ಸತ್ಯಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೨ ನೇ ಸಾಲು:
ಅಲ್ಲಿ ಬಡ ವಿದ್ಯಾರ್ಥಿಗಳಿಗೆ ಊಟ ಬಟ್ಟೆ ನೀಡಿ ಸಂಗೀತ ಕಲಿಸಲಾಗುತಿತ್ತು.ಅನಾಥ ಎಂದು ಹೇಳಿ ಸತ್ಯಂ ಅಲ್ಲಿ ಪ್ರವೇಶ ಪಡೆದಿದ್ದರು.ಇದೇ ಸಂಸ್ಥೆಯಲ್ಲಿ ಎಸ್.ವಿ.ರಂಗರಾವ್,ಅಂಜಲೀ ದೇವಿ,ರೇಲಂಗಿ ಮೊದಲಾದವರಿದ್ದರು.ಅವರಲ್ಲರ ಒಡನಾಟ ಸತ್ಯಂ ಕಲಾಭಿರುಚಿ ವಿಕಸಿತವಾಗಲು ಕಾರಣವಾಯಿತು.ಅಲ್ಲಿ ಪರಿಚಿತರಾದ ಒಬ್ಬ ಮಹನೀಯರೆಂದರೆ ಆದಿನಾರಾಯಣರಾವ್.ಅವರಾಗಲೇ "ಅಂಜಲಿ"ಚಿತ್ರದ 'ಕುಹೂ ಕುಹೂ ಬೋಲೆ ಕೊಯಿಲಯ "ಅಮರಗೀತೆಯಿಂದ ಪ್ರಸಿದ್ದರಾಗಿದ್ದರು.ಅವರು ಮುಂದೆ "ಮಯಾಲಮಾರಿ"ಸ್ವಂತ ಚಿತ್ರ ತಯಾರಿಸಲು ನಿರ್ದರಿಸಿದಾಗ ಸತ್ಯಂ ಅವರನ್ನು ಕರೆಸಿಕೊಂಡರು,ಆ ಚಿತ್ರದಲ್ಲಿ ಅವರದು ಸಹಾಯಕ ನಿರ್ದೇಶಕನಿಂದ ಹಿಡಿದು ವಾದ್ಯಗೋಷ್ಠಿ ನಿರ್ವಹಣೆಯವರೆಗೆ ದಶವಾತರ.
ಒಮ್ಮೆ ಡೂಲಕ್ ವಾದಕ ಬಾರದಾಗ ಸತ್ಯಂ ತಾವೇ ನುಡಿಸಿದರು.ಅದಕ್ಕೆ ಪ್ರಸಿದ್ದರೂ ಆದರು.ಹಲವು ಹಿಂದಿ ಚಿತ್ರಗಳಿಗೆ ಡೂಲಕ್ ನುಡಿಸಿದರು. ಆದಿನಾರಾಯಣರಾವ್ ಅವರ "ಸ್ವರ್ಣ ಸುಂದರಿ"ಯಲ್ಲಂತೂ ಅವರ ಡೂಲಕ್ ವಾದನ ಪರಿಣಾಮಕಾರಿಯಾಗಿತ್ತು.
 
ಮದರಾಸಿನಲ್ಲಿನ "ಫಿಲಂ ಸೆಂಟರ್" ಕಲಾಪ್ರೇಮಿಗಳ ನೆಚ್ಹಿನ ತಾಣವಾಗಿತ್ತು.ಎಲ್ಲಾ ಬಾಷೆಯ ಚಿತ್ರ ನಿರ್ಮಾತೃಗಳು ಅಲ್ಲಿ ಸೇರುತ್ತಿದ್ದರು.ಅಲ್ಲಿಗೆ ಬಂದಿದ್ದ ಹೋಟೆಲ್ ಉದ್ಯಮಿ ಎಂ.ಎಸ್.ನಾಯಕ್ ಅವರಿಗೆ ಸತ್ಯಂ ಖ್ಯಾತಿ ತಿಳಿಯಿತು.ಅವರಾಗ ಕನ್ನಡ ಚಿತ್ರಗಳ ನಿರ್ಮಾಣದಲ್ಲಿ ತೊಡಗಿದ್ದರು.ಅದಕ್ಕೇ ಸತ್ಯಂ ಅವರನ್ನೇ ಏಕೆ ಸಂಗೀತ ನಿರ್ದೇಶಕನಾಗಿ ಬಳಸಬಾರದು ಎಂದು ಯೋಚಿಸಿದರು.ಡೋಲು ವಾದನಕ್ಕೇ ಸೀಮಿತರಾಗಿದ್ದ ಸತ್ಯಂ ಅವರಿಗೂ ಬದಲಾವಣೆ ಬೇಕಾಗಿತ್ತು.ಹೀಗೆ ೧೯೬೩ರಲ್ಲಿ ತೆರೆಕಂಡ"ಶ್ರೀ ರಾಮಾಂಜನೇಯ ಯುದ್ದ " ಚಿತ್ರದ ಮೂಲಕ ಅವರು ಸ್ವತಂತ್ರ ಸಂಗೀತ ನಿರ್ದೇಶಕರಾದರು.ಈ ಚಿತ್ರದ 'ಹನುಮನ ಪ್ರಾಣ",ಜಗದೀಶನಾಡುವ ಜಗವೇ ನಾಟಕ ರಂಗ","ಜಯ ಜಯ ರಾಮ ಜಯ ಘನ ಶ್ಯಾಮ "ಮೊದಲಾದ ಗೀತೆಗಳು ಪ್ರಸಿದ್ದವಾದವು. ಮುಂದೆ ಸತ್ಯಂ ಕನ್ನಡದಲ್ಲಿ ಗಟ್ಟಿ ಸಂಗೀತ ನಿರ್ದೇಶಕರಾಗಿ ನೆಲೆ ನಿಂತರು."ಒಂದೇ ಬಳ್ಳಿಯ ಹೂವುಗಳು " ಚಿತ್ರದಲ್ಲಿ ಸತ್ಯಂ ತಮ್ಮ ಹಿಂದಿ ಚಿತ್ರರಂಗದ ನಂಟನ್ನು ಬಳಸಿ "ಮಹಮದ್ ರಫಿ " ಅವರಿಂದ "ನೀನೆಲ್ಲಿ ನಡೆವೆ ದೂರ "ಗೀತೆಯನ್ನು ಹಾಡಿಸಿದರು.ಗಾಂದಿ ನಗರ ಚಿತ್ರದ
"ನೀ ಮೂಡಿದ ಮಲ್ಲಿಗೆ ಹೂವಿನ ಮಾಲೆ " ಹಾಡು ಅತ್ಯಂತ ಜನಪ್ರೀಯವಾಯಿತು.
 
 
"https://kn.wikipedia.org/wiki/ಸತ್ಯಂ" ಇಂದ ಪಡೆಯಲ್ಪಟ್ಟಿದೆ