ಸಾವನದುರ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Formatting
ಚು robot Adding: gu:સાવનદુર્ગા; cosmetic changes
೧ ನೇ ಸಾಲು:
[[Fileಚಿತ್ರ:Savandurga.jpg|thumb|ಉತ್ತರ ಭಾಗದಿಂದ ಸಾವನದುರ್ಗ]]
[[Fileಚಿತ್ರ:SavandurgaMap.jpg|thumb|ಸಾವನದುರ್ಗ ಪ್ರದೇಶದ ನಕ್ಷೆ]]
'''ಸಾವನದುರ್ಗವು''' [[ಭಾರತ]] ದೇಶದ [[ಕರ್ನಾಟಕ|ಕರ್ನಾಟಕ ರಾಜ್ಯದ]] ರಾಜಧಾನಿ [[ಬೆಂಗಳೂರು|ಬೆಂಗಳೂರಿನಿಂದ]] ೩೩ ಕಿಮೀ ಪಶ್ಚಿಮದಲ್ಲಿರುವ ಮಾಗಡಿ ರಸ್ತೆಯ {{coord|12.919654|N|77.292881|E|region:IN_type:landmark}} ಎದುರಿಗಿರುವ ಒಂದು ಬೆಟ್ಟವಾಗಿದೆ. ಆ ಬೆಟ್ಟವು ಅದರ ಮೇಲಿರುವ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ ಮತ್ತು ಪ್ರಪಂಚದಲ್ಲೇ ಅತ್ಯಂದ ದೊಡ್ಡ ಏಕಶಿಲಾ ಬೆಟ್ಟವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ೧೨೨೬ ಮೀಟರ್‌ಗಳಷ್ಟು ಎತ್ತರದಲ್ಲಿದೆ ಮತ್ತು ಡೆಕ್ಕನ್ ಪ್ರಸ್ಥಭೂಮಿಯ ಒಂದು ಭಾಗವಾಗಿ ರೂಪುಕೊಡುತ್ತದೆ. ಇದು ಪರ್ಯಾಯ ದ್ವೀಪದ ನೈಸ್‌ಗಳು, ಮೂಲ ಸ್ತರಪ್ರವಿಷ್ಟಾಗ್ನಿಶಿಲೆಗಳು ಮತ್ತು ಲ್ಯಾಟರೈಟ್‌ಗಳನ್ನು ಒಳಗೊಂಡಿದೆ. ಹತ್ತಿರದಲ್ಲಿ ಅರ್ಕಾವತಿ ನದಿಯು ತಿಪ್ಪಗೊಂಡನಹಳ್ಳಿ ಜಲಾಶಯದ ಮೂಲಕ ಮತ್ತು ಮಂಚನಬೆಲೆ ಅಣೆಕಟ್ಟಿನತ್ತ ಹರಿಯುತ್ತದೆ.
 
== ಹೆಸರಿನ ಉಗಮ ==
ಸಾವನದುರ್ಗವು ಸ್ಥಳೀಯವಾಗಿ ಕರಿಗುಡ್ಡ (ಕಪ್ಪು ಬೆಟ್ಟ) ಮತ್ತು ಬಿಳಿಗುಡ್ಡ (ಬಿಳಿ ಬೆಟ್ಟ) ಎಂಬ ಹೆಸರು ಹೊಂದಿರುವ ಎರಡು ಬೆಟ್ಟಗಳಿಂದ ರೂಪುಗೊಂಡಿದೆ. ಈ ಬೆಟ್ಟದ ಹೆಸರಿನ ಆರಂಭಿದ ದಾಖಲೆಯು ಕ್ರಿ.ಶ. ೧೩೪೦ ರಲ್ಲಿ ಮಾಡಬಲುವಿನ ಹೊಯ್ಸಳ ಬಲ್ಲಾಳ III ರ ಅವಧಿಯಲ್ಲಿ ಕಂಡುಬಂದಿದೆ, ಇಲ್ಲಿ ಇದನ್ನು ''ಸಾವಂಡಿ'' ಎಂದು ಕರೆಯಲಾಗುತ್ತದೆ. ಈ ಹೆಸರು ಅಚ್ಯುತರಾಯನ ಅಧೀನದ ಮಾಗಡಿಯ ಗವರ್ನರ್ ''ಸಾಮಂತರಾಯ'' ನಿಗೆ ಸೇರಿದ್ದೆಂದು ಹೇಳಲಾದ ''ಸಾಮಂತದುರ್ಗ'' ದಿಂದ ಹುಟ್ಟಿಕೊಂಡಿದೆಯೆಂದು ಮತ್ತೊಂದು ಅವಲೋಕನವು ಸೂಚಿಸುತ್ತದೆ, ಆದರೂ ಇದನ್ನು ದೃಢಪಡಿಸುವ ಯಾವುದೇ ಲಿಖಿತ ದಾಖಲೆಗಳಿಲ್ಲ. ಇದು ಕೆಂಪೆಗೌಡದಂತೆ ಮಾಗಡಿ ರಾಜರ ಎರಡನೇ ರಾಜಧಾನಿಯಾಗಿತ್ತು. ೧೬೩೮ ರಿಂದ ೧೭೨೮ ರವರೆಗೆ, ಮೈಸೂರು ಈ ಸ್ಥಳವನ್ನು ವಶಪಡಿಸಿಕೊಂಡಿತು ಮತ್ತು ದಳವಾಯಿ ದೇವರಾಜರು ನೆಲಪಟ್ಟಣದಲ್ಲಿ ಅರಮನೆಯನ್ನು ನಿರ್ಮಿಸಿಕೊಂಡು ಈ ಸ್ಥಳದಲ್ಲಿ ವಾಸಿಸಿದರು. ೧೭೯೧ ರಲ್ಲಿ ಲಾರ್ಡ್ ಕಾರ್ನ್‌ವಾಲಿಸ್ [[ಮೂರನೇ ಮೈಸೂರು ಯುದ್ಧ|ಮೂರನೇ ಆಗ್ಲೊ-ಮೈಸೂರು ಯುದ್ಧ]]ದ ಸಂದರ್ಭದಲ್ಲಿ [[ಟಿಪ್ಪು ಸುಲ್ತಾನ್|ಟಿಪ್ಪು ಸುಲ್ತಾನ]]ನ ಸೈನ್ಯದಿಂದ ಇದನ್ನು ವಶಪಡಿಸಿಕೊಂಡರು.<ref>ವಿಲ್ಕ್ಸ್, ಮಾರ್ಕ್. ''ಹಿಸ್ಟೋರಿಕಲ್ ಸ್ಕೆಚಸ್ ಆಫ್ ದಿ ಸೌತ್ ಆಫ್ ಇಂಡಿಯಾ ಇನ್ ಆನ್ ಅಟೆಂಪ್ಟ್ ಟು ಟ್ರೇಸ್ ದಿ ಹಿಸ್ಟರಿ ಆಫ್ ಮೈಸೂರ್: ಫ್ರಮ್ ದಿ ಒರಿಜಿನ್ ಆಫ್ ದಿ ಹಿಂದೂ ಗವರ್ನ್ಮೆಂಟ್ ಆಫ್ ದಾಟ್ ಸ್ಟೇಟ್, ಟು ದಿ ಎಕ್ಸ್‌ಟಿಂಕ್ಷನ್ ಆಫ್ ದಿ ಮೊಹಮ್ಮೆದನ್ ಡೈನಸ್ಟಿ ಇನ್ ೧೭೯೯.'' ಮುರ್ರೆ ಹ್ಯಾಮಿಕ್‌ರ ಟಿಪ್ಪಣಿಗಳಿಂದ ಸಂಪಾದಿಸಲಾಗಿದೆ. ಮೈಸೂರು: ಗವರ್ನ್ಮೆಂಟ್ ಬ್ರ್ಯಾಂಚ್ ಪ್ರೆಸ್, ೧೯೩೦-೧೯೩೨.</ref><ref>{{cite book|author=Anon.|page=150|title=The Imperial Gazetteer of India. Volume 22|url=
http://www.archive.org/stream/imperialgazettee015644mbp#page/n155/mode/2up/search/savandurga|publisher=Oxford|year=1908}}</ref> ರಾಬರ್ಟ್ ಹೋಮ್ ಆತನ ''ಸೆಲೆಕ್ಟ್ ವ್ಯೂವ್ಸ್ ಇನ್ ಮೈಸೂರ್'' ‌ನಲ್ಲಿ (೧೭೯೪) ಬೆಂಗಳೂರಿನಿಂದ ಬೆಟ್ಟದ ದೂರದ ದೃಶ್ಯಗಳನ್ನು ತೋರಿಸುತ್ತಾರೆ.<ref>ಹೋಮ್, ರಾಬರ್ಟ್. ''ಸೆಲೆಕ್ಟ್ ವ್ಯೂವ್ಸ್ ಇನ್ ಮೈಸೂರ್: ದಿ ಕಂಟ್ರಿ ಆಫ್ ಟಿಪ್ಪು ಸುಲ್ತಾನ್ ಫ್ರಮ್ ಡ್ರಾಯಿಂಗ್ಸ್ ಟೇಕನ್ ಆನ್ ದಿ ಸ್ಪಾಟ್ ಬೈ ಮಿಸ್ಟರ್ ಹೋಮ್ ವಿದ್ ಹಿಸ್ಟೋರಿಕಲ್ ಡಿಸ್ಕ್ರಿಪ್ಷನ್ಸ್.'' ಮೊದಲ ಪ್ರಕಟಣೆ. ಲಂಡನ್: ಬೋವರ್, ೧೭೯೪.</ref> ಆತ ಇದನ್ನು ''ಸಾವಿನದುರ್ಗ'' ಅಥವಾ ''ಫೋರ್ಟ್ ಆಫ್ ಡೆತ್'' ಎಂದು ಕರೆದಿದ್ದಾರೆ. ಈ ಬೆಟ್ಟದ ತುದಿಯನ್ನು ತಲುಪಲು ಮೆಟ್ಟಿಲುಗಳಿರಲಿಲ್ಲ ಮತ್ತು ಇದರ ಸುತ್ತ ಬಿದಿರು ಮತ್ತು ಇತರ ಮರಗಳು ಆವರಿಸಿಕೊಂಡು ಒಂದು ತಡೆಗಟ್ಟನ್ನು ರೂಪಿಸಿದ್ದವು.
೯ ನೇ ಸಾಲು:
ಈ ಪ್ರದೇಶದಲ್ಲಿ ಬೃಹತ್ ಶಿಲೆಯ ಹೂಳುವ ಸಮಾಧಿಗಳು ಕಂಡುಬಂದಿವೆ.<ref>ಬ್ರ್ಯಾನ್‌ಫಿಲ್, BR (೧೮೮೧) ಆನ್ ದಿ ಸಾವನದುರ್ಗ ರ್ಯೂಡ್ ಸ್ಟೋನ್ ಸೆಮೆಟೆರಿ, ಸೆಂಟ್ರಲ್ ಮೈಸೂರ್. ಇಂಡಿಯನ್ ಆಂಟಿಕ್ವರಿ ೧೦:೧-೧೨</ref>. ಸಂಸ್ಕೃತದಲ್ಲಿ ಸಾವಣವೆಂದರೆ ಮೂರು ಬಾರಿ ಮಾಡುವ ವಿಧಿವಿಹಿತ ಕ್ರಮವೆಂದು ಅರ್ಥ.
 
== ಪ್ರವಾಸೋದ್ಯಮ ==
[[Fileಚಿತ್ರ:Manchanbele2.jpg|thumb|ಮಂಚನಬೆಲೆ ಜಲಾಶಯದಿಂದ ಗೋಚರಿಸುವ ಸಾವನದುರ್ಗ]]
ಸಾವನದುರ್ಗ ಬೆಟ್ಟಗಳಿಗೆ ಯಾತ್ರಾರ್ಥಿಗಳು ಆಗಿಂದಾಗ್ಗೆ ಹೋಗುತ್ತಿರುತ್ತಾರೆ. ಇವರು ಬೆಟ್ಟದ ಬುಡದಲ್ಲಿರುವ ಸಾವಂಡಿ ವೀರಭದ್ರೇಶ್ವರ ಸ್ವಾಮಿ ಮತ್ತು ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲು ಬರುತ್ತಾರೆ. ವಿಹಾರ ಪ್ರವಾಸಿಗಳು ಬೆಟ್ಟದ ನಿರ್ಮಲವೂ ಪ್ರಶಾಂತವೂ ಆದ ಪರಿಸರದಲ್ಲಿ ಸಮಯ ಕಳೆಯಲು ಬರುತ್ತಾರೆ. ಶಿಲಾ ಆರೋಹಿ, ಗುಹೆ ಅನ್ವೇಷಕರು ಮತ್ತು ಸಾಹಿಸಗಳು ಈ ಸ್ಥಳಕ್ಕೆ ಆಗಾಗ್ಗೆ ಬರುವ ಇತರರಾಗಿದ್ದಾರೆ.
 
೧೮ ನೇ ಸಾಲು:
ರಾಮನಗರಂ ಒಂದಿಗೆ ಇದೂ ಸಹ ಡೇವಿಡ್ ಲೀನ್‌ನ ಚಲನಚಿತ್ರ ''ಎ ಪಾಸೇಜ್ ಟು ಇಂಡಿಯಾ'' ವನ್ನು ಚಿತ್ರೀಕರಿಸಲು ಬಳಸಿದ ಒಂದು ಸ್ಥಳವಾಗಿದೆ.
 
== ಪ್ರಾಣಿ ಸಂಕುಲ ==
 
ಈ ಬೆಟ್ಟಗಳು ಅಳಿವಿನಂಚಿನಲ್ಲಿರುವ ಹಳದಿ-ಕತ್ತಿನ ಬುಲ್ಬುಲ್ಗಳಿಗೆ ನೆಲೆಯಾಗಿದೆ ಹಾಗೂ ಇವು ಹಿಂದೆ ಉದ್ದ-ಕೊಕ್ಕಿನ ರಣಹದ್ದುಗಳು ಮತ್ತು ಹಿಂಭಾಗ ಬಿಳಿಯಾಗಿರುವ ರಣಹದ್ದುಗಳಿಗೆ ಮನೆಯಾಗಿದ್ದವು. ಇಲ್ಲಿರುವ ಇತರ ವನ್ಯಜೀವಿಗಳೆಂದರೆ ಸ್ಲಾತ್ ಕರಡಿ ಮತ್ತು ಚಿರತೆ.
 
== ಸಸ್ಯಸಂಪತ್ತು ==
ಈ ಪ್ರದೇಶದ ಸುತ್ತಲೂ ಕುರುಚಲು ಪೊದೆಗಳಿಂದ ಕೂಡಿದ ಕಾಡಿದೆ ಮತ್ತು ಒಣಗಿದ, ವರ್ಣಕ್ಕೊಮ್ಮೆ ಎಲೆ ಉದುರಿಸುವ ಅರಣ್ಯವು ಸುಮಾರು ೨೭ km² ಪ್ರದೇಶವನ್ನು ಆವರಿಸಿದೆ. ಆನೋಜೈಸಸ್-ಕ್ಲೋರೋಕ್ಸಿಲಾನ್ ಅಕೇಶಿಯ ಸರಣಿಯ ಪೊದೆ ಮತ್ತು ಮರಗಳ ಹುಲ್ಲುಗಾವಲೆಂದು ಪರಿಗಣಿಸಲಾಗುವ ಇದು ಹೆಚ್ಚಿನ ವೈವಿಧ್ಯತೆಯನ್ನು ಹೊಂದಿದೆ. ಅವನತಿ ಹೊಂದಿರುವ ಈ ಅರಣ್ಯವು ಸುಮಾರು ೫೯ ಮರಗಳು ಮತ್ತು ೧೧೯ ಪೊದೆ ಜಾತಿಗಳನ್ನು ಹೊಂದಿದೆ.
ಇಲ್ಲಿ ಕಂಡುಬಂದ ಕೆಲವು ಸಸ್ಯ ಜಾತಿಗಳೆಂದರೆ:<ref>ಕೆ. ಎಸ್. ಮುರಳಿ, ಎ. ಕವಿತಾ, ಮತ್ತು ಆರ್. ಪಿ. ಹರಿಶ್ (೨೦೦೩) ಸ್ಪೇಶಿಯಲ್ ಪ್ಯಾಟರ್ನ್ಸ್ ಆಫ್ ಟ್ರೀ ಆಂಡ್ ಶ್ರಬ್ ಸ್ಪೀಸೀಸ್ ಡೈವರ್ಸಿಟಿ ಇನ್ ಸಾವನದುರ್ಗ ಸ್ಟೇಟ್ ಫಾರೆಸ್ಟ್, ಕರ್ನಾಟಕ. ಕರೆಂಟ್ ಸೈನ್ಸ್, ೮೪(೬):೮೦೮-೮೧೩</ref>
೧೫೬ ನೇ ಸಾಲು:
</div>
 
== ಉಲ್ಲೇಖಗಳು ==
{{reflist}}
 
== ಬಾಹ್ಯ ಕೊಂಡಿಗಳು‌ ==
{{Commons category}}
* [http://wikimapia.org/300630/Savan-Durga ಬರ್ಡ್ಸ್ ಐ ವ್ಯೂ ಆಫ್ ಸಾವನದುರ್ಗ]
೧೬೫ ನೇ ಸಾಲು:
* [http://www.archive.org/details/SavandurgaFlora ಎಕನಾಮಿಕಲಿ ಇಂಪಾರ್ಟೆಂಟ್ ಫ್ಲೋರ ಆಫ್ ದಿ ರೀಜನ್]
 
[[Categoryವರ್ಗ:ಕರ್ನಾಟಕದ ಭೂಗೋಳಶಾಸ್ತ್ರ]]
[[Categoryವರ್ಗ:ಸಂದರ್ಶಕರಿಗೆ ಬೆಂಗಳೂರಿನಲ್ಲಿರುವ ಆಕರ್ಷಣೆಗಳು]]
[[Categoryವರ್ಗ:ಕರ್ನಾಟಕದ ಬೆಟ್ಟಗಳು]]
 
[[en:Savandurga]]
[[gu:સાવનદુર્ગા]]
[[hi:सावनदुर्ग]]
[[te:సావనదుర్గ]]
"https://kn.wikipedia.org/wiki/ಸಾವನದುರ್ಗ" ಇಂದ ಪಡೆಯಲ್ಪಟ್ಟಿದೆ