ಬಿ.ಎಸ್.ರಂಗಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:B_S_Rangaa.jpg|thumb|ಬಿ.ಎಸ್.ರಂಗಾ|200px|'ಬಿ.ಎಸ್.ರಂಗಾ']]
'[[ಬಿಂಡಿಗ ನವಿಲೆ ಶ್ರೀನಿವಾಸ ಅಯ್ಯಂಗಾರ್]]', (ಜನನ ೧೯೧೭ ನವೆಂಬರ್ ೧೧)'''ಬಿ.ಎಸ್.ರಂಗಾ'''-[[ಕನ್ನಡ ಚಿತ್ರರಂಗ]] ಕಂಡ ಬಹುಮುಖ ಪ್ರತಿಭಾವಂತರಲ್ಲಿ ಪ್ರಮುಖರು. ಛಾಯಾಗ್ರಹಣ, ನಿರ್ದೇಶನ, ನಿರ್ಮಾಣ ಹೀಗೆ ಮೂರು ವಿಭಾಗಗಳಲ್ಲಿ ರಂಗಾ ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸುರುವ ಸೇವೆ ಅಮೂಲ್ಯವಾದದ್ದು.1956ರಲ್ಲಿ ಮದರಾಸಿನಲ್ಲಿ "ವಿಕ್ರಂ ಸ್ಟುಡಿಯೋಸ್" ಆರಂಭಿಸಿದ ರಂಗಾ, ಹೊರ ರಾಜ್ಯದಲ್ಲಿ ಸ್ಟುಡಿಯೋ ಆರಂಭಿಸಿದ ಮೊದಲ ಕನ್ನಡಿಗ. ಅಂದಿನ ದಿನಗಳಲ್ಲಿ ಕಚ್ಚಾಫಿಲಂ ದೊರಕುತ್ತಿದ್ದುದು ಕೇವಲ ಸ್ಟುಡಿಯೋ ಮಾಲೀಕರಿಗೆ ಮಾತ್ರ. ರಂಗಾ ಸ್ಟುಡಿಯೋ ಸ್ಥಾಪಿಸಿ ಈ ಸ್ಟುಡಿಯೋದಲ್ಲಿ ತಯಾರಿಸಿದ ಪ್ರಥಮ ಚಿತ್ರ ‘ಭಕ್ತ ಮಾರ್ಕಂಡೇಯ’ (1957) ಕನ್ನಡ, ತಮಿಳು ಮತ್ತು ತೆಲುಗು ಮೂರು ಭಾಷೆಗಳಲ್ಲಿ ತಯಾರಾಗಿದೆ. ಬೆಂಗಳೂರು ಅಮೆಚೂರ್ ಡ್ರಮಾಟಿಕ್ ಅಸೋಸಿಯೇಷನ್ ‘ಭಕ್ತ ಮಾರ್ಕಂಡೇಯ’ ನಾಟಕ ಆಡುತ್ತಿತ್ತು. ಅದನ್ನೇ ರಂಗಾ ಚಲನಚಿತ್ರ ಮಾಡಿದರು.ಇವರು ವಿವಿಧ ಭಾಷೆಗಳಲ್ಲಿ 65ಕ್ಕೂ ಹೆಚ್ಚು ಚಿತ್ರ ನಿರ್ಮಾಣ ಮಾಡಿರುವರು.'ಚಲನಚಿತ್ರವೆಂಬ ಕಲ್ಪನೆ' ಇನ್ನೂ ರೂಪುಗೊಳ್ಳುತ್ತಿದ್ದ ಕಾಲದಲ್ಲಿ 'ಪೌರಾಣಿಕ ಚಿತ್ರ'ಗಳನ್ನು ನಿರ್ಮಿಸಿ, 'ಸ್ಟುಡಿಯೊ ಸ್ಥಾಪಿಸಿ', 'ಚಿತ್ರೋದ್ಯಮದ ಆತ್ಮವಿಶ್ವಾಸ ಹೆಚ್ಚಿಸಿದರು'.
==ಜನನ, ಬಾಲ್ಯ ಹಾಗೂ ವೃತ್ತಿ-ಜೀವನ==
'[[ಬಿ. ಎಸ್. ರಂಗಾ]]' ರವರು, ಸನ್, ೧೯೧೭ ರ, ನವೆಂಬರ್, ೧೧ ರಂದು, ಬೆಂಗಳೂರಿಗೆ ಸಮೀಪದಲ್ಲಿರುವ '[[ಮಾಗಡಿ]]'ಯಲ್ಲಿ ಜನಿಸಿದರು. ತಮ್ಮ ೧೭ ನೇ ವಯಸ್ಸಿನ ಪ್ರಾಯದಲ್ಲೇ ಫೋಟೋಗ್ರಫಿ ಯಲ್ಲಿ ಆಕರ್ಷಿತರಾದರು. ಆ ವಲಯದಲ್ಲಿ ಅತ್ಯಂತ ಮಹತ್ವದ ಕೊಡುಗೆಗಳನ್ನು ಕೊಟ್ಟಬಳಿಕ, 'ಲಂಡನ್ ನ, ರಾಯಲ್ ಫೋಟೋಗ್ರಫಿಕ್ ಸೊಸೈಟಿಯ ಆನರ್ ಫೆಲೋ ಆಗಿ ಆಯ್ಕೆಯಾದರು. [[೧೯೩೭]]ರಲ್ಲಿ ಕಾಲೇಜು ತೊರೆದು, ತಂದೆ ಬಿ.ಶ್ರೀನಿವಾಸ ಅಯ್ಯಂಗಾರ್ಯರ ಮುದ್ರಣ ಕಾರ್ಯದಲ್ಲಿ ಸಹಾಯಕರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ತಂದೆ, '[[ಅಮೆಚೂರ್ ಡ್ರಾಮಾಟಿಕ್ ಅಸೋಸಿಯೇಷನ್]]' ಹುಟ್ಟುಹಾಕಿದವರು. ಈ ಅಸೋಸಿಯೇಷನ್ ಮೂಲಕ ರಂಗಾ ಅವರಿಗೆ ಹಲವಾರು ಸಾಹಿತಿಗಳ, ರಂಗಪಟುಗಳ ಪರಿಚಯವಾಯಿತು. ಅದು ಅವರಲ್ಲಿ ಚಲನಚಿತ್ರರಂಗದಲ್ಲಿ ಆಸಕ್ತಿ ರೂಪುಗೊಳ್ಳುವಂತೆ ಮಾಡಿತು. ಎಲ್ಲಾ ವಿಭಾಗಗಳಿಗಿಂತ ಛಾಯಾಗ್ರಹಣದತ್ತ ಆಸಕ್ತರಾದ ಅವರು [[ಮುಂಬಯಿ|ಮುಂಬಯಿಗೆ]] ತೆರಳಿ, '[[ಭಾರತದ ಪ್ರಥಮ ಆಟೋಮ್ಯಾಟಿಕ್ ಪ್ರೊಸೆಸಿಂಗ್ ಲ್ಯಾಬೋರೇಟರಿ]]' ಸ್ಥಾಪಕರಾದ '[[ಕೃಷ್ಣಗೋಪಾಲ್]]' ರವರ ಸಹಾಯಕರಾಗಿ ಕೆಲಸಕ್ಕೆ ಸೇರಿದರು. ಹಿಂದಿ ಚಿತ್ರರಂಗದ ದಿಗ್ಗಜರ ಒಡನಾಟ ಲಭ್ಯವಾಯಿತು. ಹಲವು ಚಿತ್ರಗಳಿಗೆ 'ಸಹಾಯಕ ಛಾಯಾಗ್ರಹಕ' ರಾಗಿ ದುಡಿಯುವ ಅವಕಾಶವೂ ದೊರೆಯಿತು. 'ರಂಗಾ' ಅವರು 'ಸ್ವತಂತ್ರ ಛಾಯಾಗ್ರಹಕ'ರಾಗಿ ದುಡಿದದ್ದು '''ಭಕ್ತ ನಾರದರ್''' ಎಂಬ [[ತಮಿಳು]] ಚಲನಚಿತ್ರ. ೧೯೪೭-೪೯ ರ ಅವಧಿಯಲ್ಲಿ, '[[ಮಾಗೋಪಿ]]' ಯೆಂಬ ತೆಲುಗು ಚಿತ್ರವನ್ನು ಸ್ವತಂತ್ಯವಾಗಿ ಚಿತ್ರೀಕರಿಸಿ, ನಿರ್ದೇಶಿಸಿದರು ಸಹಿತ.
೭೧ ನೇ ಸಾಲು:
|}
==ನಿಧನ==
೯೩ ವರ್ಷ ಪ್ರಾಯದ ತುಂಬು ಜೀವನವನ್ನು ನಡೆಸಿದ '[[ಬಿ.ಎಸ್. ರಂಗಾ]]'ರವರು, ಸ್ವಲ್ಪಸಮಯದಿಂದ 'ವಯಸ್ಸಿಗೆ ಸಂಬಂಧಿಸಿದ ಕಾಯಿಲೆ'ಯಿಂದ ನರಳುತ್ತಿದ್ದು, 'ಚೆನ್ನೈನ ಖಾಸಗಿ ಆಸ್ಪತ್ರೆ'ಯೊಂದರಲ್ಲಿ, ಚಿಕಿತ್ಸೆ ಪಡೆಯುತ್ತಿದ್ದರು. ಸನ್, ೨೦೧೦ ರ, ಡಿಸೆಂಬರ್, ೧೨ ರ 'ರವಿವಾರ'ದಂದು, ಬೆಳಿಗ್ಯೆ, ೮-೪೫ ರ ಹೊತ್ತಿಗೆ, ತಮ್ಮ ಮನೆಯಲ್ಲಿ, ಉಪಹಾರ ಸೇವಿಸಿದ ಬಳಿಕ, ಮಂಚದ ಹತ್ತಿರದಲ್ಲಿ ಕುಸಿದು ಬಿದ್ದು, ತಮ್ಮ ಕೊನೆಯುಸಿರೆಳೆದರು. ಮೃತರು, ಪತ್ನಿ '[[ಶ್ಯಾಮಲಾದೇವಿ]]', ಹಾಗೂ ಮಕ್ಕಳಾದ, '[[ವಸಂತ್]]', '[[ರಾಮಕುಮಾರ್]]', '[[ಕೃಷ್ಣ ಕುಮಾರ್]]'ರನ್ನು ಅಗಲಿ ತೆರಳಿದ್ದಾರೆ. ಬೆಂಗಳೂರಿನ ವಸಂತ್ ಸ್ಟುಡಿಯೋ ಮಾಲೀಕ,ನಿರ್ಮಾಪಕ ವಸಂತ್ ಅವರು ಬಿ.ಎಸ್.ರಂಗಾ ಅವರ ಪುತ್ರ....'ಬಿ.ಎಸ್.ರಂಗಾರವರನ್ನು ಕನ್ನಡದ 'ವರ್ಣ ಚಿತ್ರಗಳ ಶಿಲ್ಪಿ "ಎಂದು ಕರೆಯುತ್ತಾರೆ.ನಮನ
 
==ಆಕರಗಳು==
"https://kn.wikipedia.org/wiki/ಬಿ.ಎಸ್.ರಂಗಾ" ಇಂದ ಪಡೆಯಲ್ಪಟ್ಟಿದೆ