ಬೆಟ್ಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
==ಪರಿಚಯ==
 
[[ಚಿತ್ರ:ತಡಿಯಾಂಡಮೋಲ್ ಬೆಟ್ಟ.jpg|thumb|ತಡಿಯಂಡಮೋಳ್ ಬೆಟ್ಟ, ಕೊಡಗು ಜಿಲ್ಲೆ]]
[[ಚಿತ್ರ:DSC03552.jpg|200px|thumb|right|ಕೊಡಗಿನ ಬ್ರಹ್ಮಗಿರಿ ಸಾಲುಗಳು ]]
 
ಭೂಮಿಯ ಮೇಲ್ಮೈಯಲ್ಲಿ ಉಬ್ಬಿದ್ದು ಒಂದು ನಿರ್ದಿಷ್ಟ ಶಿಖರವಿರುವ ಪ್ರದೇಶಕ್ಕೆ '''ಬೆಟ್ಟ'''ವೆಂದು ಹೆಸರು. ಪರ್ವತ ಮತ್ತು ಬೆಟ್ಟಕ್ಕಿರುವ ವ್ಯತ್ಯಾಸ ನಿರ್ದಿಷ್ಟವಾಗಿಲ್ಲ; ಬರೇ ವಿಷಯನಿಷ್ಠವಾಗಿ ಹೇಳಲಾಗುತ್ತದೆ. ಬೆಟ್ಟವು ಪರ್ವತದಷ್ಟು ವಿಶಾಲವೂ ಎತ್ತರವೂ ಇರುವದಿಲ್ಲ. ಸುತ್ತಲಿನ ಪ್ರದೇಶಕ್ಕಿಂತ ೩೦೦ ಮೀಟರ್ (ಸುಮಾರು ೧೦೦೦ ಅಡಿ)ಗಳಿಗಿಂತ ಹೆಚ್ಚು ಎತ್ತರವಿಲ್ಲದಿರುವ ಭೂಭಾಗವನ್ನು ಬೆಟ್ಟವೆಂದು ಗುರುತಿಸಲಾಗುತ್ತದೆ(The World Book Encyclopedia) . ಬ್ರಿಟನ್ನಿನಲ್ಲಿ ಭೂವಿಜ್ಞಾನಿಗಳು ಸಮುದ್ರ ಮಟ್ಟಕ್ಕಿಂತ ೩೦೦ ಮೀಟರ್ (೧೦೦೦ ಅಡಿ)ಗಳಿಗಿಂತ ಹೆಚ್ಚು ಎತ್ತರವಿದ್ದು ೬೦೦ ಮೀಟರ್ (ಸು ೨೦೦೦ ಅಡಿ)ಗಳಿಗಿಂತ ಕಡಿಮೆ ಎತ್ತರವಿರುವ ಭೂಪ್ರದೇಶವನ್ನು ಬೆಟ್ಟವೆಂದು ಪರಿಗಣಿಸುತ್ತಾರೆ(English [[Ref:The World Book Encyclopedia]]Wikipedia). ಆದರೆ ದಕ್ಷಿಣ ಭಾರತದ ಘಟ್ಟಸಾಲುಗಳು ಮತ್ತು ಪೀಠಭೂಮಿ ಪ್ರದೇಶಗಳು ಸಮುದ್ರ ಮಟ್ಟದಿಂದ ೯೦೦ರಿಂದ ೧೫೦೦ ಮೀಟರ್ (ಸು ೩೦೦೦ದಿಂದ ೫೦೦೦ ಅಡಿ)ಗಳಷ್ಟು ಎತ್ತರದಲ್ಲಿವೆ.
 
==ಹೆಸರುಗಳು==
 
[[ಚಿತ್ರ:ಚಾರ್ಮಾಡಿ ಘಟ್ಟದಲ್ಲಿ ಒಂದು ಬೆಟ್ಟ.jpg|thumb|ಚಾರ್ಮಾಡಿ ಘಟ್ಟದಲ್ಲಿ ಒಂದು ಬೆಟ್ಟ]]
 
ಬೆಟ್ಟಕ್ಕೆ ಕುಂದ, ಕೊಂಡ, ಗಿರಿ, ಗೋತ್ರ , ಮಲೆ, ಎಂಬಿತ್ಯಾದಿ ಹೆಸರುಗಳೂ ಇವೆ. ಸಣ್ಣ ಬೆಟ್ಟಕ್ಕೆ ಗುಡ್ಡ, ದಿಬ್ಬ, ದಿಣ್ಣೆ, ಬೋರೆ, ಎಂದು ಮೊದಲಾದ ಹೆಸರುಗಳಿವೆ. ಇಲ್ಲಿಯೂ ಬೆಟ್ಟ ಮತ್ತು ಗುಡ್ಡಕ್ಕಿರುವ ವ್ಯತ್ಯಾಸವು ಸ್ಪಷ್ಟವಾಗಿಲ್ಲದೆ ವಸ್ತುನಿಷ್ಠವಾಗಿದೆ.
"https://kn.wikipedia.org/wiki/ಬೆಟ್ಟ" ಇಂದ ಪಡೆಯಲ್ಪಟ್ಟಿದೆ