ಮಧ್ಯ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೮ ನೇ ಸಾಲು:
==ಉಜ್ಜೈನಿ ನಗರದ ವೈಶಿಷ್ಟ್ಯತೆಗಳು==
ಮಧ್ಯಪ್ರದೇಶದ '[[ಉಜ್ಜಯನಿ]]'ಯಲ್ಲಿ ಪ್ರಸಿದ್ಧ ಸಂಸ್ಕೃತ ಕವಿ, '[[ಕಾಳಿದಾಸ]]'ನು ಜೀವಿಸಿದ್ದನೆಂಬ (ಕ್ರಿ.ಶ ೩೭೫ ರಿಂದ ೪೧೫ ರವರೆಗೆ) ಪ್ರತೀತಿಯಿದೆ. ಪುರಾಣಕಾಲದಲ್ಲಿ ಈ ನಗರಕ್ಕೆ [[ಆವಂತಿಕಾನಗರ]]ವೆಂದು ಹೆಸರಿತ್ತು. 'ಶಿಪ್ರಾನದಿ'ಯ ದಂಡೆಯಮೇಲಿರುವ ಉಜ್ಜೈನ್ ನಲ್ಲಿ [[ಮಹಾಕಾಲೇಶ್ವರ್ ಮಂದಿರ]]ವಿದೆ. ಈಶ್ವರ ಪ್ರತಿರೂಪವಾದ ಇಲ್ಲಿ ಅರ್ಚಿಸಲಾಗುತ್ತದೆ. ಭಾರತದಲ್ಲಿ ಪ್ರಖ್ಯಾತವಾಗಿರುವ ೧೨ ಜ್ಯೋತಿರ್ಲಿಂಗಗಳಲ್ಲಿ 'ಸ್ವಯಂಭು'ವಾಗಿರುವ ಈ ಶಿವಲಿಂಗ ಹೆಚ್ಚು ಶಕ್ತಿಶಾಲಿಯೆಂದು ಭಕ್ತರು ನಂಬಿದ್ದಾರೆ. ಕಾಳಿದಾಸನು ತನ್ನ ಕಾವ್ಯಗಳಲ್ಲಿ ವರ್ಣಿಸಿ ಪ್ರಶಂಸಿರುವುದು ಕಂಡುಬರುತ್ತದೆ. ಈ ಶಿವಲಿಂಗದ ವೈಶಿಷ್ಟ್ಯವೆಂದರೆ, ದಕ್ಷಿಣದಕಡೆ ಮುಖಮಾಡಿಕೊಂಡಿರುವುದು. ಅದೂ ಅಲ್ಲದೆ ಶಿವನ ವಾಹನವಾದ ನಂದಿಯ ವಿಗ್ರಹವೂ ದಕ್ಷಿಣದಿಕ್ಕಿಗಿದೆ. ಅದ್ದರಿಂದ ಈ ಲಿಂಗಕ್ಕೆ 'ದಕ್ಷಿಣಾಮೂರ್ತಿ'ಯೆಂದು ಹೆಸರುಬರಲು ಕಾರಣವಾಯಿತು. ಮಹಾಕಾಲನ ಮಂದಿರ ೫ ಅಂತಸ್ತಿನ ಭವ್ಯ ಮಂದಿರವಾಗಿದ್ದು ವಿಶಾಲ ಪ್ರಾಂಗಣ ಸರೋವರವನ್ನು ಹೊಂದಿದೆ. ನೆಲಾಂತಸ್ತಿನಿಂದ ಕೆಳಭಾಗದ ಲಿಂಗಕ್ಕೆ ಸದಾಕಾಲವೂ ನೀರು ಮತ್ತು ಹಾಲಿನ ಅಭಿಷೇಕ ಮಾಡುತ್ತಿರುತ್ತಾರೆ. ಲಿಂಗದ ಸುತ್ತಲೂ ಸತತವಾಗಿ ಅಗೋಚರ ಕಿರಣಗಳು ಬರುವುದರಿಂದ ಇದರ ಎದುರಿಗೆ ೩ ನಿಮಿಷವೂ ನಿಲ್ಲಲು ಆಗುವುದಿಲ್ಲ. ಪ್ರತಿ ದೀಪಾವಳಿಯ ದಿನ 'ದೀಪೋತ್ಸವ' ಅದ್ಧೂರಿಯಾಗಿ ನಡೆಯುತ್ತದೆ. ೩ ನೆಯ ಅಂತಸ್ತಿನಲ್ಲಿರುವ 'ನಾಗಚಂದ್ರೇಶ್ವರ ಮಂದಿರ' ನಾಗರಪಂಚಮಿಯ ದಿನ ಮಾತ್ರವೇ ಭಕ್ತರಿಗೆ ತೆರೆದಿರುತ್ತದೆ. ಭಕ್ತಗಣವೇ ಸ್ವತಃ ತಮ್ಮ ಕೈನಿಂದ ಅರ್ಚನೆ ಮಾಡಿ ನಮಸ್ಕರಿಸಬಹುದು.
==ಪ್ರತಿ ೧೨ ವರ್ಷಗಳಿಗೊಮ್ಮೆ ಮಹಾಕುಂಭಮೇಳ ನಡೆಯುತ್ತದೆ==
ಆಗ ಲಕ್ಷಾಂತರ ಭಕ್ತಾದಿಗಳು ದೇಶವಿದೇಶಗಳಿಂದ ಬಂದು, ಇಲ್ಲಿನ ಪವಿತ್ರ ನದಿಯಲ್ಲಿ ಸ್ನಾನಮಾಡಿ,ಪುನೀತರಾಗುತ್ತಾರೆ. 'ನಾಗಾಸಾಧುಗಳು' ಹಾಗೂ 'ಅಘೋರಿ'ಗಳು ಇಲ್ಲಿ ನೆರೆದಿರುತ್ತಾರೆ. ನದಿಯ ಇಕ್ಕೆಲೆಗಳಲ್ಲಿ ಕಣ್ಣು ಹಾಯಿಸಿದ ಕಡೆಗಳಲ್ಲೆಲ್ಲಾ ದೇವಾಲಯಗಳ ಸಮೂಹವೇ ಗೋಚರಿಸುತ್ತದೆ. ಈ ನಗರದಲ್ಲಿ ಸಮಯವನ್ನು ಕರಾರುವಾಕ್ಕಾಗಿ ತಿಳಿಸುವ ಸಾಧನಗಳಿರುವುದರಿಂದ ಭಾರತದ ಗ್ರೀನ್ ವಿಚ್ ಎಂದು ಪ್ರಸಿದ್ದಿಯಾಗಿದೆ. '[[ಜಂತರ್ ಮಂತರ್]]' ಎಂಬ ತಾಣದಲ್ಲಿ ಸಮಯವನ್ನು ನಿಖರವಾಗಿ ಮಾಪಿಸಲಾಗುತ್ತದೆ. ಇದೇ ತರಹದ 'ಜಂತರ್ ಮಂತರ್' ಗಳು ದೇಶದ ದೆಹಲಿ, ಜಯಪುರ್, ವಾರಾಣಾಸಿ, ಗಳಲ್ಲಿವೆ. ಜೈಪುರದ ರಾಜ ಈ ತರಹದ ವೀಕ್ಷಣಾಲಯವನ್ನು ನಿರ್ಮಿಸಿದ. 'ಖಗೋಳ ಶಾಸ್ತ್ರ'ದ ಬಗ್ಗೆ ಅರಿಯಲು ಬಯಸುವವರಿಗೆ, ಅಂತರಿಕ್ಷ, ಸೂರ್ಯ ಕಿರಣ, ಚಂದ್ರಬಿಂಬ, ನಕ್ಷತ್ರಗಳ ಚಲನೆ ಮುಂತಾದ ಗತಿವಿಧಿಗಳ ಬಗ್ಗೆ ತಿಳಿಸಲು ಅನೇಕ ಸಾಧನಗಳು ಕಣ್ಣಿಗೆ ಗೋಚರಿಸುತ್ತವೆ. ಇವುಗಳಿಂದ ಸಮಯದ ಪರಿಕಲ್ಪನೆಯನ್ನು ತಿಳಿಯಲು ಅನುಕೂಲ.
 
==ಸಾಹಿತ್ಯ==
ಮಹಾ ಜ್ಯೋತಿಷಿ, 'ವರಾಹ ಮಿಹಿರ' ಸಹಿತ ಉಜ್ಜಯಿನಿಯಲ್ಲಿ ವಾಸಿಸಿದ್ದರು. ಧಾರಾದ ರಾಜ 'ಭೋಜರಾಜನ ಆಸ್ಥಾನ'ದಲ್ಲಿ ಕವಿಗಳಿಗೆ ವಿಶೇಷ ಮನ್ನಣೆಯನ್ನು ಕೊಟ್ಟು ಆಶ್ರಯವನ್ನು ಕೊಡಲಾಗಿತ್ತು. ರಾಜಾ ಭೋಜ್ ಸ್ವತಃ ಒಬ್ಬ ಶ್ರೇಷ್ಟ ಕವಿಯಾಗಿದ್ದರು. ಹಲವಾರು ಕೃತಿಗಳನ್ನು ರಚಿಸಿದ್ದಾರೆ. 'ಧಾರ್ ನಗರ'ದಲ್ಲಿ ಭೋಜರಾಜರು ನಿರ್ಮಿಸಿದ 'ಸಂಸ್ಕೃತ ಪಾಠಶಾಲೆ' ಇಂದಿಗೂ ಇದೆ. ಶಾಲೆಯ ಗೋಡೆಗಳ ಮೇಲೆ ಸಂಸ್ಕೃತ ಭಾಷೆಯಲ್ಲಿ ಕೆತ್ತಿದ ಹಲವಾರು ಶ್ಲೋಕಗಳಿವೆ. ಮಧ್ಯಪ್ರದೇಶ ಇನ್ನೂ ಹಲವಾರು ಖ್ಯಾತ ಪಂಡಿತರಿಗೆ ತವರುಮನೆ. ಅವರುಗಳಲ್ಲಿ ಪ್ರಮುಖರು, 'ಧನಪಾಲ', 'ಭರ್ತುಹರಿ', 'ಆಶಾಧಾರ', 'ಮನತುಂಗ', 'ಬ್ರಹ್ಮಗುಪ್ತ', 'ಭಾಸ್ಕರಾಚಾರ್ಯ', ಮುಂತಾದವರು. '[[ಚಂದ್ರಗುಪ್ತ ವಿಕ್ರಮಾದಿತ್ಯ ಮಹಾರಾಜ]]' ನ ಕಾಲದಲ್ಲಿ, '[[ಧನ್ವಂತರಿ]]', '[[ಕ್ಷಪಣಕ]]' (ಸಿದ್ಧಸೇನ) '[[ಅಮರ ಸಿಂಹ]]', '[[ಸಂಕು]]', '[[ವೇತಾಲಭಟ್ಟ]]', '[[ಘಟಕರ್ಪರ]]', '[[ಕಾಳಿದಾಸ]]', '[[ವರಾಹಮಿಹಿರ]]', ಮತ್ತು '[[ವರರುಚಿ]]' ಎಂಬ [[ನವರತ್ನ|ನವರತ್ನಗಳಿದ್ದರು]]. ''''ಆಧುನಿಕ ಕಾಲದ ಕೆಲವು ಹೆಸರಾಂತ ಕವಿಗಳು',''' 'ಮಾಖನ್ ಲಾಲ್', 'ಚತುರ್ವೇದಿ', 'ಶರದ್ ಜೋಶಿ', 'ಗಜಾನನ', 'ಮಾಧವ ಮುಕ್ತಿ', 'ಬೊಧ' ಮತ್ತು 'ವಿನೋದ್ ಕುಮಾರ್', 'ಶುಕ್ಲಾ' ಮುಂತಾದವರು.
"https://kn.wikipedia.org/wiki/ಮಧ್ಯ_ಪ್ರದೇಶ" ಇಂದ ಪಡೆಯಲ್ಪಟ್ಟಿದೆ