ಡಿ ಎನ್ ಕೃಷ್ಣಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
ಡಿ ಎನ್ ಕೃಷ್ಣಯ್ಯನವರು (ಜನನ: ೧೯೦೪; ಮರಣ: ೧೯೭೩) [[ಕೊಡಗು|ಕೊಡಗಿನ]] ಒಬ್ಬ ಮುಖ್ಯ ಇತಿಹಾಸಕಾರರು[[ಇತಿಹಾಸ ತಜ್ಞ]]ರು. ತಮ್ಮ ವಿದ್ಯಾರ್ಥಿ ಕಾಲದಿಂದಲೂ [[ಇತಿಹಾಸ]]ದಲ್ಲಿ ಅಪಾರ ಆಸಕ್ತಿಯನ್ನಿಟ್ಟುಕೊಂಡಿದ್ದು, ಜೀವನ ಪರ್ಯಂತ ಅದನ್ನು ಪೋಷಿಸಿದರು. ಕೊಡಗಿನವರಾದ ಇವರು ಕೊಡಗನ್ನು ಕುರಿತು ಸಮಗ್ರವಾಗಿಯೂ ಸಂಶೋಧನಾತ್ಮಕವಾಗಿಯೂ ಅಧ್ಯಯನ ನಡೆಸಿ, ಒಂದು ವಿದ್ವತ್ಪೂರ್ಣ ಗ್ರಂಥ [[ಕೊಡಗಿನ ಇತಿಹಾಸ]]ವನ್ನು [[ಕನ್ನಡ]]ದಲ್ಲಿ ರಚಿಸಿದರು. ಕೊಡಗಿನ ಬಗ್ಗೆ ಅಭ್ಯಾಸ ಮಾಡುವವರಿಗೆ ಒಂದು ಅತ್ಯುತ್ತಮ ಜ್ಞಾನನಿಧಿಯನ್ನಾಗಿ ಈ ಕೃತಿಯನ್ನು ಕನ್ನಡಿಗರಿಗೆ ಕೊಟ್ಟಿದ್ದಾರೆ.
==ಜನನ ಮತ್ತು ವಿದ್ಯಾಭ್ಯಾಸ==
ದಕ್ಷಿಣ ಕೊಡಗಿನಲ್ಲಿರುವ [[ವಿರಾಜಪೇಟೆ|ವೀರರಾಜೇಂದ್ರಪೇಟೆ]](ವಿರಾಜಪೇಟೆ)ಯ ಬಳಿಯ ಮಗ್ಗುಲ ಗ್ರಾಮದಲ್ಲಿ ಕೃಷ್ಣಯ್ಯನವರು ೧೯೦೪ರಲ್ಲಿ ಜನಿಸಿದರು. ಮೂರ್ನಾಡು, ವಿರಾಜಪೇಟೆ ಮತ್ತು [[ಮಡಿಕೇರಿ]]ಯ ಶಾಲೆಗಳಲ್ಲಿ ವ್ಯಾಸಂಗ ಮುಗಿಸಿ [[ಮಂಗಳೂರು|ಮಂಗಳೂರಿನ]] ಸರಕಾರೀ ಕಾಲೆಜಿನಿಂದ ಬಿ ಎ ಪದವಿಯನ್ನು ಪಡೆದರು. ತದನಂತರ ೧೯೨೯ರಲ್ಲಿ [[ರಾಜಮಹೇಂದ್ರಿ]]ಯ ಶಿಕ್ಷಕ ತರಬೇತಿ ಕಾಲೆಜಿನಿಂದ ಬಿ ಟಿ ಪದವಿಯನ್ನು ಗಳಿಸಿದರು ಹಾಗೂ ೧೯೩೫ರಲ್ಲಿ [[ಮದರಾಸು ವಿಶ್ವವಿದ್ಯಾಲಯ]]ದಿಂದ ಎಮ್ ಎ ಪದವಿಯನ್ನು ಪಡೆದರು. ವ್ಯಾಸಂಗದುದ್ದಕ್ಕೂ ಇತಿಹಾಸವನ್ನೇ ಮುಖ್ಯ ವಿಷಯವನ್ನಾಗಿಟ್ಟುಕೊಂಡಿದ್ದರು.
"https://kn.wikipedia.org/wiki/ಡಿ_ಎನ್_ಕೃಷ್ಣಯ್ಯ" ಇಂದ ಪಡೆಯಲ್ಪಟ್ಟಿದೆ