ಶಿಮ್ಲಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
೬ ನೇ ಸಾಲು:
ಅಡ್ಡಡ್ಡ ಮಲಗಿದರೆ ಕೈಕಾಲುಗಳಿಂದ ಎರಡೂ ಪಾರ್ಶ್ವಗಳನ್ನು ಸ್ಪರ್ಶಿಸಬಹುದಾದ ಕೇವಲ ಇಪ್ಪತ್ತು ಜನರಷ್ಟೇ ಕೂಡಬಹುದಾಗಿದ್ದ ಪುಟ್ಟ ಬೋಗಿಯೊಳಗೆ ಕುಳಿತು ೧೦೨ ಸುರಂಗಗಳು, ೮೪೫ ಸೇತುವೆಗಳು ಹಾಗೂ ೯೧೯ ತಿರುವುಗಳನ್ನು ಹಾದು ಬರುವ ಈ ರೈಲಿನಲ್ಲಿನ ಪ್ರಯಾಣ ಶಿಮ್ಲಾ ಪ್ರವಾಸದ ಅತಿ ಮುಖ್ಯಭಾಗ.
 
ಇಂಗ್ಲಿಷರ ಕಾಲದ [[ಇಂಡಿಯಾ|ಇಂಡಿಯಾದ]] ಬೇಸಿಗೆ ರಾಜಧಾನಿ ಶಿಮ್ಲಾ. [[ಹಿಮಾಲಯ|ಹಿಮಾಲಯದ]] ಅಂಚಿನಲ್ಲಿರುವ ಆದರೆ [[ಹಿಮಾಲಯ|ಹಿಮಾಲಯದ]] ಗುಣಗಳನ್ನೇ ಹೊಂದಿರುವ ಪ್ರಕೃತಿ ಸೌಂದರ್ಯದಿಂದ ಶ್ರೀಮಂತವಾಗಿರುವ ಶಿಮ್ಲಾ ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುವ ಸೂಜಿಗಲ್ಲು.
 
ಶಿಮ್ಲಾದಲ್ಲಿ ಪ್ರವಾಸ ಎಂದರೆ ಬೆಟ್ಟವನ್ನು ಏರುತ್ತಾ ಏರುತ್ತಾ ಏರುತ್ತಾ ಹೋಗುವುದು. ಹೇಳಿಕೇಳಿ ಇದು ಬಯಲು ಪ್ರದೇಶ ಅಲ್ಲವಲ್ಲ! ಸಮುದ್ರ ಮಟ್ಟದಿಂದ ಸುಮಾರು ೭೫೦೦ ಅಡಿಗಳ ಮೇಲೆ ಇರುವ ಫಾಗು ಎಂಬ ಸ್ಥಳದಿಂದ [[ಹಿಮಾಲಯ|ಹಿಮಾಲಯದ]] ಹಿಮಾಚ್ಛಾದಿತ ಶಿಖರಗಳನ್ನು ವೀಕ್ಷಿಸಬಹುದು. ಇನ್ನೂ ೫೦೦ ಅಡಿಗಳ ಮೇಲೆ ಹೋದಲ್ಲಿ ಕುಫ್ರಿ ಎಂಬ ಸ್ಥಳ ಸಿಗುತ್ತದೆ. ಇಲ್ಲಿ [[ಹಿಮಾಲಯ|ಹಿಮಾಲಯದ]] ವನ್ಯಜೀವಿಗಳ ಅಭಯಧಾಮ, ಪ್ರವಾಸೋದ್ಯಮ ಇಲಾಖೆಯ ಉದ್ಯಾನವನ, ಚಾರಣಕ್ಕೆ ಹೇಳಿ ಮಾಡಿಸಿದ ಶಿಖರಗಳೂ ಕೊರಕಲುಗಳೂ ಇವೆ. ವಾಹನಗಳು ಚಲಿಸಲಾಗದ ಉರುಟು ಕಲ್ಲು ಕೊರಕಲುಗಳಿಂದ ಕೆಲವೊಮ್ಮೆ ಹಿಮದಿಂದ ತುಂಬಿದ ಹಾದಿಯಲ್ಲಿ ಕುದುರೆಯ ಮೇಲೆ ಕುಳಿತು ಏರುತ್ತಾ ಇಳಿಯುತ್ತಾ ಮುಗ್ಗರಿಸುತ್ತಾ ಅಳುಕಿನಿಂದ ಸಾಗುವುದೇ ಒಂದು ಸಾಹಸದ ಅನುಭವ. ಅದಕ್ಕೆಂದೇ ಅಲ್ಲಿ ಕುದುರೆಗಳು ಬಾಡಿಗೆಗೆ ಸಿಗುತ್ತವೆ.
 
ಸುಂದರವಾದತುಪ್ಪಳವುಳ್ಳ ಯಾಕ್ ([[ಹಿಮಾಲಯ|ಹಿಮಾಲಯದ]] ಎಮ್ಮೆ) ಪ್ರಾಣಿಗಳು, [[ಹಿಮಾಲಯ|ಹಿಮಾಲಯನ್]]ನ್ ಲಂಗೂರ್‍ ಎಂಬ ಕಪ್ಪು ಮುಖದ ಕೋತಿಗಳು, ಹಿಮಾಚಲದ ಸಾಂಪ್ರದಾಯಿಕ ಉಡುಗೆ ತೊಟ್ಟ ಗುಡ್ಡಗಾಡು ಜನರ ವೇಷಭೂಷಣಗಳು, ಪರಿಕರಗಳು ಮತ್ತು ಆಹ್ಲಾದಕರ ಪ್ರಕೃತಿ ದರ್ಶನದ ಅನಂತರ ಶಿಮ್ಲಾ ಪಟ್ಟಣಕ್ಕೆ ಬಂದರೆ ಅಲ್ಲಿ ಮಾಲ್ ಎಂಬ ನೋಡಲೇಬೇಕಾದ ಸ್ಥಳವೊಂದಿದೆ. ಇಂಗ್ಲಿಷರು ಕಟ್ಟಿದ ಸುಂದರವಾದ ಚರ್ಚ್ ಇಲ್ಲಿದೆ. ಇದರ ಆಜುಬಾಜೂ ಇರುವ ಸಂತೆಯಲ್ಲಿ ಹಿಮಾಚಲಪ್ರದೇಶದ ಎಲ್ಲ ವಿಶಿಷ್ಟ ವಸ್ತುಗಳ ಬಿಕರಿಯಾಗುತ್ತದೆ. ಮುಖ್ಯವಾದ ಸ್ಥಳದಲ್ಲಿ ಲಾಲಾ ಲಜಪತರಾಯ್‌ರವರ ಪ್ರತಿಮೆಯಿದೆ.
ರಾತ್ರಿ ಹೊತ್ತಿನಲ್ಲಿ ಶಿಮ್ಲಾ ನಗರವನ್ನು ನೋಡುವುದೇ ಒಂದು ಚೆಂದ. ಬೆಟ್ಟಗುಡ್ಡಗಳೆಲ್ಲ ಝಗಮಗಿಸುವ ವಿದ್ಯುದ್ದೀಪಗಳಿಂದ ಕಂಗೊಳಿಸುವಾಗ ನೋಡಲು ಎರಡು ಕಣ್ಣು ಸಾಲವು.
 
"https://kn.wikipedia.org/wiki/ಶಿಮ್ಲಾ" ಇಂದ ಪಡೆಯಲ್ಪಟ್ಟಿದೆ