ವಿ.ಸೀತಾರಾಮಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ವಿ.ಸೀತಾರಾಮಯ್ಯನವರ ಜೀವನ ಹಾಗು ಸಾಹಿತ್ಯ
ಮೈಸೂರು - link corrected
೧ ನೇ ಸಾಲು:
'''ವಿ.ಸೀ.''' ಎಂದೆ ಖ್ಯಾತರಾದ ಶ್ರೀ ವಿ.ಸೀತಾರಾಮಯ್ಯನವರು ೧೮೯೯ರ ಅಕ್ಟೋಬರ ೨ರಂದು [[ಬೆಂಗಳೂರು]] ಜಿಲ್ಲೆಯ [[ಬೂದಿಗೆರೆ]] ಗ್ರಾಮದಲ್ಲಿ ಜನಿಸಿದರು. ತಂದೆ ವೆಂಕಟರಾಮಯ್ಯ, ತಾಯಿ ದೊಡ್ಡವೆಂಕಟಮ್ಮ. [[ಮೈಸೂರು ಮಹಾರಾಜಾ ಕಾಲೇಜಿ]]ನಿಂದ ೧೯೨೦ರಲ್ಲಿ ಬಿ.ಏ. ಪದವಿಯನ್ನೂ, ೧೯೨೨ರಲ್ಲಿ ಎಮ್.ಏ. ಪದವಿಯನ್ನೂ ಪಡೆದರು. ೧೯೨೩ ರಿಂದ ೧೯೨೮ ರವರೆಗೆ [[ಮೈಸೂರಿಮೈಸೂರು |ಮೈಸೂರಿನ ]][[ಶಾರದಾವಿಲಾಸ ಹೈಸ್ಕೂಲಿ]]ನಲ್ಲಿ ಉಪಾಧ್ಯಾಯರಾಗಿದ್ದರು. ೧೯೨೮ ರಿಂದ ೧೯೫೫ ರವರೆಗೆ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ೧೯೫೬ರಿಂದ ೧೯೫೮ರ ವರೆಗೆ [[ಬೆಂಗಳೂರು ಆಕಾಶವಾಣಿ ನಿಲಯ]]ದ ಭಾಷಣ ವಿಭಾಗದ ಮುಖ್ಯಸ್ಥರಾಗಿದ್ದರು. ೧೯೬೪ರಿಂದ ೧೯೬೮ರವರೆಗೆ [[ಹೊನ್ನಾವರ ಕಾಲೇಜಿ]]ನ ಪ್ರಾಂಶುಪಾಲರಾಗಿದ್ದರು.
 
ವಿ.ಸೀ. ಅವರ ಆರು '''ಕವನಸಂಗ್ರಹ'''ಗಳು ಈ ರೀತಿಯಾಗಿವೆ: ದೀಪಗಳು, ಗೀತಗಳು, ನೆಳಲು-ಬೆಳಕು, ದ್ರಾಕ್ಷಿ-ದಾಳಿಂಬೆ, ಹೆಜ್ಜೆ ಪಾಡು, ಅರಲು-ಬರಲು. (ಅರಲು-ಬರಲು ಕೃತಿಗೆ ೧೯೭೩ರಲ್ಲಿ [[ಕೇಂದ್ರ ಸಾಹಿತ್ಯ ಅಕೆಡೆಮಿ]]ಯ ಪ್ರಶಸ್ತಿ ಲಭಿಸಿದೆ.)
"https://kn.wikipedia.org/wiki/ವಿ.ಸೀತಾರಾಮಯ್ಯ" ಇಂದ ಪಡೆಯಲ್ಪಟ್ಟಿದೆ