"ವಾಣಿ ಜಯರಾಂ" ಆವೃತ್ತಿಗಳ ಮಧ್ಯದ ಬದಲಾವಣೆಗಳು

(~~~~)
((~~~~))
[[Image:VaniJayaram01.jpg|thumb|ವಾಣಿ ಜಯರಾಂ]]
[[ವಾಣಿ ಜಯರಾಂ]] [[ಕನ್ನಡ]] ಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕಿ.ಇವರ ಜನನಇವರು [[೧೯೪೫]]ರತಮಿಳು, [[ನವೆಂಬರ್ತೆಲುಗು, ೩೦]]ರಂದುತುಳು ವೆಲ್ಲೂರಿನಹಿಂದಿ, ಇಡಂಗುಮರಾಠಿ, ಮಲಯಾಳಂ, ಬಂಗಳಿ,ಒರಿಯಾ, ಹರ್ಯಾಣವಿ ಸೇರಿದಂತೆ, ಒಟ್ಟು ೧೪ ಭಾಷೆಗಳಲ್ಲಿ ೮,೦೦೦ ಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದಾರೆ ಗ್ರಾಮದಲ್ಲಿ ಆಯಿತು.
==ಜನನ==
 
ವಾಣಿಯವರು ತಮಿಳುನಾಡಿನ ಒಂದು ಅಯ್ಯಂಗಾರ್ ಪರಿವಾರದಲ್ಲಿ ವೆಲ್ಲೂರಿನ [[ಇಡಂಗು ಗ್ರಾಮ]]ದಲ್ಲಿ [[೧೯೪೫]]ರ [[ನವೆಂಬರ್ ೩೦]]ರಂದು ಜನಿಸಿದರು.
== ಹಿನ್ನೆಲೆ ==
ವಾಣಿಯವರ ತಾಯಿ ಪ್ರಸಿದ್ಧ [[ಸಂಗೀತ]] ವಿದ್ವಾಂಸ, [[ರಂಗ ರಾಮಾನುಜ ಅಯ್ಯಂಗಾರರಅಯ್ಯಂಗಾರ್]] ರ ಶಿಷ್ಯೆ.ಹೀಗಾಗಿ ಇವರಿಗೆ ಚಿಕ್ಕಂದಿನಿಂದಲೇ ಸಂಗೀತಾಸಕ್ತಿ ಇತ್ತು. ತಮ್ಮ ಐದನೇ ವಯಸ್ಸಿಗೆ ಕಾಡಲೂರು ಶ್ರೀನಿವಾಸ ಅಯ್ಯಂಗಾರರ ಬಳಿ ಸಂಗೀತಾಭ್ಯಾಸ ಶುರು ಮಾಡಿದರು. ಏಳನೇ ವಯಸ್ಸಿಗೆ ದೇಶಿಕಾಚಾರ್ ಕೃತಿಗಳನ್ನು ಸ್ಫುಟವಾಗಿ ,ಸರಾಗವಾಗಿ ಹಾಡುತ್ತಿದ್ದರು. ಏಂಟನೆಯ ವಯಸ್ಸಿನಲ್ಲೇ ಆಕಾಶವಾಣಿಯಲ್ಲಿ ಇವರ ದನಿ ಪ್ರಸರವಾಗಿತ್ತು.[[ತಿರುವನಂತಪುರ]]ದಲ್ಲಿ ೩ ಗಂಟೆಗಳ ಕಾಲ ಸಂಗೀತ ಕಚೇರಿ ನಡೆಸಿದಾಗ ಇವರಿಗೆ ಕೇವಲ ಹತ್ತು ವರ್ಷ.ವಾಣಿಯವರದು ಬಹುಮುಖ ಪ್ರತಿಭೆ.ಚಿತ್ರರಚನೆ ಜೊತೆಗೆ ಓದಿನಲ್ಲೂ ಮುಂದು.[[ಅರ್ಥಶಾಸ್ತ್ರ]]ದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
 
== ಚಿತ್ರರಂಗಕ್ಕೆ ಪ್ರವೇಶ ==
ಇಂಡೋ-ಬೆಲ್ಜಿಯಂ ಛೇಂಬರ್ ಆಫ್ ಕಾಮರ್ಸ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದ ಜಯರಾಂ ಅವರೊಡನೆ ನಡೆದ ವಿವಾಹ ಇವರ ಜೀವನದಲ್ಲಿ ಮಹತ್ತರ ತಿರುವು ತಂದಿತು. ವಿವಾಹದ ನಂತರ ಅವರು ಮುಂಬೈನಲ್ಲೇ ನೆಲಸಿದರು. ಸ್ವತಃ [[ಸಿತಾರ್]] ವಾದಕರಾಗಿದ್ದ ಜಯರಾಂ ಪತ್ನಿಯ ಪ್ರತಿಭೆಗೆ ನೀರೆರೆದರು.ಪಟಿಯಾಲಾ ಘರಾಣಾದ ಅಬ್ದುಲ್ ರೆಹಮಾನ್ ಬಳಿ [[ಹಿಂದೂಸ್ತಾನಿ ಸಂಗೀತ]] ಕಲಿಸಿದರು.ಇಲ್ಲಿ ಇವರ ಕಂಠಸಿರಿಗೆ ಮಾರುಹೋದ [[ಮರಾಠಿ]] ಚಿತ್ರ ನಿರ್ದೇಶಕ ವಸಂತ ದೇಸಾಯಿ ತಮ್ಮ ಚಿತ್ರ ’ಅಮ್ಮ ತಾಯಿ ಗೋಡೆ’ಯಲ್ಲಿ ಹಾಡುವ ಅವಕಾಶ ಕಲ್ಪಿಸಿಕೊಟ್ಟರು.ಈ ಚಿತ್ರದ ಗಾಯನವನ್ನು ಮೆಚ್ಚಿಕೊಂಡ [[ಹಿಂದಿ]] ಚಿತ್ರ ನಿರ್ದೇಶಕ [[ಹೃಷಿಕೇಶ್ ಮುಖರ್ಜಿ]] ತಮ್ಮ ’ಗುಡ್ಡಿ ’ ಚಿತ್ರದಲ್ಲಿ ಹಾಡಿಸಿದರು.ಈ ಚಿತ್ರದ "ಬೋಲ್‌ರೇ ಪಪ್ಪಿ ಹರಾ" ಹಾಡು ದೇಶಾದ್ಯಂತ ಸಂಚಲನೆಯನ್ನು ಉಂಟುಮಾಡಿ ,ವಾಣಿ ಜಯರಾಂ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು.
 
== ಕನ್ನಡ ಚಿತ್ರರಂಗದಲ್ಲಿ ==
ಕನ್ನಡ ಚಿತ್ರ ಸಂಗೀತಕ್ಕೆ [[೧೯೭೩]]ರಲ್ಲಿ ಪದಾರ್ಪಣೆ ಮಾಡಿ ೯೦ರ ದಶಕದ ಆದಿಯವರೆಗೂ ಚಿತ್ರಗೀತೆಗಳನ್ನು ಹಾಡಿದ್ದಾರೆ.ಕನ್ನಡದಲ್ಲಿ ಹಾಡಿದ ಮೊದಲ ಚಿತ್ರ ’ಛಲಗಾರ’ ತೆರೆ ಕಾಣಲಿಲ್ಲ.[[ಕೌಬಾಯ್ ಕುಳ್ಳ]],[[ಕೆಸರಿನ ಕಮಲ]],[[ಉಪಾಸನೆ]],[[ಶುಭಮಂಗಳ]],[[ದೀಪ]],[[ಅಪರಿಚಿತ]],[[ಕಸ್ತೂರಿ ವಿಜಯ]],[[ಚಿರಂಜೀವಿ]],[[ಬೆಸುಗೆ]],[[ಬಿಳೀ ಹೆಂಡ್ತಿ]]..-ಮೊದಲಾದ ಚಿತ್ರಗಳಲ್ಲಿ ಹಾಡಿದ್ದಾರೆ. ತಮ್ಮನ್ನು ಪರಿಚಯಿಸಿದ ಸಂಗೀತ ನಿರ್ದೇಶಕ [[ವಿಜಯಭಾಸ್ಕರ್]] ಸಂಗೀತ ನಿರ್ದೇಶನದ ಕಡೆಯ ಚಿತ್ರ [[ನೀಲಾ]] (೨೦೦೧) , ಇವರು ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಾಡಿದ ಚಿತ್ರವಾಗಿರುತ್ತದೆ.ಕನ್ನಡದಲ್ಲಿ ಹಾಡಿರುವ ಸುಮಾರು ೮೫೦ ಗೀತೆಗಳನ್ನು ಸೇರಿಸಿ, ಒಟ್ಟಾರೆ ೧೨ ಭಾಷೆಗಳಲ್ಲಿ ೮೮೦೦ ಗೀತೆಗಳನ್ನು ಹಾಡಿದ್ದಾರೆ.
 
== ಇವರು ಹಾಡಿರುವ ಕೆಲವು ಸುಮಧುರ ಗೀತೆಗಳು ==
* ನಗು ನೀ ನಗು...
* ಭಾವವೆಂಬ ಹೂವು ಅರಳಿ...
* ಹೋದೆಯಾ ದೂರ ಓ ಜೊತೆಗಾರ..ವಿರಹ ಗೀತೆ
* ಏನೇನೊ ಆಸೆ ನೀ ತಂದ ಭಾಷೇ, (ಅಣ್ಣಾವರ ಜೊತೆ ಸೇರಿ ಹಾಡಿದ್ದು)
* ಈ ಶತಮಾನದ ಮಾದರಿ ಹೆಣ್ಣು...
* ದಾರಿ ಕಾಣದಾಗಿದೆ ರಾಘವೇಂದ್ರನೆ...
* ಲೈಫ್ ಈಸ್ ಎ ಮೆರ್ರಿ ಮೆಲಡಿ...- [[ಬೆಸುಗೆ]] ಚಿತ್ರದ ಪಾಶ್ಚಾತ್ಯಶೈಲಿಯ [[ಇಂಗ್ಲಿಷ್]] ಹಾಡು.
* ಹ್ಯಾಪಿಯಸ್ಟ್ ಮೊಮೆಂಟ್ಸ್...- [[ಬಿಳೀ ಹೆಂಡ್ತಿ]] ಚಿತ್ರದ ಪಾಶ್ಚಾತ್ಯಶೈಲಿಯ [[ಇಂಗ್ಲಿಷ್]] ಹಾಡು.
 
== ಇತರ ಆಸಕ್ತಿಗಳು ==
ವಾಣಿ ಜಯರಾಂ [[ಗಝಲ್]],[[ಭಜನ್]],[[ಭಕ್ತಿಗೀತೆ]]ಗಳ ಗಾಯನದಲ್ಲೂ ಮುಂಚೂಣಿಯಲ್ಲಿದ್ದಾರೆ.[[ಮಲಯಾಳಂ]],[[ತಮಿಳು]],[[ಹಿಂದಿ]] ಭಾಷೆಗಳಲ್ಲಿ ಅವರ ಕವನ ಸಂಕಲನಗಳು ಪ್ರಕಟವಾಗಿವೆ.'ಪಂಡಿತ್ ಬ್ರಿಜ್ ಮಹಾರಾಜ್'‌ರೊಂದಿಗೆ ಸೇರಿ,[[ಗೀತ ಗೋವಿಂದ]]ವನ್ನು [[ಕಥಕ್‌]]ಗೆ ಅಳವಡಿಸಿರುವುದು ಅವರ ಗಮನಾರ್ಹ ಸಾಧನೆ.[[ಚೆನ್ನೈ]]ನಲ್ಲಿ ಇವರು ನಡೆಸುತ್ತಿರುವ 'ಸಂಗೀತ ಸಂಶೋಧನಾ ಕೇಂದ್ರ' ವರ್ಷವಿಡೀ 'ರಸಗ್ರಹಣ ಶಿಬಿರ' ಮತ್ತು 'ವಿಚಾರ ಸಂಕಿರಣ'ಗಳನ್ನು ಏರ್ಪಡಿಸುತ್ತದೆ.ಶಾಲಾ ಮಕ್ಕಳಿಗಾಗಿ ವಿಶೇಷ ಶಿಬಿರಗಳಿವೆ.ಪ್ರಸ್ತುತ ಸಂಗೀತದಿಂದ ಕ್ಯಾನ್ಸರ್ ರೋಗಿಗಳ ನೋವು ನಿವಾರಿಸುವ ಕುರಿತು ಶಿಬಿರ ನಡೆಸುತ್ತಿದ್ದಾರೆ.
== ಪ್ರಶಸ್ತಿಗಳು ==
* [[ತೆಲುಗು]] ಭಾಷೆಯ ಅಪೂರ್ವ ರಾಗಂಗಳ್,ಶಂಕರಾಭರಣಂ,ಸ್ವಾತಿ ಕಿರಣಂ ಚಿತ್ರಗಳ ಹಿನ್ನೆಲೆ ಗಾಯನಕ್ಕಾಗಿ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.
* ವಿವಿಧ ರಾಜ್ಯಗಳ ೨೭ ಶ್ರೇಷ್ಠ ಗಾಯಕಿ ಪ್ರಶಸ್ತಿ ಪಡೆದಿದ್ದಾರೆ.
* ದಕ್ಷಿಣ ಭಾರತದ ಖ್ಯಾತ ಟಿ. ವಿ. ಮಾಧ್ಯಮಗಳ ಮ್ಯೂಸಿಕ್ ರಿಯಾಲಿಟಿ ಶೋಗಳಲಿ ಕಾಣಿಸಿಕೊಳ್ಳುತ್ತಿದ್ದಾರೆ.
* 'ಗಾನಸುಧೆಯ ೪೦ ನೇ ವರ್ಷದ ಸೇವೆ'ಗಾಗಿ ಚೆನ್ನೈ ಹಾಗೂ ಹೈದರಾಬಾದ್ ನಗರಗಳಲ್ಲಿ ಸನ್ಮಾನಮಾಡಲಾಯಿತು.
<br clear="both">
 
೨೫,೬೧೩

edits

"https://kn.wikipedia.org/wiki/ವಿಶೇಷ:MobileDiff/219122" ಇಂದ ಪಡೆಯಲ್ಪಟ್ಟಿದೆ