ಜೈವ್‌‌ (ನೃತ್ಯ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/Jive_(dance) (revision: 429696586) using http://translate.google.com/toolkit with about 92% human translations.
( ಯಾವುದೇ ವ್ಯತ್ಯಾಸವಿಲ್ಲ )

೨೧:೫೩, ೨೧ ಮೇ ೨೦೧೧ ನಂತೆ ಪರಿಷ್ಕರಣೆ

ಇದು ನರ್ತನಶಾಲೆಯ ನೃತ್ಯ ಶೈಲಿಯ ಕುರಿತಾದ ಲೇಖನವಾಗಿದೆ. "ಜೈವ್‌‌" ಎಂಬ ಹೆಸರನ್ನು ಆಧಾರವಾಗಿಟ್ಟುಕೊಂಡಿರುವ ಇತರ ನೃತ್ಯಗಳಿಗಾಗಿ ನೋಡಿ: ಜೈವ್‌‌.

ನರ್ತನಶಾಲೆಯ ನರ್ತನದಲ್ಲಿ, ಜೈವ್‌‌ ಎಂಬುದು 4/4 ಲಯದಲ್ಲಿರುವ ಒಂದು ನೃತ್ಯ ಶೈಲಿಯಾಗಿದ್ದು, ಇದು 1930ರ ದಶಕದ ಆರಂಭದಲ್ಲಿ ಅಮೆರಿಕಾದ ನೀಗ್ರೋಗಳಿಂದ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಹುಟ್ಟಿಕೊಂಡಿತು. ಕ್ಯಾಬ್‌ ಕ್ಯಾಲೊವೇ ಎಂಬಾತ 1934ರಲ್ಲಿ ಇದನ್ನು 'ಜೈವ್‌‌' ಎಂಬ ಪ್ರಕಾರವಾಗಿ ಸಾರ್ವಜನಿಕರ ಮುಂದೆ ಮೂಲತಃ ಇದನ್ನು ಸಾದರಪಡಿಸಿದ. ಇದು ತೀವ್ರಧಾಟಿಯ ನೃತ್ಯದ ಒಂದು ಸ್ವರೂಪವಾದ ಜಿಟರ್‌ಬರ್ಗ್‌ ಎಂಬುದರ ಒಂದು ಉಲ್ಲಾಸಭರಿತ ಮತ್ತು ನಿರ್ಬಂಧಿಸದ ರೂಪಾಂತರವಾಗಿದೆ. ‌‌ಗ್ಲೆನ್‌ ಮಿಲ್ಲರ್ ಎಂಬಾತ 1938ರಲ್ಲಿ "ಡೂಯಿಂಗ್‌ ದಿ ಜೈವ್‌‌" ಎಂಬ ಹಾಡಿನೊಂದಿಗೆ ತನ್ನದೇ ಆದ ಜೈವ್‌‌ ನೃತ್ಯವನ್ನು ಪರಿಚಯಿಸಿದ, ಆದರೆ ಇದು ಎಂದಿಗೂ ಜನಪ್ರಿಯವಾಗಲಿಲ್ಲ.

ಜೈವ್‌‌ ನೃತ್ಯವು ಐದು ಅಂತರರಾಷ್ಟ್ರೀಯ ಲ್ಯಾಟಿನ್‌ ನೃತ್ಯಗಳ ಪೈಕಿ ಒಂದೆನಿಸಿಕೊಂಡಿದೆ. ಸ್ಪರ್ಧೆಯಲ್ಲಿ ಈ ನೃತ್ಯವನ್ನು 176 ತಾಳಗಳನ್ನು ಪ್ರತಿ ನಿಮಿಷಕ್ಕೆ ಸಂಯೋಜಿಸಿಕೊಂಡಿರುವ ಒಂದು ವೇಗದಲ್ಲಿ ಸಾದರಪಡಿಸಲಾಗುತ್ತದೆಯಾದರೂ, ಕೆಲವೊಂದು ನಿದರ್ಶನಗಳಲ್ಲಿ ಈ ವೇಗವನ್ನು ಪ್ರತಿ ನಿಮಿಷಕ್ಕೆ 128 ಮತ್ತು 160ರವರೆಗಿನ ತಾಳಗಳಿಗೆ ತಗ್ಗಿಸಲಾಗುತ್ತದೆ.

ಇದರ ಮೂಲಭೂತ ಮಾದರಿಗಳ ಪೈಕಿ ಅನೇಕವು ಈಸ್ಟ್‌ ಕೋಸ್ಟ್‌ ತೀವ್ರಧಾಟಿಯ ಮಾದರಿಗಳನ್ನು ಹೋಲುವಂತಿರುತ್ತದೆ. ಆದರೆ, ಮುಪ್ಪಟ್ಟು ಹೆಜ್ಜೆಗಳ (ಪಾದಾಪಸರಣಗಳ) ಅತೀವವಾಗಿ ತಾಳಲೋಪ ಮಾಡಲ್ಪಟ್ಟ ಲಯವು ಒಂದು ಪ್ರಮುಖ ವ್ಯತ್ಯಾಸವಾಗಿ ಕಂಡುಬರುತ್ತದೆ; ಈ ಪಾದಾಪಸರಣಗಳು ECSನಲ್ಲಿ ಸ್ಟ್ರೈಟ್‌ ಎಯ್ತ್ಸ್‌ ಎಂದು ಕರೆಯಲ್ಪಡುವ ಲಯವನ್ನೂ ಜೈವ್‌ನಲ್ಲಿ ಪ್ರಬಲ ತೀವ್ರಧಾಟಿಯನ್ನೂ ಬಳಸುತ್ತವೆ.

ಇತಿಹಾಸ

1930ರ ದಶಕ ಮತ್ತು 1940ರ ದಶಕಗಳಲ್ಲಿ ತೀವ್ರಧಾಟಿ ಸಂಗೀತವನ್ನು ನುಡಿಸುತ್ತಿದ್ದ ಜಾಜ್‌ ಸಂಗೀತಗಾರರಿಗೆ "ಜೈವ್‌‌" ಎಂಬುದು ಆಶು-ಮಾತುಗಾರಿಕೆ ಅಥವಾ ಕೆಲಸಕ್ಕೆ ಬಾರದ ಮಾತನ್ನು ಸೂಚಿಸುವ ಒಂದು ಅಭಿವ್ಯಕ್ತಿಯಾಗಿತ್ತು.[೧]

ಸುಮಾರು 1942ರ ಅವಧಿಯಲ್ಲಿ ಅಮೆರಿಕಾದ ಯೋಧರು ಲಿಂಡಿ ಹಾಪ್‌/ಜಿಟರ್‌ಬರ್ಗ್‌ ಪ್ರಕಾರವನ್ನು ಯುರೋಪ್‌ಗೆ ತಂದರು. ಅಲ್ಲಿ ಈ ನೃತ್ಯಕ್ಕೆ ಕ್ಷಿಪ್ರಕಾಲದಲ್ಲಿಯೇ ಯುವಜನತೆಯ ವಲಯದಲ್ಲಿ ಒಂದು ಅಭಿಮಾನಿ ವರ್ಗವು ಸೃಷ್ಟಿಯಾಯಿತು. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ತೀವ್ರಧಾಟಿ ಎಂಬ ಶಬ್ದವು ನೃತ್ಯವನ್ನು ವಿವರಿಸಲು ಬಳಸಲ್ಪಡುವ ಅತ್ಯಂತ ಸಾಮಾನ್ಯ ಪದ ಎನಿಸಿಕೊಂಡಿತು.[೨] UKಯಲ್ಲಿ ನೃತ್ಯ-ಕೌಶಲದಲ್ಲಿ ರೂಪಾಂತರಗಳನ್ನು ಮಾಡಿದ್ದರಿಂದಾಗಿ ಬೂಗಿ-ವೂಗಿ ಮತ್ತು ಸ್ವಿಂಗ್‌ ಬೂಗಿಯಂಥ ಶೈಲಿಗಳು ಹುಟ್ಟಿಕೊಳ್ಳುವುದಕ್ಕೆ ಕಾರಣವಾಯಿತು ಹಾಗೂ "ಜೈವ್‌‌" ಎಂಬುದು ಸಾರ್ವತ್ರಿಕ ಶಬ್ದವಾಗಿ ಹಂತಹಂತವಾಗಿ ಹೊರಹೊಮ್ಮಲು ಶುರುವಾಯಿತು.[೩]

ಯುದ್ಧದ ನಂತರ ಬೂಗಿ ಪ್ರಕಾರವು ಜನಪ್ರಿಯ ಸಂಗೀತಕ್ಕೆ ಸಂಬಂಧಿಸಿದ ಪ್ರಬಲ ಸ್ವರೂಪ ಎನಿಸಿಕೊಂಡಿತು. ಆದಾಗ್ಯೂ, ಇದು ಟೀಕೆಗಳಿಂದ ದೂರವೇನೂ ಉಳಿಯಲಿಲ್ಲ. ಇದೊಂದು ವಿದೇಶೀ ನೃತ್ಯ, ಅಸಭ್ಯ ನೃತ್ಯ ಎಂಬಂಥ ಟೀಕೆಗಳು ಕೂಡಾ ಈ ಅವಧಿಯಲ್ಲಿ ಕೇಳಿಬಂದವು. ನರ್ತನಶಾಲೆಯ ನರ್ತನ ಪ್ರಕಾರದ ಪ್ರಸಿದ್ಧ ಗುರುವಾದ ಅಲೆಕ್ಸ್‌ ಮೂರ್‌ ಈ ಕುರಿತು ಮಾತನಾಡುತ್ತಾ, ಅಸಹ್ಯವಾದಂಥ ಅಂಶವನ್ನು ತಾನೆಂದೂ ಕಾಣಲಿಲ್ಲ ಎಂದು ಅಭಿಪ್ರಾಯಪಟ್ಟ. ಲಾವಣ್ಯಮಯ ಮತ್ತು ಉಲ್ಲಾಸಭರಿತವಾಗಿರುವ ನರ್ತನಶಾಲೆಯ ಜೈವ್‌‌ ನೃತ್ಯ ಪ್ರಕಾರವನ್ನು ಕೊಂಚಮಟ್ಟಿಗೆ ನಿಧಾನವಾಗಿರುವ ಸಂಗೀತವನ್ನು ಅನುಸರಿಸಿಕೊಂಡು ಸಾದರಪಡಿಸುವ ರೀತಿಯಲ್ಲಿ ಇಂಗ್ಲಿಷ್‌ ತರಬೇತುದಾರರು/ಬೋಧಕರು ಅಭಿವೃದ್ಧಿಪಡಿಸಿದರು. 1968ರಲ್ಲಿ ಇದು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿನ ಐದನೇ ಲ್ಯಾಟಿನ್‌ ನೃತ್ಯವಾಗಿ ಪರಿಗ್ರಹಿಸಲ್ಪಟ್ಟಿತು. 1990ರ ದಶಕದಿಂದ ಮೊದಲ್ಗೊಂಡು ವರ್ತಮಾನದ ಕಾಲದಲ್ಲಿನ ನರ್ತನಶಾಲೆ ಜೈವ್‌ ನೃತ್ಯದ ಆಧುನಿಕ ಸ್ವರೂಪವು ಒಂದು ಅತ್ಯಂತ ಸಂತೋಷದ ಮತ್ತು ಸಂಕೀರ್ಣ-ಸ್ವರಮೈತ್ರಿಯ ನೃತ್ಯವಾಗಿದ್ದು, ಮೊಣಕಾಲುಗಳನ್ನು ಎತ್ತುವ ಮತ್ತು ಸೊಂಟದ ಭಾಗವನ್ನು ಬಗ್ಗಿಸುವ ಅಥವಾ ಓಲಾಡಿಸುವಂಥ ಭಂಗಿಗಳು ಅನೇಕವೇಳೆ ಇದರಲ್ಲಿ ಕಂಡುಬರುತ್ತದೆ.

ಮೂಲಭೂತ ಹೆಜ್ಜೆ

ಮೂಲಭೂತ ಹೆಜ್ಜೆ (ಜೈವ್‌‌ ಬೇಸಿಕ್ಸ್‌) ಎಂಬುದು ಆರು ತಾಳದ ಒಂದು ಮಾದರಿಯಾಗಿದ್ದು, ಎಂಟು ಗಣ್ಯ ಬದಲಾವಣೆಗಳನ್ನು ಇದು ಒಳಗೊಂಡಿರುತ್ತದೆ.

ನಾಯಕ: ಸಾಮಾನ್ಯವಾಗಿ ಪುರುಷ ನಾಯಕನಾಗಿರುತ್ತಾನೆ.
  • ಎಣಿಕೆಗಳು 1 2 - ರಾಕ್‌ ಹೆಜ್ಜೆ: ಎಡ ಪಾದದ ಹೆಜ್ಜೆ ಹಿಂದಕ್ಕೆ, ಬಲ ಪಾದ *ಎಣಿಕೆಗಳು 3 ಎ4 - ಪಾದಾಪಸರಣ ಎಡಕ್ಕೆ
  • ಎಣಿಕೆಗಳು 5 ಎ6 - ಪಾದಾಪಸರಣ ಬಲಕ್ಕೆ
ಅನುಸರಿಸುವವರ ಹೆಜ್ಜೆಗಳು ಮೂಲಕ್ಕೆ ಅನುರೂಪವಾಗಿರುತ್ತವೆ. ಸಾಮಾನ್ಯವಾಗಿ ಇವರು ಮಹಿಳೆಯರಾಗಿರುತ್ತಾರೆ.

ಸ್ಥಿರವಾದ ಕೈಗಳ ಜೈವ್‌‌ - ನಿಖರವಾದ SJHಗೆ ಇರುವ ತಾಳೆಪಟ್ಟಿ: F - ಮುಖ. ಮುಖವು ಭಾವರಹಿತವಾಗಿರಬೇಕು. A - ತೋಳುಗಳು. ತೋಳುಗಳು ಶರೀರದ ಚಲಿಸುವ ಏಕಮಾತ್ರ ಭಾಗವಾಗಿರಬೇಕು. S - ಸ್ಥಿರವಾದ. ಶರೀರದ ಉಳಿದ ಭಾಗಗಳು ಸಂಪೂರ್ಣವಾಗಿ ಸ್ಥಿರವಾಗಿರಬೇಕು. T - ತೃತೀಯಕ ವೈಶಿಷ್ಟ್ಯಗಳು. ಅಲ್ಲಿ ಬೇರಾವುದೇ ಧ್ವನಿಗಳು ಅಥವಾ ಚಲನೆಗಳು ಇರಬಾರದು.

ಬಾಹ್ಯ ಕೊಂಡಿಗಳು‌‌

ಉಲ್ಲೇಖಗಳು‌‌

  1. ಅರ್ಲಿ ಜಾಜ್‌: ಇಟ್ಸ್‌ ರೂಟ್ಸ್‌ ಅಂಡ್‌ ಮ್ಯೂಸಿಕಲ್‌ ಡೆವಲಪ್‌ಮೆಂಟ್‌. ಲೇಖಕ: ಗಂಥರ್‌ ಷುಲ್ಲರ್‌‌. 1968. ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌. ಪುಟ 379. ISBN 0-19-504043-0
  2. ಹೌ ಟು ಬಿಕಮ್‌ ಎ ಗುಡ್‌ ಡಾನ್ಸರ್‌; ಲೇಖಕ: ಅರ್ಥರ್‌ ಮರ್ರೆ 1947 ಸೈಮನ್‌ ಅಂಡ್‌ ಷುಸ್ಟರ್‌. ಪರಿಷ್ಕೃತ ಆವೃತ್ತಿ. ಪುಟ 175.
  3. ಲೆಟ್ಸ್‌ ಡಾನ್ಸ್‌. ಪಾಲ್‌ ಬಾಟಮರ್‌. 1998. ಬ್ಲ್ಯಾಕ್‌ ಡಾಗ್‌ & ಲೆವೆಂಥಾಲ್‌. ಪುಟ 157. ISBN 1-57912-049-0

ಜೈವ್‌‌]