ಚಾರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಚಾರಣ'''ವು ಒಂದು ಹವ್ಯಾಸವಾಗಿದ್ದು ಇದರಲ್ಲಿ ಬೆಟ್ಟ-ಗುಡ್ಡ ಹತ್ತುವುದು, ನದಿಪಾತ್ರಗಳಲ್ಲಿ ನಡೆಯುವುದು, ಕಾಡುಗಳಲ್ಲಿ ಸಂಚರಿಸುವುದು ಮತ್ತು ರಾತ್ರಿ ವೇಳೆಯಲ್ಲಿ ತಂಗುವುದು ಮುಂತಾದುವುಗಳನ್ನು ಒಳಗೊಂಡಿದೆ. ಪ್ರಕೃತಿಯ ಚೆಲುವನ್ನು ಸವಿಯಲು ಇದು ಒಂದು ಉತ್ತಮ ಅವಕಾಶವಾಗಿರುತ್ತದೆಅವಕಾಶ. ಚಾರಣವು ಧೈರ್ಯ, ಸಾಹಸ, ಆತ್ಮ ಸ್ಥೈರ್ಯ, ನಾಯಕತ್ವ, ಸಂಘ ಶಕ್ತಿ, ಸೂಕ್ತ ಯೋಜನೆ, ಮಾನಸಿಕ ಸ್ಥಿತಿ ಮುಂತಾದವುಗಳನ್ನು ಬೆಳೆಸುವಲ್ಲಿ ಮತ್ತು ಅವುಗಳನ್ನು ಓರೆಗಲ್ಲಿಗೆ ಹಚ್ಚುವ ಒಂದು ಉತ್ತಮ ಹವ್ಯಾಸ.
 
 
 
ಯಾವುದೇ ಚಾರಣವನ್ನು ಪ್ರಾರಂಭಿಸುವ ಮೊದಲು ಆ ಸ್ಥಳದ ಬಗ್ಗೆ ಮೊದಲು ಮಾಹಿತಿ ಕಲೆ ಹಾಕಬೇಕಾಗುತ್ತದೆ. ನಂತರ ಚಾರಣದಲ್ಲಿ ಕ್ರಮಿಸಬೇಕಾದ ದೂರವನ್ನು ಅವಲಂಬಿಸಿ ಊಟ ಮತ್ತು ಮಲಗುವ ವ್ಯವಸ್ಥೆ ಬಗ್ಗೆ ಯೋಜಿಸಬೇಕಾಗುತ್ತದೆ. ಮುಖ್ಯವಾಗಿ ಚಾರಣದ ಹಾದಿಯಲ್ಲಿ ನೀರಿನ ಲಭ್ಯತೆಯನ್ನು ಮೊದಲೆ ತಿಳಿದುಕೊಳ್ಳಬೇಕು.
Line ೭ ⟶ ೯:
 
ಹಮ್ಮಿಕೊಂಡ ಚಾರಣವು ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯ ಅಥವ ರಕ್ಷಿತ ಅರಣ್ಯಗಳ ಮೂಲಕ ಹಾದು ಹೋಗುವಂತಿದ್ದರೆ ಮೊದಲೆ ಅರಣ್ಯ ಇಲಾಖೆಯಿಂದ ಸೂಕ್ತ ವಿಧಿ ವಿಧಾನಗಳನ್ನು ಅನುಸರಿಸಿ ಅನುಮತಿ ಪಡೆಯುವುದು ಅನಿವಾರ್ಯ ಮತ್ತು ಚಾರಣದ ಮಾರ್ಗ ಎದುರಾಗಬಹುದಾದ ಅಪಾಯಗಳ ಕುರಿತು ಮೊದಲೆ ಮಾಹಿತಿ ಪಡೆಯುವುದು ಸೂಕ್ತ. ಹಾಗೆಯೆ ಕೆಲವು ಸ್ಥಳಗಳಿಗೆ ಚಾರಣ ಮಾಡುವಾಗ ಯಾವುದೇ ಅನುಮತಿ ಪಡೆಯುವುದು ಬೇಡವಾಗಿದ್ದರೆ, ಅಲ್ಲಿರುವ ಸ್ಥಳೀಯರ ಮಾರ್ಗದರ್ಶನ ಅಥವ ಮಾಹಿತಿ ಪಡೆದರೆ ಉತ್ತಮ.
 
==ಚಾರಣದಿಂದ ಆರೋಗ್ಯ==
 
ನಿಯಮಿತವಾಗಿ ಚಾರಣ ಮಾಡುವುದರಿಂದ, ಚಾರಣಿಗನ ಆರೋಗ್ಯಕ್ಕೆ ಉತ್ತಮ ಕೊಡುಗೆ ದೊರೆಯುತ್ತದೆ. ದೀರ್ಘಕಾಲದ ನಡುಗೆ, ಬೆಟ್ಟ ಏರುವಿಕೆ, ಶುದ್ದಗಾಳಿಯ ಸೇವನೆ ಇವೆಲ್ಲವೂ ದೇಹಾರೋಗ್ಯದ ಮೇಲೆ ಸತ್ಪರಿಣಾಮ ಮಾಡುತ್ತವೆ.
 
==ಚಾರಣದಿಂದ ಲೋಕ ಜ್ನಾನ==
ವಿವಿಧ ಹಳ್ಳಿ ಮತ್ತು ಪಟ್ಟಣಗಳ ಮೂಲಕ ಸಾಗಿ, ಚಾರಣ ಮಾಡುವುದರಿಂದಾಗಿ, ಚಾರಣಿಗರಲ್ಲಿ ಸುತ್ತಲಿನ ಜಗತ್ತಿನ ಬಗ್ಗೆ ತಿಳುವಳಿಕೆ ಹೆಚ್ಚುತ್ತದೆ. ಹೊಸ ಹೊಸ ಸ್ಥಳಗಳಲ್ಲಿ ನಡೆಯುವಾಗ, ತಕ್ಷಣದ ನಿರ್ಣಯಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಉಂಟಾಗುವುದರಿಂದ, ಅವು ಮುಂದಿನ ದಿನಚಿರಿಯಲ್ಲಿ ಉತ್ತಮ ನಿರ್ಣಯಗಳನ್ನು ತೆಗೆದುಕೊಂಡು, ತಮ್ಮ ಜೀವನವನ್ನು ರೂಪಿಸಲು ಚಾರಣಿಗರಿಗೆ ಸಹಾಯಮಾಡುತ್ತವೆ.
"https://kn.wikipedia.org/wiki/ಚಾರಣ" ಇಂದ ಪಡೆಯಲ್ಪಟ್ಟಿದೆ