಲ್ಲ,ತಂದೆ ಬಿಡಲಿಲ್ಲ.ಪ್ರೌಡಶಾಲೆಯ ಎರಡನೇ ವ್ವರ್ಷದಲ್ಲಿ ನಪಾಸಾದಾಗ ತಂದೆಯ ಉಗ್ರ ಶಿಕ್ಷೆಯ ಅನುಭವಗಳನ್ನು ಪಡೆದಿದ್ದ ಬಾಲಕ ಸತ್ಯಂ ಮನೆಬಿಟ್ಟು ಓಡಿದ.ಸಕಲ ಐಶ್ವರ್ಯದ ಬದುಕಿಗೆ ತಿಲಾಂಜಲಿ ನೀಡಿ ಸೇರಿದ್ದು ಕಾಕಿನಾಡದ "ಹ್ಯಾಪಿ ಹೋಂ" ಅನ್ನು.
 
ಅಲ್ಲಿ ಬಡ ವಿದ್ಯಾರ್ಥಿಗಳಿಗೆ ಊಟ ಬಟ್ಟೆ ನೀಡಿ ಸಂಗೀತ ಕಲಿಸಲಾಗುತಿತ್ತು.ಅನಾಥ ಎಂದು ಹೇಳಿ ಸತ್ಯಂ ಅಲ್ಲಿ ಪ್ರವೇಶ ಪಡೆದಿದ್ದರು.ಇದೇ ಸಂಸ್ಥೆಯಲ್ಲಿ ಎಸ್.ವಿ.ರಂಗರಾವ್,ಅಂಜಲೀ ದೇವಿ,ರೇಲಂಗಿ ಮೊದಲಾದವರಿದ್ದರು.ಅವರಲ್ಲರ ಒಡನಾಟ ಸತ್ಯಂ ಕಲಾಭಿರುಚಿ ವಿಕಸಿತವಾಗಲು ಕಾರಣವಾಯಿತು.ಅಲ್ಲಿ ಪರಿಚಿತರಾದ ಒಬ್ಬ ಮಹನೀಯರೆಂದರೆ ಆದಿನಾರಾಯಣರಾವ್.ಅವರಾಗಲೇ "ಅಂಜಲಿ"ಚಿತ್ರದ 'ಕುಹೂ ಕುಹೂ ಬೋಲೆ ಕೊಯಿಲಯ "ಅಮರಗೀತೆಯಿಂದ ಪ್ರಸಿದ್ದರಾಗಿದ್ದರು.ಅವರು ಮುಂದೆ "ಮಯಾಲಮಾರಿ"ಸ್ವಂತ ಚಿತ್ರ ತಯಾರಿಸಲು ನಿರ್ದರಿಸಿದಾಗ ಸತ್ಯಂ ಅವರನ್ನು ಕರೆಸಿಕೊಂಡರು,ಆ ಚಿತ್ರದಲ್ಲಿ ಅವರದು ಸಹಾಯಕ ನಿರ್ದೇಶಕನಿಂದ ಹಿಡಿದು ವಾದ್ಯಗೋಷ್ಠಿ ನಿರ್ವಹಣೆಯವರೆಗೆ ದಶವಾತರ.
"https://kn.wikipedia.org/wiki/ಸತ್ಯಂ" ಇಂದ ಪಡೆಯಲ್ಪಟ್ಟಿದೆ