ನೇಪಾಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (robot Modifying: nah:Nepal (nci)
ಚು LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
೫೩ ನೇ ಸಾಲು:
}}
 
'''ನೇಪಾಳ'''ವು [[ದಕ್ಷಿಣ ಏಷ್ಯಾ|ದಕ್ಷಿಣ ಏಷ್ಯಾದ]] ಒಂದು ರಾಷ್ಟ್ರ. [[ಹಿಮಾಲಯ|ಹಿಮಾಲಯದ]] ತಪ್ಪಲಲ್ಲಿ ಇರುವ ನೇಪಾಳವು ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿದೆ. ನೇಪಾಳದ ಉತ್ತರಕ್ಕೆ [[ಟಿಬೆಟ್]] ಮತ್ತು ಇತರ ಎಲ್ಲಾ ದಿಕ್ಕುಗಳಲ್ಲಿಯೂ [[ಭಾರತ|ಭಾರತವಿದೆ]]ವಿದೆ. [[ಎವರೆಸ್ಟ್]] ಸೇರಿದಂತೆ ವಿಶ್ವದ ಅತಿ ಉನ್ನತ ೧೦ ಪರ್ವತ ಶಿಖರಗಳ ಪೈಕಿ ೮ ನೇಪಾಳದಲ್ಲಿಯೇ ಇವೆ. ನೇಪಾಳದ ವಿಸ್ತೀರ್ಣ ೧೪೧,೭೦೦ ಚ.ಕಿ.ಮೀ. ಜನಸಂಖ್ಯೆ ಸುಮಾರು ೨.೭ ಕೋಟಿ. ರಾಷ್ಟ್ರದ ರಾಜಧಾನಿ [[ಕಾಠ್ಮಂಡು]].
 
== ಇತಿಹಾಸ ==
ಕ್ರಿ.ಪೂ.೬ ಮತ್ತು ೫ನಯೆ ಶತಮಾನದಲ್ಲಿ ಈ ಪ್ರದೇಶವು [[ಶಾಕ್ಯ]] ಆಡಳಿತಕ್ಕೊಳಪಟ್ಟಿತ್ಥು. ಶಾಕ್ಯ ರಾಜಕುಮಾರರಲ್ಲೊಬ್ಬನಾದ [[ಸಿದ್ಧಾರ್ಥ ಗೌತಮ|ಸಿದ್ಧಾರ್ಥ ಗೌತಮನು]]ನು ಐಹಿಕ ಪ್ರಾಪಂಚಿಕ ವ್ಯಾಮೋಹಗಳನ್ನು ತೊರೆದು ದಿವ್ಯ ಜ್ಞಾನವನ್ನು ಹೊಂದಿ ಮುಂದೆ [[ಬುದ್ಧ|ಬುದ್ಧನೆನಿಸಿಕೊಂಡನು]]ನೆನಿಸಿಕೊಂಡನು. ಸುಮಾರು ಕ್ರಿ.ಪೂ. ೨೫೦ರ ಸಮಯಕ್ಕೆ ಈ ಪ್ರದೇಶವು ಉತ್ತರಭಾರತದ [[ಮೌರ್ಯ ಸಾಮ್ರಾಜ್ಯ|ಮೌರ್ಯ ಸಾಮ್ರಾಜ್ಯದ]] ಅಂಗವಾಗಿತ್ತು. ತರುವಾಯ [[ಗುಪ್ತ ಸಾಮ್ರಾಟ|ಗುಪ್ತ ಸಾಮ್ರಾಟರು]]ರು , [[ಲಿಚ್ಛವಿ]] ಸಾಮ್ರಾಟರು ಹಾಗೂ [[ಚಾಲುಕ್ಯ|ಚಾಲುಕ್ಯರು]]ರು ಈ ಪ್ರದೇಶದ ಮೇಲೆ ಹತೋಟಿ ಸಾಧಿಸಿದ್ದರು. ನಂತರ ಈ ಪ್ರದೇಶವು ಹಲವು ಸಣ್ಣ ಅರಸೊತ್ತಿಗೆಗಳಾಗಿ ಹಂಚಿಹೋಯಿತು. ೧೭೬೫ರಲ್ಲಿ ಪೃಥ್ವಿನಾರಾಯಣ ಶಹ ಎಂಬ [[ಗೂರ್ಖಾ]] ಅರಸನು ನೇಪಾಳವನ್ನು ಒಂದುಗೂಡಿಸಿದನು. ಭಾರತವು ಬ್ರಿಟಿಷ್ ಆಡಳಿತಕ್ಕೆ ಒಳಗಾದಾಗ ನೇಪಾಳವು ತನ್ನ [[ಸ್ವಾಯತ್ತತೆ|ಸ್ವಾಯತ್ತತೆಯನ್ನು]]ಯನ್ನು ಉಳಿಸಿಕೊಂಡಿತ್ತು. ಆಂಗ್ಲರೊಡನೆ ನಡೆದ ಒಂದು ಯುದ್ಧದಲ್ಲಿ ನೇಪಾಳವು ಸೋಲನುಭವಿಸಿತಾದರೂ, ತನ್ನ [[ಸ್ವಾತಂತ್ರ್ಯ|ಸ್ವಾತಂತ್ರ್ಯವನ್ನು]]ವನ್ನು ಉಳಿಸಿಕೊಳ್ಳಲು ಬ್ರಿಟಿಷರೊಂದಿಗೆ ಸಂಧಿ ಮಾಡಿಕೊಂಡಿತು. ಇದರ ಪ್ರಕಾರ ನೇಪಾಳವು ಅಂದು ತನ್ನ ಪ್ರದೇಶಗಳಾಗಿದ್ದ [[ಉತ್ತರಾಖಂಡ]] , [[ಹಿಮಾಚಲ ಪ್ರದೇಶ]] ಮತ್ತು [[ಸಿಕ್ಕಿಂ]] ಭಾಗಗಳನ್ನು ಆಂಗ್ಲರಿಗೆ ಬಿಟ್ಟುಕೊಟ್ಟಿತು. ಅಲ್ಲಿಂದ ಮುಂದೆ ಇತ್ತೀಚಿನವರೆವಿಗೂ ನೇಪಾಳವು [[ಅರಸೊತ್ತಿಗೆ|ಅರಸೊತ್ತಿಗೆಯಾಗಿಯೇ]]ಯಾಗಿಯೇ ಉಳಿದಿತ್ತು. ಈಚಿನ ದಿನಗಳಲ್ಲಿ [[ಪ್ರಜಾಸತ್ತೆ|ಪ್ರಜಾಸತ್ತೆಗಾಗಿ]]ಗಾಗಿ ಹೋರಾಟವು ತೀವ್ರಗೊಂಡು [[ಬಹುಪಕ್ಷೀಯ ಸಾಂಸದೀಯ ವ್ಯವಸ್ಥೆ|ಬಹುಪಕ್ಷೀಯ ಸಾಂಸದೀಯ ವ್ಯವಸ್ಥೆಯನ್ನು]]ಯನ್ನು ಸ್ಥಾಪಿಸಲಾಯಿತು. ಅರಸರ ಅಧಿಕಾರಗಳನ್ನು ಬಹುಮಟ್ಟಿಗೆ ಮೊಟಕುಗೊಳಿಸಲಾಯಿತು. ೧೯೯೧ರಲ್ಲಿ ಪ್ರಪ್ರಥಮ ಬಹುಪಕ್ಷೀಯ ಹಾಗೂ ಮುಕ್ತ [[ಚುನಾವಣೆ|ಚುನಾವಣೆಗಳು]]ಗಳು ನಡೆದವು.
 
== ಭೌಗೋಳಿಕ ಲಕ್ಷಣ ==
ನೇಪಾಳವು ಸುಮಾರು ೮೦೦ ಕಿ.ಮೀ. ಉದ್ದ ಹಾಗೂ ೨೦೦ ಕಿ.ಮೀ. ಅಗಲದ ಪಟ್ಟಿಯಂತೆ ಕಾಣುವುದು. ಭೌಗೋಳಿಕವಾಗಿ ದೇಶವನ್ನು ಉನ್ನತ ಪರ್ವತ ಪ್ರದೇಶ, ಬೆಟ್ಟಗುಡ್ಡಗಳ ಪ್ರದೇಶ ಹಾಗೂ ತರಾಯ್ ಪ್ರದೇಶಗಳೆಂದು ವಿಂಗಡಿಸಬಹುದು. ಭಾರತದ ಗಡಿಗೆ ಹೊಂದಿಕೊಂಡಿರುವ ಪ್ರದೇಶವು [[ಗಂಗಾ ಬಯಲು|ಗಂಗಾ ಬಯಲಿನ]] ಒಂದು ಭಾಗವಾಗಿದೆ. ಈ ಭಾಗಕ್ಕೆ [[ಕೋಸಿ]], [[ನಾರಾಯಣಿ]] ([[ಗಂಡಕಿ]]) ಮತ್ತು ಕರ್ನಾಲಿ ನದಿಗಳು ನೀರುಣಿಸುತ್ತವೆ. ಬೆಟ್ಟಗುಡ್ಡಗಳ ಪ್ರದೇಶವು ಕಾಠ್ಮಂಡು ಕಣಿವೆಯನ್ನು ಒಳಗೊಂಡಿದೆ. ದೇಶದ ಹೆಚ್ಚಿನ ಜನವಸತಿ ಇಲ್ಲಿಯೇ ಕಂಡುಬರುವುದು. ಈ ಪ್ರದೇಶದಲ್ಲಿ ಮಹಾಭಾರತ ಲೇಖ್ ಮತ್ತು [[ಶಿವಾಲಿಕ ಪರ್ವತಶ್ರೇಣಿ|ಶಿವಾಲಿಕ ಪರ್ವತಶ್ರೇಣಿಗಳು]]ಗಳು ಇವೆ. ಈ ಶ್ರೇಣಿಗಳು ಮಧ್ಯಮ ಮಟ್ಟದವಾಗಿದ್ದು ಸರಾಸರಿ ೧೦೦೦ದಿಂದ ೪೦೦೦ ಮೀ. ವರೆಗೆ ಎತ್ತರವುಳ್ಳವಾಗಿವೆ. ಹಿಮಾಲಯದ ಉನ್ನತ ಪರ್ವತ ಪ್ರದೇಶವು ಪ್ರಪಂಚದಲ್ಲಿಯೇ ಅತಿ ಹೆಚ್ಚಿನ ಎತ್ತರದ ಪ್ರದೇಶವಾಗಿದೆ. [[ಎವರೆಸ್ಟ್]] , [[ಕಾಂಚನ್ ಜುಂಗಾ]], [[ಅನ್ನಪೂರ್ಣಾ]] , [[ಮಕಾಲು]] , [[ಧವಳಗಿರಿ]] ಸೇರಿದಂತೆ ವಿಶ್ವದ ಹಲವು ಅತ್ಯುನ್ನತ ಶಿಖರಗಳು ಈ ವಿಭಾಗದಲ್ಲಿ ಇವೆ. [[ಅರಣ್ಯನಾಶ]] ದೇಶದ ಎಲ್ಲಕಡೆ ಅವಿರತವಾಗಿ ಸಾಗಿದ್ದು ಇದು ಪ್ರಕೃತಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ.
 
== ಅರ್ಥವ್ಯವಸ್ಥೆ ==
ನೇಪಾಳವು ಕೃಷಿಪ್ರಧಾನ ದೇಶ. ದೇಶದ ೭೬% ಜನರು ಜೀವನಕ್ಕಾಗಿ ವ್ಯವಸಾಯವನ್ನೇ ಅವಲಂಬಿಸಿದ್ದಾರೆ. [[ಬತ್ತ]], [[ಗೋಧಿ]], [[ಕಬ್ಬು]] ಮತ್ತು [[ಸೆಣಬು]] ಮುಖ್ಯ ಬೆಳೆಗಳು. ಕೈಗಾರಿಕೆಗಳು ಕೃಷಿ ಉತ್ಪನ್ನಗಳನ್ನು ಸಂಸ್ಕರಿಸುವುದಕ್ಕೇ ಸೀಮಿತ. [[ಪ್ರವಾಸೋದ್ಯಮ|ಪ್ರವಾಸೋದ್ಯಮವು]]ವು ದೇಶದ ಪ್ರಮುಖ ಆರ್ಥಿಕ ಚಟುವಟಿಕೆ. ನೇಪಾಳದ ಹೆಚ್ಚಿನ ಭಾಗವು ಪರ್ವತಪ್ರಾಂತ್ಯವಾಗಿರುವುದರಿಂದ [[ರಸ್ತೆ]] ಹಾಗೂ [[ರೈಲುಮಾರ್ಗ|ರೈಲುಮಾರ್ಗಗಳ]]ಗಳ ನಿರ್ಮಾಣ ಕಠಿಣ ಮತ್ತು ಅತಿ ವೆಚ್ಚವುಂಟುಮಾಡುವುದಾಗಿದೆ. ೨೦೦೩ರಂತೆ ದೇಶದಲ್ಲಿ ಒಟ್ಟು ೮೫೦೦ ಕಿ.ಮೀ. ಉತ್ತಮ ರಸ್ತೆಗಳು ಹಾಗೂ ಕೇವಲ ೫೯ ಕಿ.ಮೀ. ರೈಲುಮಾರ್ಗವಿದ್ದಿತು. ಇದರಿಂದಾಗಿ ರಾಷ್ಟ್ರದ ಆರ್ಥಿಕ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. [[ದೂರಸಂಪರ್ಕ ವ್ಯವಸ್ಥೆ|ದೂರಸಂಪರ್ಕ ವ್ಯವಸ್ಥೆಯು]]ಯು ಬಹಳ ಕೆಳಸ್ತರದ್ದಾಗಿದೆ. [[ಆಧುನಿಕ ತಂತ್ರಜ್ಞಾನ|ಆಧುನಿಕ ತಂತ್ರಜ್ಞಾನವು]]ವು ದೇಶದ ಜನತೆಯನ್ನು ತಲುಪಿಲ್ಲ. ನೇಪಾಳವು ಹೊರರಾಷ್ಟ್ರಗಳ ಸಹಾಯಧನವನ್ನು ಬಹುಮಟ್ಟಿಗೆ ಅವಲಂಬಿಸಿದೆ. ಭಾರತ, ಅಮೆರಿಕಾ, ಜಪಾನ್ , ಇಂಗ್ಲಂಡ್, ಯುರೋಪಿಯನ್ ಒಕ್ಕೂಟಗಳು ಪ್ರಮುಖ ದಾನಿಗಳು.
 
== ಇತರ ವಿಷಯಗಳು ==
ನೇಪಾಳವು ವಿಶ್ವದ ಏಕೈಕ ಹಿಂದೂ ರಾಷ್ಟ್ರ. ದೇಶದ ಅಧಿಕೃತ ಭಾಷೆ [[ನೇಪಾಲಿ]]. ಉಳಿದಂತೆ [[ಮೈಥಿಲಿ]], [[ಭೋಜಪುರಿ]] ಮತ್ತು [[ಅವಧಿ]] ಭಾಷೆಗಳು ನುಡಿಯಲ್ಪಡುತ್ತವೆ. ನೇಪಾಳದಲ್ಲಿ ಪುರುಷರ [[ಸರಾಸರಿ ಆಯುರ್ಮಾನ]] ಮಹಿಳೆಯರಿಗಿಂತ ಹೆಚ್ಚು. ಇಡೀ ಪ್ರಪಂಚದಲ್ಲಿ ನೇಪಾಳವೊಂದರಲ್ಲಿ ಮಾತ್ರ ಈ ವಿದ್ಯಮಾನ ಕಂಡುಬರುತ್ತದೆ. ಸಾಂಸ್ಕೃತಿಕ ವಿಷಯಗಳಲ್ಲಿ ನೇಪಾಳವು ಟಿಬೆಟ್ ಮತ್ತು ಭಾರತವನ್ನು ಹೋಲುತ್ತದೆ. ಉತ್ತರದ ಹಿಮಾಲಯ ಪ್ರದೇಶದಲ್ಲಿ ಟಿಬೆಟ್ ಸಂಸ್ಕೃತಿಯ ಛಾಪು ಕಂಡುಬರುವುದು. ಉಳಿದಂತೆ ಎಲ್ಲಾ ಕಡೆ [[ಹಿಂದೂ ಸಂಸ್ಕೃತಿ|ಹಿಂದೂ ಸಂಸ್ಕೃತಿಯ]] ಗಾಢ ಛಾಯೆ ಇದೆ. ನೇಪಾಳವು ಭಾರತವನ್ನು ಬಹಳವಾಗಿ ಅವಲಂಬಿಸಿದೆ. ಆರ್ಥಿಕ ಸಹಾಯ , ತಂತ್ರಜ್ಞಾನ, ರಕ್ಷಣೆ ಇವುಗಳೆಲ್ಲವೂ ಹೆಚ್ಚಿನ ಪ್ರಮಾಣದಲ್ಲಿ ಭಾರತದಿಂದಲೇ ನೇಪಾಳಕ್ಕೆ ಒದಗಿದೆ.
 
[[ವರ್ಗ:ನೇಪಾಳ|*]]
"https://kn.wikipedia.org/wiki/ನೇಪಾಳ" ಇಂದ ಪಡೆಯಲ್ಪಟ್ಟಿದೆ