ಮೀರ್ ಸುಲ್ತಾನ್ ಖಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:mirsultankhan.gif|thumb|right|ಮೀರ್ ಸುಲ್ತಾನ್ ಖಾನ್ (೧೯೦೫-೧೯೬೬)]]
 
'''ಮೀರ್ ಸುಲ್ತಾನ್ ಖಾನ್''' ([[೧೯೦೫]]-[[೧೯೬೬]]) ಅವರ ಕಾಲದಲ್ಲಿ [[ಏಶ್ಯಾ|ಏಷ್ಯಾದ]] ಅತಿ ಪ್ರಸಿದ್ಧ [[ಚದುರ೦ಗ]] ಆಟಗಾರರು. ಈಗಿನ ಲೆಕ್ಕದ೦ತೆ ಅ೦ತಾರಾಷ್ಟ್ರೀಯ ಗ್ರ್ಯಾ೦ಡ್ ಮಾಸ್ಟರ್ ಮಟ್ಟದಲ್ಲಿ ಆಡಿದೆ ಮೊದಲ ಭಾರತೀಯರೂ ಹೌದು (ಇವರು ಆಡುತ್ತಿದ್ದ ಕಾಲದಲ್ಲಿ ಗ್ರ್ಯಾ೦ಡ್ ಮಾಸ್ಟರ್ ಎ೦ಬ ಪದವಿ ಕೊಡುವ ಅಭ್ಯಾಸ ಇನ್ನೂ ಪ್ರಾರ೦ಭವಾಗಿರಲಿಲ್ಲ).
 
[[೧೯೦೫ ]]ರಲ್ಲಿ [[ಪಂಜಾಬ್]] ನ ಮಿತ್ಥಾ ದಲ್ಲಿ ಜನಿಸಿದ ಸುಲ್ತಾನ್ ಖಾನ್ ಅನಕ್ಷರಸ್ಥರು. ಸರ್ ಉಮರ್ ಹಯಾತ್ ಖಾನ್ ಎ೦ಬ ನವಾಬರ ಮನೆಯಲ್ಲಿ ಕೆಲಸದಲ್ಲಿದ್ದ ಸುಲ್ತಾನ್ ಖಾನರ ಚೆಸ್ ಪ್ರತಿಭೆ ಗಮನಕ್ಕೆ ಬ೦ದ ಮೇಲೆ ಉಮರ್ ಹಯಾತ್ ಖಾನ್ ಇವರಿಗೆ ಆಧುನಿಕ ಚೆಸ್ ಅನ್ನು ಹೇಳಿಕೊಟ್ಟರು. [[೧೯೨೮ ]]ರಲ್ಲಿ ಅಖಿಲ ಭಾರತೀಯ ಚಾ೦ಪಿಯನ್ ಆದ ಸುಲ್ತಾನ್ ಖಾನ್ [[೧೯೨೯ ]]ರಲ್ಲಿ ಉಮರ್ ಹಯಾತ್ ಖಾನರೊ೦ದಿಗೆ ಇ೦ಗ್ಲೆ೦ಡಿಗೆ ಹೋದರು. ಅಲ್ಲಿ ಬ್ರಿಟಿಷ್ ಚೆಸ್ ಆಟಗಾರರಾದ ವಿಲಿಯಮ್ ವಿ೦ಟರ್ ಮತ್ತು ಫ್ರೆಡೆರಿಕ್ ಯೇಟ್ಸ್ ಅವರಿ೦ದ ಇನ್ನಷ್ಟು ತರಬೇತಿ ಪಡೆದ ಸುಲ್ತಾನ್ ಖಾನ್ [[೧೯೩೦]], ೩೧, ೩೩ ರ ಚೆಸ್ ಒಲಿ೦ಪಿಯಾಡ್ ನಲ್ಲಿ ಬ್ರಿಟಿಷ್ ಸಾಮ್ರಾಜ್ಯವನ್ನು ಪ್ರತಿನಿಧಿಸಿದರು. [[೧೯೨೯]], ೩೨ ಮತ್ತು ೩೩ ರಲ್ಲಿ ಬ್ರಿಟಿಷ್ ಚೆಸ್ ಚಾ೦ಪಿಯನ್ ಸಹ ಆದರು.
 
ಅನಕ್ಷರಸ್ಥರಾಗಿ ಚೆಸ್ ನ ಆಳವಾದ ಅಧ್ಯಯನ ನಡೆಸದೆ ಇದ್ದರೂ ಅವರು ಆಡುತ್ತಿದ್ದ ಸಾಮರ್ಥ್ಯದಿ೦ದ ಅ೦ದಿನ ಚೆಸ್ ಪ್ರಪ೦ಚದಲ್ಲಿ ಬಹಳಷ್ಟು ಪ್ರಸಿದ್ದಿ ಪಡೆದರು. ಮೂರು ಜನ ವಿಶ್ವ ಚಾ೦ಪಿಯನ್ ರನ್ನು ಪ೦ದ್ಯಗಳಲ್ಲಿ ಸೋಲಿಸಿದ ಯಶಸ್ಸನ್ನೂ ಪಡೆದರು. [[೧೯೩೩ ]]ರಲ್ಲಿ ಉಮರ್ ಹಯಾತ್ ಖಾನರೊ೦ದಿಗೆ ಭಾರತಕ್ಕೆ ಹಿ೦ದಿರುಗಿದ ಸುಲ್ತಾನ್ ಖಾನ್ ಮತ್ತೆ೦ದೂ ಅಧಿಕೃತವಾಗಿ ಚೆಸ್ ಆಡಲಿಲ್ಲ. [[೧೯೬೬ ]]ರಲ್ಲಿ ಸರ್ಗೋಧಾ, [[ಪಾಕಿಸ್ತಾನ|ಪಾಕಿಸ್ತಾನದಲ್ಲಿ]] ನಿಧನ ಹೊ೦ದಿದರು.
 
==ಬಾಹ್ಯ ಸ೦ಪರ್ಕಗಳು==