ಆರ್.ನಾಗೇಂದ್ರರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
[[ಕನ್ನಡ]] [[ಚಿತ್ರರಂಗ]]ದ 'ಭೀಷ್ಮಾಚಾರ್ಯ'ರೆಂದೇ ಪ್ರಸಿದ್ಧರಾಗಿದ್ದ ನಾಗೇಂದ್ರರಾಯರು ಹುಟ್ಟಿದ್ದು [[ಚಿತ್ರದುರ್ಗ]] ಜಿಲ್ಲೆಯ ಹೊಳಲ್ಕೆರೆಯಲ್ಲಿ. ತಂದೆ '[[ರಟ್ಟೆಹಳ್ಳಿ ಕೃಷ್ಣರಾವ್]].' ತಾಯಿ, '[[ರುಕ್ಮಿಣೀದೇವಿ]].' ವೃತ್ತಿ [[ರಂಗಭೂಮಿ]]ಯಲ್ಲಿ ಪುರುಷರೇ ಸ್ತ್ರೀಪಾತ್ರಗಳನ್ನು ಮಾಡುತ್ತಿದ್ದ ಕಾಲದಲ್ಲಿ, '[[ಆರೆನ್ನಾರ್]]' ಪ್ರಸಿದ್ಧರಾಗಿದ್ದು ಸೀತೆ, ಚಂದ್ರಮತಿ, ಶಕುಂತಲೆ, ಮುಂತಾದ ಸ್ತ್ರೀಪಾತ್ರಗಳಿಂದ. ಕನ್ನಡ ಚಲನಚಿತ್ರಗಳಲ್ಲಿ ಪೋಷಕನಟ, ನಾಯಕನಟ, ಖಳನಟನಾಗಿ ವೈವಿಧ್ಯಮಯ ಹಾಗೂ, ನೆನಪಿನಲ್ಲುಳಿಯುವ ಪಾತ್ರಗಳನ್ನು ಮಾಡಿದ್ದಾರೆ. 1943 ರಲ್ಲೇ ಡಬ್ಬಿಂಗ್ ತಂತ್ರಜ್ಞಾನಕ್ಕೆ ಓಂಕಾರ ಹಾಕಿದ ಖ್ಯಾತಿ ಆರ್. ನಾಗೇಂದ್ರರಾವ್ ಅವರದು. ‘ಸತ್ಯ ಹರಿಶ್ಚಂದ್ರ’ ಚಿತ್ರವನ್ನು ನಾಗೇಂದ್ರರಾವ್ ಅವರು ತಮಿಳಿಗೆ ಡಬ್ ಮಾಡಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಡಬ್ ಮಾಡಿದ ಯಶಸ್ಸನ್ನುಮೊಟ್ಟಮೊದಲಿಗೆ ಕನ್ನಡಿಗರದಾಗಿಸಿದರು.ಕನ್ನಡದ ಮೊದಲ ವಾಕ್ಚಿತ್ರದ ಸಂಗೀತ ನಿರ್ದೇಶಕ ಎಂಬ ಖ್ಯಾತಿಯೂ ಇವರಿಗೆ ಸಲ್ಲುತ್ತದೆ.
=='ನಮ್ಮ ಮಕ್ಕಳು ಚಿತ್ರ'ಕ್ಕೆ ರಾಷ್ಟ್ರಪ್ರಶಸ್ತಿ'==
[[೧೯೬೯]]ರಲ್ಲಿ ಬಿಡುಗಡೆಯಾದ [[ನಮ್ಮ ಮಕ್ಕಳು]] ಚಿತ್ರ ರಾಷ್ಟ್ರ ಪ್ರಶಸ್ತಿಯಿಂದ ಪುರಸ್ಕಾರವಾಯಿತು. [[೧೯೬೮]]ರಲ್ಲಿ ಬಿಡುಗಡೆಯಾಗಿದ್ದ [[ಹಣ್ಣೆಲೆ ಚಿಗುರಿದಾಗ]] ಚಿತ್ರದ ಉತ್ತಮ ಅಭಿನಯಕ್ಕಾಗಿ, ಆರ್.ನಾಗೇಂದ್ರರಾಯರಿಗೆ,'[[ಶ್ರೇಷ್ಟ ನಾಯಕನಟ ಪ್ರಶಸ್ತಿ]]' ದೊರಕಿತ್ತು."[http://%E0%B2%AA%E0%B3%8D%E0%B2%B0%E0%B3%87%E0%B2%AE%E0%B2%A6_%E0%B2%AA%E0%B3%81%E0%B2%A4%E0%B3%8D%E0%B2%B0%E0%B2%BF ಪ್ರೇಮದ ಪುತ್ರಿ]"ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ರವರಿಂದ ಪಡೆದರು.೧೯೭೬ ರಲ್ಲಿ ಅವರಿಗೆ ಕೇಂದ್ರ ಸರಕಾರ "[http://kn.wikipedia.org/wiki/%E0%B2%AA%E0%B2%A6%E0%B3%8D%E0%B2%AE%E0%B2%B6%E0%B3%8D%E0%B2%B0%E0%B3%80 ಪದ್ಮಶ್ರೀ] "ಪ್ರಶಸ್ತಿ ನೀಡಿ ಗೌರವಿಸಿತು.
==ಆರೆನ್ನಾರ್ ರವರ ಮಕ್ಕಳು==
[[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಹೆಸರಾಂತ ಸಾಹಿತಿ [[ಆರ್.ಎನ್. ಜಯಗೋಪಾಲ್]], ಹೆಸರಾಂತ ನಟರೊಲ್ಲಬ್ಬರಾದ [[ಆರ್.ಎನ್.ಸುದರ್ಶನ್]] ಹಾಗೂ ಛಾಯಾಗ್ರಾಹಕ [[ಆರ್.ಎನ್.ಕೃಷ್ಣಪ್ರಸಾದ್]] ಅವರು ಆರ್.ನಾಗೇಂದ್ರರಾಯರ ಪುತ್ರರು.
"https://kn.wikipedia.org/wiki/ಆರ್.ನಾಗೇಂದ್ರರಾವ್" ಇಂದ ಪಡೆಯಲ್ಪಟ್ಟಿದೆ