Content deleted Content added
ಚು ಸುಸ್ವಾಗತ
 
 
೧ ನೇ ಸಾಲು:
{{ಸುಸ್ವಾಗತ}}
--[[ಸದಸ್ಯ:Teju2friends|ತೇಜಸ್]] ೧೦:೫೨, ೭ ಜೂನ್ ೨೦೧೧ (UTC)
 
== ಕಲ್ಪನಾ ಚಾವ್ಲಾ ==
 
ಕಲ್ಪನಾ ಚಾವ್ಲಾ ಚಿಕ್ಕಂದಿನಲ್ಲಿ ತುಂಬಾ ಹಠವಾದಿ, ಆಕೆ ಹಠಮಾಡಿದಾಗಲೆಲ್ಲಾ ಅವಳ ಅಮ್ಮ, ಚಂದಮಾಮನನ್ನ ತೋರಿಸಿ ಕಥೆ ಹೇಳ್ತಿದ್ಲು.ಆ ಮುಗ್ಧ ಹುಡುಗಿ ಅಮ್ಮನ ಸಿಹಿಸುಳ್ಳನ್ನೇ ಕೇಳಿಕೊಂಡು ಆಕಾಶದ ಬಗ್ಗೆ ನೂರಾರು ಕನಸು ಕಟ್ಟಿಕೊಂಡಳು. ಹೀಗೆ ಕನಸುಗಳಲ್ಲೇ ಅರಮನೆ ಕಟ್ಟಿಕೊಂಡ ನಮ್ಮ ಹೆಮ್ಮೆಯ ಹುಡುಗಿ ಕಲ್ಪನಾ ಚಾವ್ಲಾ.
ಕಲ್ಪನಾ ಚಾವ್ಲಾ ಹುಟ್ಟಿದ್ದು ಹರ್ಯಾಣದ ಕರ್ನಾಲ್​ ಎಂಬ ಚಿಕ್ಕ ಊರಿನಲ್ಲಿ.ತಂದೆ ಸಣ್ಣ ಉದ್ಯಮಿ ಬನಾರಿಸ್​ಲಾಲ್​ ಚಾವ್ಲಾ. ತಾಯಿ ಸಂಜ್ಯೋತಿ ಲಾಲ್​ ಚಾವ್ಲಾ. ಈ ದಂಪತಿಯ ಕಿರಿಯ ಮಗಳೇ ಕಲ್ಪನಾ ಚಾವ್ಲಾ.1961 ಜುಲೈ 1ರಂದು ಜನಿಸಿದ ಕಲ್ಪನಾ, ಅಪ್ಪ ಅಮ್ಮನ ಪಾಲಿಗೆ ಪ್ರೀತಿಯ ಮಗಳು..
ಕಲ್ಪನಾ ಬಾಲ್ಯ ಎಲ್ಲ ಮಕ್ಕಳಂತಿರಲಿಲ್ಲ. ಆಕೆಗೆ ಆಗಸವೇ ಆಟದ ಮೈದಾನ. ಸದಾ ನಭೊಮಂಡಲದಲ್ಲಾಗುವ ಕುತೂಹಲವನ್ನ ದಿಟ್ಟಿಸಿ ನೋಡ್ತಿದ್ಲು.ಚಂದಿರನ ಬಳಿ, ತನ್ನ ದುಖಃ ದುಮ್ಮಾನಗಳನ್ನ ತೋಡಿಕೊಳ್ಳುತ್ತಿದ್ದಳು. ಆಗಸದಲ್ಲಿ ಹಾರಾಡಬೇಕು ಅನ್ನೋ ಸ್ವಚ್ಚಂದ ಆಸೆ ಇದ್ರೂ, ಬಡತನ ಅದಕ್ಕೆ ಅವಕಾಶ ಕೊಡಲಿಲ್ಲ. ಅಪ್ಪನ ಸಂಪಾದನೆ ಆಕೆಯ ಕಣ್ಣುಗಳಲಿದ್ದ ಕನಸುಗಳನ್ನ ನಿಸ್ತೇಜಗೊಳಿಸಿದ್ದವು. ಆದ್ರೂ ಅದ್ಯಾವುದೋ ಮೂಲೆಯಲ್ಲಿ ಕಲ್ಪನಾ ತನ್ನ ಆಸೆಗಳನ್ನೆಲ್ಲಾ ಬಚ್ಚಿಟ್ಟುಕೊಂಡೇ ಬೆಳೆದಳು.ಮನೆಯ ತಾರಸಿ ಏರಿ ಹಾರುತ್ತಿದ್ದ ವಿಮಾನಗಳನ್ನ ದಿಟ್ಟಿಸಿ ನೋಡ್ಡುತ್ತಿದ್ದಳು. ಸಂಜೆಯ ಸಮಯದಲ್ಲಿ ನಕ್ಷತ್ರಗಳ ಚಲನ ವಲನಗಳನ್ನ ತನ್ನ ಪುಟ್ಟ ಕಂಗಳಲ್ಲಿ ತುಂಬಿಕೊಳ್ಳ್ಳುತ್ತಿದ್ದಳು.
ಶಾಲೆಯಲ್ಲಿ ಸದಾ ಏನಾದ್ರೂ ಆಲೋಚನೆ ಮಾಡ್ತಿದ್ದ ಕಲ್ಪನಾಗೆ ಪ್ರಖ್ಯಾತ ಸೈಂಟಿಸ್ಟ್ ಜೆ ಆರ್​ ಡಿ ಟಾಟಾ ಸ್ಫೂರ್ತಿ. ಶಾಲೆಯಲ್ಲಿ ಟೀಚರ್ ಚಿತ್ರಗಳನ್ನ ಬಿಡಿಸಿ ಅಂದಾಕ್ಷಣ, ಮಾಂಟಿಯ ಕಿವಿ ನೆಟ್ಟಗಾಗ್ತಿತ್ತು. ಪೆನ್ಸಿಲ್ ಹಿಡಿದು, ಯಾವಾಗಲೂ ವಿಮಾನ, ನಕ್ಷತ್ರ, ಗ್ರಹಗಳ ಚಿತ್ರಗಳನ್ನೇ ಚಿತ್ರಿಸುತ್ತಿದ್ದಳು.. ವಿಮಾನಯಾನ ಬಗ್ಗೆ ಟೀಚರ್​ಗೆ ಪ್ರಶ್ನೆ ಮಾಡ್ತಿದ್ದಳು.
ಪಿಯುಸಿ ಸೇರುವ ಹೊತ್ತಿಗೆ ಆಕೆಯ ಕನಸುಗಳು ಬಲಿಯುತ್ತಾ ಹೋದ್ವು.ಫ್ಲೈಯಿಂಗ್ ಇಂಜಿನಿಯರ್ ಆಗಬೇಕು ಅನ್ನೋದು ಕಲ್ಪನಾಳ ದೊಡ್ಡ ಕನಸು. ಪಂಜಾಬ್ ವಿವಿಯಲ್ಲಿ ಏರೋನಾಟಿಕ್ಸ್ ಇಂಜಿನಿಯರಿಂಗ್ ಪಡೆದ ಕಲ್ಪನಾ ಕನಸುಗಳ ಲೋಕದಲ್ಲೇ ವಿಹರಿಸುತ್ತಾ ಸಾಗಿದವಳು. ಆಕೆಯ ಕನಸುಗಳಿಗೆಲ್ಲಾ ನೀರೆರದದ್ದು ಕರ್ನಲ್ ಏವಿಯೇಷನ್ ಕ್ಲಬ್​.ಮನೆಯ ಪಕ್ಕದಲ್ಲೇ ಇದ್ದ ಏವಿಯೇಷನ್ ಕ್ಲಬ್​ನಲ್ಲಿ ಸಂಜೆಯ ಸಮಯ ಸಣ್ಣ ಸಣ್ಣ ಏರೋಪ್ಲೇನ್​ಗಳು ಹಾರುತ್ತಿದ್ದವು. ಮನೆಯ ಟೆರೆಸ್​ಮೇಲೆ ನಿಂತು ಆಗಸದ ಕುತೂಹಲಗಳನ್ನ ನೋಡುತ್ತಿದ್ದ ಕಲ್ಪನಾ ಮುಂದೆ ಕರ್ನಲ್ ಏವಿಯೇಷನ್ ಕ್ಲಬ್​ನಲ್ಲೇ ವಿಮಾನ ಹಾರಾಟದ ಬಗ್ಗೆ ತರಬೇತಿ ಪಡೆದುಕೊಂಡ್ಲು
1984ರಲ್ಲಿ ಅಮೆರಿಕಾದ ಟೆಕ್ಸಾಸ್​ ಯುನಿವರ್ಸಿಟಿಯಲ್ಲಿ ಏರೋಸ್ಪೇಸ್​ ಎಂಜಿನಿಯರಿಂಗ್​ ಪದವಿ ಮಾಡೋದಕ್ಕೆ ಕಲ್ಪನಾ ಚಾವ್ಲಾಗೆ ಅವಕಾಶ ಸಿಕ್ಕಿತು.1988 ರಲ್ಲಿ ಏರೋಸ್ಪೇಸ್​ ವಿಷಯದಲ್ಲಿ ಕಲ್ಪನಾ ಕೊಲಾರೋಡ ಯುನಿವರ್ಸಿಟಿಯಿಂದ ಸ್ನಾತಕೋತ್ತರ ಪದವಿ ಪಡೆದ್ರು. ನಂತರ ಪ್ರಪಂಚದ ಪ್ರತಿಷ್ಟಿತ ಬಾಹ್ಯಾಕಾಶ ಕೇಂದ್ರ ನಾಸಾದಲ್ಲಿ ತರಬೇತಿ ಪಡೆಯಲು ಕಲ್ಪನಾಗೆ ಅವಕಾಶ ಸಿಕ್ಕಿತು.