"ರಿಷಿಕೇಶ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
robot Modifying: ta:ரிசிகேசு; cosmetic changes
ಚು (robot Adding: es:Rishikesh)
ಚು (robot Modifying: ta:ரிசிகேசு; cosmetic changes)
'''ರಿಷಿಕೇಶ''' ( ಮೂಲ ಹೆಸರು '''''ಹೃಷಿಕೇಶ''''' ) [[ಭಾರತ]]ದ [[ಉತ್ತರಾಖಂಡ]] ರಾಜ್ಯದ [[ಡೆಹ್ರಾ ಡೂನ್]] ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಪ್ರಸಿದ್ಧ ತೀರ್ಥಕ್ಷೇತ್ರವಾಗಿರುವ ರಿಷಿಕೇಶ [[ಹಿಂದೂ]] ಧರ್ಮೀಯರಿಗೆ ಅತಿ ಪಾವನ ಧಾಮವಾಗಿದೆ. ರಿಷಿಕೇಶವು [[ಹಿಮಾಲಯ]]ಕ್ಕೆ ಹೆಬ್ಬಾಗಿಲೆನಿಸಿಕೊಳ್ಳುತ್ತದೆ. ಹಿಮಾಲಯದ ಪವಿತ್ರ [[ಚತುರ್ಧಾಮ]]ಗಳ ಯಾತ್ರೆಯು ಸಾಮಾನ್ಯವಾಗಿ ರಿಷಿಕೇಶದಿಂದಲೇ ಆರಂಭವಾಗುತ್ತದೆ. ಹಿಮಾಲಯ ಪರ್ವತಗಳ ಪಾದದಲ್ಲಿ [[ಗಂಗಾ ನದಿ]]ಯ ದಡದಲ್ಲಿರುವ ರಿಷಿಕೇಶ ದೇವಾಲಯಗಳು, ಆಶ್ರಮಗಳು, ತಪೋವನಗಳು ಮತ್ತು ಯೋಗಾಭ್ಯಾಸ ಕೇಂದ್ರಗಳಿಗೆ ಹೆಸರಾಗಿದೆ.
 
== ಪುರಾಣೇತಿಹಾಸಗಳು ==
 
ಹೃಷಿಕೇಶ [[ವಿಷ್ಣು]]ವಿನ ಒಂದು ಹೆಸರು. ಇದರ ಅರ್ಥ ಇಂದ್ರಿಯಗಳ ಒಡೆಯ ಎಂಬುದಾಗಿದೆ. ಈ ಸ್ಥಳದಲ್ಲಿ ರೈಭ್ಯ ಋಷಿಯ ತಪಸ್ಸಿಗೆ ಒಲಿದು ವಿಷ್ಣು ಹೃಷಿಕೇಶನಾಗಿ ಪ್ರತ್ಯಕ್ಷನಾದನೆಂದು ಒಂದು ಕಥೆಯಿದೆ. [[ಸ್ಕಂದ ಪುರಾಣ]]ದಲ್ಲಿ ಈ ಸೀಮೆಯು ಕುಬ್ಜಾಮ್ರಕ ಎಂದು ಹೆಸರಿಸಲ್ಪಟ್ಟಿದೆ. ಐತಿಹಾಸಿಕವಾಗಿ ರಿಷಿಕೇಶ [[ಕೇದಾರಖಂಡ]]ದ ಭಾಗ. ಇಂದಿನ [[ಗಢ್‌ವಾಲ್]] ಪ್ರದೇಶವು ಹಿಂದೆ ಕೇದಾರಖಂಡವೆಂದು ಕರೆಯಲ್ಪಡುತ್ತಿತ್ತು. [[ರಾಮ]]ನು ಲಂಕೆಯ ಅರಸ [[ರಾವಣ]]ನನ್ನು ಯುದ್ಧದಲ್ಲಿ ಸಂಹರಿಸಿದ ಬಳಿಕ ಇಲ್ಲಿ ತಪವನ್ನೈದಿದನೆಂದೂ ಹಾಗೂ [[ಲಕ್ಷ್ಮಣ]]ನು ಇಲ್ಲಿ ನಾರಿನ ಹಗ್ಗಗಳಿಂದ ರಚಿಸಲ್ಪಟ್ಟ [[ಸೇತುವೆ]]ಯ ಮೂಲಕ ಗಂಗಾ ನದಿಯನ್ನು ದಾಟಿದನೆಂದೂ ಹೇಳಲಾಗುತ್ತದೆ.
 
ಗಂಗಾ ನದಿಯು ರಿಷಿಕೇಶ ಪಟ್ಟಣದ ಮೂಲಕ ಹಾದುಹೋಗುತ್ತದೆ. ರಿಷಿಕೇಶದಲ್ಲಿ ಗಂಗಾ ನದಿಯು [[ಶಿವಾಲಿಕ]] ಪರ್ವತಗಳಿಂದ ಇಳಿದು ಉತ್ತರ ಭಾರತದ ಬಯಲುಸೀಮೆಯನ್ನು ಸೇರುವುದು. ನದಿಯ ದಂಡೆಗುಂಟ ಹಲವು ದೇವಾಲಯಗಳು, ಆಶ್ರಮಗಳಿವೆ. ನಗರದ ತ್ರಿವೇಣಿ ಘಾಟ್‌ನಲ್ಲಿ ಪ್ರತಿದಿನ ಸಂಜೆ ನಡೆಯುವ [[ಗಂಗಾ ಆರತಿ]] ಬಲು ಪ್ರಸಿದ್ಧ. ನೀಲಕಂಠ ಮಹಾದೇವ ಮಂದಿರ, ರಾಮ ಝೂಲಾ, ವಸಿಷ್ಠ ಗುಹೆ ಮುಂತಾದವು ಪ್ರವಾಸಿಗರನ್ನು ಮತ್ತು ಯಾತ್ರಾರ್ಥಿಗಳನ್ನು ಬಹುವಾಗಿ ಆಕರ್ಷಿಸುತ್ತವೆ.
[[Imageಚಿತ್ರ:Ramjhula - bridge over the Ganga.jpg|right|200px|thumb|ರಾಮ ಝೂಲಾ ತೂಗುಸೇತುವೆ.]]
 
[[Imageಚಿತ್ರ:Shiva in rishikesh.jpg|thumb|left|[[ಗಂಗಾ ನದಿಯ]] ದಡದಲ್ಲಿ [[ಶಿವ]]ನ ಬೃಹತ್ ಮೂರ್ತಿ.]]
 
[[Imageಚಿತ್ರ:Panoramic photography of rishikesh.JPG|left|777px|thumb|ರಿಷಿಕೇಶದ ವಿಹಂಗಮ ನೋಟ.]]
 
 
* [http://www.pbase.com/oochappan/ram_jhula ರಾಮ್ ಝೂಲಾ]
 
[[Categoryವರ್ಗ:ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು]]
 
[[Category:ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು]]
 
[[als:Rishikesh]]
[[ru:Ришикеш]]
[[sv:Rishikesh]]
[[ta:ரிஷிகேஷ்ரிசிகேசு]]
[[te:రిషికేశ్]]
[[uk:Рішікеш]]
೧೬,೩೭೩

edits

"https://kn.wikipedia.org/wiki/ವಿಶೇಷ:MobileDiff/214715" ಇಂದ ಪಡೆಯಲ್ಪಟ್ಟಿದೆ