ಹುಣಸೂರು ಕೃಷ್ಣಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨ ನೇ ಸಾಲು:
 
ಕನ್ನಡ ಚಿತ್ರರಂಗದ "ಅಜಾತ ಶತ್ರು "ಎಂದೇ ಪ್ರಸಿದ್ದರಾಗಿರುವವರು ಹುಣಸೂರು ಕೃಷ್ಣಮೂರ್ತಿಗಳು.ತಂದೆ ಎಂ.ರಾಜಾರಾವ್ ಲೋಕೋಪಯೋಗಿ ಇಲಾಖೆ ಯಲ್ಲಿ ಸೇವೆ ಸಲ್ಲಿಸುತ್ತಿದರು.ತಾಯಿ ಪದ್ಮಾವತಮ್ಮ.ಮನೆಯಲ್ಲಿ ಪುರಾಣ ಪುಣ್ಯ ಕತೆಗಳ ವಾತಾವರಣ,ಅಜ್ಜ ಮದ್ವಾಚಾರ್ ಶ್ರೇಷ್ಠ ಸಂಸ್ಕೃತ ವಿದ್ವಾಂಸರು.ಬಾಲ್ಯದಲ್ಲಿಯೇ ಶ್ಲೋಕ,ಕಥೆ,ಜಾನಪದ ಸಾಹಿತ್ಯ,ಇವರ ನಿತ್ಯ ಮಂತ್ರವಾಗಿತ್ತು.ಅದೇ ಮುಂದೆ ಸಾಹಿತ್ಯ ಕ್ಷೇತ್ರ ಪ್ರವೇಶಿಸಲು ಪರೋಕ್ಷ ಕಾರಣವೂ ಆಯಿತು.ಹುಣಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಮೈಸೂರಿನ ಶಾರದಾ ವಿಲಾಸ್ ಶಾಲೆ ಸೇರಿದರು.ಒಮ್ಮೆ ಷೇಕ್ಸ್ಪಿಯರ್ ನ "ಒಥೆಲೋ"ನಾಟಕದಲ್ಲಿ "ಇಯಾಗೋ ಪಾತ್ರ ನಿರ್ವಹಿಸುತ್ತಿದ್ದಾಗ ನೋಡಲು ಮುಂಬೈನ ಖ್ಯಾತ ತಂತ್ರಜ್ಞ ಕಪಾಡಿಯ ಆಗಮಿಸಿದ್ದರು,ಅವರು ಹುಣಸೂರರ ಅಭಿನಯ ಮೆಚ್ಹಿ ತಮ್ಮ ಜೊತೆ ಮುಂಬೈಗೆ ಕರೆದೊಯ್ದು " ಸಿಂಹಳ ಸುಂದರಿ"ಎಂಬ ಮೂಕಿ ಚತ್ರದಲ್ಲಿ ಅವಕಾಶ ನೀಡಿದರು.ಆಗ ಹುಣಸೂರರಿಗೆ ಕೇವಲ ಹತ್ತು ವರ್ಷ.
ಮುಂದೆ ಮೈಸೂರಿಗೆ ಹಿಂತಿರುಗಿ ಬಸವಯ್ಯ ಶಾಲೆಯಲ್ಲಿ ಶಿಕ್ಷಣ ಮುಂದುವರೆಸಿದರೂ ಅವರಿಗೆ ಚಿತ್ರರಂಗದ ಆಕರ್ಷಣೆ ತಪ್ಪಿಸಿಕೊಳ್ಳಲಾಗಲಿಲ್ಲ.ಹದಿನಾಲ್ಕನೇ ವರ್ಷಕ್ಕೆ ಮತ್ತೆ ಮುಂಬೈಗೆ ತೆರಳಿ ಅಲ್ಲಿನ "ಬಾಂಬೆ ಟಾಕೀಸ್ "ಸೇರಿ ಚಿತ್ರ ರಂಗದ ಎಲ್ಲಾ ಅನುಭವ ಪಡೆದರು. ಮತ್ತೆ ಕನ್ನಡ ನಾಡಿಗೆ ಹಿಂತಿರುಗಿ "ಚಂದ್ರಕಲಾ ನಾಟಕ ಮಂಡಳಿ"ಸೇರಿದರು.ಪೀರ್ ಸಾಹೇಬರ ಆಕಸ್ಮಿಕ ನಿದನದಿಂದ "ಗುಬ್ಬಿ"ಕಂಪನಿಗೆ ಬಂದ ಹುಣಸೂರರು ಹಲವಾರು ನಾಟಕಗಳನ್ನು ರಚಿಸಿದರು.ಅದರಲ್ಲಿ"ರಾಜಾ ಗೋಪಿಚಂದ್"ಅಪಾರ ಜನಮನ್ನಣೆ ಪಡೆಯಿತು."ಸಂಸಾರ ನೌಕೆ"ಚಿತ್ರದ ಸಹ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಬಂದ ಹುಣಸೂರರು ೧೯೪೫ರಲ್ಲಿ ಗುಬ್ಬಿ ವೀರಣ್ಣನವರ "ಹೇಮರೆಡ್ಡಿ ಮಲ್ಲಮ್ಮ"ಚಿತ್ರಕ್ಕೆ ಸಂಭಾಷಣೆ ಬರೆಯುವ ಮೂಲಕ ಚಿತ್ರ ಸಾಹಿತಿಯಾದರು.ಇಲ್ಲಿಂದ ಮುಂದೆ " ಹುಣಸೂರರ ಯುಗ"ವೇ ಆರಂಭವಾಯಿತು ೫೦ರ ದಶಕದ ಬಹುತೇಕ ಚಿತ್ರಗಳು ಇವರ ಲೇಖನಿಯಿಂದಲೀ ಮೂಡಿಬಂದವು,"ಜಗನ್ಮೋಹಿನಿ"ಯಂತೂ ದಿಗ್ವಿಜಯ ಸಾಧಿಸಿತು,ನಾಗ ಕನ್ನಿಕಾ,ಶ್ರೀ ಶ್ರೀನಿವಾಸ ಕಲ್ಯಾಣ,ಚಂಚಲ ಕುಮಾರಿ,ದಲ್ಲಾಳಿ,ಗಂದರ್ವ ಕನ್ಯೆ,ಕನ್ಯಾದಾನ,ರಾಜ ವಿಕ್ರಮ,ನಳದಮಯಂತಿ,ಮಹಾನಂದ ಮುಂತಾದ ಚಿತಗಳು ಇವರ ಸಾಹಿತ್ಯದಿಂದ ಸಂಪನ್ನಗೊಂಡವು.

೧೯೫೮ರಲ್ಲಿ "ನಂದಿ ಪಿಕ್ಚರ್ಸ್"ಲಾಂಛನದಲ್ಲಿ ಕೆ,ಎಂನಾಗಣ್ಣನವರು ನಿರ್ಮಿಸಿದ "ಶ್ರೀ ಕೃಷ್ಣ ಗಾರುಡಿ"ಚಿತ್ರದ ಮೂಲಕ ಹುಣಸೂರರು ನಿರ್ದೇಶಕರಾದರು.ಬೆಳ್ಳಾವೆ ನರಹರಿ ಶಾಸ್ತ್ರಿಗಳ ನಾಟಕವನ್ನು ಅದಾರಿಸಿದ ಚಿತ್ರ ಕೇವಲ ಪೌರಾಣಿಕ ಕತೆಯಷ್ಟೇ ಆಗದೆ ಸ್ವಾತಂತ್ರೋತ್ತರ ಭಾರತದ ಆಶಯದ ಅಭಿವ್ಯಕ್ತಿಯನ್ನಾಗಿಯೇ ಮಾಡುವಲ್ಲಿ ಹುಣಸೂರರು ಹೊಸ ಹಾದಿ ಹಿಡಿದರು."ಆಶಾ ಸುಂದರಿ"ಹುಣಸೂರರು ನಿರ್ದೇಶಿಸಿದ ಎರಡನೆಯ ಚಿತ್ರ.ಸಲಿಂಗ ಕಾಮದಂತಹ ಸೂಕ್ಹ್ಮವಸ್ತುವನ್ನು ಭಾರತೀಯ ಚಿತ್ರರಂಗಕ್ಕೆ ಆ ಕಾಲದಲ್ಲಿಯೇ ತಂದವರು ಹುಣಸೂರರು.ಹುಣಸೂರರ ಪ್ರತಿಭೆಯ ವಿರಾಟ್ ಸ್ವರೂಪವನ್ನು ಅನಾವರಣ ಮಾಡಿದ ಮೊದಲ ಚಿತ್ರ "ವೀರ ಸಂಕಲ್ಪ"ಅದುವರೆಗಿನ ಕನ್ನಡ ಚಿತ್ರರಂಗದ ಸ್ವರೂಪಕ್ಕಿಂತ ತೀರಾ ವಿಭಿನ್ನವಾಗಿ ಮೂಡಿಬಂದ ಈ ಚಿತ್ರ ಅವರೇ ಕರೆದುಕೊಂಡಂತೆ "ವಿಶ್ವಾಮಿತ್ರ ಸೃಷ್ಟಿ"ಯಾಗಿತ್ತು.ವಿಜಯನಗರದ ಪತನ ಸಂದರ್ಭದಲ್ಲಿ ಬಂದ "ಎಚ್ಹಮನಾಯಕ " ಎಂಬ ಸ್ವಾಮಿ ಭಕ್ತನ ಕತೆ ಆಧರಿಸಿದ ಚಿತ್ರದ ನಾಯಕನ ಪಾತ್ರವನ್ನು ಸ್ವತಃ ಹುಣಸೂರರೆ ನಿರ್ವಹಿಸಿದ್ದರು.ಉಜ್ವಲ ಸಂಭಾಷಣೆ,ಸಶಕ್ತ ಗೀತೆಗಳಿಂದ ಶ್ರೀಮಂತವಾದ ಹಲವಾರು ಪ್ರತಿಭಾವಂತ ಕಲಾವಿದರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿತು.
 
೧೯೬೫ರಲ್ಲಿ ಹುಣಸೂರರು ನಿರ್ದೇಶಿಸಿದ ಎರಡು ಚಿತ್ರಗಳು ರಾಷ್ಟ್ರಪ್ರಶಸ್ತಿಗೆ ಪಾತ್ರವಾದವು.ಅವೆಂದರೆ "ಸತ್ಯ ಹರಿಶ್ಚಂದ್ರ" ಮತ್ತು "ಮದುವೆ ಮಾಡಿನೋಡು"
ಭಕ್ತ ಕುಂಬಾರ ರಾಜ್ಕುಮಾರ್ ಅಭಿನಯ ಹುಣಸೂರರ ಸಾಹಿತ್ಯ ಮತ್ತು ನಿರ್ದೇಶನದಿಂದ,ಜಿ,ಕೆ,ವೆಂಕಟೇಶ್ ಸಂಗೀತದಿಂದ ಕನ್ನಡದ ಅಮರ ಚಿತ್ರವನ್ನಾಗಿಸಿತು.೧೯೫೮ರಿಂದ ೧೯೮೭ರವರೆಗಿನ ಮೂರು ದಶಕದ ಅವಧಿಯಲ್ಲಿ ಹುಣಸೂರು ಕೃಷ್ಣಮೂರ್ತಿಗಳು ೨೧ಕನ್ನದ ಚಿತ್ರಗಳನ್ನು ಮತ್ತೆ ಎರಡು ತೆಲುಗು ಚಿತ್ರಗಳನ್ನು ನಿರ್ದೇಶಿಸಿದರು.ಭಕ್ತಿ,ಪೌರಾಣಿಕ,ಚಾರಿತ್ರಿಕ,ಜಾನಪದ,ಸಾಮಾಜಿಕ ಹೀಗೆ ಎಲ್ಲ ಮಾದರಿಯಲ್ಲಿಯೂ ಚಿತ್ರಗಳನ್ನು ನೀಡಿದ್ದು ಅವರ ವಿಶೇಷತೆ.
 
ಮಂಗಳ ಗೌರಿ (೧೯೫೩ ) ಚಿತ್ರವನ್ನು ಇವರೇ ನಿರ್ದೇಶಿಸಿದ್ದರೂ,ನಿರ್ದೇಶಕರ ಹೆಸರು ಮಾತ್ರ ಟಿ.ಅರ್.ಸುಂದರಂ ಅವರಿಗೆ ಸಿಕ್ಕಿತು.
 
ಕೆ.ಎಂ,ಹುಣಸೂರು ,ಗೌತಮ,ಹೀಗೆ ವಿಭಿನ್ನ ಹೆಸರುಗಳಲ್ಲಿಯೂ ಇವರು ಗೀತರಚನೆ ಮಾಡಿರುವ ಇವರು ಬೊಂಬೆಯಾಟವಯ್ಯ.......ಮಾನವ ಮೂಳೆ ಮಾಂಸದ ತಡಿಕೆ.......ಶಿವ ಶಿವ ಎಂದರೆ ಭಯವಿಲ್ಲ...ಮುಂತಾದ ಭಕ್ತಿ ಪ್ರದಾನ,ಗಿಲ್ ಗಿಲ್ ಗಿಲಕ್ಕ.....ಸಿಟ್ಯಾಕೋ ಸಿಡುಕ್ಯಾಕೋ ನನ್ನ ಜಾಣ.......ಮಾದರಿಯ ಜಾನಪದ ಛಾಯೆಯ ಗೀತೆ, ಬಾಳ ಬಂಗಾರ ನೀನು......ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ ಇಂಪನು ಇಟ್ಟವರ್ಯಾರೋ.....ಮುಂತಾದ ಭಾವಗೀತಾತ್ಮಕ ರಚನೆಗಳನ್ನು ರಚಿದ್ದಾರೆ.
 
ಕುಲದಲ್ಲಿ ಕೀಳ್ಯಾವುದೋ........ನಗು ನಗುತಾ ನಲೀ ನಲೀ ....ಮುಂತಾದ ಸಾರ್ವತ್ರಿಕ ಮೌಲ್ಯ ಸಾರುವ ಗೀತೆಗಳನ್ನೂ ರಚಿಸಿದ್ದಾರೆ.ಸರಳ ಆಡು ಮಾತಿನ ಸಂಭಾಷಣೆಗಳನ್ನು ಬೆಳ್ಳಿ ತೆರೆಗೆ ತಂದ ಹೆಗ್ಗಳಿಕೆಯೂ ಇವರಿಗೆ ಸಲ್ಲುತ್ತದೆ.ಎಲ್ಲ ಕ್ಷೇತ್ರಗಳಲ್ಲೂ ಕನ್ನಡಕ್ಕೆ ಅವರು ಅಡಿಪಾಯ ಹಾಕಿ ಕೊಟ್ಟರು.
ಕರ್ನಾಟಕ ಸರಕಾರದ ಮೊದಲ "ಪುಟ್ಟಣ್ಣ ಕಣಗಾಲ್"ಪ್ರಶಸ್ತಿ ಪಡೆದ ಹುಣಸೂರು ಕೃಷ್ಣಮೂರ್ತಿಗಳು ೧೯೮೯ರ ಫೆಬ್ರವರಿ ೧೩ ರಂದು ತಮ್ಮ ಇಹಲೋಕದ ಯಾತ್ರೆ ಮುಗಿಸಿದರೂ ತಮ್ಮ ಸಾದನೆಗಳಿಂದ ಇಂದಿಗೂ ಮುಂದಿಗೂ ಕನ್ನಡ ಜನ ಮಾನಸದಲ್ಲಿ ಅಜರಾಮರಾಗಿ ಉಳಿಯುತ್ತಾರೆ."ನಮನ".
==ಹುಣಸೂರು ಕೃಷ್ಣಮೂರ್ತಿ ನಿದೇ೯ಶನ ನೀಡಿರುವ ಚಿತ್ರಗಳು==
# ಶಿವಕೊಟ್ಟ ಸೌಭಾಗ್ಯ-೧೯೮೫-ನಿದೇ೯ಶಕ