ಚಂದನ (ಕಿರುತೆರೆ ವಾಹಿನಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
ದೂರದರ್ಶನ - ಚಂದನ (ಡಿ.ಡಿ.೯) - ಬೆಂಗಳೂರು ದೂರದರ್ಶನ ಕೇಂದ್ರದ ೨೪/೭ ಕಿರುತೆರೆಯ ಕನ್ನಡ ವಾಹಿನಿ. ಭಾರತದಲ್ಲಿ 'ದೂರದರ್ಶನ' ಬಿತ್ತರಿಸುವ ಕಾರ್ಯಕ್ರಮಗಳು ಯಾವುದೇ ಭಾಷೆಯದಾದರೂ ಅವು ಮುಟ್ಟುವ ಜನಸಮುದಾಯ ಅಪಾರ. ಇದನ್ನು ಗಮನದಲ್ಲಿಟ್ಟುಕೊಂಡು ಸರಕಾರ ಸಮರ್ಥ ತಾಂತ್ರಿಕ ವರ್ಗ, ಹಾಗೂ ಅದಕ್ಕೆ ಸರಿಹೊಂದುವ ಪರಿಣಿತರನ್ನು ತಯಾರುಮಾಡಿ ಖಾಸಗೀ ವಲಯಗಳ ಜೊತೆಗೆ ಭುಜಕ್ಕೆ ಭುಜ ಕೊಟ್ಟು ಮುನ್ನಡೆಯಬೇಕಾಗಿದೆ. ಅದಕ್ಕೆ ಉಪಾಯವೆಂದರೆ, ಕಾರ್ಯಕ್ರಮಗಳ ತಾಂತ್ರಿಕತೆ, ಹಾಗೂ ಬೇರೆ ಬೇರೆ ಮಜಲುಗಳಲ್ಲಿ ಸಾಕಷ್ಟು ಅನುಸಂಧಾನ ಮಾಡಿ ಕಾರ್ಯಕ್ರಮಗಳನ್ನು ಬಿತ್ತರಿಸಬೇಕು.
 
==ಮುಂಬೈ ನಗರದ ವೀಕ್ಷಕರ ತಕರಾರು==
ಚಂದನದ ಕಾರ್ಯಕ್ರಮಗಳು ಇತ್ತೀಚೆಗೆ ಒಂದು ಹೊಸ ಆಯಾಮವನ್ನು ಸೃಷ್ಟಿಸಿವೆ ನಿಜ. ಆದರೆ ಕೆಲವು ತಾಂತ್ರಿಕ ಕೊರತೆಗಳು ಎದ್ದು ಕಾಣುತ್ತವೆ. ಹಲವಾರು ವೇಳೆ ಒಳ್ಳೆಯ ಕಾರ್ಯಕ್ರಮದ ಮಧ್ಯೆ ಪ್ರಸಾರ ಫಕ್ಕನೆ ನಿಲ್ಲುತ್ತದೆ. 'ಚಿತ್ರ' ತೆರೆಯಮೇಲೆ ಮೂಡಿದರೆ 'ಶಬ್ದ ಸೊನ್ನೆ'. ಒಂದು ವೇಳೆ 'ಶಬ್ದ' ಬಂದಾಗ 'ಚಿತ್ರ ನಾ ಪತ್ತೆ'ಯಾಗಿರುತ್ತೆ. [[ಮರಾಠಿ]], [[ತೆಲುಗು]], [[ತಮಿಳು]]ವಾಹಿನಿಗಳ ಕಾರ್ಯಕ್ರಮಗಳನ್ನು ವೀಕ್ಷಿಸಿದಾಗ ಈ ಕೊರತೆ ಮತ್ತಷ್ಟು ಬೃಹದಾಕಾರವಾಗಿ ಗೋಚರಿಸುತ್ತದೆ. ಇದು ಕನ್ನಡ ವಾಹಿನಿ ಎಂದು ಮೇರುಧ್ವನಿಯಲ್ಲಿ ಹೇಳಿದಾಕ್ಷಣ ಅದು ಮೇರುಮಟ್ಟದ್ದಾಗಿರುವ ಸಾಧ್ಯತೆಗಳು ತೀರ ಕಡಿಮೆ. ಎಲ್ಲಕ್ಕಿಂತ ಸೋಜಿಗವೆಂದರೆ, ದಿಢೀರನೆ ಯಾವುದೋ ಕಾರ್ಯಕ್ರಮ ತೆರೆಯಮೇಲೆ ಗೋಚರಿಸುತ್ತದೆ. ಒಂದುವೇಳೆ ಯಾವುದಾದರೂ ಕಾರ್ಯಕ್ರಮದಲ್ಲಿ ಬದಲಾವಣೆಯಾದಾಗ ಅವನ್ನು ತೆರೆಯ ಕೆಳಭಾಗದಲ್ಲಿ ಪ್ರಸಾರಮಾಡುವ ಸೌಜನ್ಯವನ್ನು ಅಧಿಕಾರಿಗಳು ತೋರಿಸಲು ನಾಚಿಕೆಪಟ್ಟುಕೊಳ್ಳುತ್ತಾರೆ. 'ಇನ್ನೂ ಬಾಲ್ಯಾವಸ್ತೆಯಲ್ಲಿರುವ ಈ 'ಕಿರುವಾಹಿನಿ' ಮೇಲಕ್ಕೆದ್ದು, ನಿಂತು ಓಡುವ ದಿನಗಳನ್ನು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ'.
 
{{ಭಾರತದ ಸರ್ಕಾರಿ ಸ್ವಾಮ್ಯದ ಕಿರುತೆರೆ ವಾಹಿನಿಗಳ ಜಾಲ}}