ಗೋಲ ಗುಮ್ಮಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (robot Adding: sa:गोल् गुंबाज्
ಚು r2.7.2) (robot Modifying: sa:गोल् गुम्बज़; cosmetic changes
೧ ನೇ ಸಾಲು:
[[ಚಿತ್ರ:GolGumbaz2.jpg |right|thumb|250px|ಗೋಲ ಗುಮ್ಮಟ]]
'''ಗೋಲ ಗುಮ್ಮಟ''' [[ಬಿಜಾಪುರ]]ದಲ್ಲಿ ಸ್ಥಿತವಾಗಿರುವ [[ಮೊಹಮ್ಮದ್ ಆದಿಲ್ ಶಾ]] (೧೬೨೭ - ೧೬೫೭) ಅವರ ಸಮಾಧಿ.
ಬಿಜಾಪುರವಲ್ಲದೆ ಬಿದರ್, ಗೊಲ್ಕೊಂಡ, ಗುಲ್ಬರ್ಗಗಳನ್ನೊಳಗೊಳ್ಳುವ ‘ಬಹುಮನೀ' ದಾಯಾದಿಗಳಿಗೆ ಆವಾಜ಼ಿನ ಬಗ್ಗೆ ಒಂದು ಕಿವಿಯಷ್ಟು ಹೆಚ್ಚೇ ಮರ್ಜಿಯಿದ್ದಿರಬೇಕು. ಹೈದರಾಬಾದಿನ ಗೋಲ್ಕೊಂಡ ಕೋಟೆಯ ದ್ವಾರದಲ್ಲಿ ಚಪ್ಪಾಳೆಯಿಟ್ಟರೆ ಸಪ್ಪಳ ಮತ್ತೆ ಮತ್ತೆ ಆಚೀಚಿನ ಗೋಡೆಗಳನ್ನು ತಟ್ಟಿಕೊಂಡು ಗುಡ್ಡದ ಮೇಲಿನವರೆಗೆ ಸಾಗುವುದು ಕೇಳಿಸುತ್ತದೆ, ನೋಡಿ! ಕೋಟೆಯ ಹೆಬ್ಬಾಗಿಲಿನ ಛಾವಣಿಯಲ್ಲಿ ನಿಲ್ಲಿಸಿಕೊಂಡ ಗೈಡು ನಿಮಗೆ ಈ ಕುರಿತು ರೋಚಕವಾಗಿ ಕತೆ ಹೇಳುತ್ತಾನಲ್ಲ. ಕೂಡಲೆ ನಿಮ್ಮ ಮನಸ್ಸು ಊಹೆಗೆ ತೊಡಗುತ್ತದೆ. ಮೇಲೆ ‘ದಿವಾನಿಖಾಸ್'ನಲ್ಲಿರುವ ಸುಲ್ತಾನನಿಗೆ ದರವಾಜ಼ೆಗೆ ಬಂದವರ ಬಗ್ಗೆ ಬರೇ ಕೇಳಿಕೆಯಿಂದಲೇ ಸುಳಿವು ಹತ್ತುತ್ತದೆ. ಗೋಡೆಯೇ ಗೋಡೆಯಾದ ಖಿಲೆಗಳನ್ನು, ಗೋಡೆ ತಿರುವುವಲ್ಲೆಲ್ಲ ಬುರುಜುಗಳನ್ನು ಕಟ್ಟಿದ ಆ ಮಂದಿಗೆ ಜಾಗರೂಕತೆ ಅಂತ ಬೇರೆ ಕಲಿಸಲಿಕ್ಕುಂಟೆ?! ಇಲ್ಲಿ ಗೋಡೆ-ದೀವಾರಿಗೂ, ಬಂಡೆ-ಚಟ್ಟಾನಿಗೂ ಸದಾ ಹೋಶಿಯಾರಿದ್ದು ಎಚ್ಚರಿಸುವುದೇ ಕೆಲಸ. ಇದಕ್ಕೆ ಆಗಿಬರುವುದೇ ಸದ್ದು ಮತ್ತದರ ಮರುಕಳಿಕೆ.
 
[[ವರ್ಗ:ಬಿಜಾಪುರ ಜಿಲ್ಲೆ]]
[[ವರ್ಗ:ವಾಸ್ತುಶಾಸ್ತ್ರ]]
 
ನಾವು ಈ ತನಕ ಮೂರ್ತಯಿಸಿರುವ ಜಗತ್ತಿಗೆ ಶಬ್ದಸಂವೇದೀ ಕಟ್ಟುಗೆಲಸಗಳು ಹೊಸತೇನಲ್ಲ. ಪುರಾತನ ಗ್ರೀಸಿನಲ್ಲಿಯೇ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯೋಗಗಳೂ, ಕಟ್ಟಡಗಳೂ ಜರುಗಿರುವುದರ ಪುರಾವೆಗಳಿವೆ. ಇನ್ನು ಈ ಕಾಲದ ಫಿಸಿಕ್ಸೋ- ‘ಅಕೌಸ್ಟಿಕ್ಸ್' ಎನ್ನುವ ಹೆಸರಿನಲ್ಲಿ ಈ ಅರಿವಿಗೊಂದು ಸ್ಪೆಷಲಿಟಿಯನ್ನೇ ರಚಿಸಿಬಿಟ್ಟಿದೆ. ಸದ್ದನ್ನು ‘ಡೆಸಿಬಲು'ಗಳಲ್ಲಿ ಅಳೆದು- ಕೇಳಿಕೆಯ ಮಟ್ಟವನ್ನು ಹೆಚ್ಚಿಸುವುದು, ತಗ್ಗಿಸುವುದು, ಬರೇ ನಿಶಬ್ದವಾಗಬೇಕೆಂದರೆ ‘ನಿಜವಾಗಿ' ಸದ್ದಡಗಿಸುವುದು, ಧ್ವನಿಯನ್ನು ಮುದ್ರಿಸಿಕೊಂಡು ಬೇಕೆಂದಾಗ ಕೇಳಿಸುವುದು... ಹೀಗೆ ಹತ್ತಾರು ಸಾಧ್ಯತೆಗಳು ನಮ್ಮೆದುರಿಗಿವೆ. ಇವತ್ತಿನ ಸುಸಜ್ಜಿತ ನಾಟಕರಂಗಗಳು ತಮ್ಮ ಮೇಲ್ಮೈಯಲ್ಲಿ ಶಬ್ದವನ್ನು ಸೂಕ್ಷ್ಮವಾಗಿ ಗ್ರಹಿಸುವ, ಇಲ್ಲಾ ಪ್ರತಿಫಲಿಸುವ ಪದರಗಳನ್ನು ಹೊದ್ದಿರುವುದರಿಂದ ಕುಳಿತ ಶ್ರೋರ್ತೃಗಳಿಗೆ ಆಗುವ ಅನುಭವವೇ ಬೇರೆ. ಮೈಕು, ಸ್ಪೀಕರುಗಳಿಂದ ಸದ್ದು ಹೆಚ್ಚಿಸಿದ ಕೇಳಿಕೆ ಎಷ್ಟಿದ್ದರೂ ಕಳಪೆಯೇ. ಹಾಗೆ ಕೇಳಿಸಿತೆನ್ನುವುದು ಸಮಾಧಾನಕ್ಕೆ ಮಾತ್ರ.
ಕ್ರಿಸ್ತನಿಗೂ ನಾನೂರು ವರ್ಷಗಳಷ್ಟು ಮೊದಲಿನ ಗ್ರೀಸಿನಲ್ಲಿ ಸುಮಾರು ಹದಿನೈದು ಸಾವಿರ ಮಂದಿಯನ್ನು ಕಲೆಹಾಕಿ, ಎಲ್ಲರಿಗೂ ನಿಚ್ಚಳವಾಗಿ ಹಾಡು ಕೇಳಿಸುವ ರಂಗಸಾಲೆಗಳ ‘ಕಟ್ಟಡ' ಪ್ರತೀತಿಯಿದ್ದಿತು. ಮತ್ತೊಮ್ಮೆ ಓದಿ. ನೂರಿನ್ನೂರಲ್ಲ, ಬರೋಬರಿ- ಹದಿನೈದು ಸಾವಿರ ಮಂದಿ! ಪಂದ್ರಹ್ ಹಜ಼ಾರ್ ಲೋಗ್!! ಹುಡುಗಾಟವೇನಲ್ಲ. ಹಾಗಂತ ಇದು ಅಸಂಭವವೇನಲ್ಲ. ಯೋಚಿಸಿ. ನಮ್ಮೆದುರಿಗಿರುವ ಕಹಳೆಯಂತಹ ಶಬ್ದವರ್ಧಕಗಳು ಈಚೀಚಿನ ರೂಢಿ. ನಾನಿಲ್ಲಿ ಹೇಳುತ್ತಿರುವುದು ಇಪ್ಪತ್ತೈದುನೂರು ವರ್ಷಗಳ ಹಿಂದಿನ ಖಬರು!! ರಂಗದ ಮೇಲಿನ ಆಡುಮಾತಿನ ಕೇಳಿಕೆಯ ಜೋರನ್ನು ಇನಿತೆತ್ತರಿಸದೆಯೇ- ಬರೇ ಕೇಳುಗರ ಸದ್ದನ್ನಷ್ಟೇ ತಗ್ಗಿಸಿ, ಇಡೀ ಸಭಿಕರನ್ನು ಹೆಚ್ಚು ಹೆಚ್ಚು ಆಲಿಕೆಗೆ ಅನುವುಗೊಳಿಸುವುದು ಈ ಗ್ರೀಕ್ ಆಂಫಿಥಿಏಟರುಗಳ ವಿನ್ಯಾಸದಲ್ಲಿನ ದಿಟದ ಮರ್ಮ ಅಂತ ಇವತ್ತು ಅನ್ನಲಾಗುತ್ತದೆ. ಐವತ್ತರಿಂದ ಅರವತ್ತು ಸಾಲುಮೆಟ್ಟಿಲುಗಳಲ್ಲಿ ನೋಡುಗರನ್ನು ನಡುರಂಗದ ಸುತ್ತ ಕುಳ್ಳಿರಿಸಿ, ಅಂತಿಮಪಂಕ್ತಿಯವನಿಗೂ ರಂಗ ಕಾಣುವ ಹಾಗೆ, ಕೇಳಿಸುವ ಹಾಗೆ ವಿನ್ಯಾಸ ಮಾಡುವುದೆಂದರೆ ತಮಾಷೆಯೆ? ಒಂದೊಂದೂ ಸಾಲಿನಲ್ಲಿರುವ ಕಡಿಮೆಯೆಂದರೂ ಇನ್ನೂರು ಮಂದಿಗೆ ಪರ‍್ಫಾರ್ಮೆನ್ಸು ಕಾಣಲೂ ಬೇಕು, ಕೇಳಲೂ ಬೇಕು!! ಪ್ರೇಕ್ಷಕರಲ್ಲಿ ಪರಸ್ಪರ ಪಿಸುಗುಟ್ಟಿ ಹುಟ್ಟುವ ಸದ್ದನ್ನು ಆದಷ್ಟು ಮಟ್ಟಿಗೆ ಅಲ್ಲೇ ಉಳಿಸಿ, ಆಚೀಚೆ ಹಬ್ಬದಂತೆ ಮಟ್ಟ ಹಾಕುವುದು ಯಾವುದೇ ರಂಗವಿನ್ಯಾಸದಲ್ಲಿ ಪ್ರಧಾನ ಅಂಶ. ಅವತ್ತಿನ ಗ್ರೀಕ್ ರಂಗಸಾಲೆಗಳ ಮೆಟ್ಟಿಲುಗಳನ್ನು ಸುಣ್ಣದ ಕಲ್ಲು ಹೊದೆಸಿ ಮಾಡುತ್ತಿದ್ದರಂತೆ. ಲೈಮುಗಲ್ಲಿಗೆ ಇನ್ನಿಲ್ಲದ ಶಬ್ದಗ್ರಾಹೀಗುಣವಿದೆ. ಅಂದರೆ ರಂಗಜನ್ಯ ಉನ್ನತಸ್ಪಂದನಗಳನ್ನು ಎಲ್ಲೆಲ್ಲೂ ಹೊಮ್ಮಿ, ಕೇಳುಗರ ಪಿಸುಗೊಣಗುಗಳ ನಿಮ್ನಸ್ಪಂದನಗಳನ್ನು ಹೀರಿಕೊಳ್ಳುವ ಚಾರಿತ್ರ್ಯ! ಮಾಫಿರಲಿ, ಇದನ್ನಿನ್ನು ಹೆಚ್ಚು ಸಲೀಸಾಗಿ ಹೇಳಲಾರೆ.
 
[[ವರ್ಗ:ಬಿಜಾಪುರ ಜಿಲ್ಲೆ]]
[[ವರ್ಗ:ವಾಸ್ತುಶಾಸ್ತ್ರ]]
 
[[cy:Gol Gumbaz]]
Line ೧೮ ⟶ ೧೭:
[[ms:Gol Gumbaz]]
[[nl:Gol Gumbaz]]
[[sa:गोल् गुंबाज्गुम्बज़]]
[[ur:گول گنبد]]
"https://kn.wikipedia.org/wiki/ಗೋಲ_ಗುಮ್ಮಟ" ಇಂದ ಪಡೆಯಲ್ಪಟ್ಟಿದೆ