ತಾಳೀಕೋಟೆಯ ಯುದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (robot Adding: ta:தலிகோட்டா போர்
ಚು robot Modifying: ta:தலிகோட்டா சண்டை; cosmetic changes
೧ ನೇ ಸಾಲು:
{{Infobox ಯುದ್ಧ
|conflict='''ತಾಳೀಕೋಟದ ಯುದ್ಧ'''
|partof=[[ಭಾರತದ ಇಸ್ಲಾಮಿ ಆಕ್ರಮಣ ]]
|date=[[ಜನವರಿ ೨೬]], [[೧೫೬೫]]
|place=[[ತಾಳೀಕೋಟೆ]], ಇಂದಿನ [[ಬಿಜಾಪುರ]] ಜಿಲ್ಲೆ
೧೪ ನೇ ಸಾಲು:
|casualties2=ತಿಳಿದಿಲ್ಲ. ಹಲವಾರು ಎಂದು ಊಹೆ.
}}
'''ತಾಳೀಕೋಟೆಯ ಯುದ್ಧ''' [[ಜನವರಿ ೨೬]], [[೧೫೬೫]]ರಲ್ಲಿ [[ವಿಜಯನಗರ ಸಾಮ್ರಾಜ್ಯ]] ಮತ್ತು [[ದಕ್ಷಿಣದ ಸುಲ್ತಾನರು]]ಗಳ ನಡುವೆ ನಡೆದ ಯುದ್ಧ. ತಾಳೀಕೋಟೆ ಇಂದಿನ [[ಬಿಜಾಪುರ]]ದಿಂದ ೮೦ ಕಿ.ಮೀ ದೂರದಲ್ಲಿರುವ [[ಕರ್ನಾಟಕ]]ದ ಒಂದು ಐತಿಹಾಸಿಕ ಸ್ಥಳ. ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯದ ಪತನವಾಗುವುದರೊಂದಿಗೆ, [[ದಕ್ಷಿಣ ಭಾರತ]]ದ ಕೊಟ್ಟ ಕೊನೆಯ ಹಿಂದೂ ಸಾಮ್ರಾಜ್ಯವು ಕೊನೆಗೊಂಡಿತು.
 
== ಹಿನ್ನೆಲೆ ==
 
ಅಚ್ಯುತರಾಯನ ತರುವಾಯ ವಿಜಯನಗರದ ಸಿಂಹಾಸನವೇರಿದ ರಾಮರಾಯನು, ಅನೇಕ ಇತಿಹಾಸಜ್ನರ ಪ್ರಕಾರ , ನೆರೆಯ ಮುಸ್ಲಿಮ್ ಸುಲ್ತಾನರುಗಳ ವ್ಯವಹಾರಗಳಲ್ಲಿ ಕೈಹಾಕುತ್ತಿದ್ದನು. ಮೊದಮೊದಲು ಇದರಲ್ಲಿ ಅವನಿಗೆ ಗೆಲುವು ದಕ್ಕಿದರೂ, ಒಟ್ಟಿನಲ್ಲಿ ಇದು ಸುಲ್ತಾನರುಗಳು ಒಟ್ಟಾಗಿ ಅವನ ಮೇಲೆ ಸೇಡು ತೀರಿಸಿಕೊಳ್ಳುವುದರಲ್ಲಿ ಪರ್ಯವಸಾನವಾಯಿತು. ರಾಮರಾಯನು ಸುಲ್ತಾನರುಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ ಎಂಬುದನ್ನು ಅಲ್ಲಗೆಳೆಯುವ ಮತ್ತೆ ಕೆಲವು ವಿದ್ವಾಂಸರು , ಸುಲ್ತಾನರುಗಳ ಒಳಜಗಳದ ಲಾಭ ವಿಜಯನಗರಕ್ಕೆ ದೊರೆಯುವಂತೆ ಮಾಡಿದ ಎಂದು ಅಭಿಪ್ರಾಯ ಪಡುತ್ತಾರೆ. ಮುಂದೆ ಪರಸ್ಪರ ವೈವಾಹಿಕ ಸಂಬಂಧಗಳೊಂದಿಗೆ ಈ ಸುಲ್ತಾನರುಗಳ ಅಂತರಿಕ ಕಲಹ ಕಡಿಮೆಯಾದದ್ದಷ್ಟೇ ಅಲ್ಲ , ತಮ್ಮೆಲ್ಲರ ವೈರಿ, ಏಕಮೇವ ಹಿಂದೂ ಸಾಮ್ರಾಜ್ಯವಾಗಿದ್ದ ವಿಜಯನಗರದ ವಿರುದ್ಧವಾಗಿ ಅವರೆಲ್ಲಾ ಒಟ್ಟುಗೂಡಿದರು.
 
== ಯುದ್ಧ ==
 
[[ಅಹಮದ್ ನಗರ]] , ಬೆರಾರ್ ( ಮುಂದೆ ಹೈದರಾಬಾದ್ ನಿಜಾಮನ ರಾಜ್ಯದ ಭಾಗ,ಇಂದಿನ [[ಮಹಾರಾಷ್ಟ್ರ]]ದ ವಿದರ್ಭ ಪ್ರದೇಶದಲ್ಲಿದೆ) , [[ಬೀದರ್]], [[ಬಿಜಾಪುರ]] ಮತ್ತು ಗೋಲ್ಕೊಂಡದ ಸುಲ್ತಾನರುಗಳ ಒಕ್ಕೂಟದ ಸೇನೆ ಜನವರಿ ೨೬, ೧೫೬೫ರಂದು ಕೃಷ್ಣಾ ನದಿಯ ದಂಡೆಯ ಮೇಲೆ, ರಕ್ಕಸ ಮತ್ತು ತಂಗಡಿ ಎಂಬ ಹಳ್ಳಿಗಳ ನಡುವಿನಲ್ಲಿದ್ದ, ತಾಳೀಕೋಟೆ (ಇದು ಇಂದಿನ [[ಕರ್ನಾಟಕ]] ರಾಜ್ಯದಲ್ಲಿದೆ) ಎಂಬಲ್ಲಿ ವಿಜಯನಗರದ ಸೇನೆಯೊಂದಿಗೆ ಯುದ್ಧ ಹೂಡಿತು. ಇಂತಹಾ ಒಕ್ಕೂಟದ ಸಮರ ವ್ಯೂಹ ಮಧ್ಯಕಾಲದ [[ಭಾರತ]]ದ ಇತಿಹಾಸದಲ್ಲಿ ಅಪರೂಪ. ವಿಜಯನಗರ ಸಾಮ್ರಾಜ್ಯದೊಂದಿಗೆ ವಿರಸವಿದ್ದ ಕೆಲ ಕಿರು ಹಿಂದೂ ರಾಜ್ಯಗಳೂ ಈ ಯುದ್ಧದಲ್ಲಿ ಸುಲ್ತಾನರ ಒಕ್ಕೂಟದ ಬೆಂಬಲಕ್ಕೆ ಬಂದವು. ಸುಲ್ತಾನರುಗಳ ಸೇನೆಯಲ್ಲಿ ೮೦ ಸಾವಿರ ಪದಾತಿಗಳೂ, ೩೦ ಸಾವಿರ ಅಶ್ವಸೈನ್ಯವೂ ಇದ್ದರೆ, ವಿಜಯನಗರದ ಸೇನೆಯಲ್ಲಿ ೧೪೦ ಸಾವಿರ ಕಾಲಾಳುಗಳೂ, ೧೦ ಸಾವಿರ ಅಶ್ವ ಸೈನಿಕರೂ ಇದ್ದರು. ಎರಡೂ ಸೈನ್ಯಗಳಲ್ಲಿ ಬಹುಸಂಖ್ಯೆಯಲ್ಲಿ ಆನೆಗಳೂ ಇದ್ದವು. ಈ ಯುದ್ಧ ಘೋರವಾಗಿದ್ದರೂ ಅಲ್ಪಾವಧಿಯಲ್ಲಿಯೇ ಮುಗಿದುಹೋಯಿತು. ಕಲ್ಲು ಬಂಡೆಗಳ ಈ ಯುದ್ಧ ಪ್ರದೇಶದಲ್ಲಿ, ತೋಪುಗಳಿಂದ ಹಲ್ಲೆ ನಡೆಸಿ, ವಿಜಯನಗರದ ಸೈನ್ಯದ ಮಂಚೂಣಿಯನ್ನು ಒಕ್ಕೂಟದ ಸೇನೆ ಹಣ್ಣು ಮಾಡಿತು. ಈ ಫಿರಂಗಿಗಳ ಈ ತೀವ್ರ ದಾಳಿಯಿಂದ ತತ್ತರಿಸಿದ ವಿಜಯನಗರ ಸೇನೆಯ ಮೇಲೆ ಒಕ್ಕೂಟದ ಸೇನೆ ನುಗ್ಗಿ ಅದನ್ನು ಧೂಳೀಪಟ ಮಾದಿತು. ರಾಮರಾಯನ ಶಿರಛ್ಛೇದ ಮಾಡಿ ಸಾರ್ವಜನಿಕರಿಗೆ ಪ್ರದರ್ಶನ ಮಾಡಲಾಯಿತು. ವಿಜಯನಗರ ಸಾಮ್ರಾಜ್ಯವನ್ನು ಲೂಟಿಮಾಡಿ ಸಂಪೂರ್ಣವಾಗಿ ಧ್ವಂಸಮಾಡಲಾಯಿತು.
 
== ಯುದ್ಧಾನಂತರ ==
ಈ ಯುದ್ಧ ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯದ ಅವನತಿಗೆ ಕಾರಣವಾದದ್ದಷ್ಟೇ ಅಲ್ಲ, ಸಂಪೂರ್ಣ [[ಭಾರತ]]ದಲ್ಲಿಯೇ ಹಿಂದೂ ರಾಜ್ಯಗಳ ಕೊನೆಗಾಲಕ್ಕೆ ನಾಂದಿ ಹಾಡಿತು. ವಿಜಯೋನ್ಮತ್ತ ಸುಲ್ತಾನರ ಸೇನೆ, ಇತರ ಕಳ್ಳಕಾಕರು ಮತ್ತು ಕಾಡುನಿವಾಸಿಗಳ ಗುಂಪುಗಳೊಂದಿಗೆ ವಿಜಯನಗರಕ್ಕೆ ಲಗ್ಗೆ ಇಟ್ಟಿತು. ಲೂಟಿ, ದರೋಡೆ, ಕಗ್ಗೊಲೆ, ಸುಲಿಗೆಗಳು ಅವ್ಯಾಹತವಾಗಿ ನಡೆದವು. ಕೊಡಲಿ, ಗಡಾರಿ, ಕತ್ತಿ ಇತ್ಯಾದಿಗಳೊಂದಿಗೆ ನಗರವನ್ನು ಹಾಳುಗೆಡವಿ, ಬೆಂಕಿ ಹಚ್ಚಲಾಯಿತು. ಈ ಧಾಳಿಯಿಂದ ವಿಜಯನಗರ ಮುಂದೆಂದೂ ಚೇತರಿಸಿಕೊಳ್ಳಲಿಲ್ಲ. [[ಪೆನುಗೊಂಡೆ]]ಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ವಿಜಯನಗರ ಮತ್ತೆ ಮೇಲೇಳುವ ಪ್ರಯತ್ನ ಮಾಡಿದರೂ, ಅದು ಯಶಸ್ವಿಯಾಗಲಿಲ್ಲ. ಜನಬೆಂಬಲ ಅಳಿಯ ರಾಮರಾಯನ ತಮ್ಮನ ಪರವಾಗಿದ್ದ ಕಾರಣ , ಪಟ್ಟವೇರುವ ತಿರುಮಲನ ಪ್ರಯತ್ನ ಫಲಿಸಲಿಲ್ಲ. ಅದಕ್ಕಾಗಿ ಆತ ಮತ್ತೂ ಆರು ವರ್ಷ ಕಾಯಬೇಕಾಯಿತು. ಈ ಆರು ವರ್ಷಗಳಲ್ಲಿ ಅರಾಜಕತೆ ತಾಂಡವವಾಡಿತು. ಅಳಿಯ ರಾಮರಾಯನಿಂದ ಮಹತ್ವದ ಸ್ಥಾನಗಳಿಗೆ ನೇಮಿಸಲ್ಪಟ್ಟಿದ್ದ ಅವನ ಹತ್ತಿರದ ಸಂಬಂಧಿಕರಲ್ಲಿ ಈಗ ಒಳಜಗಳ ಪ್ರಾರಂಭವಾಯಿತು. ಅಷ್ಟೇ ಅಲ್ಲ ಇದರಿಂದ ಅಸಂತುಷ್ಟರಾಗಿದ್ದ ಸಾಮ್ರಾಜ್ಯ ನಿಷ್ಠ ಅಧಿಕಾರಿಗಳು ಈಗ ದಂಗೆ ಎದ್ದರು. ಹಿಂದೆ ಯಶಸ್ವಿಯಾಗಿ ನಢೆದುಕೊಂಡು ಬಂದಿದ್ದ ಪಾಳೆಯಗಾರಿ ಪದ್ಧತಿಯೂ ಸಾಮ್ರಾಜ್ಯವು ಅನೇಕ ಹೋಳಾಗುವುದಕ್ಕೆ ಕಾರಣವಾಯಿತು. [[ತಮಿಳು]] ಭಾಷಿಕರಾಗಿದ್ದ ಜಿಂಜೀ, [[ಮಧುರೈ]] ಮತ್ತು ತಂಜಾವೂರಿನ ನಾಯಕ ಮನೆತನದವರು ಸ್ವತಂತ್ರರಾಗಲು ತಹತಹಿಸತೊಡಗಿದರು. [[ಬಿಜಾಪುರ]]ದಿಂದ ದಾಳಿಯ ಭೀತಿಯಲ್ಲಿದ್ದ ತಿರುಮಲನು , ನಾಯಕರುಗಳ ಸ್ವತಂತ್ರ ಆಳ್ವಿಕೆಗೆ ಮೌನಸಮ್ಮತಿ ನೀಡಬೇಕಾಯಿತು. ಚಂದ್ರಗಿರಿಗೆ, ಅದರ ನಂತರ ವೆಲ್ಲೂರಿಗೆ ರಾಜಧಾನಿಯನ್ನು ಮುಂದೆ ಬದಲಾಯಿಸಲಾಯಿತು. ಈ ಅವಧಿಯಲ್ಲಿಯೇ [[ಮೈಸೂರು ಸಂಸ್ಥಾನ |ಮೈಸೂರು]], [[ಕೆಳದಿ]], ವೆಲ್ಲೂರು ಮೊದಲಾದ ಸಾಮಂತರು ವಿಜಯನಗರದಿಂದ ಸ್ವತಂತ್ರರಾಗಿದ್ದರು. ವಿಜಯನಗರದ ಅವನತಿಯಿಂದಾಗಿ, ದಕ್ಷಿಣಭಾರತದ ರಾಜಕೀಯ ವ್ಯವಸ್ಥೆ ಛಿದ್ರಛಿದ್ರವಾಯಿತು. ಆದರೂ ಈ ಸಾಮ್ರಾಜ್ಯದ [[ತೆಲುಗು ]] ಭಾಷಿಕ ಅವಶೇಷಗಳು ದಕ್ಷಿಣ ಭಾರತದಲ್ಲಿ ಅಲ್ಲಲ್ಲಿ ಉಳಿದುಕೊಂಡವು. [[ಮೈಸೂರು ಸಂಸ್ಥಾನ]], [[ಕೆಳದಿ]] ನಾಯಕರು, [[ಚಿತ್ರದುರ್ಗ]]ದ ನಾಯಕರು ಇತ್ಯಾದಿ ಸಣ್ಣ ರಾಜ್ಯಗಳ ತಲೆ ಎತ್ತುವುದರೊಂದಿಗೆ, ಮುಂದಿನ ನಾಲ್ಕು ಶತಮಾನಗಳ ಕಾಲ ಕನ್ನಡ ನಾಡಿನಲ್ಲಿ ಏಕಾಧಿಪತ್ಯವು ಎರವಾಯಿತು. ಮುಂದೆ ಚಿತ್ರದುರ್ಗ ಮತ್ತು ಕೆಳದಿ ನಾಯಕರ ಸಂಸ್ಥಾನಗಳು ಮೈಸೂರಿನಲ್ಲಿ ಲೀನವಾದವು. ವಿಜಯನಗರದ ಮೇಲೆ ವಿಜಯ ಸಾಧಿಸಿದರೂ ಸುಲ್ತಾನರುಗಳು ತಮ್ಮತಮ್ಮಲ್ಲಿಯೇ ಕಚ್ಚಾಡಿಕೊಳ್ಳುವುದನ್ನು ಮುಂದುವರಿಸಿ, ಮುಂದೆ ಮೊಘಲರ, ಅದರ ನಂತರ ಬ್ರಿಟಿಷರ, ಅಧೀನಕ್ಕೆ ಸೇರಿಹೋದರು. ಕೆಲ ಕನ್ನಡ ಪ್ರದೇಶಗಳು ಹೈದರಾಬಾದಿನ ನಿಜಾಮನ ಆಳ್ವಿಕೆಗೆ ಸೇರಿದರೆ , ಮತ್ತೊಂದು ಭಾಗ ಬ್ರಿಟಿಶರ ಅಧೀನದಲ್ಲಿ ಆಳುತ್ತಿದ್ದ ಮರಾಠರ ಬಾಂಬೇ ಪ್ರಸಿಡೆನ್ಸಿಗೆ ಸೇರಿತು.
 
==ಸೋಲಿಗೆ ಸೋಲಿಗೆ ಕಾರಣಗಳು ==
 
ವಿಜಯನಗರದ ಸೋಲಿನ ಕಾರಣಗಳ ಬಗ್ಯೆ ಇತಿಹಾಸಜ್ಞರಲ್ಲಿ ಅನೇಕ ಉತ್ಸಾಹಪೂರ್ಣ ಚರ್ಚೆಗಳಾಗಿವೆ. ಆ ಕಾಲದ ಶಾಸನಗಳು, ಇತರ ದಾಖಲೆಗಳಲ್ಲದೆ, ಯುದ್ಧದ ಸಮಯದಲ್ಲಿ ವಿಜಯನಗರಕ್ಕೆ ಭೇಟಿಯಿತ್ತಿದ್ದ ಯೂರೋಪಿಯನ್ ಪ್ರವಾಸಿಗಳ ಬರವಣಿಗೆಗಳೂ ಈ ವಿಷಯದಲ್ಲಿ ಬೆಳಕು ಚೆಲ್ಲುತ್ತವೆ.
 
* ಒಂದು ವಾದದ ಪ್ರಕಾರ , ವಿಜಯನಗರದ ಸೇನೆಯಲ್ಲಿ , ತುಲನಾತ್ಮಕವಾಗಿ , ಕಡಿಮೆ ಅಶ್ವಾರೋಹಿ ಸೈನಿಕರಿದ್ದು, ಗಜಾರೋಹಿ ದಂಡನಾಯಕರಮೇಲೆ ಅವರು ಅವಲಂಬಿತರಾಗಿದ್ದರಿಂದ , ಸೈನ್ಯದ ಮುನ್ನಡೆ ನಿಧಾನವಾಯಿತು. ಇದಕ್ಕೆ ವಿರುದ್ಧವಾಗಿ, ಸುಲ್ತಾನರ ಸೇನೆಯಲ್ಲಿ ಪರ್ಶಿಯಾದ ಕುದುರೆಗಳ ಮೇಲಿದ್ದ ಚತುರ ದಂಡನಾಯಕರು ಚುರುಕಿನಿಂದ ತಮ್ಮ ಸೈನ್ಯವನ್ನು ಮುನ್ನುಗ್ಗಿಸಲು ಶಕ್ತರಾದರು.
 
* ವಿಜಯನಗರದ ಮೂರೂ ಮುಖ್ಯ ದಂಡನಾಯಕರು , ರಾಮರಾಯನೂ ಸೇರಿದಂತೆ , ಮಧ್ಯವಯಸ್ಕರಾಗಿದ್ದರೆ , ಸುಲ್ತಾನರ ಸೇನೆಯ ದಂಡನಾಯಕರು ಯುವಹುಮ್ಮಸ್ಸಿನಲ್ಲಿದ್ದರು.
 
* ವಿಜಯನಗರದ ಕಾಲಾಳುಗಳ ಶಸ್ತ್ರ ಬಿದಿರಿನಿಂದ ಮಾಡಿದ ಬಿಲ್ಲು. ಸುಲ್ತಾನರ ಸೇನೆಯ ಬಿಲ್ಲು ಸಿಡಿಬಿಲ್ಲಿನಂತಿದ್ದು , ಲೋಹದಿಂದ ಮಾಡಲಾಗಿತ್ತು. ಬಿದುರಿನ ಬಿಲ್ಲುಗಳಿಗಿಂತಲೂ ಇವು ಹೆಚ್ಚು ಶಕ್ತಿಯುತವಾಗಿಯೂ, ನಿಖರವಾಗಿಯೂ ಇದ್ದವು. ವಿಜಯನಗರದ ಈಟಿಗಳು ಏಳು ಅಟಿ ಉದ್ದದ್ದಾಗಿದ್ದರೆ, ಎದುರಾಳಿಗಳದ್ದು ಹದಿನೈದು ಅಡಿ ಉದ್ದವಿತ್ತು.
 
* ಸುಲ್ತಾನರ ಸೈನ್ಯದ ಫಿರಂಗಿ ದಳದವರು ತ, ಆ ಕಾಲದಲ್ಲಿ ಅತ್ಯುತ್ತಮ ಎಂದು ಪರಿಗಣಿಸಲಾಗುತ್ತಿದ್ದ ತುರ್ಕಿಸ್ಥಾನದಿಂದ ಬಂದವರಾಗಿದ್ದರು. ವಿಜಯನಗರ ಅವಲಂಬಿತವಾಗಿದ್ದ ಯೂರೋಪಿನ ಸಂಬಳದ ಸಿಪಾಯಿಗಳಿಗೆ ತರಬೇತಿಯ ಕೊರತೆಯಿತ್ತು.
 
* ಇಷ್ಟೆಲ್ಲಾ ಅನಾನುಕೂಲಗಳಿದ್ದರೂ, ವಿಜಯನಗರದ ಸೋಲಿಗೆ ಮುಖ್ಯ ಕಾರಣ ಅವರ ಸೇನೆಯ ಇಬ್ಬರು ಮುಖ್ಯ ಸೇನಾಧಿಕಾರಿಗಳ ವಿಶ್ವಾಸದ್ರೋಹ ಎಂಬುದನ್ನು ಇತಿಹಾಸಜ್ಞರು ಒಪ್ಪುತ್ತಾರೆ. ಈ ಇಬ್ಬರು ಗಿಲಾನಿ ಸೋದರರ ಸುಪರ್ದಿನಲ್ಲಿ ಸಾವಿರಾರು ಸೈನಿಕರ ಪಡೆಯಿತ್ತು. ಇವರಿಬ್ಬರು ಮೊದಲು ಆದಿಲ್ ಶಾಹಿ ದೊರೆಗಳ ಸೈನ್ಯದಲ್ಲಿದ್ದು , ಅಲ್ಲಿಂದ ರಾಮರಾಯನ ಸೇನೆಗೆ ಪಕ್ಷಾಂತರ ಮಾಡಿದ್ದರು. ಯುದ್ಧ ನಿರ್ಣಾಯಕ ಘಟ್ಟದಲ್ಲಿದ್ದಾಗ ಈ ಇಬ್ಬರು ಸಹೋದರರು ಯುದ್ಧಭೂಮಿಯಿಂದ ಓಡಿಹೋದರು. ವಿಜಯನಗರವನ್ನು ಕ್ರಿ.ಶ. ೧೫೬೭ರಲ್ಲಿ ಸಂದರ್ಶಿಸಿದ್ದ ಫ್ರೆಂಡ್ರಿಚಿ ಮತ್ತು ಅಂಕೆಟಿ ದು ಪೆರಾನ್ ಎಂಬ ಯೂರೋಪಿನ ಪ್ರವಾಸಿಗಳ ಬರವಣಿಗೆಗಳೂ ಈ ವಿಷಯವನ್ನು ಧೃಡಪಡಿಸುತ್ತದೆ.
 
<references />
 
[[ವರ್ಗ:ವಿಜಯನಗರ ಸಾಮ್ರಾಜ್ಯ]]
೫೫ ನೇ ಸಾಲು:
[[ml:തളിക്കോട്ട യുദ്ധം]]
[[pt:Batalha de Talikota]]
[[ta:தலிகோட்டா போர்சண்டை]]
[[te:తళ్ళికోట యుద్ధము]]
"https://kn.wikipedia.org/wiki/ತಾಳೀಕೋಟೆಯ_ಯುದ್ಧ" ಇಂದ ಪಡೆಯಲ್ಪಟ್ಟಿದೆ