ಪಿ.ಕಾಳಿಂಗರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆ
೧ ನೇ ಸಾಲು:
[[Image:P_Kaalingaraaya.jpg|right|thumb|120px|ಪಿ. ಕಾಳಿಂಗರಾಯರು]]
'''ಪಿ. ಕಾಳಿಂಗರಾಯ''' - (ಪಿ.ಕಾಳಿಂಗರಾವ್)(ಜನನ ೩೧-೮-೧೯೧೪-ನಿಧನ ೨೨-೯ ೧೯೮೧) ಅವರು ಹೆಸರಾಂತ ಹಿನ್ನೆಲೆ ಗಾಯಕರೊಲ್ಲಬ್ಬರು, ಸಂಗೀತ ನಿರ್ದೇಶಕರು ಹಾಗು ಕನ್ನಡದಲ್ಲಿನ [[ಸುಗಮ ಸಂಗೀತ]] ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದವರು. ಇವರ ಪೂರ್ಣ ಹೆಸರು, '''ಪಾಂಡೇಶ್ವರ ಕಾಳಿಂಗರಾಯ'''.ಮೂಲತಃ ಇವರು ಬಾರಕೂರಿನ ಮೂಡುಕೆರೆಯವರು.
[[೧೯೧೪|೧೯೧೪ರ]][[ ಆಗಸ್ಟ್ ೩೧|ಆಗಸ್ಟ್ ೩೧ರಂದು]]ರಂದು ಜನಿಸಿದ ಕಾಳಿಂಗರಾಯರ ತಂದೆ(ಪಾಂಡೇಶ್ವರ ಪುಟ್ಟಯ್ಯ) ನಾರಾಯಣರಾವ್ [[ಯಕ್ಷಗಾನ|ಯಕ್ಷಗಾನದಲ್ಲಿ]]ದಲ್ಲಿ ಹೆಸರು ಮಾಡಿದವರು.
ಕಾಳಿಂಗರಾಯರಿಗೆ ಸಾಹಿತ್ಯಾಭಿರುಚಿ ಮೂಡಿದ್ದು ತನ್ನ ಸೋದರ ಮಾವನಿಂದ.
 
೧೪ ನೇ ಸಾಲು:
ನಾಗೇಂದ್ರರಾಯರು ನಿರ್ಮಿಸಿದ [[ವಸಂತಸೇನಾ]] ಕನ್ನಡ ಚಲನಚಿತ್ರಕ್ಕೆ ಸಂಗೀತ ನಿರ್ದೇಶಿಸಿದ ಕಾಳಿಂಗರಾಯರು, ಅದೇ ಚಿತ್ರದಲ್ಲಿ ಜೈನ ಸನ್ಯಾಸಿಯ ಪಾತ್ರವನ್ನೂ ನಿರ್ವಹಿಸಿದರು.ಅನಂತರ ಪಿ.ಕಾಳಿಂಗರಾಯರು ತೆರೆಯ ಮೇಲೆ ಕಾಣಿಸಿಕೊಂಡದ್ದು ತುಂಬಿದ ಕೊಡ ಚಿತ್ರದಲ್ಲಿ[[http://www.youtube.com/watch?v=cnlfUC4NnvY&feature=related| "ಅಂತಿಂಥ ಹೆಣ್ಣು ನೀನಲ್ಲ" ]]ಅನ್ನುವ ಕವನವನ್ನು ಹಾಡುವ ದೃಶ್ಯದಲ್ಲಿ. ನಂತರ, ನವಜ್ಯೋತಿ ಸ್ಟುಡಿಯೋದ ಮುಖ್ಯಸ್ಥರಾಗಿದ್ದ ಜಿ.ಆರ್.ರಾಮಯ್ಯನವರ ಕೋರಿಕೆ ಮೇರೆಗೆ ಅಲ್ಲಿ ತಯಾರಾದ ಚಿತ್ರಗಳಿಗೆ ಸಂಗೀತ ನೀಡಲು ಒಪ್ಪಿದರು. ಆದರೆ ಹೀಗೆ ಸಂಗೀತ ನೀಡಿದ್ದು [[ಕೃಷ್ಣಲೀಲಾ]] ಚಿತ್ರಕ್ಕೆ ಮಾತ್ರ. ಈ ಚಿತ್ರದಿಂದ [[ಕಣಗಾಲ್ ಪ್ರಭಾಕರ ಶಾಸ್ತ್ರಿ]] ಅವರು ಗೀತರಚನೆಕಾರರಾಗಿ ಪರಿಚಿತರಾದರೆ, [[ಡಾ.ರಾಜ್ ಕುಮಾರ್]] ಅವರ ಸಹೋದರ [[ವರದರಾಜ್]] ಮತ್ತು ಸಹೋದರಿ ಶಾರದಮ್ಮ ಬೆಳ್ಳಿತೆರೆಗೆ ಬಂದರು.
 
[[ಭಕ್ತ ರಾಮದಾಸ]] ಚಿತ್ರದಲ್ಲಿ ಸಂಗೀತ ನೀಡುವಾಗ, ಭಿಕ್ಷೆ ಬೇಡುತ್ತಿದ್ದ ಹುಡುಗಿಯೊಬ್ಬಳ ಕಂಠಸಿರಿಗೆ ಮನಸೋತ ಕಾಳಿಂಗರಾಯರು ಆಕೆಯಿಂದಲೂ ಹಾಡೊಂದನ್ನು ಆ ಚಿತ್ರದಲ್ಲಿ ಹಾಡಿಸಿದ್ದರು. ೧೯೫೪ರಲ್ಲಿ [[ಸಿ.ವಿ.ರಾಜು]] ಅವರ [[ನಟಶೇಖರ]] ಚಿತ್ರಕ್ಕೆ ಸಂಗೀತ ನೀಡಿದರು. ಈ ಚಿತ್ರಕ್ಕೆ [[ನಾಡಿಗೇರ ಕೃಷ್ಣರಾಯ|ನಾಡಿಗೇರ ಕೃಷ್ಣರಾಯರ]] ಸಾಹಿತ್ಯವಿದ್ದು, ಗೀತೆಗಳು ಜನಪ್ರಿಯವಾದವು.
ನಂತರ, [[ಅ.ನ. ಕೃಷ್ಣರಾಯ|ಅ.ನ. ಕೃಷ್ಣರಾಯರ]] ಸಲಹೆಯಂತೆ ಕಾಳಿಂಗರಾಯರು ಕನ್ನಡ ಕಾವ್ಯವನ್ನು ಜನರಿಗೆ ತಲುಪಿಸುವ ಮಹತ್ವದ ಜವಾಬ್ದಾರಿಗೆ ತಮ್ಮನ್ನು ಒಪ್ಪಿಸಿಕೊಂಡರು. ಚಿತ್ರರಂಗದ ನಂಟು ಮುಂದುವರೆಯಿತು.
 
[[ಅಬ್ಬಾ ಆ ಹುಡುಗಿ]] (೧೯೫೯) ಮತ್ತು [[ಮಹಾಶಿಲ್ಪಿ]] (೧೯೬೬) ಚಿತ್ರಗಳಿಗೆ ಸಂಗೀತ ನೀಡಿದರೂ ರಾಯರ ಪ್ರತಿಭೆ ಹೆಚ್ಚಾಗಿ ಬೆಳಗಿದ್ದು [[ಸುಗಮ ಸಂಗೀತ]] ಕ್ಷೇತ್ರದಲ್ಲಿಯೇ. ಓಂ ನಮೋ ನಾರಾಯಣ([[ಕೈವಾರ ಮಹಾತ್ಮೆ]]), ತಾಯಿ ದೇವಿಯನು ಕಾಣೆ ಹಂಬಲಿಸಿ ([[ಕಿತ್ತೂರು ಚೆನ್ನಮ್ಮ(ಚಿತ್ರ)|ಕಿತ್ತೂರು ಚೆನ್ನಮ್ಮ]]) ಮೊದಲಾದ ಜನಪ್ರಿಯ ಗೀತೆಗಳನ್ನು ತಮ್ಮ ಕಂಠಸಿರಿಯಿಂದ ಬೆಳ್ಳಿತೆರೆಗೆ ನೀಡಿದ ರಾಯರು ಜನಪ್ರಿಯತೆಯ ತುತ್ತತುದಿಯಲ್ಲಿದ್ದಾಗ ಅವರ ಪ್ರಸಿದ್ಧ ಗೀತೆ [http://www.youtube.com/watch?v=cnlfUC4NnvY 'ಅಂತಿಂಥ ಹೆಣ್ಣು ನಾನಲ್ಲ']ವನ್ನು ಅವರೇ ಹಾಡುತ್ತಿರುವಂತೆ [[ತುಂಬಿದ ಕೊಡ]] ಚಿತ್ರದಲ್ಲಿ ತೋರಿಸಲಾಗಿತ್ತು.
೨೧ ನೇ ಸಾಲು:
೧೯೪೬ರಲ್ಲಿ ಹುಯಿಲಗೋಳ ನಾರಾಯಣರಾಯರ "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು" ಎಂಬ ಗೀತೆಯನ್ನು ಸ್ವರ ಸಂಯೋಜಿಸಿ ಹಾಡಿದರು. ಕನ್ನಡ ರಾಜ್ಯೋದಯದ ನಂತರ ಈ ಹಾಡನ್ನು ಹಾಡಿದ್ದ ಕಾಳಿಂಗರಾಯರಿಗೆ ಕರ್ನಾಟಕ ಸರ್ಕಾರ ಸನ್ಮಾನ ಮಾಡಿತು."ನಮನ"
 
[[೧೯೮೧|೧೯೮೧ರ]] [[ಸೆಪ್ಟೆಂಬರ್ ೨೨|ಸೆಪ್ಟೆಂಬರ್ ೨೨ರಂದು]]ರಂದು ಕಾಳಿಂಗರಾಯರು ನಿಧನ ಹೊಂದಿದರು.
 
{{ಕನ್ನಡ ಚಿತ್ರ ಸಂಗೀತ ನಿರ್ದೇಶಕರು}}
"https://kn.wikipedia.org/wiki/ಪಿ.ಕಾಳಿಂಗರಾಯ" ಇಂದ ಪಡೆಯಲ್ಪಟ್ಟಿದೆ